ಸಂಸತ್ತು
ಗೋಚರ
ಸಂಸತ್ತು ಎಂಬುದು ಶಾಸಕಾಂಗದ ಸದಸ್ಯರು ಶಾಸನ ಕಾರ್ಯಗಳನ್ನು ನೆರವೇರಿಸಲು ಸೇರುವ ಜಾಗ. ಸಂಸದೀಯ ಪದ್ಧತಿಯ ಸರ್ಕಾರಗಳಲ್ಲಿ ಶಾಸಕಾಂಗವೇ ಅತ್ಯಂತ ಪ್ರಬಲ ವಿಭಾಗ. ರಾಷ್ಟ್ರಪತಿ ಪದ್ಧತಿಯಲ್ಲಿ ರಾಷ್ಟ್ರಪತಿಯು ಕಾರ್ಯಾಂಗದ ಮುಖ್ಯಸ್ಥನಾಗಿದ್ದು, ಶಾಸಕಾಂಗಕ್ಕೆ ಸುಮಾರು ಸಮನಾದ ಶಕ್ತಿಯನ್ನು ಹೊಂದಿರುತ್ತಾರೆ.

ಎರಡು ಮನೆ ಸಂಸತ್ತುಗಳನ್ನು ಹೊಂದಿರುವ ದೇಶಗಳು
ಒಂದು ಮನೆ ಸಂಸತ್ತುಗಳನ್ನು ಹೊಂದಿರುವ ದೇಶಗಳು
ಸಂಸತ್ತು ಇರದ ದೇಶಗಳು
ಸಂಸತ್ತುಗಳು ಒಂದು ಅಥವಾ ಎರಡು ವಿಭಾಗಗಳನ್ನು ಹೊಂದಿರುತ್ತವೆ. ಈ ವಿಭಾಗಗಳನ್ನು "ಮನೆಗಳು" ಎಂದು ಕರೆಯಲಾಗುತ್ತದೆ. ಎರಡು ಮನೆಗಳಿರುವ ಸಂಸತ್ತುಗಳಲ್ಲಿ ಸಾಮಾನ್ಯವಾಗಿ ಕೆಳಮನೆಯು ಶಾಸನಗಳನ್ನು ನಿರೂಪಿಸುವ ಕಾರ್ಯವನ್ನು ಹೊಂದಿದ್ದು, ಮೇಲ್ಮನೆಯು ಈ ನಿರೂಪಿತ ಶಾಸನಗಳ ಮೇಲೆ ನಿಗಾ ವಹಿಸುವ ಕಾರ್ಯವನ್ನು ಹೊಂದಿರುತ್ತದೆ.