ವಿಷಯಕ್ಕೆ ಹೋಗು

ಸಂತ ಇಗ್ನೇಷಿಯಸ್ ದೇವಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

You must add a |reason= parameter to this Cleanup template - replace it with {{Cleanup|reason=<Fill reason here>}}, or remove the Cleanup template.

ಬೇಗೂರು ಸಂತ ಇಗ್ನಾ ಸಿಯರ ಧರ್ಮಕೇಂದ್ರವು ಬೆಂಗಳೂರು ಮಹಾಧರ್ಮಕ್ಷೇತ್ರದ ಒಂದು ಪ್ರತಿಷ್ಟಿತ ಹಾಗೂ ಪ್ರಮುಖ ಧರ್ಮಕೇಂದ್ರ . ಈ ಧರ್ಮಕೇಂದ್ರಕ್ಕೆ ಮುನ್ನೂರಕ್ಕಿಂತಲೂ ಹೆಚ್ಚು ವರ್ಷಗಳ ಇತಿಹಾಸವಿದೆ. ಬೆಂಗಳೂರು ಮಹಾಧರ್ಮಕ್ಷೇತ್ರದ ಸ್ಥಳೀಯ ಕ್ರೈಸ್ತರೆಂದು ಮಾತನಾಡುವಾಗ, ತಟ್ಟನೆ ನೆನಪಗುವುದು ಬೇಗೂರಿನ ಸಂತ ಇಗ್ನಾಸಿಯವರ ಧರ್ಮಕೇಂದ್ರವೇ! ಅತ್ತ ಹಳಿಯು ಅಲ್ಲದ, ಇತ್ತ ನಗರಕ್ಕು ಸೇರದ ನನ್ನೊರು, ಈಗಾಗಲೇ ನಾಗರಿಕರನಕ್ಕೆ ಒಳಗಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇದ್ದುಬದ್ದುದೆಲ್ಲವನ್ನು ಮಾರಿಕೊಂಡು ಕೆಲವರು ತೆಪ್ಪಗೆ ಮನೆಯಲ್ಲಿ ಕುಳಿತ್ತಿದ್ದರೆ, ಮತ್ತೆ ಕೆಲವರು ಚಾಣಕ್ಷತನದಿಂದ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಸಿಕೊಂಡಿಸಿದ್ದಾರೆ. ಬೇಗೂರಿನ ಹಿರಿಯ ತಲೆಮಾರು ಅಷ್ಟು ವಿದ್ಯಾವಂತರಲ್ಲದಿದ್ದರು, ತಮ್ಮ ಮಕ್ಕಳನ್ನು ವಿದ್ಯಾವಂತರಾಗಿ ಮಾಡುವ ಮಹದಾಸೆ ಆರಂಬದಿಂದಲು ಕಂಡಿತ ಇತ್ತು. ಆದರೆ ಕೂಡಿ ಬರದ ಕಾರಣದಿಂದ ಕಾಲದ ನಿರ್ಣಯಕ್ಕೆ ಬಿಟ್ಟಿದ್ದರು. ಅಂತಹ ಪರ್ವಾಕಾಲ ಈಗ ಕೂಡಿ ಬಂದಿರುವಂತ್ತೆ ಕಾಣುತ್ತದೆ. ಒಟ್ಟಾರೆಯಾಗಿ ಎಲ್ಲಾ ಮಕ್ಕಳು ಶಾಲೆಗಲಲ್ಲಿ ಓದುತ್ತಿರುವುದು ಸಂತೋಶದ ವಿಶವವೆನಿಸಿದೆ. ನನ್ನೊರ ಜನ ಧೈವಭಯ ಮತ್ತು ದೈವಭಕ್ತಿಉಳ್ಳವರು. ಬಾನುವಾರದ ಹಾಗೂ ಕಟ್ಟಳೆಯ ಪೂಜೆಗಳನ್ನೆಂದೂ ತಪ್ಪಿಸಿಕೊಳ್ಳುವವರಲ್ಲ. ಅಂತೆಯೆ ಮನೆಗಳಲ್ಲಿ ಪ್ರತೀ ಭಾನುವಾರದ ಬಾಡೂಟವು ತಪ್ಪುವುದೇ ಇಲ್ಲ. ಹಬ್ಬಗಳ ವಿಚಾರದಲ್ಲಂತು ಧರ್ಮಕೇಂದ್ರದ ಜನ ಎಂದೂ ಹಿಂದೆ ಬಿದ್ದವರಲ್ಲ. ಸಂತ ಇಗ್ನಾಸಿಯವರ ಹಬ್ಬವಾಗಲಿ, ದೇವಮಾತೆಯ ಹಬ್ಬವಾಗಲಿ, ಎಲ್ಲವನ್ನು ಬಹಳ ಕಾಳಜಿ ವಹಿಸಿ ಮಾಡುವ ಜನ ಇವರು. ಈಸ್ಟರ್ ಹಬ್ಬದಲ್ಲಿ ಫ಼್ರಭುಕ್ರಿಸ್ತ್ತರ ಪುನರುತ್ಥಾನದ ಪ್ರತಿಮೆ ಇಟ್ಟು, ತೇರು ಎಳೆಯುವುದನ್ನು ನಾನು ಬೇಗೂರಿನಲ್ಲಿ ಬಿಟ್ಟು ಬೇರೆಲ್ಲು ನೋಡಿದ ನೆನಪಿಲ್ಲ . ದೇವಾಲಯದ ಜೀರ್ಣೋದ್ಧಾರಕ್ಕಗಿ ಹಾಗೂ ಧರ್ಮಕೇಂದ್ರದ ಸರ್ಮತೋಮುಖ ಪ್ರಗತಿಯಾಗಿ ದುಡಿದ ಹಲವಾರು ಗುರು ಭಗಿನಿಯರ ಮೇಲಿಟ್ಟಿರುವ ಪ್ರೀತಿಗೆ ನನ್ನೂರು ಒಂದು ಮಾದರಿ ಧರ್ಮಕೇಂದ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಬೇಗೂರಿನ ಜನ ಪ್ರಭುಕ್ರಿಸ್ತರಲ್ಲಿ ತುಂಬಾ ವಿಶ್ವಾಸವಿಡುವವರು ಆದರೆ ಮಾತೆ ಮರಿಯಳನ್ನೆ ಹೆಚ್ಚಾಗಿ ಪ್ರೀತಿಸುತ್ತಾರೆ. ಉದಾಹರಣೆಗೆ ಧರ್ಮಕೇಂದ್ರದ ಪಾಲಕ ಸಂತ ಇಗ್ನಾಸಿಯವರ ಹೆಬ್ಬಕ್ಕೆ ಅರ್ಧ ಊರನ್ನು ಅಲಂಕರಿಸುತ್ತಾರೆ. ಲೂರ್ದುಮಾತೆಯ ಹಬ್ಬಕ್ಕೆ ಇಡೀ ಊರನ್ನು ಅಲಂಕರಿಸಿದ್ದರೆ. ಬಹಳಷ್ಟು ಸ್ವಾಮಿನಿಷ್ಟೆ. ಗುರುಗಳನ್ನು ಕಂಡರೆ ಪೂಜ್ಯ ಭಾವನೆ ಇದೆ. ಪ್ರೀತಿಗೆ ಪ್ರಾಣ ಕೊಡುತ್ತಾರೆ. ಸ್ವಾಭಿಮಾನ ಹಾಗೂ ಸ್ವಪ್ರತಿಷ್ಟೆಗೆ ಇನೊಂದು ಹೆಸರು, ಬೇಗೂರು! ದೇವಾಲಯವನ್ನು ಕಟ್ಟಿ, ೫೦ ವರ್ಷಗಳಾಗಿವೆ. ಇಂದಿಗೆ ಹದಿಮೂರು ಗುರುಗಳು, ನೂರಕ್ಕು ಹೆಚ್ಚು ಭಗಿನಿಯರು ಹಾಗು ಧ್ಯಾನತಂಡಗಳು ಪ್ರಭುಕ್ರಿಸ್ತರ ಸೇವೆ ಮಾಡುತ್ತಿರುವುದು ಇಡೀ ಬೇಗೂರಿಗೆ ಹೆಮ್ಮೆ ತರುವ ವಿಷಯವಾಗಿದೆ. ಕೆಲವು ಯುವಕ ಯುವತಿಯರು ವಿದ್ಯಾವಂತರಾಗಿ ಸ್ವಾವಲಂಬಾನೆ ಪಥ ತುಳಿಯುತ್ತಿರುವುದೂ ಖಷಿಯೆ! ಆದರೆ ಪ್ರಸ್ತುತ ಯುವಪೀಳಿಗೆ ಊರಿನ ಭವಿಷ್ಯದ ಬಗ್ಗೆ ಇನಷ್ಟು ಯೋಚಿಸಬೇಕಾದ ಅನಿವಾರ್ಯತೆ ಇದೆ. ಜೈ ಯೇಸುಕ್ರಿಸ್ತ.................

