ವಿಷಯಕ್ಕೆ ಹೋಗು

ಸಂವಹನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಫೋಟಾನ್‌ ಅತಿ ವೇಗದ ಸಂವಹನ ಮಾಧ್ಯಮವನ್ನು ಪ್ರತಿನಿಧಿಸುವ ವೇವ್‌ ಪಾಕೇಟ್‌ನ ಗ್ರಾಫಿಕ್‌ ಆಗಿದೆ.

' ಸಂಪರ್ಕ ವೆಂದರೆ ಅಸ್ತಿತ್ವದಲ್ಲಿರುವ ಒಂದು ವಸ್ತು ವಿನಿಂದ ಇನ್ನೊಂದಕ್ಕೆ ಮಾಹಿತಿ ವರ್ಗಾಯಿಸುವ ಪ್ರಕ್ರಿಯೆಯಾಗಿದೆ. ಸಂಪರ್ಕವೆಂದೂ ಸಹ ಹೇಳುವ ಇದು ತಿಳಿವಳಿಕೆಯನ್ನು ಮನದಟ್ಟು ಮಾಡುವ ಕಾರ್ಯವೂ ಆಗಿದೆ. ಸಂವಹನ ಪ್ರಕ್ರಿಯೆಗಳೆಂದರೆ ಸಂಕೇತಗಳ ಸಂಚಯ‍‌‌ ಮತ್ತು ಸಂಕೇತ ಶಾಸ್ತ್ರದ ನಿಯಮಗಳೊಂದಿಗೆ, ಕನಿಷ್ಠ ಎರಡು ಪ್ರತಿನಿಧಿತ್ವಗಳ ನಡುವಿನ ಸಂಕೇತ-ಆಧರಿಸಿದ ಸಂಪರ್ಕದ ಕೊಂಡಿಯಾಗಿದೆ. ಸಾಮಾನ್ಯವಾಗಿ ಸಂವಹನವು ಮಾತು, ಬರಹ, ಇಲ್ಲವೆ ಸಂಜ್ಞೆಯ ಮೂಲಕ ಮಾಹಿತಿ ಅಥವಾ ವಿಚಾರ, ಅಭಿಪ್ರಾಯಗಳನ್ನು "'ತಿಳಿಯಪಡಿಸುವುದು ಅಥವಾ ವಿನಿಮಯ ಮಾಡಿಕೊಳ್ಳುವುದಾಗಿದೆ". ಏಕ-ಮುಖೀಯ ಸಂಪರ್ಕದ ವೇಳೆಯಲ್ಲೂ ಸಹ, ಪರಸ್ಪರ ಅಂಗೀಕರಿಸಿದ ಗುರಿ ಅಥವಾ ದಿಕ್ಕಿನೆಡೆಗೆ (ಮಾಹಿತಿ) ಭಾವನೆ-ವಿಚಾರಗಳು, ಅನಿಸಿಕೆಗಳು ಅಥವಾ ಅಭಿಪ್ರಾಯಗಳ (ಸಶಕ್ತ) ವಿನಿಮಯವಾಗಿದೆ. ಇದು ಪ್ರಗತಿಯಲ್ಲಿರುವ ದ್ವಿಮುಖ/ಮಾರ್ಗ ಪ್ರಕ್ರಿಯೆಯಿಂದ ಸಂವಹನವನ್ನು ಉತ್ತಮಪಡಿಸಿ ಗ್ರಹಿಸಬಹುದಾಗಿದೆ.[]

ಸಂಪರ್ಕದಲ್ಲಿರುವ ಮಾಹಿತಿಯನ್ನು ಗುರ್ತಿಸಿ , ಅದೇ ಮಾರ್ಗ ಅಥವಾ ಮಾಧ್ಯಮದ ಮೂಲಕ ಕಳುಹಿಸುವ ಮತ್ತು ಸ್ವೀಕರಿಸುವವನಿಗೆ ಮಾಹಿತಿಯನ್ನು ತಲುಪಿಸುವ ಪ್ರಕ್ರಿಯೆಯಾಗಿದೆ. ಸಂದೇಶ ಸ್ವೀಕರಿಸಿದ ಬಳಿಕ ಅದನ್ನು ವಿಶ್ಲೇಷಿಸಿ, ಕಳುಹಿಸಿದವನಿಗೆ ಮರಳಿ ಪ್ರತಿಕ್ರಿಯೆ ನೀಡುವುದೇ ಸಂಪರ್ಕಸಾಧಕದ ಗುರಿಯಾಗಿದೆ. ಎಲ್ಲಾ ಪ್ರಕಾರದ ಸಂವಹನಕ್ಕೂ ಕಳುಹಿಸುವವ, ಸಂದೇಶ, ಮತ್ತು ಸ್ವೀಕರಿಸುವವ ಎಂದು ಮೂರು ಅಂಶಗಳ ಅಗತ್ಯವಿದೆ. ಸಂವಹನ ನಡೆಯಬೇಕಾದರೆ ಮೇಲಿನ ಈ ಎಲ್ಲಾ ಅಂಶಗಳು ಸಾಮಾನ್ಯಪ್ರದೇಶ ವ್ಯಾಪ್ತಿ ಹೊಂದಿರಬೇಕಾಗುತ್ತದೆ. ಶ್ರವಣ-ಕೇಳುವುದಕ್ಕೆ ಸಂಬಂಧಿಸಿದಂತೆ, ಧ್ವನಿ ಮಾಧ್ಯಮದ ಮಾತು, ಹಾಡು, ಮತ್ತು ಶೈಲಿ ಅಥವಾ ಮಾತಲ್ಲದಆಂಗಿಕ ಭಾಷೆ, ಸಂಕೇತ , ಪೂರಕ ಭಾಷೆ, ಸ್ಪರ್ಶ, ಕಣ್ಣ ನೋಟ, ಮತ್ತು ಬರಹದಂತಹವನ್ನೂ ಸಂವಹನ ಎನ್ನಬಹುದು.ಈ ಸಂಪರ್ಕ ಸಾಧನಗಳ ಮೂಲಕ ಸಂಪರ್ಕದ ವ್ಯಾಪಕತೆ ಹೆಚ್ಚುತ್ತದೆ

ಇತಿಹಾಸ

[ಬದಲಾಯಿಸಿ]

ಮಾಹಿತಿ ಸಂವಹನ ಕ್ರಾಂತಿ

[ಬದಲಾಯಿಸಿ]

ಕಾಲಾಂತರದಲ್ಲಿ, ತಂತ್ರಜ್ಞಾನವು ಅಭಿವೃದ್ಧಿಯಾದಂತೆ ಸಂವಹನದ ಹೊಸ ಪ್ರಕಾರಗಳು ಹುಟ್ಟಿಕೊಂಡವಲ್ಲದೆ, ಅದರ ಕುರಿತಂತೆ ಹೊಸ ಚಿಂತನಾ ಲಹರಿ,ಆಲೋಚನೆಗಳು ವಿನ್ಯಾಸಗೊಂಡವು. ತಂತ್ರಜ್ಞಾನದ ಪ್ರಗತಿಯ ವೇಗವು ಸಂವಹನದ ಪ್ರಕ್ರಿಯೆಗಳನ್ನು ಕ್ರಾಂತಿಕಾರಕ ರೀತಿಯಲ್ಲಿ ಅಭಿವೃದ್ಧಿ ಹೊಂದುವಂತೆ ಮಾಡಿತು. ಸಂವಹನವು ಈ ಕೆಳಗಿನ ಮೂರು ಕ್ರಾಂತಿಕಾರಕ ಹಂತಗಳ ಮೂಲಕ ಹೇಗೆ ರೂಪಾಂತರಗೊಂಡಿತು ಎನ್ನುವುದನ್ನು ಸಂಶೋಧಕರು ಹೀಗೆ ವಿಭಜಿಸಿದ್ದಾರೆ:

1ನೇ ಹಂತದ ಮಾಹಿತಿ ಸಂವಹನ ಕ್ರಾಂತಿಯ ಅವಧಿಯಲ್ಲಿ, ಚಿತ್ರಸಂಕೇತಗಳೊಂದಿಗೆ ಮೊದಲ ಬರಹದ ಸಂವಹನ ಪ್ರಾರಂಭವಾಯಿತು. ಈ ಬರಹಗಳನ್ನು ಕಲ್ಲಿನಲ್ಲಿ ಕೆತ್ತಲಾಗಿತ್ತು, ಅವುಗಳನ್ನು ವರ್ಗಾಯಿಸಲು/ಬೇರೆಡೆಗೆ ಸಾಗಿಸಲು ತುಂಬಾ ಪ್ರಯಾಸದಾಯಕವಾಗಿತ್ತು. ಆ ಯುಗದಲ್ಲಿನ ಬರಹದ ಈ ಸಂವಹನವನ್ನು ಸುಲಭವಾಗಿ ಸಾಗಿಸುವಂತಿರಲಿಲ್ಲ, ಆದರೂ ಅವುಗಳು ಬಳಕೆಯಲ್ಲಿದ್ದವು.

2ನೇ ಹಂತದ ಮಾಹಿತಿ ಸಂವಹನ ಕ್ರಾಂತಿಯಲ್ಲಿ, ಕಾಗದ, ಪಪೈರಸ್‍‌, ಜೇಡಿಮಣ್ಣು, ಮೇಣ ಇತ್ಯಾದಿಗಳ ಮೇಲೆ ಬರೆಯಲು ಪ್ರಾರಂಭಿಸಿದರು. ಸಮಾನ ರೂಪದ ಅಕ್ಷರಗಳ ಬಳಕೆಯಿಂದ, ದೂರ ದೂರದ ಪ್ರದೇಶಗಳವರೆಗೂ ಈ ಭಾಷೆಯ ಏಕರೂಪತೆಯನ್ನು ಅಂಗೀಕರಿಸಲಾಯಿತು. ಇದಾದ ಸ್ವಲ್ಪ ಸಮಯದ ನಂತರ ಗುಟನ್ಬರ್ಗ್‌ ಮುದ್ರಣ ಯಂತ್ರದ ಬಳಕೆಗೆ ಕಾರಣನಾದನು. ಅದನ್ನು ಬಳಸಿ ಗುಟನ್ಬರ್ಗ್‌, ಮೊದಲು ಬೈಬಲ್‌ ಗ್ರಂಥ ಮುದ್ರಿಸಿದನು. ಆ ಸಮಯದಲ್ಲಿ ವಿಶ್ವದೆಲ್ಲೆಡೆ ಬರಹಗಳನ್ನು ಇತರರು ವೀಕ್ಷಿಸಲು/ಓದಲು ವರ್ಗಾಯಿಸಬಹುದಾಗಿತ್ತು. ಈಗ ಬರಹ ಸಂವಹನವನ್ನು ದಾಖಲಿಸಬಹುದಾಗಿದೆ ಮತ್ತು ವರ್ಗಾಯಿಸಬಹುದಾಗಿದೆ.

3ನೇ ಹಂತದ ಮಾಹಿತಿ ಸಂವಹನ ಕ್ರಾಂತಿಯ ಅವಧಿಯಲ್ಲಿ, ಮಾಹಿತಿಯನ್ನು ನಿಯಂತ್ರಿತ ತರಂಗಗಳು ಮತ್ತು ಇಲೆಕ್ಟ್ರಾನಿಕ್‌ ಸಂಕೇತಗಳ ಮೂಲಕ ವರ್ಗಾಹಿಸಲಾಗುತ್ತದೆ.

ಸಂವಹನವೆಂದರೆ, ಅದರ ಅರ್ಥವೇ ತಿಳಿಸುವಂತೆ ಸಾಮಾನ್ಯ ತಿಳಿವಳಿಕೆಯನ್ನು ಹುಟ್ಟುಹಾಕುವ, ಮಾಹಿತಿ ಹಂಚುವ ಮತ್ತು ರವಾನಿಸುವ ಪ್ರಕ್ರಿಯೆಯಾಗಿದೆ. ಅಂತರ್ ವ್ಯಕ್ತಿಯ ಮತ್ತು ವ್ಯಕ್ತಿಗಳ ನಡುವಿನ ಪ್ರಕ್ರಿಯೆಯಾದ ಶ್ರವಣ, ವೀಕ್ಷಣೆ, ಸಂಭಾಷಣೆ, ಪ್ರಶ್ನಿಸುವಿಕೆ, ವಿಶ್ಲೇಷಿಸುವ, ಮತ್ತು ಮೌಲ್ಯೀಕರಣದಲ್ಲಿರುವ ಕೌಶಲ್ಯಗಳ ಪ್ರಮಾಣದ ಮಾಹಿತಿಯ ಅಗತ್ಯ ಈ ಪ್ರಕ್ರಿಯೆಗಿದೆ. ಈ ಎಲ್ಲಾ ಪ್ರಕ್ರಿಯೆಗಳು ಸಂವಹನದ ಸಹಯೋಗ ಮತ್ತು ಸಹಕಾರದೊಂದಿಗೆ ಸಂಭವಿಸುತ್ತದೆ.[]

ಯಶಸ್ವಿ ಸಂವಹನಕ್ಕೆ ಹಲವಾರು ಸಾಮಾನ್ಯ ಸಮಸ್ಯೆಗಳಿವೆ. ಅವುಗಳಲ್ಲಿ ಮಿತಿಮೀರಿದ ಸಂದೇಶ (ವ್ಯಕ್ತಿಯು ಒಂದೇ ಸಮಯದಲ್ಲಿ ಹಲವಾರು ಸಂದೇಶಗಳನ್ನು ಸ್ವೀಕರಿಸಿದಾಗ) ಮತ್ತು ಸಂದೇಶದ ಸಂಕೀರ್ಣತೆ ಯು ಎರಡು ಪ್ರಮುಖ ಸಾಮಾನ್ಯ ಸಮಸ್ಯೆಗಳಾಗಿವೆ.[] ಸಂವಹನವು ಒಂದು ನಿರಂತರ ಪ್ರಕ್ರಿಯೆಯಾಗಿದೆ.

