ಸಜ್ಜನ್ ರಾವ್ ದೇವಸ್ಥಾನ
ಗೋಚರ
ಸಜ್ಜನ್ ರಾವ್ ದೇವಸ್ಥಾನ[೧] ದಕ್ಷಿಣ ಬೆಂಗಳೂರಿನ, ವಿಶ್ವೇಶ್ವರಪುರಂ ಸರ್ಕಲ್,' ವಿಶ್ವೇಶ್ವರ ಪುರಂ, ಸಜ್ಜನ್ ರಾವ್ ಸರ್ಕಲ್ ಇತ್ಯಾದಿ ಹತ್ತಿರ ಇದೆ. ಇದು ಬೆಂಗಳೂರಿನ ಪ್ರಮುಖ ದೇವಸ್ಥಾನಗಳಲ್ಲಿ ಒಂದು. ಆ ದೇವಸ್ಥಾನದ ಅಧಿದೈವ ಸುಬ್ರಹ್ಮಣ್ಯ ಸ್ವಾಮಿ ಯೆಂದು ತಿಳಿದು ಬರುತ್ತದೆ. ಸಜ್ಜನರಾವ್ [೨] ಎಂಬುವವರು ಕಟ್ಟಿಸಿದ್ದರಿಂದ ಎಲ್ಲರೂ ಅದನ್ನು ಸಜ್ಜನ್ ರಾವ್ ದೇವಸ್ಥಾನ ವೆಂದೇ ಕರೆಯುತ್ತಾರೆ. ಇಲ್ಲಿ ಅತ್ಯಂತ ವಿಧಿಪೂರ್ವಕವಾಗಿ ದೇವರ ಪೂಜೆ-ಪುನಸ್ಕಾರ, ಜಪ-ತಪಾದಿಗಳು ನಡೆಯುತ್ತವೆ.
- ಬೆಂಗಳೂರಿನ ಹೆಸರುವಾಸಿಯಾದ ವಿ.ಬಿ.ಬೇಕರಿ ಕೂಡ ಈ ದೇವಸ್ಥಾನದ ಹತ್ತಿರದಲ್ಲೇ ಇದೆ.
- ಕೋಟ ಕಾಮಾಕ್ಷಯ್ಯನವರ ಛತ್ರ,
- ನ್ಯಾಷನಲ್ ಕಾಲೇಜ್,
- ರಾಮಕೃಷ್ಣ ಸ್ಟೂಡೆಂಟ್ಸ್ ಹೋಮ್,
- ಬೆಂಗಳೂರು ಮೆಡಿಕಲ್ ಕಾಲೇಜ್,
- ಒಕ್ಕಲಿಗರ ಸಂಘ ಹಾಸ್ಟೆಲ್,
- ಬೆಂಗಳೂರು ಗಾಯನ ಸಮಾಜ,
- 'ಮಾಧ್ವ ಸಂಘ,' ಇಲ್ಲಿಂದ ನಡೆದು ಹೋಗುವಷ್ಟು ಸಮೀಪದಲ್ಲಿವೆ.
- ಸುಪ್ರಸಿದ್ಧ 'ಲಾಲ್ ಬಾಗ್' ಉದ್ಯಾನವನ, ಇಲ್ಲಿಂದ ತೀರ ಹತ್ತಿರ.
- 'ಬಸವನಗುಡಿ ಪೋಸ್ಟ್ ಆಫೀಸ್',
- 'ಗಾಂಧಿಬಝಾರ್',
- 'ಇಂಡಿಯನ್ ಇನ್ ಸ್ಟಿ ಟ್ಯೂಟ್ ಆಪ್ಹ್ ವರ್ಲ್ಶ್ ಕಲ್ಚರ್',
- 'ಕೃಷ್ಣರಾವ್ ಪಾರ್ಕ್,'ಗೆ ಕೂಡ ನಡೆದು ಹೋಗುವಷ್ಟು ಹತ್ತಿರ.