ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Dillenveigas

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀಮತಿ ಬಿ.ಟಿ ಲಲಿತಾನಾಯಕ್ ರವರು ಚಿಕ್ಕಮಗಳೂರು ಜಿಲ್ಲೆಯ ತಂಗಲಿ ತಾಂಡ್ಯದಲ್ಲಿ ೦೪.೦೪.೧೯೪೫ ರಲ್ಲಿ ಜನಿಸಿದರು.

ಬಂಡಾಯ ಹಾಗೂ ಸ್ತ್ರೀ ಸಂವೇದನೆಯ ಬರಹಗಳ ಮೂಲಕ ಖ್ಯಾತರಾದ ಇವರು ಹಲವಾರು ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಚಂದ್ರ ಪರಾಭವ, ಭಟ್ಟನ ಕನಸು, ನೆಲೆಬೆಲೆ, ನಂರೂಪ್ಲಿ, ಗತಿ, ಹಬ್ಬ ಮತ್ತು ಬಲಿ ಇದೇ ಕೂಗು ಮತ್ತೆ ಮತ್ತೆ ದೇವದುರ್ಗ ತಾಲೂಕು ದರ್ಶನ, ಒಡಲ ಬೇಗೆ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಮಕ್ಕಳ ಕತೆ, ರೇಡಿಯೋ ನಾಟಕಗಳನ್ನು ರಚಿಸಿರುವರು. ಅಲ್ಲದೇ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯೆಯಾಗಿಯೂ ಕರ್ನಾಟಕ ಸರಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆಯಾಗಿಯೂ ಕಾರ್ಯ ನಿರ್ವಹಿಸಿರುವರು.