ಸಂವಹನದ ವಿಧಗಳು

[ಬದಲಾಯಿಸಿ]

ಆಂಗಿಕ ಭಾಷೆ, ಧ್ವನಿ ಶೈಲಿ ಮತ್ತು ಶಬ್ದಗಳು ಮನುಷ್ಯರ ಮುಖದಲ್ಲಿ ಕಂಡುಬರುವ ಸಂವಹನದ ಮೂರು ಪ್ರಮುಖ ಅಂಶಗಳಾಗಿದೆ. ಸಂಶೋಧನೆಯ ಪ್ರಕಾರ:[]

  • ದೇಹ ಭಾಷೆಯ ಅಂಶಗಳಾದ ನಿಲವು,ಭಂಗಿ, ಆಂಗಿಕ ಸನ್ನೆಗಳು ಮತ್ತು ಕಣ್ಣ ಸಂಪರ್ಕದಿಂದ 55%ರಷ್ಟು ಸಂವಹನವನ್ನು ನಿರ್ಧರಿಸಬಹುದು,
  • ಧ್ವನಿಯ ಮಟ್ಟದ ಮೂಲಕ 38%ರಷ್ಟು ಮತ್ತು
  • ಸಂವಹನ ಪ್ರಕ್ರಿಯೆಯಲ್ಲಿ ಬಳಸಿದ ವಿಷಯ ಅಥವಾ ಪದಗಳಿಂದ 7%ರಷ್ಟನ್ನು ನಿರ್ಧರಿಸಬಹುದು.

ಸಂವಹನವು ಸಾಮಾನ್ಯವಾಗಿ ಕೇಳುಗ ಮತ್ತು ಮಾತನಾಡುವವರನ್ನು ಆಧರಿಸಿದೆ. ಈ ಶೇಕಡಾವಾರಿನಲ್ಲಿ ವ್ಯತ್ಯಾಸವಾದರೂ ಸಹ, ಈ ಎಲ್ಲಾ ಸಂವಹನದ ಪ್ರಯತ್ನಗಳ ಉದ್ದೇಶವು ಒಂದೇ ಆಗಿರುವುದು. ಹಾಗಾಗಿ ಹೆಚ್ಚಿನ ಸಂದರ್ಭದಲ್ಲಿ ಈ ಮೇಲಿನ ಅಂಕಿಅಂಶಗಳು ಸಾರ್ವತ್ರಿಕವಾಗಿ ಸಾಮಾನ್ಯವಾಗಿರುತ್ತವೆ. ಧ್ವನಿ, ರಾಗ ಅಥವಾ ಶ್ರುತಿ, ಸಂಜ್ಞಾಪದ್ದತಿ ಅಥವಾ ಬರಹ ರೂಪದ ಸಂಕೇತಗಳ ವ್ಯವಸ್ಥೆಯ ಮೂಲಕ ಯೋಚನೆ-ವಿಚಾರಗಳು ಮತ್ತು ಅಭಿಪ್ರಾಯಗಳನ್ನು ತಿಳಿಸಬಹುದು. ಸನ್ನೆ-ಸಂಕೇತಗಳು, ಧ್ವನಿ, ಶಬ್ದಗಳು, ಆಂಗಿಕ ಅಥವಾ ಬರಹ ರೂಪದ ಸಂಕೇತಗಳನ್ನು ಬಳಸಿ ಸಂವಹನ ನಡೆಸುವುದನ್ನು ಭಾಷೆಯೆಂದು ಕರೆಯಬಹುದಾದರೆ, ಪ್ರಾಣಿಗಳ ಸಂವಹನವನ್ನು ಭಾಷೆಯೆಂದು ಪರಿಗಣಿಸಬಹುದೇ? ಪ್ರಾಣಿಗಳು ಯಾವುದೇ ಬರಹ ರೂಪದ ಭಾಷೆಯನ್ನು ಹೊಂದಿಲ್ಲವಾದರೂ ಪರಸ್ಪರ ಸಂವಹನ ನಡೆಸಲು ಭಾಷಾಸಂಕೇತವನ್ನು ಬಳಸುತ್ತವೆ. ಹಾಗಾಗಿ, ಪ್ರಾಣಿಗಳ ಸಂವಹನವನ್ನು ಪ್ರತ್ಯೇಕ ಭಾಷೆಯೆಂದು ಪರಿಗಣಿಸಬಹುದು.

ಸಂಕೇತಗಳನ್ನು ಪರಿಷ್ಕರಿಸುವ ಸಂಜ್ಞೆಗಳ ಪದ್ದತಿ (ಕೆಲವೊಮ್ಮೆ ಮೂಲ ಪದಗಳೆಂದು ಗುರುತಿಸುವ) ಮತ್ತು ವ್ಯಾಕರಣಗಳನ್ನು ಮಾನವನು ಮಾತನಾಡುವ ಮತ್ತು ಬರೆಯುವ ಭಾಷೆಗಳೆಂದು (ನಿಯಮಗಳಲ್ಲಿ) ಹೇಳಬಹುದು. ಸಾಮಾನ್ಯವಾಗಿ "ಭಾಷೆ" ಎಂಬ ಪದವನ್ನು ಅದರ ಸಾಮಾನ್ಯ ಗುಣ-ಲಕ್ಷಣ ಉಲ್ಲೇಖಿಸಲು ಬಳಸಲಾಗುತ್ತಿತ್ತು. ಭಾಷೆಯ ಕಲಿಕೆ ಯು ಮಾನವನ ಬಾಲ್ಯದ ಸಾಮಾನ್ಯ ಪ್ರಕ್ರಿಯೆಯಾಗಿದೆ. ಸುತ್ತಮುತ್ತಲಿನವರೊಂದಿಗೆ ಸಂಪರ್ಕ ಸಾಧಿಸಲು. ಸಂವಹನ ನಡೆಸಲು ಶಬ್ದ ಮತ್ತು ಅಂಗಸನ್ನೆಯ ಪ್ರಕಾರವನ್ನು ಹೆಚ್ಚಿನ ಮನುಷ್ಯ ಭಾಷೆಗಳಲ್ಲಿ ಬಳಸಲಾಗುತ್ತದೆ. ಜಗತ್ತಿನಲ್ಲಿ ಸಾವಿರಾರು ಮನುಷ್ಯ ಭಾಷೆಗಳಿವೆ. ಹೆಚ್ಚಿನ ಭಾಷೆಯ ಕೆಲವು ಲಕ್ಷಣಗಳು ತಮ್ಮದೇ ಆದ ಅಪವಾದ-ಅಪರೂಪತೆ ಹೊಂದಿದ್ದರೂ ಸಹ, ಅವುಗಳು ಬೇರೆ ಭಾಷೆಯ ಲಕ್ಷಣಗಳೊಂದಿಗೆ ಹಂಚಿಕೊಂಡಂತೆ ಗೋಚರಿಸುವುದು.

ಭಾಷೆ ಮತ್ತು ಭಾಷೆಯ ಬಳಕೆ/ಉಪಭಾಷೆ ಮಧ್ಯೆ ಯಾವುದೇ ಹೆಚ್ಚಿನ ಅಂತರವಿರುವುದಿಲ್ಲ. ಆದರೆ "ಭಾಷೆ ಎಂದರೆಭೂಸೇನೆ ಮತ್ತು ನೌಕಾದಳ ಎರಡೂ ಸೇರಿರುವ ನುಡಿಗಟ್ಟಿನ ಪ್ರಕಾರದ ಭಿನ್ನಬಳಕೆಯಾಗಿದೆ" ಎಂದು ಭಾಷಾಶಾಸ್ತ್ರಜ್ಞ ಮ್ಯಾಕ್ಸ್‌ ವೀನ್ರೀಚ್‌‍‌‌ರು ವ್ಯಾಖ್ಯಾನಿಸಿದ್ದಾರೆ. ಎಸ್ಪರೆಂಟೊಪ್ರೋಗ್ರಾಮಿಂಗ್‌ ,ಮತ್ತು ವಿವಿಧ ಗಣಿತ ನಿಯಮ-ಸಮೀಕರಣಗಳಿಂದ ರಚಿತ ಭಾಷೆಗಳು ಮಾನವ ಬಳಸುವ ಭಾಷಾ ನಿರ್ಭಂದದ ಲಕ್ಷಣಗಳನ್ನು ಅನಿವಾರ್ಯವಾಗಿ ಹೊಂದಿರುವುದಿಲ್ಲ.

ಪದರಹಿತ/ಮಾತಿಲ್ಲದ ಸಂವಹನ(ಸಂಜ್ಞಾ ಸಂಪರ್ಕ)

[ಬದಲಾಯಿಸಿ]

ಪದರಹಿತ ಸಂವಹನವೆಂದರೆ ಪದರಹಿತ ಸಂದೇಶಗಳನ್ನು ರವಾನಿಸುವ ಮತ್ತು ಸ್ವೀಕರಿಸುವ ಪ್ರಕ್ರಿಯೆಯಾಗಿದೆ. ಅಂಗಸನ್ನೆ, ದೇಹ ಭಾಷೆ ಅಥವಾ ಶಾರೀರಿಕ ನಿಲವು, ಮುಖಭಾವ , ಕಣ್ಣ ನೋಟವನ್ನೊಳಗೊಂಡ ನಡವಳಿಕೆ/ವರ್ತನೆ ಯಂತಹ ಸಾಮಾನ್ಯ ಸಂವಹನಕ್ಕಿಂತ ಹೆಚ್ಚಾಗಿ ಉಡುಪು, ಕೇಶ ವಿನ್ಯಾಸ, ವಾಸ್ತು-ಕಲೆ ವಿನ್ಯಾಸ ಅಥವಾ ಸಂಕೇತಗಳು ಮತ್ತು ಮಾಹಿತಿ ನಕ್ಷೆಗಳಂತಹ ಭೌತಿಕ ಸಂವಹನಗಳು ತಮ್ಮದೇ ಆದ ರೀತಿಯಲ್ಲಿ ಸಂದೇಶಗಳನ್ನು ರವಾನಿಸುತ್ತವೆ. ಪ್ರತಿಯೊಬ್ಬರ ದೈನಂದಿನ ಜೀವನದಲ್ಲಿನ ಅಳವಡಿಕೆಯಿಂದ ಹಿಡಿದು ರೋಮಾಂಚಕಾರಿ-ಭಾವಪೂರ್ಣ ಸಂದರ್ಭದವರೆಗೆ ಪದರಹಿತ ಸಂವಹನವು ಪ್ರಮುಖ ಪಾತ್ರ ವಹಿಸುವುದು.

ಭಾಷಣವೆಂದರೆ ಧ್ವನಿಯ ಗುಣಮಟ್ಟ, ಭಾವನೆ, ಮಾತನಾಡುವ ಶೈಲಿ, ಲಯಬದ್ಧತೆ, ಧ್ವನಿಯ ಏರಿಳಿತ ಮತ್ತು ಒತ್ತು ನೀಡುವಿಕೆಯಂತಹ ಛಂದಸ್ಸಿನ ಲಕ್ಷಣಗಳು ಸೇರಿದಂತೆ ಪೂರಕ ಭಾಷೆಯಂತಿರುವ ಪದರಹಿತ ಸಂವಹನದ ಅಂಶಗಳನ್ನು ಒಳಗೊಂಡಿರುತ್ತದೆ. ಹಾಗೆಯೇ, ಬರೆದ ಪಠ್ಯವು ಸಹ ಬರವಣಿಗೆ ಶೈಲಿ, ಪದಗಳ ಜೋಡಣೆ ಅಥವಾ ಎಮೋಟಿಕಾನ್‌ಗಳ(ಭಾವನೆಗಳನ್ನು ಸ್ಫುರಿಸುವ ಸಂಜ್ಞಾರೂಪಗಳು) ಬಳಕೆಯು ಪದ-ಶಬ್ದರಹಿತ ಅಂಶಗಳನ್ನು ಒಳಗೊಂಡಿರುತ್ತದೆ. ಈ ಪದವು ಎಮೋಷನ್‌ (ಅಥವಾ ಎಮೋಟ್‌) ಮತ್ತು ಐಕಾನ್‌ ಎಂಬ ಪದಗಳಿಂದ ರಚನೆಯಾಗಿದೆ. ಎಮೋಟಿಕಾನ್‌ ಎಂದರೆ ಬರಹ ಅಥವಾ ಸಂದೇಶ ಪ್ರಕಾರದಲ್ಲಿ ಭಾವನೆಗೆ ಸಂಬಂಧಿಸಿದ ವಿಷಯವನ್ನು ವ್ಯಕ್ತಪಡಿಸಲು ಬಳಸುವ ಸಂಕೇತ ಅಥವಾ ಸಂಕೇತಗಳ ಸಮೂಹವಾಗಿದೆ.

ಎಮೋಟಿಕಾನ್‌ ಪರ್ಯಾಯ ಮಾಧ್ಯಮ-ವಾಹಕಗಳ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಭಾವನೆಗಳ ಸಂಕೇತಗಳನ್ನು ರವಾನಿಸುವ ಟೆಲಿಗ್ರಾಫಿ(ವಿದ್ಯುತ ತಂತಿಗಳ ಮೂಲಕ ಸಂದೇಶ) ಯಂತಹ ಇತರ ಸಂವಹನಗಳಿಗೆ ಸೂಕ್ತವಾಗಿದೆ. ಇದು ಸಾಂಕೇತಿಕ ಪದ, ವಿಷಯ ಅಥವಾ ಸ್ವಲ್ಪ ಮಟ್ಟಿನ ಯೋಚನೆಗಳನ್ನು ಪ್ರತಿನಿಧಿಸುತ್ತದೆ. ಇದೇ ರೀತಿ[] ಮಾನವನು ಆಂಗಿಕ ಭಾಷೆ, ಧ್ವನಿ ಶೈಲಿ ಮಾರ್ಪಾಡು ಮತ್ತು ಪದಗಳಿಲ್ಲದೆ ನೇರವಾಗಿ ಸಂವಹನ ನಡೆಸಬಹುದೆಂದು ಪ್ರಯೋಗಗಳಿಂದ ಸಾಬೀತಾಗಿದೆ.

ವಿಭಾಗ ಮತ್ತು ಲಕ್ಷಣಗಳು G. W. ಪೋರ್ಟರ್‌ ಪದರಹಿತ ಸಂವಹನವನ್ನು ಈ ಕೆಳಗಿನಂತೆ ನಾಲ್ಕು ಪ್ರಮುಖ ವಿಭಾಗಗಳಾಗಿ ವಿಂಗಡಿಸಿದರು:

ದೈಹಿಕ.(ಶಾರೀರಿಕ) ಇದು ವೈಯಕ್ತಿಕ ಪ್ರಕಾರದ ಸಂವಹನವಾಗಿದೆ. ಇದು ಮುಖ ಭಾವನೆ, ಸ್ವರಭಾವದ ಮಟ್ಟ, ಸ್ಪರ್ಶ,ವಾಸನೆಯ ಗ್ರಹಿಕೆ ಮತ್ತು ಶಾರೀರಿಕ ಚಲನೆಯನ್ನು ಒಳಗೊಂಡಿದೆ.

