ವಿಷಯಕ್ಕೆ ಹೋಗು

ಸಂದರ್ಶನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂದರ್ಶನವು ಮೂಲಭೂತವಾಗಿ ಒಂದು ರಚನಾತ್ಮಕ ಸಂಭಾಷಣೆ. ಇದರಲ್ಲಿ ಒಬ್ಬ ಭಾಗೀದಾರನು ಪ್ರಶ್ನೆಗಳನ್ನು ಕೇಳಿದರೆ, ಮತ್ತೊಬ್ಬನು ಉತ್ತರಗಳನ್ನು ನೀಡುತ್ತಾನೆ.[] ಸಾಮಾನ್ಯ ಪರಿಭಾಷೆಯಲ್ಲಿ, "ಸಂದರ್ಶನ" ಶಬ್ದವು ಸಂದರ್ಶನಕಾರ ಮತ್ತು ಸಂದರ್ಶನಾರ್ಥಿಯ ನಡುವಿನ ಒಬ್ಬರ ಎದುರು ಒಬ್ಬರ ಸಂಭಾಷಣೆಯನ್ನು ಸೂಚಿಸುತ್ತದೆ. ಸಂದರ್ಶನಕಾರನು ಪ್ರಶ್ನೆಗಳನ್ನು ಕೇಳುತ್ತಾನೆ ಮತ್ತು ಅವುಗಳಿಗೆ ಸಂದರ್ಶನಾರ್ಥಿಯು ಪ್ರತಿಕ್ರಿಯಿಸುತ್ತಾನೆ, ಸಾಮಾನ್ಯವಾಗಿ ಸಂದರ್ಶನಾರ್ಥಿಯು ಸಂದರ್ಶನಕಾರನಿಗೆ ಮಾಹಿತಿಯನ್ನು ಒದಗಿಸುತ್ತಾನೆ -- ಮತ್ತು ಆ ಮಾಹಿತಿಯನ್ನು ಬಳಸಬಹುದು ಅಥವಾ ಇತರ ಶ್ರೋತೃಗಳಿಗೆ ನೀಡಬಹುದು, ನಿಜ ಕಾಲದಲ್ಲಿ ಅಥವಾ ನಂತರ. ಈ ಅಂಶವು ಅನೇಕ ಪ್ರಕಾರಗಳ ಸಂದರ್ಶನಗಳಿಗೆ ಸಾಮಾನ್ಯವಾಗಿದೆ -- ಉದ್ಯೋಗ ಸಂದರ್ಶನ ಅಥವಾ ಒಂದು ಘಟನೆಗೆ ಸಾಕ್ಷಿಯಾಗಿರುವವನೊಂದಿಗಿನ ಸಂದರ್ಶನ. ಅದಕ್ಕೆ ಆ ಸಮಯದಲ್ಲಿ ಯಾರೇ ಬೇರೆ ಶ್ರೋತೃಗಳಿಲ್ಲದಿರಬಹುದು, ಆದರೆ ಉದ್ಯೋಗ ಅಥವಾ ತನಿಖಾ ಪ್ರಕ್ರಿಯೆಗಳಲ್ಲಿನ ಇತರರಿಗೆ ಉತ್ತರಗಳನ್ನು ನಂತರ ಒದಗಿಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]


"https://kn.wikipedia.org/w/index.php?title=ಸಂದರ್ಶನ&oldid=960286" ಇಂದ ಪಡೆಯಲ್ಪಟ್ಟಿದೆ