ಸ್ಫೇನಿನ ಇಗ್ನೀಷಿಯಸ್

೧೬ನೆಯ ಶತಮಾನದಲ್ಲಿ ಸ್ಫೇನ್ ದೇಶದಲ್ಲಿ ಸೈನಿಕನಾಗಿದ್ದ ಇಗ್ನೀಷಿಯನ್, ಧೈರ್ಯಕ್ಕೆ ಮತ್ತೊಂದು ಹೆಸರು. ಫ್ರಾನ್ಸ್ ವಿರುದ್ದ ನಡೆದ ಯುದ್ದದಲ್ಲಿ ವೀರವೀಶದಿಂದ ಹೋರಾಡುವಾಗ ಆತನ ಕಾಲಿಗೆ ಭಾರಿ ಪೆಟ್ಟಾಗುತ್ತದೆ. ಪರಿಣಾಮ ಶತ್ರುಗಳಿಗೆ ಸರೆ! ಇವನ ಅಪ್ರತಿಮ ಧೈರ್ಯ, ವೀರಭೂಮಿಯಲ್ಲಿನ ದೂಡುವ ಬದಲು ಲಯೋಲಕ್ಕೆ ಕರೆತಂದು ಶುಶ್ರೋಷೆ ಮಾಡುತ್ತಾರೆ. ಆ ದಿನಗಲಲ್ಲ್ಲಿ ಸಿಕ್ಕ ಸಿಕ್ಕ ಪುಸ್ತಕಗಳ ಜೊತೆಯಲ್ಲಿ ವಿಧಿಯಿಲ್ಲದೆ ಆತ ಕ್ರಿಸ್ತನನ್ನು ಓದಬೇಕಾಗುತ್ತದೆ. ಕ್ರಿಸ್ತನ ಓದು, ಒಮ್ಮೆಗೆ ಇಗ್ನೇಷಿಯಸ್ ನ ಬದುಕಿನ ದಿಕ್ಕನ್ನೇ ಬದಲಾಯಿಸುತ್ತದೆ. ಓದಲೊ ಬೇಡವವೊ ಎಂದು ಓದಿದವನು ಮತ್ತೆ ಓದುತ್ತಾನೆ. ಕ್ರಿಸ್ತ ಆಪ್ತವಾಗುತ್ತನೆ. ಕ್ರಿಸ್ತನಿಗಾಗಿ ತನ್ನ ಲೌಕಿಕ ಹುಂಬತನವನ್ನು ತೊರೆದು ಇಡೀ ದೇಶವೇ ನಿಬ್ಬೆರಗಾಗುವಂತೆಸೇವೆ ಸಲ್ಲಿಸುತ್ತನೆ ಸಂತ ಇಗ್ನೀಷಿಯಸ್! ಇಗ್ನೀಷಿಯಸ್ ರಿಂದ ಸ್ಥಾಪಿಸಲ್ಪಟ್ಟ ಯೇಸುಸಭೆ, ಪ್ರಪಂಚದಾದ್ಯಂತ ಅತಿ ಹೆಚ್ಚು ಗುರುಗಳನ್ನು ಹೋಂದಿರುವ ಮತ್ತು ಅತಿ ಹೆಚ್ಚು ದೇಶಗಳಲ್ಲಿ ನೆಲೆಯೂರಿರುವ ಸತ್ವಭರಿತ ಸಭೆ. ಇದರಲ್ಲಿ ೨೦ ಸಾವಿರಕ್ಕು ಅಧಿಕ ಗುರುಗಳಿದ್ದಾರೆ. ೧೧೨ ದೇಶಗಳಲ್ಲಿ ವ್ಯಾಪಿಸಲ್ಪಟ್ಟಿದೆ. ಇಂಥ ಇಗ್ನೀಷಿಯಸ್, ಇನ್ನಾ ಸಪ್ಪನಾಗಿ ಬೇಗೂರಿನಲ್ಲೂ ನೆಲೆಯೂರಿರುವುದು. ದೈವಕೊಡುಗೆಯೇ ಅನ್ನಬೇಕು! ಬೆಂಗಳೂರು ಮಹಾಧರ್ಮಕ್ಷೇತ್ರಕ್ಕೆ ಒಳಪಟ್ಟಿರುವ ೧೩೫ ದೇವಾಲಯಗಳಲ್ಲಿ ಬೇಗೂರಿನ ದೇವಾಲಯ, ಮೂರನೆಯ ಹಳೆಯ ದೇವಾಲಯವಾಗಿರುವುದು ನಿಜಕ್ಕೂ ಪುಲಕಿತಗೊಳಿಸುವ ಸಂಗತಿ. ಬೆಮ್ಗಳೂರಿನ ಹೃದಯ ಭಾಗದಲ್ಲಿರುವ ಸಂತ ಪ್ಯಾಟ್ರಿಕರ ದೇವಾಲಯ ೧೮೪೪ರಲ್ಲಿ ಸ್ಥಾಪಿತಗೊಂಡು ಮೊದಲ ಸ್ಥಾನದಲ್ಲಿದ್ದರೆ, ಕೆತೆಡ್ರಲ್ ಸಂತ ಫ್ರಾನ್ಸಿಸ್ಸರ ದೇವಾಲಯ ೧೮೪೬ರಲ್ಲಿ ನಿರ್ಮಾಣಗೊಂಡು ದ್ವಿತೀಯ ಹಳೆಯ ದೇವಾಲಯ ಎಂಬ ಖ್ಯಾತಿ ಪಡೆದಿದೆ. ಬೇಗೂರಿನ ದೇವಾಲಯ ೧೮೬೦ರಲ್ಲಿ ನಿರ್ಮಾಣವಾಗುವುದರ ಮೂಲಕ ಬೇಗೂರು ಕ್ರೈಸ್ತರ ಮೂಲಕ್ಕೆ ಪ್ರಾಚೀನ ಇತಿಹಾಸವಿರುವುದು ಮೇಲ್ನೋಟಕ್ಕೆ ಸಾಬೀತಾದಂತಾಯಿತು. ಆದರೆ ೧೮೧೦ರಲ್ಲಿಯೇ ಬೇಗೂರಿನಲ್ಲಿ ಸಂತ ಫ್ರಾನ್ಸಿಸ್ ಕ್ಲೇವಿಯರ್ ಅವರ ದೇವಾಲಯವಿತ್ತೆಂದು ಹಿರಿಯ ಸಂಶೋಧಕರಾದ ವಂ. ಸ್ವಾಮಿ ಐ. ಅಂತಪ್ಪ ಬರೆಯುತ್ತಾರೆ. ಹಾಗೇನಾದರು ಇದ್ದರೆ ಬೇಗೂರಿನ ದೇವಾಲಯ ಇಡಿ ಧರ್ಮಕ್ಷೇತ್ರದಲ್ಲಿ ಮೊತ್ತಮೊದಲನೆಯ ಹಳೆಯ ದೇವಾಲಯ ಎಂಬ ಹೆಮ್ಮೆಗೆ ಪಾತ್ರವಾಗುತ್ತದೆ.