ಸೌಂದರ್ಯ ಪ್ರಜ್ಞೆ. ಸೃಜನಾತ್ಮಕ ಅಭಿವ್ಯಕ್ತಿಗಳ ಮೂಲಕ ಈ ಪ್ರಕಾರದ ಸಂವಹನ ಉಂಟಾಗುವುದು: ಸಂಗೀತ ವಾದ್ಯ ನುಡಿಸುವುದು, ನೃತ್ಯ, ಚಿತ್ರಕಲೆ ಮತ್ತು ಶಿಲ್ಪಕಲೆ.

ಚಿಹ್ನೆಗಳು.(ಸಂಕೇತಗಳು) ಇದು ಯಾಂತ್ರಿಕ ಸಂವಹನವಾಗಿದೆ. ಇದು ಸಂಕೇತದ ಬಾವುಟಗಳು, 21-ತುಪಾಕಿ-ನಮನ, ಎಚ್ಚರಿಕೆ ಕೂಗು ಮತ್ತು ಸಂಕೇತಗಳ ಬಳಕೆಯನ್ನು ಒಳಗೊಂಡಿದೆ.

ಸಾಂಕೇತಿಕ . ಈ ಸಂವಹನದಲ್ಲಿ ಧಾರ್ಮಿಕ, ಸ್ಥಾನಮಾನ ಅಥವಾ ಸಹಜ ಪ್ರವೃತ್ತಿ-ಹೆಚ್ಚಿಸುವ ಸಂಕೇತಗಳನ್ನು ಬಳಸಲಾಗುತ್ತದೆ.

ಸ್ಥಿರ ಲಕ್ಷಣಗಳು

ಅಂತರ. ಒಂದರಿಂದ ಮತ್ತೊಂದರ ನಡುವಿನ ಅಂತರವು ಪದರಹಿತ ಸಂದೇಶ ರವಾನಿಸುತ್ತದೆ. ಕೆಲವು ಸಂಸ್ಕೃತಿಗಳಲ್ಲಿ, ಈ ಅಂತರವು ಆಕರ್ಷಣೆಯ ಸಂಕೇತ, ಇತರೆಡೆ ವಿನಿಮಯದ ಸ್ಥಾನಮಾನ ಅಥವಾ ತೀವ್ರತೆಯನ್ನು ಪ್ರತಿಬಿಂಬಿಸುವುದು.

ನೆಲೆಗಟ್ಟು. ಜನರು ಪರಸ್ಪರ ಮುಖಾಮುಖಿ, ಅಕ್ಕ-ಪಕ್ಕ, ಅಥವಾ ಬೆನ್ನು ತಿರಿಗಿಸುವ ವಿವಿಧ ರೀತಿಯಲ್ಲಿ ತಮ್ಮನ್ನು ತಾವು ಪ್ರತಿನಿಧಿಸಿಕೊಳ್ಳಬಹುದು. ಉದಾಹರಣೆಗೆ ಸಹಕಾರದ ಲಕ್ಷಣವೆಂದರೆ ಒಂದೇ ಬದಿ ಅಥವಾ ಅಕ್ಕ-ಪಕ್ಕ ಕುಳಿತುಕೊಳ್ಳುವುದು.ಸಾಮಾನ್ಯವಾಗಿ ಸ್ಫರ್ಧಿಗಳು ಎದುರುಬದುರಾಗಿ ಕುಳಿತುಕೊಳ್ಳುತ್ತಾರೆ.

ಶಾರೀರಿಕ ನಿಲವು. ಇನ್ನೊಬ್ಬರೊಂದಿಗೆ ಸಂವಹನ ನಡೆಸುವಾಗ ವ್ಯಕ್ತಿಯು ಮಲಗಬಹುದು, ಕುಳಿತುಕೊಳ್ಳಬಹುದು ಅಥವಾ ನಿಂತುಕೊಂಡಿರಬಹುದು. ಆದರೆ ಇವುಗಳು ಸಂದೇಶಗಳನ್ನು ರವಾನಿಸುವ ದೇಹದ ಭಂಗಿಗಳಲ್ಲ. ನಾವು ಬಾಗಿ ಕುಳಿತುಕೊಂಡಿದ್ದೀವಾ ಅಥವಾ ನೆಟ್ಟಗೆ ಕುಳಿತುಕೊಂಡಿದ್ದೀವಾ ? ನಾವು ಕಾಲ ಮೇಲೆ ಕಾಲು ಹಾಕಿಕೊಂಡಿದ್ದೇವೆಯೇ ಅಥವಾ ಕೈ ಕಟ್ಟಿಕೊಂಡಿದ್ದೇವೆಯೇ ? ಸಂವಹನದ ವಿನಿಮಯದಲ್ಲಿ ಅಂತಹ ನಿಲವು-ಭಂಗಿಗಳು ಶಿಷ್ಟಾಚಾರ ಮತ್ತು ವಿಶ್ರಾಂತಿಯ ಸ್ಥಿತಿಯನ್ನು ತಿಳಿಸುತ್ತವೆ.

ದೈಹಿಕ ಸ್ಪರ್ಶ . ಹಸ್ತಲಾಘವ, ಸ್ಪರ್ಶ, ಹಿಡಿದುಕೊಳ್ಳುವುದು, ಆಲಿಂಗನ, ತಳ್ಳುವುದು, ಅಥವಾ ಬೆನ್ನು ಚಪ್ಪರಿಸುವುದು ಇವೆಲ್ಲವು ತಮ್ಮದೇಯಾದ ರೀತಿಯ ಸಂದೇಶ ರವಾನಿಸುತ್ತದೆ. ಇದು ಆಪ್ತತೆ, ನಿಕಟತೆಯ ಅಂಶಗಳು ಅಥವಾ ಆಕರ್ಷಣೆಯ ಅಥವಾ ಅನಾಕರ್ಷಣೆಯ ಭಾವನೆಯನ್ನು (ಅಥವಾ ಕೊರತೆ) ವ್ಯಕ್ತಪಡಿಸುತ್ತದೆ.

ಪ್ರಬಲ ಲಕ್ಷಣಗಳು

ಮೌಖಿಕ ಭಾವಾಭಿವ್ಯಕ್ತಿ. ಮುಗುಳ್ನಗೆ, ಹುಬ್ಬು ಗಂಟಿಕ್ಕು, ಮುಖ ಗಂಟುಹಾಕಿಕೊಳ್ಳುವುದು, ಭಾವಾತಿರೇಕದ ಹುಬ್ಬು, ಆಕಳಿಕೆ ಮತ್ತು ವಿರೋಧೀವರ್ತನೆ ಸಹ ಸಂದೇಶವನ್ನು ರವಾನಿಸುವುದು. ಪರಸ್ಪರ ಸಂವಹನ ನಡೆಸುವಾಗ ಮುಖದ ಭಾವನೆಗಳು ನಿರಂತರ ಬದಲಾಗುವವು. ಅದನ್ನು ಸ್ವೀಕರಿಸುವವನು ಅಥವಾ ಕೇಳುಗನು ನಿರಂತರವಾಗಿ ಗಮನಿಸುವನು. ವಿಭಿನ್ನ ಸಂಸ್ಕೃತಿಗಳಲ್ಲಿ ಈ ಅಭಿವ್ಯಕ್ತಿಗಳ ಅರ್ಥವು ಒಂದೇ ಆಗಿದೆ ಎನ್ನುವುದಕ್ಕೆ ಸಾಕ್ಷಾಧಾರಗಳಿವೆ.

ಭಾವ ಸೂಚಕಗಳು ಆಗಾಗ ಕೈ ಚಲನೆಯು ಆಂಗಿಕ ಭಾವಸೂಚಕವಾಗಿದ್ದು ,ಇದರ ಗ್ರಹಿಕೆಯು ತುಂಬಾ ಕಡಿಮೆ. ಹೆಚ್ಚಿನವರು ತಾವು ಮಾತನಾಡುವಾಗ, ನಿರಂತರವಾಗಿ ಕೈಚಲನೆಗಳನ್ನು ಬಳಸುವರು. ಕೆಲವು ಅಂಗಸನ್ನೆಗಳು (ಉದಾ., ಮುಷ್ಟಿ ಬಿಗಿಹಿಡಿಯುವುದು) ಸಾರ್ವತ್ರಿಕ ಅರ್ಥ ಹೊಂದಿದ್ದರೆ, ಇತರ ಸನ್ನೆಗಳಲ್ಲಿ ಹೆಚ್ಚಿನವು ತಾವಾಗಿಯೇ ವಿಶೇಷ ಲಕ್ಷಣವನ್ನು ಸೂಚಿಸುತ್ತವೆ.

ಕಣ್ಣುನೋಟ. ಸಾಮಾಜಿಕ ಸಂವಹನದ ಪ್ರಮುಖ ಲಕ್ಷಣವೆಂದರೆ ಕಣ್ಣ ನೋಟ. ಇದು ಮಾತನಾಡುವಾಗ ಮತ್ತು ಮಾತು ಮುಗಿಸಿದಾಗ ಭಾವ, ಸಂಕೇತ/ಸನ್ನೆ, ಮಾತಿನ ಆರಂಭ ಮತ್ತು ಮುಗಿತಾಯ ಅಥವಾ ವಿಮುಖತೆಯ ಸಂದೇಶ ರವಾನಿಸುವುದು. ಈ ಕಣ್ಣದೃಷ್ಟಿಯ ಸಂಪರ್ಕದ ಪುನರಾವರ್ತನೆಯು ಆಸಕ್ತಿ ಅಥವಾ ಬೇಸರವನ್ನು ಪ್ರತಿಬಿಂಬಿಸುವುದು.

ದೃಶ್ಯ ಸಂವಹನ

[ಬದಲಾಯಿಸಿ]

ದೃಷ್ಟಿ ಗೋಚರ ಸಂವಹನ ಎಂದರೆ ದೃಶ್ಯ ಗೋಚರ ಸಾಧನದ ಮೂಲಕ ಸಂವಹನ ನಡೆಸುವುದಾಗಿದೆ. ಇದು ಓದಬಹುದಾದ ಅಥವಾ ಸೂಕ್ತ ಪ್ರಕಾರಗಳಲ್ಲಿ ಆಲೋಚನೆ,ವಿಚಾರ ಅಥವಾ ಮಾಹಿತಿಯನ್ನು ದೃಶ್ಯ ಪರಿಧಿಗೆ ತರುವುದು. ದೃಷ್ಟಿ ಗೋಚರ ಸಂವಹನವು ಪ್ರಾಥಮಿಕವಾಗಿ ಎರಡು ಪ್ರಕಾರದ ಚಿತ್ರಗಳೊಂದಿಗೆ ಸಹಯೋಗ ಹೊಂದಿದೆ. ಈ ಕೆಳಗಿನವುಗಳನ್ನೂ ಒಳಗೊಂಡಿದೆ: ಚಿಹ್ನೆ-ಸಂಕೇತಗಳು, ಟೈಪೋಗ್ರಾಫಿ(ಮುದ್ರಣ ಕಲೆ), ಚಿತ್ರಕಲೆ, ಗ್ರಾಫಿಕ್(ಸ್ಫಷ್ಟ ರೇಖಾಚಿತ್ರ) ವಿನ್ಯಾಸ, ಸಚಿತ್ರ ವಿವರಣೆ, ವರ್ಣಕಲೆ ಮತ್ತು ಇಲೆಕ್ಟ್ರಾನಿಕ್‌ ಸಂಪನ್ಮೂಲಗಳು. ಈ ರೀತಿಯ ಸಂವಹನವು ದೃಶ್ಯನೋಟವನ್ನು ಮಾತ್ರ ಅವಲಂಬಿಸಿದೆ. ಇದು ದೃಷ್ಟಿ ಗೋಚರ ಪರಿಣಾಮದೊಂದಿಗಿರುವ ಸಂವಹನದ ಒಂದು ಪ್ರಕಾರವಾಗಿದೆ. ಲಭ್ಯ ವಿಚಾರದ ಆಲೋಚನಾ ವಿವರವನ್ನು ಜನರಿಗೆ ಮಾಹಿತಿ ,ಶಿಕ್ಷಣ ಅಥವಾ ಮನವೊಲಿಸಲು ಪಠ್ಯದೊಂದಿಗಿನ ದೃಷ್ಟಿ ಗೋಚರತೆ ಸಂದೇಶ ತುಂಬಾ ಪರಿಣಾಮಕಾರಿಯಾಗಿದೆ. ಇದು ದೃಷ್ಟಿ ಗೋಚರ ಪ್ರಕಾರದ ಮೂಲಕ ಮಾಹಿತಿ ನೀಡುವ ಸಂವಹನವಾಗಿದೆ.

