ಸಣ್ಣ ಮೊಲ್ಲೆ
ಗೋಚರ
Jasminum auriculatum | |
---|---|
Scientific classification | |
ಸಾಮ್ರಾಜ್ಯ: | Plantae |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | Eudicots |
ಏಕಮೂಲ ವರ್ಗ: | ಆಸ್ಟರಿಡ್ಸ್ |
ಗಣ: | ಲ್ಯಾಮಿಯೇಲ್ಸ್ |
ಕುಟುಂಬ: | ಓಲಿಯೇಸೀ |
ಕುಲ: | ಜಾಸ್ಮಿನಮ್ |
ಪ್ರಜಾತಿ: | J. auriculatum
|
Binomial name | |
Jasminum auriculatum |
ವಸಂತ ಮೊಲ್ಲೆ, ಮಧ್ಯಾಹ್ನ ಮಲ್ಲಿಗೆ, ಕಾಡರಮಲ್ಲಿಗೆ ಎಂಬ ಹೆಸರುಗಳಿಂದ ಸಹ ಪ್ರಸಿದ್ಧವಾಗಿರುವ ಸಣ್ಣ ಮೊಲ್ಲೆ ಅಗಲವಾಗಿ ಹರಡಿಕೊಂಡು ಬೆಳೆಯುವ ಪೊದೆ ಸಸ್ಯ. ಇದು ಭಾರತ, ನೇಪಾಳ, ಶ್ರೀಲಂಕಾ, ಭೂತಾನ್ ಮತ್ತು ಅಂಡಮಾನ್ ದ್ವೀಪಗಳಲ್ಲಿ ಕಂಡುಬರುತ್ತದೆ.[೧][೨] ದಕ್ಷಿಣ ಭಾರತದಲ್ಲೆಲ್ಲ ಕಾಣದೊರೆಯುವ ಇದನ್ನು ಉತ್ತರಪ್ರದೇಶ, ಬಿಹಾರ ಹಾಗೂ ಬಂಗಾಲಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕೃಷಿಮಾಡಲಾಗುತ್ತದೆ.
ವಿವರಣೆ
[ಬದಲಾಯಿಸಿ]ಇದರ ಎಲೆಗಳು ಸರಳ ಬಗೆಯವು; ಬಲು ಅಪೂರ್ವವಾಗಿ ಮೂರು ಪತ್ರಕಗಳನ್ನು ಒಳಗೊಂಡ ಸಂಯುಕ್ತ ಬಗೆಯವಾಗಿರುವುದುಂಟು. ಆಗಲೂ ಮಧ್ಯದ ಪತ್ರವೇ ಪ್ರಧಾನವಾಗಿರುತ್ತದೆ. ಹೂಗಳು ಬಿಳಿ ಬಣ್ಣದವು; ಹಲವಾರು ಹೂಗಳು ಸೀಮಾಕ್ಷಿ ಮಂಜರಿಗಳಲ್ಲಿ ಜೋಡಣೆಗೊಂಡಿವೆ.
ಉಪಯೋಗಗಳು
[ಬದಲಾಯಿಸಿ]ಅಲಂಕಾರಿಕ ಉದ್ದೇಶಗಳಿಗೆ ಮತ್ತು ಹಬ್ಬಗಳಲ್ಲಿ ಇದನ್ನು ಬಳಸಲಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ Kew World Checklist of Selected Plant Families, Jasminum auriculatum
- ↑ Vahl, Martin. 1794. Symbolae Botanicae 3:1.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: