ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:రహ్మానుద్దీన్

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ రహ్మానుద్దీన్


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

--Pavanaja (ಚರ್ಚೆ) ೦೭:೩೮, ೮ ಜೂನ್ ೨೦೧೫ (UTC)

ಹದಿಮೂರನೆಯ ವಾರ್ಷಿಕಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಮಗೆ ಈ ಆಹ್ವಾನ

[ಬದಲಾಯಿಸಿ]
ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ @ ಮಂಗಳೂರು "Wikidata"
ಕನ್ನಡ ವಿಕಿಪೀಡಿಯವು ಹದಿಮೂರನೆಯ ಫಲಪ್ರದ ವರ್ಷಗಳ ಸಂಭ್ರಮದಲ್ಲಿದೆ. ಈ ಸಂಭ್ರಮಾಚರಣೆಯ ಸಂತಸವನ್ನು ಹಂಚಿಕೊಳ್ಳಲು ಎಲ್ಲ ವಿಕಿಪೀಡಿಯನ್ನರನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಫೆಬ್ರವರಿ ೧೩, ೨೦೧೬ರಂದು ಶನಿವಾರ ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮವನ್ನು ಬಂಟ್ವಾಳ ಅಥವಾ ಪಿಲಿಕುಳದಲ್ಲಿ ಮತ್ತು ಫೆಬ್ರವರಿ ೧೪, ೨೦೧೬ರಂದು ಭಾನುವಾರ ಹದಿಮೂರನೆ ವಾರ್ಷಿಕ ಆಚರಣೆಯನ್ನು, ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ, ಎರಿಕ್ ಮಥಾಯಿಸ್ ಸಭಾಂಗಣದಲ್ಲಿ ಆಚರಿಸುವುದೆಂದು ದಿನ ನಿರ್ಧಾರ ಆಗಿದೆ. ಇಲ್ಲಿ ನಡೆಯಲಿರುವ ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ ಸಮಾರಂಭದಲ್ಲಿ ಕನ್ನಡ ವಿಕಿಪೀಡಿಯ ಸಮುದಾಯದ ಸರ್ವರೂ ಪಾಲ್ಗೊಳ್ಳುತ್ತಾರೆ. ಈ ಸಂಭ್ರಮಾಚರಣೆಯಲ್ಲಿ ತಮ್ಮ ಇರುವಿಕೆಯಿಂದ ಹದಿಮೂರನೆಯ ವರ್ಷಾಚರಣೆ ಇನ್ನಷ್ಟು ಪ್ರಜ್ವಳಿಸುತ್ತದೆ. ಈ ವರ್ಷಾಚರಣೆಯ ವಿಶೇಷವೆಂದರೆ ಈಗಾಗಲೇ ಬೇರೆ ಬೇರೆ ಕಡೆ ನಡೆದ ಸಂಪಾದನೋತ್ಸವಗಳಲ್ಲಿ ಪಾಲ್ಗೊಂಡಿರುವ ಅನೇಕ ಹೊಸ ಸಂಪಾದಕರನ್ನು ಒಟ್ಟಾಗಿ ಭೇಟಿಯಾಗಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ. ಜೊತೆಗೆ ಸಮುದಾಯದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸಮುದಾಯದ ಪರವಾಗಿ ನಿಮಗೆ ಪ್ರೀತಿಯ ಸ್ವಾಗತ ಬಯಸುತ್ತೇನೆ.--Vishwanatha Badikana (ಚರ್ಚೆ) ೧೪:೦೯, ೧೭ ಜನವರಿ ೨೦೧೬ (UTC)