ಉತ್ತಮ ದೃಷ್ಟಿ ಗೋಚರತೆಯ ವಿನ್ಯಾಸದ ಮೌಲ್ಯಮಾಪನವು ಸೌಂದರ್ಯ ಪ್ರಜ್ಞೆ ಅಥವಾ ಕಲಾತ್ಮಕ ಆದ್ಯತೆಯನ್ನು ಆಧರಿಸಿರುವುದಿಲ್ಲ. ಅದು ಪ್ರೇಕ್ಷಕರ ಗ್ರಹಿಕೆಯನ್ನಾಧರಿಸಿದೆ. ಸೌಂದರ್ಯ ಮತ್ತು ಕುರೂಪತೆಯ ಕುರಿತು ಸಾರ್ವತ್ರಿಕವಾಗಿ ಒಪ್ಪಿತ ಅಥವಾ ಸಮ್ಮತಿಸಲ್ಪಟ್ಟ ಯಾವುದೇ ಸೂತ್ರಗಳಿಲ್ಲ. ಆಂಗಿಕ ಸಂಕೇತ, ದೈಹಿಕ ಚಲನೆಯ ಭಾಷೆ, ವೀಡಿಯೊ ಮತ್ತು TVಯಂತೆ ದೃಷ್ಟಿ ಗೋಚರ ಮಾಹಿತಿಯನ್ನು ಪ್ರಸ್ತುತ ಪಡಿಸಲು ಹಲವು ದಾರಿಗಳಿವೆ.ಇತ್ತೀಚೆಗೆ ಇವುಗಳಲ್ಲಿ ಪಠ್ಯಕ್ರಮ, ಚಲನಚಿತ್ರ, ನಕ್ಷೆ-ನಕಾಶೆ, ಭಾವಚಿತ್ರ ಮೊದಲಾದವುಗಳನ್ನು ಕಂಪ್ಯೂಟರ್‌ ಪರದೆಯ ಮೇಲೆ ಅಂತರ್ಗತಗೊಳಿಸುವಲ್ಲಿ ಗಮನವನ್ನು ಕೇಂದ್ರಿಕರಿಸಲಾಗಿದೆ. ದೃಷ್ಟಿ ಗೋಚರ ಪ್ರಸ್ತುತಿಯನ್ನು ಹೆಚ್ಚಾಗಿ ಮಾಹಿತಿಯ ನೈಜತೆಯನ್ನು ಪ್ರತಿಬಿಂಬಿಸುವದಕ್ಕಾಗಿ ಬಳಸಲಾಗುತ್ತದೆ. ಈ ಕ್ಷೇತ್ರದಲ್ಲಿನ ಇತ್ತೀಚಿನ ಸಂಶೋಧನೆಗಳು ಅಂತರಜಾಲ ವಿನ್ಯಾಸ ಮತ್ತು ಗ್ರಾಫಿಕ್‌ನ(ಸ್ಫಷ್ಟ ರೇಖಾಚಿತ್ರಗಳ) ಬಳಕೆಯಲ್ಲಿ ಗಮನ ಕೇಂದ್ರಿಕರಿಸಿದೆ. ಗ್ರಾಫಿಕ್ ವಿನ್ಯಾಸಗಾರರು ತಮ್ಮ ವೃತ್ತಿಪರತೆಯಲ್ಲಿ ದೃಶ್ಯ ಗೋಚರ ಸಂವಹನ ಪದ್ದತಿಗಳನ್ನು ಉಪಯೋಗಿಸುವರು.

ಸಂವಹನ ಕ್ಷೇತ್ರದ ಬಗೆಗಿನ ತಿಳಿವಳಿಕೆ

[ಬದಲಾಯಿಸಿ]

ಗುಣಲಕ್ಷಣಗಳಿಗೆ ಅನುಗುಣವಾಗಿ ಸಂವಹನ ಕ್ಷೇತ್ರವನ್ನು ಮೂರು ವಿಭಾಗವಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ: ಮನುಷ್ಯರೊಂದಿಗಿನ ಸಂವಹನ, ಸಾಮೂಹಿಕ ಸಂವಹನಗಳು, ಮತ್ತು ಕ್ರಮಬದ್ದತೆಇಲ್ಲದ ಸಂವಹನಗಳು []

ಮಾನವ ಸಂವಹನ ಅಥವಾ ಸಂವಹನ ಅಧ್ಯಯನವೆಂದರೆ ಒಬ್ಬ ವ್ಯಕ್ತಿಯು ಹೇಗೆ ಸಂವಹನ ಮಾಡುತ್ತಾರೆ ಎನ್ನುವುದರ ಬಗ್ಗೆ ಪ್ರಯೋಗ ನಡೆಸುವುದಾಗಿದೆ. ಮಾನವನ ಸಂವಹನ ಪರಿಣತರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಆಯ್ಕೆಮಾಡಿಕೊಂಡ ವಿಶಿಷ್ಟ ಕ್ಷೇತ್ರಗಳೆಂದರೆ:

ಈ ಕೆಳಗಿನವುಗಳು ಸಮೂಹ ಸಂವಹನಗಳಿಗೆ ಉದಾಹರಣೆಗಳಾಗಿವೆ:

ಈ ಕೆಳಗಿನವುಗಳು ಕ್ರಮಬದ್ದತೆಇಲ್ಲದ ಸಂವಹನಗಳಾಗಿವೆ:

ಮೌಖಿಕ ಸಂವಹನ

[ಬದಲಾಯಿಸಿ]

ಮೌಖಿಕ ಸಂವಹನವು ಕಳುಹಿಸುವವರಿಂದ ಹಿಡಿದು ಸ್ವೀಕರಿಸುವವರಿಗೆ ಸಾಮಾನ್ಯವಾಗಿ ಶಬ್ದದ ಮೂಲಕ ಮಾಹಿತಿ ರವಾನಿಸುವ ಪ್ರಕ್ರಿಯೆಯಾಗಿದೆ. ಆದರೆ ದೃಷ್ಟಿ ಗೋಚರ ಸಾಧನವು ಈ ಇದನ್ನು ಇನ್ನಷ್ಟು ಸ್ಫಷ್ಟಗೊಳಿಸುತ್ತದೆ. . ಸಂವಹನವನ್ನು ಸ್ವೀಕರಿಸುವವರು ಒಬ್ಬ ವ್ಯಕ್ತಿ, ಸಮೂಹ ಅಥವಾ ಪ್ರೇಕ್ಷಕರಾಗಿರಬಹುದು. ಕೆಲವು ಮೌಖಿಕ ಸಂವಹನದ ವಿಧಗಳೆಂದರೆ: ಚರ್ಚೆ, ಭಾಷಣಗಳು, ಪ್ರಸ್ತುತಿಗಳು ಇತ್ಯಾದಿ. ಆದಾಗ್ಯೂ ಕೆಲವೊಮ್ಮೆ ನೀವು ಮುಖಾಮುಖಿಯಾಗಿ ಮಾತನಾಡುವಾಗ, ನಿಮ್ಮ ದೇಹ ಭಾಷೆ ಮತ್ತು ನಿಮ್ಮ ಧ್ವನಿ ಶೈಲಿಯು ನೀವು ಬಳಸಿದ ಪದಗಳಿಗಿಂತ ಹೆಚ್ಚಿನ ಪ್ರಭಾವ ಬೀರುವುದು. ಸಂಶೋಧನೆಯ ಪ್ರಕಾರವಾಗಿ:[ಸೂಕ್ತ ಉಲ್ಲೇಖನ ಬೇಕು]

ಸಂವಹನದ ಪರಿಣಾಮವು 55%ರಷ್ಟು ದೇಹ ಭಾಷೆಯಿಂದ ನಿರ್ಧಾರವಾಗುತ್ತದೆ. ಉದಾಹರಣೆಗೆ: ಶಾರೀರಿಕ ನಿಲವು,ಭಂಗಿ, ಭಾವಸೂಚಕ ಸಂಜ್ಞೆ, ಕಣ್ಣ ನೋಟ ಇತ್ಯಾದಿ.
38%ರಷ್ಟು ನಿಮ್ಮ ಧ್ವನಿಯ ಮಟ್ಟದಿಂದ
ಸಂವಹನ ಪ್ರಕ್ರಿಯೆಯಲ್ಲಿ ನೀವು ಬಳಸಿದ ಪದಗಳಿಂದ 7%ರಷ್ಟು ಪ್ರಭಾವ ನಿರ್ಧಾರವಾಗುತ್ತದೆ.

ನೀವು ಬಳಸುವ ವಿಷಯ ಅಥವಾ ಪದವನ್ನು ಉತ್ತಮ ಸಂವಹನದ ಭಾಗವೆಂದು ಪರಿಗಣಿಸಲಾಗುವುದಿಲ್ಲ. “ನೀವು ಅದನ್ನು ಹೇಗೆ ಹೇಳಿದಿರಿ” ಎನ್ನುವುದು ಸ್ವೀಕರಿಸುವವರ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ. ನೀವು ಪ್ರೇಕ್ಷಕರ ಗಮನ ಸೆಳೆದು,ಅವರ ಸಂಪರ್ಕ ಸಾಧಿಸಬೇಕು. ಉದಾಹರಣೆಗೆ, ಇಬ್ಬರು ವ್ಯಕ್ತಿಗಳು ಒಂದೇ ಹಾಸ್ಯಚಟಾಕಿಯನ್ನು ಹೇಳುವರು. ಆದರೆ ಅದರೊಳಗೊಬ್ಬ ತನ್ನ ಉತ್ತಮ ಆಂಗಿಕ ಚಲನೆಯ ಭಾಷೆ ಮತ್ತು ಸ್ವರ ಶೈಲಿಯಿಂದ ,ಪ್ರೇಕ್ಷಕರನ್ನು ಹುಚ್ಚೆದ್ದು ನಗುವಂತೆ ಮಾಡುವನು. ಆದರೆ, ಇನ್ನೊಬ್ಬ ವ್ಯಕ್ತಿಯು ಅದೇ ಹಾಸ್ಯ ಚಟಾಕಿ ಬಳಸಿ, ಪ್ರೇಕ್ಷಕರು ನಗದೇ ಆಶ್ಚರ್ಯದಿಂದ ಒಬ್ಬರನ್ನೊಬ್ಬರು ದಿಟ್ಟಿಸುವಂತೆ ಮಾಡುವನು.[ಸೂಕ್ತ ಉಲ್ಲೇಖನ ಬೇಕು]

ಮೌಖಿಕ ಸಂವಹನದಲ್ಲಿ, ದೃಷ್ಟಿ ಗೋಚರ ಸಾಧನ ಬಳಸಿ, ನಿಖರ ಮಾಹಿತಿ ಒದಗಿಸಲು ಸಹಾಯವಾಗುತ್ತದೆ. ಕೆಲವೊಮ್ಮೆ, ನಾವು ಸಂವಹನ ಪ್ರಕ್ರಿಯೆ ಸರಳ ಅಥವಾ ಉತ್ತಮಗೊಳಿಸಲು ನಮ್ಮ ಮಾತುಗಳಿಗೆ ಸಂಬಂಧಿಸಿದ ಪ್ರಸ್ತಾವನೆಗಳಲ್ಲಿ ಯೋಜಿತ ಪ್ರಸ್ತುತಿ ಕಾರ್ಯಕ್ರಮವನ್ನು ಬಳಸುತ್ತೇವೆ.ಇದರಿಂದಾಗಿ ಸಂವಹನ ಸುಗಮಗೊಂಡು ಪ್ರಕ್ರಿಯೆ ಇನ್ನಷ್ಟು ಉತ್ತೇಜನ ಪಡೆಯುತ್ತದೆ ಆದಾಗ್ಯೂ,ಕೇವಲ ದೃಷ್ಟಿ ಗೋಚರ ವಿಷಯ ಒದಗಿಸುವುದರಿಂದ ಮಾತ್ರ ಸಂವಹನ ನಡೆಸಲು ಸಾಧ್ಯವಿಲ್ಲ. ಏಕೆಂದರೆ ನಾವು ಯಾವತ್ತು ಮೌಖಿಕ ಸಂವಹನ ಬಗ್ಗೆ ವಿವರವಾಗಿ ಮಾತನಾಡಲಾರೆವು.

ಸಂವಹನ ಮಾದರಿ

[ಬದಲಾಯಿಸಿ]
ಸಂವಹನದ ಶನನ್‌ ಮತ್ತು ವೀವರ್‌ ಮಾದರಿ
ಸಂವಹನ ಪ್ರಮುಖ ಅಳತೆಗೋಲು
ಸಂವಹನ ಕೋಡ್‌ ಯೋಜನೆ
ರೇಖಿಯ ಸಂವಹನ ಮಾದರಿ
ಸಂವಹನದ ಅಂತಾರಾಷ್ಟ್ರೀಯ ಮಾದರಿ
ಬೆರ್ಲೊರ ಸಂವಹನದ ಸೆಂಡರ್‌-ಮೆಸೇಜ್‌-ಚಾನಲ್‌-ರಿಸೀವರ್‌ ಮಾದರಿ
ಸಂವಹನದ ವ್ಯವಹಾರದ ಮಾದರಿ

ಸುಮಾರು 1949ರಲ್ಲಿ ಬೆಲ್‌ ಪ್ರಯೋಗಾಲಯದಲ್ಲಿ ಕ್ಲೌಡ್‌ ಶನನ್‌ ಮತ್ತು ವಾರನ್‌ ವೀವರ್‌ ಸಂವಹನಕ್ಕೆ ಮೊದಲ ಮಾದರಿ ಕಂಡುಹಿಡಿದರು.[] ಮೂಲ ಮಾದರಿಯನ್ನು ರೇಡಿಯೋ ಮತ್ತು ದೂರವಾಣಿ ತಂತ್ರಜ್ಞಾನಗಳ ಕಾರ್ಯಚಟುವಟಿಕೆಗಳನ್ನು ಪ್ರತಿಬಿಂಬಿಸಲು ವಿನ್ಯಾಸಗೊಳಿಸಲಾಗಿದೆ. ಅವರ ಮೊದಲ ಮಾದರಿ ಮೂರು ಪ್ರಾಥಮಿಕ ವಿಭಾಗಗಳನ್ನು ಒಳಗೊಂಡಿತ್ತು. ಅವುಗಳೆಂದರೆ: ಕಳುಹಿಸುವವ, ಮಾಧ್ಯಮ, ಮತ್ತು ಸ್ವೀಕರಿಸುವವ. ಕಳುಹಿಸುವವನು ದೂರವಾಣಿಯಲ್ಲಿ ಮಾತನಾಡುವ ಮೂಲಕ ಸಂದೇಶ ರವಾನಿಸುವನು, ದೂರವಾಣಿಯೇ ಮಾಧ್ಯಮವಾಗಿದ್ದು, ಮತ್ತು ಕಳುಹಿಸಿದ ಆ ಸಂದೇಶವನ್ನು ದೂರವಾಣಿಯ ಒಂದು ಭಾಗವಾಗುವ ಮೂಲಕ ಕೇಳಿಸಿಕೊಳ್ಳುವವ ಅದನ್ನು ಸ್ವೀಕರಿಸುವನು. ದೂರವಾಣಿಯಲ್ಲಿ ಮಾತನಾಡಬೇಕೆಂದು ಬಯಸುವ ಕೇಳುಗನ ಮಧ್ಯೆ ಪ್ರವೇಶಿಸುವಿಕೆಯು ಕೆಲವೊಮ್ಮೆ ಸ್ಥಿರವಾಗಿದ್ದು ಅದನ್ನು ಗೊಂದಲ ಅಥವಾ ಗೋಜಲು ಶಬ್ದ ಎಂದು ಸಹ ಶನನ್‌ ಮತ್ತು ವೀವರ್‌ ಗುರುತಿಸಿದರು.

ಸರಳ ಮಾದರಿಯಲ್ಲಿ, ಮಾಹಿತಿ ಹೊರಹಾಕುವವ (emisor)/ ಕಳುಹಿಸುವವ/ ಅಜ್ಞಾತ ಸ್ಥಳಕ್ಕೆ ಸಂಕೇತಲಿಪಿಗಾರ / ಸ್ವೀಕರಿಸುವವ/ ಅದರ ಅರ್ಥ ವು ರವಾನೆ ಮಾದರಿ ಅಥವಾ ಸಂವಹನದ ಪ್ರಮಾಣಿತ ಅವಲೋಕನ, ಮಾಹಿತಿ ಅಥವಾ ವಿಷಯವನ್ನು (ಉದಾ. ಸ್ವಾಭಾವಿಕ ಭಾಷೆಯಲ್ಲಿ ಸಂದೇಶ) ಕೆಲವು ಪ್ರಕಾರಗಳಲ್ಲಿ (ಮಾತನಾಡುವ ಭಾಷೆಯಂತೆ) ಕಳುಹಿಸಲಾಗುತ್ತವೆ. ಸಂವಹನದ ಸಾಮಾನ್ಯ ಪರಿಕಲ್ಪನೆಯೆಂದರೆ ಇದು ಸ್ವೀಕರಿಸುವವ ಮತ್ತು ಕಳಿಸುವವನ ನಡುವಿನ ವಾಹಕವಾಗಿ ಕೆಲಸ ಮಾಡುತ್ತದೆ. ಈ ಮಾದರಿಯ ಸಂವಹನದ ಪ್ರಬಲ ಅಂಶಗಳೆಂದರೆ ಸರಳತೆ, ಸಾರ್ವತ್ರಿಕತೆ ಮತ್ತು ಮಾನದಂಡ. ಸಾಮಾಜಿಕ ವಿಜ್ಞಾನಿಗಳಾದ ಕ್ಲೌಡ್‌ ಶನನ್‌ ಮತ್ತು ವಾರ್ರೆನ್‌ ವೀವರ್‌ ಈ ಕೆಳಗಿನ ಅಂಶಗಳ ಆಧಾರದ ಮೇಲೆ ಈ ಮಾದರಿ ರಚಿಸಿದ್ದಾರೆ:

  1. ಸಂದೇಶದ ಮಾಹಿತಿಯ ಮೂಲ.
  2. ಸಂದೇಶವನ್ನು ಸಂಕೇತಗಳಾಗಿ ಪರಿವರ್ತಿಸುವ ಸಂವಾಹಕ ಯಂತ್ರ
  3. ಸಂಕೇತ ರವಾನಿಸುವ ಮಾಧ್ಯಮ
  4. ಸಂಕೇತ ರೂಪದಲ್ಲಿರರುವುದನ್ನು ಸಂದೇಶ ರೂಪಕ್ಕೆ ಮರುನಿರ್ಮಿಸುವ ಮೂಲಕ ಸ್ವೀಕರಿಸುವವ.
  5. ಸಂದೇಶ ತಲುಪಬೇಕಾದ ಸ್ಥಳ.

ಈ ಪದ್ದತಿಯಲ್ಲಿ ಮೂರು ಹಂತದ ಸಮಸ್ಯೆಗಳಿವೆ ಎಂದು ಶನನ್‌ ಮತ್ತು ವೀವರ್‌ ವಾದಿಸಿದರು.

ತಾಂತ್ರಿಕ ಸಮಸ್ಯೆ: ಸಂದೇಶವನ್ನು ಎಷ್ಟು ನಿಖರವಾಗಿ ರವಾನಿಸಬಹುದು?
ಶಬ್ದಾರ್ಥದ ಸಮಸ್ಯೆ: ಎಷ್ಟು ಕರಾರುವಕ್ಕಾಗಿ ಸಂದೇಶದ ಅರ್ಥ 'ತಿಳಿಯಲ್ಪಡುತ್ತದೆ'?
ಪರಿಣಾಮಕಾರಿತ್ವದ ಸಮಸ್ಯೆ: ಸಂದೇಶದಿಂದ ಸ್ವೀಕರಿಸಿದ ಅರ್ಥವು ಎಷ್ಟು ಪರಿಣಾಮಕಾರಿಯಾಗಿ ನಡವಳಿಕೆಯ ಮೇಲೆ ಪ್ರಭಾವ ಬೀರುವುದು?

ಡೇನಿಯಲ್‌ ಕ್ಯಾಂಡ್ಲರ್‌ ಈ ಸಂದೇಶ ರವಾನೆ ಮಾದರಿಯನ್ನು ಟೀಕಿಸಿದ್ದಾರೆ. ಅವರ ಪ್ರಕಾರ:

ಈ ಮಾದರಿಯಲ್ಲಿ ಸಂವಹನಕಾರರನ್ನು ಪ್ರತ್ಯೇಕ ವ್ಯಕ್ತಿಯಾಗಿ ಊಹಿಸಲಾಗಿದೆ.
ಇದನ್ನು ವಿವಿಧ ಉದ್ದೇಶಗಳಿಗೆ ಬಳಸುವಂತಿಲ್ಲ.
ಅರ್ಥ ವ್ಯತ್ಯಾಸವಾಗುವುದಕ್ಕೆ ಅನುಮತಿ ಇಲ್ಲ.
ಸಾಮರ್ಥ್ಯ ಹೊಂದಿರದ ವ್ಯಕ್ತಿಗಳ ನಡುವಿನ ಸಂಬಂಧಕ್ಕೆ ಅವಕಾಶವಿಲ್ಲ.
ಸಾಂದರ್ಭಿಕ ವಿಷಯ ಪ್ರಸ್ತಾಪಕ್ಕೆ ಅವಕಾಶವಿಲ್ಲ.

1960ರಲ್ಲಿ ಡೇವಿಡ್‌ ಬೆರ್ಲೊ ಶನನ್‌ ಮತ್ತು ವೀವರ್‌ರ (1949) ಸಂವಹನದ ರೇಖಾಚಿತ್ರ ಮಾದರಿಯನ್ನು ಅಭಿವೃದ್ಧಿಪಡಿಸಿ, ಸಂವಹನದ SMCR ನಮೂನೆಯನ್ನು ರಚಿಸಿದರು[]. ಸಂವಹನದ-ಸಂದೇಶ-ಮಾಧ್ಯಮ-ಸ್ವೀಕರಿಸುವ ಮಾದರಿ ಹೀಗೆ ನಿರ್ದಿಷ್ಟ ಭಾಗಗಳಾಗಿ ವಿಂಗಡಿಸಲಾಯಿತು. ಆ ಶಾಖೆಗಳು ಇತರ ವಿದ್ವಾಂಸರಿಂದ ಅಭಿವೃದ್ಧಿ ಹೊಂದಿದವು.

ಸಂವಹನವನ್ನು ಸಾಮಾನ್ಯವಾಗಿ ಈ ಕೆಳಗಿನ ಐದು ಮುಖ್ಯ ಮಾನದಂಡದ ಮೂಲಕ ಮೂಲಕ ಅಳೆಯಲಾಗುವುದು: ಸಂದೇಶ (ಯಾವ ವಿಧದ ವಿಷಯವು ಸಂವಹನಗೊಳ್ಳುತ್ತಿದೆ), ಮೂಲ / ಸಂಜ್ಞಾವಿಷಯಗಳ/ ಕಳುಹಿಸುವವ / ಸಂಕೇತಲಿಪಿಗಾರ (ಯಾರಿಂದ), ಪ್ರಕಾರ (ಯಾವ ಪ್ರಕಾರದಲ್ಲಿ), ಮಾಧ್ಯಮ (ಯಾವ ಮಾಧ್ಯಮದ ಮೂಲಕ), ಗಮ್ಯಸ್ಥಾನ / ಸ್ವೀಕರಿಸುವವ / ಗುರಿ / ಕಳಿಸುವವ (ಯಾರಿಗೆ), ಮತ್ತು ಸ್ವೀಕರಿಸುವವ. ಸಂದೇಶವು (ಬಯಸಿದ ಮತ್ತು ಬಯಸದ ಎರಡೂ) ತನ್ನ ಗುರಿಯನ್ನು ತಲುಪಿದಾಗ, ಆಗುವ ಪರಿಣಾಮವನ್ನು ನಾವು ಪರೀಕ್ಷಿಸಬೇಕೆಂದು ವಿಲ್ಬರ್‌ ಶ್ರಾಮ್‌ (1954) ತಿಳಿಸಿದ್ದಾರೆ[]. ಇದು ಎರಡು ವ್ಯಕ್ತಿಗಳ ನಡುವಿನ ಸಂವಹನವು ಮಾಹಿತಿ ಮತ್ತು ಅನುಭವವನ್ನು ಪರಸ್ಪರ ಹಂಚಿಕೊಳ್ಳುವುದು, ಸಲಹೆ ಮತ್ತು ಆದೇಶ ನೀಡುವುದು, ಮತ್ತು ಪ್ರಶ್ನೆ ಕೇಳುವುದನ್ನು ಒಳಗೊಂಡಿರುತ್ತದೆ. ಈ ಪ್ರಕ್ರಿಯೆಗಳು ಯಾವುದಾದರೂ ಸಂವಹನದ ಒಂದು ಪ್ರಕಾರದಲ್ಲಿ ಸಂಭವಿಸಬಹುದು. ಈ ಪ್ರಕಾರವು ಸಂವಹನ ನಡೆಸುತ್ತಿರುವ ಸಮೂಹದ ಸಂವಹನ ಸಾಮರ್ಥ್ಯ ಅವಲಂಬಿಸಿದೆ. ಒಟ್ಟಿನಲ್ಲಿ ಹೇಳುವುದಾದರೆ, ಸಂವಹನ ವಿಷಯ ಮತ್ತು ಪ್ರಕಾರವು ಸಂದೇಶಗಳನ್ನು ಅಜ್ಞಾತ ಸ್ಥಳದೆಡೆಗೆ ರವಾನಿಸುವಂತೆ ಮಾಡುವುದು. ಸಂದೇಶವು ತಲುಪಬೇಕಾದ ಸ್ಥಳವು ಒಬ್ಬ ವ್ಯಕ್ತಿ, ಇನ್ನೊಬ್ಬ ವ್ಯಕ್ತಿ ಅಥವಾ ವಸ್ತು, ಇನ್ನೊಂದು ಅಸ್ಥಿತ್ವದಲ್ಲಿರುವ ವಸ್ತು (ಸಂಸ್ಥೆ ಅಥವಾ ವ್ಯಕ್ತಿಗಳ ಸಮೂಹದಂತಹ) ಆಗಿರಬಹುದು.

ಸಂವಹನವು ಈ ಕೆಳಗಿನ ಮೂರು ಹಂತದ ಸಂಕೇತ ಶಾಸ್ತ್ರದ ನಿಯಮಗಳಿಂದ ನಿಯಂತ್ರಿಸಿದ ಮಾಹಿತಿ ರವಾನೆಯ ಪ್ರಕ್ರಿಯೆಯಾಗಿದೆ:

  1. ವಾಕ್ಯರಚನೆ (ಚಿಹ್ನೆಗಳು ಮತ್ತು ಗುರುತುಗಳ ಸ್ವರೂಪಾಧರಿತ ಲಕ್ಷಣವಾಗಿದೆ),
  2. ಪ್ರಾಯೋಗಿಕ (ಚಿಹ್ನೆಗಳು/ಅಭಿವ್ಯಕ್ತಿಗಳು ಮತ್ತು ಅವುಗಳನ್ನು ಬಳಸುವವರ ನಡುವಿನ ಸಂಬಂಧಗಳಿಗೆ ಸೇರಿದೆ) ಮತ್ತು
  3. ಶಬ್ದಾರ್ಥ (ಚಿಹ್ನೆಗಳು ಮತ್ತು ಗುರುತುಗಳು ಮತ್ತು ಅವುಗಳು ಏನನ್ನು ಪ್ರತಿನಿಧಿಸುತ್ತದೆ ಎನ್ನುವುದರ ನಡುವಿನ ಸಂಬಂಧಗಳ ಅಧ್ಯಯನವಾಗಿದೆ).

ಹಾಗಾಗಿ, ಸಂವಹನವು ಸಾಮಾಜಿಕ ಪರಸ್ಪರ ಕ್ರಿಯೆಯಾಗಿದೆ. ಇದರಲ್ಲಿ ಸಾಮಾನ್ಯ ಚಿಹ್ನೆಗಳು ಮತ್ತು ಸಂಕೇತ ಶಾಸ್ತ್ರದ ನಿಯಮಗಳ ಮೂಲಕ ವಿಷಯ-ವಿಚಾರವನ್ನು ಹಂಚಿಕೊಳ್ಳುವ ಕನಿಷ್ಠ ಇಬ್ಬರು ಪರಸ್ಪರ ಸಂವಹನ ನಡೆಸುವ ವ್ಯಕ್ತಿಗಳಿರಬೇಕು. ಕೆಲವೊಮ್ಮೆ ಈ ನಿಯಮಗಳು ದಿನಚರಿ ಬರೆಯುವುದು ಅಥವಾ ತನ್ನ ತಾನೇ ಮಾತನಾಡುವ ಎರಡೂ ವಿದ್ಯಮಾನದ ಮೂಲಕ ನಡೆಯುವ ಅಂತರ್‌ ವ್ಯಕ್ತಿಯ ಸಂವಹನ ಒಳಗೊಂಡಂತೆ ಸ್ವಯಂಸಂವಹನವನ್ನು ನಿರ್ಲಕ್ಷಿಸುತ್ತದೆ. ಇದು ಸಾಮಾಜಿಕವಾಗಿ ಪರಸ್ಪರ ಸಂವಹನದಲ್ಲಿ ಸಾಮರ್ಥ್ಯದ ಪ್ರಾಥಮಿಕ ಅನುಭವವನ್ನು ಅನುಸರಿಸುತ್ತದೆ.

ಈ ನ್ಯೂನತೆಗಳ ನಡುವೆ ಬರ್ನ್‌ಲಂಡ್‌ (2008) ಸಂವಹನದ ವ್ಯವಹಾರ ಮಾದರಿಯನ್ನು ಪ್ರಸ್ತಾಪಿಸಿದರು[೧೦]. ಒಬ್ಬ ವ್ಯಕ್ತಿಯು ಏಕಕಾಲದಲ್ಲಿಯೇ ಸಂದೇಶಗಳನ್ನು ಕಳುಹಿಸುವುದು ಮತ್ತು ಸ್ವೀಕರಿಸುವುದರಲ್ಲಿ ತೊಡಗಬಹುದು ಎನ್ನುವುದು ಸಂವಹನದ ವ್ಯವಹಾರ ಮಾದರಿಯ ಮೂಲ ಕಲ್ಪನೆಯಾಗಿದೆ.

ಇದು ಸ್ವಲ್ಪ ಜಟಿಲ ಪ್ರಕಾರವಾಗಿದ್ದು, ಕಳುಹಿಸುವವ ಮತ್ತು ಸ್ವೀಕರಿಸುವವ ಪರಸ್ಪರ ಸಂಪರ್ಕ ಹೊಂದಿರುತ್ತಾರೆ. ರಚನಾತ್ಮಕ ಮಾದರಿ ಅಥವಾ ವಿನ್ಯಾಸದ ದೃಷ್ಟಿಕೋನ ಎಂದು ಕರೆಯುವ ಈ ಸಂವಹನದ ಎರಡನೇ ವಿಧಾನವು ಸಂದೇಶವು ಅರ್ಥವಾಗುವ ಮಾರ್ಗವನ್ನು ಆಧರಿಸಿ, ಒಬ್ಬ ವ್ಯಕ್ತಿಯು ಹೇಗೆ ಸಂವಹನ ನಡೆಸುತ್ತಾನೆ ಎನ್ನುವುದರ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಸಂವಹನ ಒಂದು ಮಾಧ್ಯಮದಂತಿದ್ದು; ಮಾಹಿತಿಯು ಒಬ್ಬರಿಂದ ಇನ್ನೊಬ್ಬರಿಗೆ ಸಾಗುವ ಸುರಂಗ ಮಾರ್ಗವಾಗಿದೆ. ನಂತರ ಈ ಮಾಹಿತಿಯ ಸಂವಹನದಿಂದ ಪ್ರತ್ಯೇಕಿಸಲ್ಪಡುತ್ತದೆ. ಸಂವಹನದ ನಿರ್ದಿಷ್ಟ ನಿದರ್ಶನವನ್ನು ಮಾತಿನ ಕ್ರಮವೆಂದು ಹೇಳುವರು. ಕಳುಹಿಸುವವನ ವೈಯಕ್ತಿಕ ಶೋಧಕಗಳು ಮತ್ತು ಸ್ವೀಕರಿಸುವವನ ವೈಯಕ್ತಿಕ ಶೋಧಕಗಳು ಸಂದೇಶದ ಅರ್ಥವನ್ನು ಬದಲಾಯಿಸಬಹುದಾದ ವಿವಿಧ ಪ್ರಾದೇಶಿಕ ಸಂಪ್ರದಾಯಗಳು, ಸಂಸ್ಕೃತಿಗಳು, ಅಥವಾ ಲಿಂಗವನ್ನಾಧರಿಸಿ, ವ್ಯತ್ಯಾಸವಾಗುತ್ತದೆ. ರವಾನೆಯಾಗುವ ಮಾರ್ಗದಲ್ಲಿ (ಇದರಲ್ಲಿ ವಾಯುಮಾರ್ಗ) "ಸಂವಹನದಲ್ಲಿ ಅಡ್ಡಿ"ಯಾದಾಗ, ಸಂದೇಶವನ್ನು ಸ್ವೀಕರಿಸುವಲ್ಲಿ ಮತ್ತು ವಿಷಯವನ್ನು ವಿಸಂಕೇತಕರಿಸುವಲ್ಲಿ ದೋಷವುಂಟಾಗುತ್ತದೆ. ಹಾಗಾಗಿ ಮಾತಿನ ಗುಣಮಟ್ಟವು ನಿರೀಕ್ಷೆ ಮಟ್ಟದಲ್ಲಿರುವುದಿಲ್ಲ. ಸಂಕೇತಿಕರಿಸುವ ಮತ್ತು ವಿಸಂಕೇತಿಕರಿಸುವ ಪ್ರಕ್ರಿಯೆಗಳಿಗಾಗಿ ಕಳುಹಿಸುವವ ಮತ್ತು ಸ್ವೀಕರಿಸುವವರು ಕೋಡ್ ಪುಸ್ತಕ ದಂತಹ (ನೀತಿ-ನಿಯಮ-ತತ್ವಸಿದ್ದಾಂತದ) ಕಾರ್ಯನಿರ್ವಹಿಸುವುದನ್ನು ಹೊಂದಿರುವುತ್ತಾರೆ. ಇವೆರಡೂ ಪುಸ್ತಕಗಳು ತಮ್ಮದೇ ಆದ ಗುಣಲಕ್ಷಣ ಹೊಂದಿರುತ್ತವೆ. ಇದು ಸಂಕೇತಿಕರಣ-ರವಾನೆ-ಸ್ವೀಕರಿಸು-ವಿಸಂಕೇತಿಕರಣ ಮಾದರಿಯಲ್ಲಿರುವ ಒಂದು ಸಮಸ್ಯೆಯಾಗಿದೆ. ಆದರೂ ಕೋಡ್(ನೀತಿ-ನಿಯಮ-ತತ್ವಸಿದ್ದಾಂತದ) ಪುಸ್ತಕದಂತವು ಆ ಮಾದರಿಯನ್ನು ಅನುಸರಿಸುವವು. ಈಗ ಅವುಗಳು ಪ್ರತಿನಿಧಿಸುವ ಮಾದರಿಗಳು ಹಲವು ಭಾವನಾತ್ಮಕ ಸಮಸ್ಯೆಗಳಿಗೆ ಕಾರಣವಾಗಿದೆ.

ಸಹವಿಧಾಯಕ ನಿಯಂತ್ರಣ ತತ್ವವು ಸಂವಹನವನ್ನು ಕೇವಲ ಮಾಹಿತಿಯ ವಿನಿಮಯವಲ್ಲದೆ, ರಚನಾತ್ಮಕ ಮತ್ತು ಕ್ರಿಯಾಶೀಲ ನಿರಂತರ ಪ್ರಕ್ರಿಯೆ ಎಂದು ವಿವರಿಸಿದೆ. ಕೆನಡಾದ ಮಾಧ್ಯಮ ತಜ್ಞ ಹರಾಲ್ಡ್ ಇನ್ನಿಸ್‌ರ ತತ್ವದಂತೆ ಜನರು ಸಂವಹನ ನಡೆಸಲು ವಿವಿಧ ಮಾಧ್ಯಮಗಳನ್ನು ಅನುಸರಿಸುತ್ತಾರೆ. ಅವರು ಆಯ್ಕೆ ಮಾಡಿಕೊಂಡ ಮಾಧ್ಯಮವು ಸಮಾಜದ ರಚನೆ ಮತ್ತು ಸ್ಥಿರತೆಗಾಗಿ ವಿವಿಧ ಸಾಧ್ಯತೆಗಳನ್ನು ತೆರೆದಿಡುತ್ತದೆ.(ವಾರ್ಕ್‌, ಮ್ಯಾಕ್‌ಕೆಂಜೀ 1997). ಅವರು ನೀಡಿದ ಪ್ರಾಚೀನ ಈಜಿಪ್ಟ್‌ ಉದಾಹರಣೆ ಜನಪ್ರಿಯವಾಗಿದೆ. ಈಜಿಪ್ಟ್‌ನವರು ಕಲ್ಲು ಮತ್ತು ಪಪೈರಸ್‌ನಂತಹ ವಿವಿಧ ಮಾಧ್ಯಮಗಳ ಮೂಲಕ ತಮ್ಮನ್ನು ತಾವು ಮಾಧ್ಯಮಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರು. ಅವರು ಪಪೈರಸ್‌ನ್ನು 'ಅಂತರ/ದೂರ ಬಂಧಕ '(ಬಾಹ್ಯಾಕಾಶ ಇಲ್ಲವೆ ಅಂತರಿಕ್ಷ ಮೂಲದ) ಎಂದು ಕರೆದಿದ್ದಾರೆ. ಏಕೆಂದರೆ ಇದು ದೂರದ ಸ್ಥಳದವರೆಗೆ ಆದೇಶಗಳ ರವಾನಿಸುವ ಮೂಲಕ ದೂರದ ಸೈನಿಕ ಪಡೆ ಮತ್ತು ವಸಹಾತು ಆಡಳಿತ ನಿಯಂತ್ರಣವನ್ನು ಸುಲಭಗೊಳಿಸಿತು. ಇನ್ನೂ ಇತರ ಎಂದರೆ ಶಿಲಾಕೆತ್ತನೆಬರಹ, ಅದನ್ನು ಇನ್ನಿಸ್‌ 'ಸಮಯ ಬಂಧಕ '(ಸಮಯಾನುಸಾರ)ಎಂದು ಕರೆದಿದ್ದರು. ದೇವಾಲಯಗಳು ಮತ್ತು ಪಿರಾಮಿಡ್‌ಗಳನ್ನು ನಿರ್ಮಿಸುವುದರ ಮೂಲಕ ಪೀಳಿಗೆಯಿಂದ ಪೀಳಿಗೆಗೆ ತಮ್ಮ ಅಸ್ತಿತ್ವ ಸ್ಥಾಪಿಸಲು ಸಾಧ್ಯವಾಯಿತು. ಈಜಿಪ್ಟ್‌ನಲ್ಲಿ ಸಂವಹನ ಮಾಧ್ಯಮ ಬದಲಿಸಿ, ಅದಕ್ಕೆ ಒಂದು ರೂಪು-ರೇಷೆ ನೀಡಲಾಯಿತು. (ವಾರ್ಕ್‌, ಮ್ಯಾಕ್‌ಕೆಂಜೀ 1997).

ಕೃಷಿ ವಿಜ್ಞಾನ ಕೇಂದ್ರ ಕಣ್ಣೂರು

ಕೇರಳ ಕೃಷಿ ವಿಶ್ವವಿದ್ಯಾಲಯವು ಕ್ರಿಯೇಟಿವ್‌ ಎಕ್ಸೆಂಷನ್‌(ಸೃಜನಾತ್ಮಕ ವಿಸ್ತರಣೆ) ಎನ್ನುವ ಕೃಷಿ ಸಂವಹನದ ಹೊಸ ಶಾಖೆಯನ್ನು ಮೊದಲ ಬಾರಿಗೆ ಪ್ರಾರಂಭಿಸಿತು.

ಮಾನವರಹಿತ ಸಂವಹನ

[ಬದಲಾಯಿಸಿ]

ಮನುಷ್ಯರು ಮಾತ್ರವಲ್ಲದೆ, ವಾನರರು (ಪ್ರೈಮೇಟ್ (ಸುಧಾರಿತ ಚುರುಕು ಮೆದುಳಿನ ಸಸ್ತನಿಗಳು‌) ಸಹ ಮುಖಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ಸಂವಹನ ಮಾಡುತ್ತವೆ. ಸಜೀವ ವಸ್ತುಗಳ ನಡುವಿನ ಪ್ರತಿಯೊಂದು ಮಾಹಿತಿಯ ವಿನಿಮಯ, ಅಂದರೆ ಸಜೀವವಾಗಿರುವವ ಕಳುಹಿಸುವ ಮತ್ತು ಸ್ವೀಕರಿಸುವವರುಗಳು ತೊಡಗಿರುವ ಸಂಕೇತಗಳ ರವಾನೆಯನ್ನು ಒಂದು ಪ್ರಕಾರದ ಸಂವಹನ ಎಂದು ಪರಿಗಣಿಸಲಾಗುವುದು.[೧೧] ಹಾಗಾಗಿ, ಪ್ರಾಣಿಗಳ ಸಂವಹನಕ್ಷೇತ್ರವು ವಿಶಾಲವಾಗಿದ್ದು, ಇದರ ಕುರಿತಾದ ಹೆಚ್ಚಿನ ಮಾಹಿತಿಯನ್ನು ನಡವಳಿಕೆಶಾಸ್ತ್ರವು ಒಳಗೊಂಡಿದೆ. ಹವಳದಂತಹ ಪ್ರಾಚೀನ ಜೀವಿಗಳು ಕೂಡ ಸಂವಹನ ಮಾಡುವ ಸಾಮರ್ಥ್ಯ ಹೊಂದಿವೆ.[೧೨] ಬ್ಯಾಕ್ಟಿರಿಯಾ[೧೩] ಮತ್ತು ಸಸ್ಯ ಮತ್ತು ಶಿಲೀಂಧ್ರಗಳಂತಹ ಪ್ರಾಚೀನ ಜೀವಿಗಳ ನಡುವೆ ಕೋಶ ಸಂಕೇತ ರವಾನಿಸುವುದು, ಕೋಶೀಯ ಸಂವಹನ ಮತ್ತು ರಸಾಯನಿಕ ಸಂವಹನವು ಪ್ರಾಥಮಿಕ ಮಟ್ಟದಲ್ಲಿ ಜರಗುವುದು. ಈ ಎಲ್ಲಾ ಮೇಲಿನ ಸಂವಹನ ಪ್ರಕ್ರಿಯೆಗಳು ವಿವಿಧ ರೀತಿಯ ಪರಸ್ಪರ ಸಂಬಂಧದೊಂದಿಗೆ ಸಂಕೇತದ ಮೂಲಕ ವ್ಯವಹರಿಸುತ್ತವೆ.

ಪ್ರಾಣಿಗಳ ಸಂವಹನವೆಂದರೆ ಒಂದು ಪ್ರಾಣಿಯ ದೇಹದ ಭಾಗದ ಚಲನೆಯು ಇನ್ನೊಂದು ಪ್ರಾಣಿಯ ಪ್ರಸ್ತುತ ಅಥವಾ ಭವಿಷ್ಯದ ದೇಹದ ಭಾಗದ ಚಲನೆಯ ಮೇಲೆ ಪ್ರಭಾವ ಬೀರುತ್ತದೆ. ಸಹಜವಾಗಿ, ಮಾನವನ ಸಂವಹನವನ್ನು ಪ್ರಾಣಿಗಳ ಸಂವಹನಯ ಅಭಿವೃದ್ಧಿಹೊಂದಿದ ಪ್ರಕಾರವೆಂದು ಪರಿಗಣಿಸಬಹುದು. ಪ್ರಾಣಿಗಳ ಸಂವಹನದ ಅಧ್ಯಯನವನ್ನು ಜೂಸೆಮಿಯೊಟಿಕ್ಸ್‌ ಎಂದು ಕರೆಯುವರು (ಮಾನವರ ಸಂವಹನದ ಅಧ್ಯಯನವಾದ ಅಂಥ್ರೊಪೊಸೆಮಿಯೊಟಿಕ್ಸ್‌ಗಿಂತ, ಇದು ಭಿನ್ನವಾಗಿದೆ). ಇದು ನಡವಳಿಕೆಶಾಸ್ತ್ರ, ಸಾಮಾಜಿಕ ಜೀವಶಾಸ್ತ್ರ ಮತ್ತು ಪ್ರಾಣಿಗಳ ಗ್ರಹಿಕೆ ಕುರಿತಾದ ಅಧ್ಯಯನದಲ್ಲಿ ಮಹತ್ವದ ಪಾತ್ರ ವಹಿಸಿದೆ. ಡಾಲ್ಫಿನ್‌ ಮತ್ತು ಇತರ ಪ್ರಾಣಿಗಳನ್ನು ಸರ್ಕಸ್ಸುಗಳಲ್ಲಿ ಬಳಸಲಾಗುತ್ತಿದ್ದು, ಇದರಿಂದ ಮಾನವರು ಪ್ರಾಣಿಗಳೊಂದಿಗೆ ಸಮರ್ಥ ಸಂವಹನ ನಡೆಸಬಲ್ಲರು ಎನ್ನುವುದು ದೃಢಪಟ್ಟಿದೆ. ಈ ಪ್ರಾಣಿಗಳು ವಿಶೇಷ ಸಂವಹನವನ್ನು ಕಲಿಯಬೇಕಾಗುತ್ತದೆ. ಪ್ರಾಣಿ ಸಂವಹನ ಮತ್ತು ಪ್ರಾಣಿಗಳ ಗ್ರಹಿಕೆ ಸಾಮರ್ಥ್ಯವು ತೀವ್ರಗತಿಯಲ್ಲಿ ಬೆಳವಣಿಗೆ ಕಾಣುವ ಕ್ಷೇತ್ರವಾಗಿದೆ ಪ್ರಸಕ್ತ 21ನೇ ಶತಮಾನದಲ್ಲಿ ಇಲ್ಲಿಯವರೆಗೆ, ವೈಯಕ್ತಿಕ ಹೆಸರಿನ ಬಳಕೆ, ಪ್ರಾಣಿಗಳ ಭಾವನೆಗಳು, ಪ್ರಾಣಿಗಳ ಸಂಸ್ಕೃತಿ ಮತ್ತು ಕಲಿಕೆ, ಮತ್ತು ಲೈಂಗಿಕ ಸಂಪರ್ಕನಂತಹ ವಿವಿಧ ಕ್ಷೇತ್ರಗಳಲ್ಲಿ ಪ್ರಾಣಿಗಳ ಬಗೆಗಿನ ಹಿಂದಿನ ಗ್ರಹಿಕೆಯಲ್ಲಿ ಬದಲಾವಣೆಗಳಾಗಿವೆ.

ಸಸ್ಯಗಳು ಮತ್ತು ಶಿಲೀಂಧ್ರ

[ಬದಲಾಯಿಸಿ]

ಸಸ್ಯಗಳಲ್ಲಿ, ಸಸ್ಯ ಕೋಶಗಳೊಳಗೆ ಮತ್ತು ಅವುಗಳ ನಡುವೆ, ಅದೇ ಸಸ್ಯ ಅಥವಾ ಅದಕ್ಕೆ ಸಂಬಂಧಿಸಿದ ಸಸ್ಯವರ್ಗಗಳ ನಡುವೆ, ಮತ್ತು ಸಸ್ಯ ಮತ್ತು ಸಸ್ಯೇತರ ಜೀವಿಗಳ ನಡುವೆ, ವಿಶೇಷವಾಗಿ ಬೇರಿನ ವಲಯದಲ್ಲಿನ ಸಸ್ಯದ ಭಾಗಗಳೊಳಗೆ ನಡೆಯುವ ಸಂವಹನವನ್ನು ಗುರುತಿಸಲಾಗಿದೆ. ರೈಜೋಬಿಯಾ ಬ್ಯಾಕ್ಟಿರಿಯಾ, ಶಿಲೀಂಧ್ರ ಮತ್ತು ಮಣ್ಣಿನಲ್ಲಿರುವ ಕೀಟಗಳ ನಡುವೆ ಸಸ್ಯದ ಬೇರುಗಳು ಸಂವಹನ ನಡೆಸುತ್ತವೆ. ಈ ಸಂಕೇತಾಧರಿತ ಪರಸ್ಪರ ಸಂವಹನಗಳು ಸಸ್ಯಗಳ ವಿಕೇಂದ್ರಿತ "ನರಮಂಡಲ"ದಿಂದಾಗಿ ವ್ಯೂಹ ರಚನೆ, ಪ್ರಾಯೋಗಿಕ ಮತ್ತು ಶಬ್ದಾರ್ಥದ ನಿಯಮಗಳಿಂದ ನಿಂಯತ್ರಿಸಲ್ಪಡುತ್ತದೆ. ಗ್ರೀಕ್ ಮೂಲದ ಪದ "ನ್ಯುರಾನ್‌"ನ ವಿವರಣೆಯು"ಸಸ್ಯದ ನಾರು ಪದಾರ್ಥ" ಎಂದಾಗಿದೆ. ಹೆಚ್ಚಿನ ಸಸ್ಯಗಳಲ್ಲಿ ಆಂತರಿಕ ಸಂವಹನ ಪ್ರಕ್ರಿಯೆಗಳು ನರಮಂಡಲ ವ್ಯವಸ್ಥೆಗಳಂತವಲ್ಲಿ ನಡೆಯುತ್ತದೆ ಎನ್ನುವುದನ್ನು ಇತ್ತೀಚಿನ ಸಂಶೋಧನೆಗಳು ತಿಳಿಸಿವೆ.[೧೪] ಸಸ್ಯಹಾರಿ ಪ್ರಾಣಿಗಳ ದಾಳಿಯ ಕುರಿತು ನೆರೆಹೊರೆಯ ಸಸ್ಯಗಳನ್ನು ಎಚ್ಚರಿಸಲು ಸಸ್ಯಗಳು ಆವಿ/ಬಾಷ್ಪ ಸ್ಫುರಿಸುವ ಮೂಲಕ ಸಂವಹನ ನಡೆಸುತ್ತವೆ. ಅದೇ ಸಮಯದಲ್ಲಿ, ಇತರ ಸಸ್ಯಗಳು ಪರಾವಲಂಬಿ/ಮಾಂಸಹಾರಿ ಗಳನ್ನು ಆಕರ್ಷಿಸುವ ಅಂಶವನ್ನು ಉತ್ಪಾದಿಸುವವು. ಆ ಮಾಂಸಹಾರಿ ಜೀವಿಗಳು ಸಸ್ಯಗಳನ್ನು ತಿನ್ನಲು ಬಂದ ಜೀವಿಗಳ ಮೇಲೆ ಆಕ್ರಮಣ ನಡೆಸುತ್ತವೆ. ಒತ್ತಡದ ಸಂದರ್ಭಗಳಲ್ಲಿ, ಸಸ್ಯಗಳು ತಮ್ಮ ಪೋಷಕರಿಂದ ಬಂದಿರುವ ಅನುವಂಶಿಕ ಸಂಕೇತವನ್ನು ಬದಲಿಸಿ, ತಮ್ಮ ಅಜ್ಜ ಯಾ ಅಜ್ಜಿಯ(ಹಿರಿಯ ಪೋಷಕರ) ಅಥವಾ ಅದಕ್ಕೂ ಹಿಂದಿನ (ಪುರಾತನರ) ಮುತ್ತಜ್ಜ ಯಾ ಮುತ್ತಜ್ಜಿಯ ಅನುವಂಶಿಕ ಸಂಕೇತಕ್ಕೆ ಮರಳುತ್ತವೆ.[೧೫]

ಮಿಸೆಲಿಯಾದ ರಚನೆ ಮತ್ತು ದೇಹದ ಭಾಗಗಳ ಬೆಳವಣಿಗೆ ಮತ್ತು ಅದರ ಫಲಪ್ರದ ಫಲಿತಾಂಶದೊಂದಿಗೆ ಒಟ್ಟಾಗಲು ಶಿಲೀಂಧ್ರವು ಸಂವಹನ ನಡೆಸುತ್ತದೆ. ಇದಲ್ಲದೆ ಶಿಲೀಂಧ್ರವು ವಿವಿಧ ರೀತಿಯ ಸಾಂಕೇತಿಕ ಸಂವಹನದೊಂದಿಗೆ ತನ್ನದೆ ವರ್ಗಕ್ಕೆ ಸೇರಿದ ಜೀವಿಗಳು ಮತ್ತು ಶಿಲೀಂದ್ರವಲ್ಲದ ಜೀವ ವರ್ಗಗಳೊಂದಿಗೆ ಸಂವಹನ ನಡೆಸುತ್ತದೆ. ಇವುಗಳೆಂದರೆ ಬ್ಯಾಕ್ಟಿರಿಯಾ, ಏಕಕೋಶಿಯ ಯೂಕರಿಯೊಟ್‌ಗಳು, ಸಸ್ಯಗಳು ಮತ್ತು ಕೀಟಗಳೊಂದಿಗೆ ಸಹ ಸಂವಹನ ನಡೆಸುವುದು. ಬಳಸಿದ ಸೆಮಿಯೊಕೆಮಿಕಲ್‌ಗಳು ಜೈವಿಕ ಮೂಲಗಳಾಗಿದ್ದು, ಇವುಗಳನ್ನು ನಿರ್ದಿಷ್ಟ ರೀತಿಯಲ್ಲಿ ಶಿಲೀಂಧ್ರಗಳ ಪ್ರತಿಕ್ರಿಯಿಗೆ ಬಳಸಲಾಗುವುದು. ಕೆಲವು ರಸಾಯನಿಕ ಅಣುಗಳು ಜೈವಿಕ ಸಂದೇಶಗಳ ಭಾಗವಾಗಿರದಿದ್ದರೂ ಸಹ, ಅವುಗಳನ್ನು ಶಿಲೀಂಧ್ರಗಳೊಂದಿಗೆ ಪ್ರತಿಕ್ರಿಯಿಸಲು ಬಳಸಲಾಗುವುದು. ಹೀಗಾಗಿ, ಜೈವಿಕ ಸಂದೇಶಗಳು ಅಥವಾ ಜೈವಿಕ ಗುಣಲಕ್ಷಣದ ಕೊರತೆಯ ಭಾಗವಾಗಿ ಶಿಲೀಂಧ್ರಗಳು, ತಾವಿರುವ ಅಣುಗಳ ವ್ಯತ್ಯಾಸ ಗುರುತಿಸಲು ಶಕ್ತವಾಗಿವೆ . ಈವರೆಗೆ ಐದು ವಿವಿಧ ಪ್ರಾಥಮಿಕ ಸಂಕೇತ ನೀಡುವ ಅಣುಅಂಶಗಳನ್ನು ಗುರುತಿಸಲಾಗಿದೆ. ಅವುಗಳು ಫಿಲಾಮೆಂಟೇಷನ್‌, ಸಂಬಂಧಗಳ ಸಮ್ಮಿಲನ, ಬೆಳವಣಿಗೆ, ಪಾಥೋಜೆನಿಸಿಟಿಯಂತಹ ವಿವಿಧ ನಡವಳಿಕೆಯ ನಮೂನೆಗಳನ್ನು ಸಂಘಟಿಸುತ್ತವೆ. ನಡವಳಿಕೆಯ ಸಹಯೋಗ ಮತ್ತು ಅದರಿಂದ ಹೊರಬರುವ ಸಂಕೇತಗಳೊಂದಿಗೆ ಪರಸ್ಪರ ನಡೆಸುವ ಸಂಹವನದ ಮೂಲಕ ಮಾತ್ರ ಅರ್ಥವಿವರಣೆ ಇಲ್ಲವೆ ವ್ಯಾಖ್ಯಾನ ಮಾಡಬಹುದು: ಸ್ವಯಂ ಅಥವಾ ಪರಾವಲಂಬಿ ವಸ್ತು ಸೂಚಕ; ಸಮಾನತೆಯುಳ್ಳ, ಸಂಬಂಧಿಸಿದ, ಅಥವಾ ಇತರೆ ವರ್ಗಗಳಿಂದ ಜೈವಿಕ ಸಂದೇಶ , ಅಥವಾ ಸಮಾನ “ಧ್ವನಿ”, ಅಂದರೆ, ಜೈವಿಕ ವಿಷಯರಹಿತ ಸಮಾನ ಅಂಶಗಳು-[೧೬]

ಶೈಕ್ಷಣಿಕ ವಿಭಾಗದ ಶಿಸ್ತುರೂಪ ಸಂವಹನ

[ಬದಲಾಯಿಸಿ]

ಶೈಕ್ಷಣಿಕ ವಿಭಾಗವಾಗಿ ಸಂವಹನವನ್ನು ಕೆಲವೊಮ್ಮೆ "ಕಮ್ಯುನಿಕಾಲಜಿ"[೧೭] ಎಂದು ಕರೆಯುವರು. ಇದು ಸಂವಹನ ನಡೆಸಬಹುದಾದ ಎಲ್ಲಾ ವಿಧಾನಗಳಿಗೂ ಸಂಬಂಧಿಸಿದೆ. ಹಾಗಾಗಿ ಇದರ ಅಧ್ಯಯನದ ಭಾಗವು ಬೃಹತ್ ಪ್ರಮಾಣದ ಪಠ್ಯ ಮತ್ತು ಜ್ಞಾನವನ್ನು ಒಳಗೊಂಡಿದೆ. ಈ ಸಂವಹನದ ಶಿಸ್ತು ಮತ್ತು ಸಂಯಮದ ವಿಭಾಗವು ಶಾಬ್ಧಿಕ ಮತ್ತು ಪದರಹಿತ ಸಂದೇಶಗಳೆರಡನ್ನು ಹೊಂದಿದೆ. ಸಂವಹನ ಕುರಿತಾದ ಪಠ್ಯಪುಸ್ತಕಗಳು, ಇಲೆಕ್ಟ್ರಾನಿಕ್‌ ಪ್ರಕಟಣೆಗಳು ಮತ್ತು ಪ್ರಸ್ತುತ ಶೈಕ್ಷಣಿಕ ನಿಯತಕಾಲಿಕಗಳಲ್ಲಿ ಒಂದು ಪರಿಣತರ ಗುಂಪು ವಿವರ ಮಾಹಿತಿ ಪ್ರಕಟಿಸಲು ತನ್ನ ಶ್ರಮ ಹಾಗು ಪ್ರಯೋಗಶೀಲತೆಯನ್ನು ತೋರಿದೆ. ನಾವೆಲ್ಲ ಹೇಗೆ ಸಂವಹನ ಮಾಡುತ್ತೇವೆ ಎನ್ನುವುದನ್ನು ಆಧರಿಸಿದ ಅಧ್ಯಯನದ ಫಲಿತಾಂಶಗಳನ್ನು ಸಂಶೋಧಕರು ನಿಯತಕಾಲಿಕಗಳಲ್ಲಿ ವರದಿ ಮೂಲದಲ್ಲಿ ಪ್ರಕಟಿಸಿದ್ದಾರೆ.

ಸಂವಹನ ಕ್ರಿಯೆಯು ವ್ಯಕ್ತಿಗಳೊಂದಿಗೆ, ಹಾಗೆಯೇ ಯಂತ್ರಗಳಿಗೆ ಕೂಡಾ ಒಂದು ಮಟ್ಟದಲ್ಲಿ (ಕೇವಲ ಒಂದೇ ಒಂದು ಕ್ರಿಯೆಗೂ ಕೂಡ), ಬೇರೆ ಬೇರೆ ವಿಧದಲ್ಲಿ ಸಂಭವಿಸುವುದು. ಕೆಲವು ವಿಭಿನ್ನ ಅಧ್ಯಯನ ಕ್ಷೇತ್ರಗಳು ತಮ್ಮ ಒಂದು ವಿಭಾಗವನ್ನು ಸಂವಹನಕ್ಕೆ ಮೀಸಲಿಡುತ್ತದೆ. ಹಾಗಾಗಿ ಸಂವಹನ ಕುರಿತು ಮಾತನಾಡುವಾಗ, ಅದರ ಯಾವ ಅಂಶದ ವಿವರಗಳನ್ನು ಕುರಿತು ಮಾತನಾಡುತ್ತಿದ್ದೇವೆ ಎನ್ನುವುದನ್ನು ಖಾತರಿಪಡಿಸಿಕೊಳ್ಳಬೇಕು. ಸಂವಹನಕ್ಕಿರುವ ವ್ಯಾಖ್ಯಾನಗಳ ವ್ಯಾಪ್ತಿಯು ತುಂಬಾ ವಿಶಾಲವಾಗಿದೆ. ಪ್ರಾಣಿಗಳು ಕೂಡ ಮಾನವರಂತೆ ಪರಸ್ಪರ ಸಂವಹನ ಮಾಡಬಲ್ಲವು ಎಂದು ಕೆಲವರು ಗುರುತಿಸಿದ್ದಾರೆ. ಇನ್ನೂ ಕೆಲವರು ಸ್ವಲ್ಪ ನಿಖರವಾಗಿ, ಮಾನವನ ಕೆಲವು ಸಂಕೇತ ರೂಪದ ಸಂವಹನವನ್ನು ಮಾತ್ರ ಪ್ರಾಣಿಗಳು ಬಳಸುತ್ತವೆ ಎನ್ನುವುದನ್ನು ಗುರುತಿಸಿದರು.

ಟಿಪ್ಪಣಿಗಳು

[ಬದಲಾಯಿಸಿ]
  1. Schwartz, Gary E.; Simon, William L.; Carmona, Richard (2008). The Energy Healing Experiments. Simon & Schuster. p. 129. ISBN 0743292399. All communication is a process of exchanging energy and exchanging information. {{cite book}}: Check |isbn= value: checksum (help)
  2. "communication". office of superintendent of Public instruction. Washington. Archived from the original on ಮಾರ್ಚ್ 17, 2015. Retrieved March 14, 2008. {{cite web}}: Unknown parameter |dateformat= ignored (help)
  3. ಮೊಂಟಾನಾ, ಪ್ಯಾಟ್ರಿಕ್‌ J. & ಚಾರ್ನೊವ್‌, ಬ್ರುಸ್‌ H. 2008. ಮ್ಯಾನೇಜ್‌ಮೆಂಟ್‌. 4ನೇ ಆವೃತ್ತಿ. ನ್ಯೂಯಾರ್ಕ್ ಬ್ಯಾರನ್ಸ್‌ ಎಜ್ಯುಕೇಶನಲ್‌ ಸೀರಿಸ್‌, Inc. ಪುಟ 333.
  4. ಮೆಹ್ರಾಬಿಯನ್ ಮತ್ತು ಫೆರ್ರಿಸ್‌ (1967). "ಇಂಫೆರೆನ್ಸ್‌ ಆಫ್‌ ಆಟಿಟ್ಯುಡ್‌ ಫ್ರಮ್‌ ನಾನ್‌ವರ್ಬಲ್‌ ಕಮ್ಯುನಿಕೇಷನ್‌ ಇನ್‌ ಟು ಚ್ಯಾನಲ್ಸ್‌". ಇನ್‌: ದಿ ಜರ್ನಲ್‌ ಆಫ್‌ ಕೌನ್ಸಲಿಂಗ್‌ ಸೈಕಾಲಜಿ ಸಂಪುಟ.31, 1967, ಪುಟ ಸಂಖ್ಯೆ.248-52.
  5. ವಾಕ್ವಿಕ್‌, K, ಗಾಸನ್‌, M, ಹಟ್‌, B, ಗುಡ್‌ಹೆವ್‌, I, ಕೇಬರ್ಡ್‌, P, ಶುಲ್‌ಜ್ರಿನ್‌, H ಮತ್ತು ವು, X: “ಥೋಟ್‌ ಕಮ್ಯುನಿಕೇಷನ್‌ ಆಂಡ್‌ ಕಂಟ್ರೋಲ್‌: ಎ ಫಸ್ಟ್‌ ಸ್ಟೆಪ್‌ ಯುಸಿಂಗ್‌ ರೇಡಿಯೋಟೆಲಿಗ್ರಾಫಿ”, IEE ಪ್ರಿಸೀಡಿಂಗ್ಸ್‌ ಆನ್‌ ಕಮ್ಯುನಿಕೇಷನ್ಸ್‌ , 151(3), ಪುಟ ಸಂಖ್ಯೆ.185-189, 2004
  6. ವ್ರೆಂಚ್‌, J. S., ಮ್ಯಾಕ್‌ಕ್ರೋಸ್ಕಿ, J. C., & ರಿಚ್ಮಂಡ್‌, V. P. (2008). ಹ್ಯುಮನ್‌ ಕಮ್ಯುನಿಕೇಷನ್‌ ಇನ್‌ ಎವೇರಿಡೇ ಲೈಫ್‌: ಎಕ್ಸ್‌ಪ್ಲನೇಷನ್‌ ಆಂಡ್‌ ಅಪ್ಲಿಕೇಶನ್ಸ್‌. ಬೋಸ್ಟನ್‌, MA: ಅಲಿನ್‌ & ಬೇಕಾನ್‌.
  7. ಶನನ್‌, C. E., & ವೀವರ್‌, W. (1949). ದಿ ಮೇಥಮೇಟಿಕಲ್‌ ಥಿಯರಿ ಆಫ್‌ ಕಮ್ಯುನಿಕೇಷನ್‌ . ಅರ್ಬನಾ, ಇಲಿನೊಯಿಸ್‌: ಇಲಿನೊಯಿಸ್‌ ವಿಶ್ವವಿದ್ಯಾಲಯದ ಮುದ್ರಣಾಲಯ.
  8. ಬೆರ್ಲೊ, D. K. (1960). ದಿ ಪ್ರೋಸೆಸ್‌ ಆಫ್‌ ಕಮ್ಯುನಿಕೇಷನ್‌ . ನ್ಯೂಯಾರ್ಕ್‌, ನ್ಯೂಯಾರ್ಕ್‌: ಹಾಲ್ಟ್‌, ರೈನ್‌ಹಾರ್ಟ್‌, & ವಿನ್‌ಸ್ಟನ್‌.
  9. ಶ್ರಾಮ್‌, W. ((1954). ಹೌ ಕಮ್ಯುನಿಕೇಷನ್‌ ವರ್ಕ್ಸ್‌. W. ಶ್ರಾಮ್‌ (ಅವೃತ್ತಿ.)ನಲ್ಲಿ, ದಿ ಪ್ರೋಸೆಸ್‌ ಆಂಡ್‌ ಎಫೆಕ್ಟ್‌ ಆಫ್‌ ಕಮ್ಯುನಿಕೇಷನ್‌ (ಪುಟ ಸಂಖ್ಯೆ. (3-26). ಅರ್ಬನಾ, ಇಲಿನೊಯಿಸ್‌: ಇಲಿನೊಯಿಸ್‌ ವಿಶ್ವವಿದ್ಯಾಲಯದ ಮುದ್ರಣಾಲಯ.
  10. ಬಾರ್ನ್‌ಲಂಡ್‌, D. C. ((2008). ಎ ಟ್ರಾನ್ಸಾಷನಲ್‌ ಮಾಡೆಲ್‌ ಆಫ್‌ ಕಮ್ಯುನಿಕೇಶನ್‌ ಇನ್‌! C. D. ಮೊರ್ಟನ್ಸೆನ್‌ (ಆವೃತ್ತಿಗಳು.), ಕಮ್ಯುನಿಕೇಷನ್‌ ಥಿಯರಿ (2ನೇ ಆವೃತ್ತಿ., ಪುಟ ಸಂಖ್ಯೆ47-57). ನ್ಯೂಬ್ರನ್‌ಸ್ವಿಕ್‌, ನ್ಯೂಜರ್ಸಿ: ಟ್ರಾನ್ಸಾಷನ್‌.
  11. ವಿಟ್ಜಾನಿ G. (2009) ಬಯೊಕಮ್ಯುನಿಕೇಷನ್‌ ಅಂಡ್‌ ನ್ಯಾಚುರಲ್‌ ಜಿನೊಮೆ ಎಡಿಟಿಂಗ್‌. ಸ್ಪಿಂಜರ್‌ ವರ್ಲೇಗ್‌
  12. ವಿಟ್ಜಾನಿ G, ಮಡ್ಲ್‌ P. ((2009). ಬಯೊಕಮ್ಯುನಿಕೇಷನ್‌ ಆಫ್‌ ಕೋರಲ್ಸ್‌. ಇಂಟರ್‌ನ್ಯಾಷನಲ್‌ ಜರ್ನಲ್‌ ಆಫ್‌ ಇನ್ಟಿಗ್ರಟಿವ್‌ ಬಯಾಲಜಿ 5(3): 152-163.
  13. ವಿಟ್ಜಾನಿ G (2008). ಬಯೊ-ಕಮ್ಯುನಿಕೇಷನ್‌ ಆಫ್‌ ಬ್ಯಾಕ್ಟಿರಿಯಾ ಆಂಡ್‌‌‌‌ ದೆಯರ್‌ ಎವೊಲ್ಯುಷನರಿ ರೂಟ್ಸ್‌ ಇನ್‌ ನ್ಯಾಚುರಲ್‌ ಜಿನೊಮೆ ಎಡಿಟಿಂಗ್‌ ಕಾಂಪಿಟೆನ್ಸ್‌ ಆಫ್‌ ವೈರಸಸ್‌. ಒಪನ್‌ ಇವೊಲ್ಯುಷನ್‌ ಜರ್ನಲ್‌ 2: 44-54.
  14. Baluska, F.; Marcuso, Stefano; Volkmann, Dieter (2006). Communication in plants: neuronal aspects of plant life. Taylor & Francis US. p. 19. ISBN 3540284758. ...the emergence of plant neurobiology as the most recent area of plant sciences. {{cite book}}: Check |isbn= value: checksum (help)
  15. ವಿಟ್ಜಾನಿ, G. (2006). ಪ್ಲಾಂಟ್‌ ಕಮ್ಯುನಿಕೇಷನ್‌ ಫ್ರಮ್‌ ಬಯೊಸೆಮಿಯೊಟಿಕ್‌ ಪರ್‌ಸ್ಪೆಕ್ಟಿವ್‌. ಪ್ಲಾಂಟ್‌ ಸಿಗ್ನಲಿಂಗ್‌ ಆಂಡ್‌ ಬಿಹೇವಿಯರ್‌ 1(4): 169-178.
  16. ವಿಟ್ಜಾನಿ, G. (2007). ಎಪ್ಲೈಡ್‌ ಬಯೊಸೆಮಿಯೊಟಿಕ್ಸ್‌: ಫುಂಗಲ್‌ ಕಮ್ಯುನಿಕೇಷನ್‌. ಇನ್‌: ವಿಟ್ಜಾನಿ, G. (ಆವೃತ್ತಿ). ಬಯೊಸೆಮಿಯೊಟಿಕ್ಸ್‌ ಇನ್‌ ಟ್ರಾನ್ಸ್‌ಡಿಸಿಪ್ಲಿನರಿ ಕಾಂಟೆಸ್ಟ್‌ಸ್‌. ಹೆಲ್ಸಿನ್ಕಿ, ಯುಂವೆಬ್‌, ಪುಟ ಸಂಖ್ಯೆ. 295-301.
  17. "ಆರ್ಕೈವ್ ನಕಲು". Archived from the original on 2009-09-23. Retrieved 2010-01-15.

ಆಕರಗಳು

[ಬದಲಾಯಿಸಿ]
"https://kn.wikipedia.org/w/index.php?title=ಸಂವಹನ&oldid=1245030" ಇಂದ ಪಡೆಯಲ್ಪಟ್ಟಿದೆ