ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Mohammed Thanzil

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಂಗಳೂರು 

ಕರ್ನಾಟಕ ರಾಜ್ಯದ ಮುಖ್ಯ ಬಂದರು ನಗರ. ಇದು ಸುಮಾರು 350 ಕಿಲೋಮೀಟರ್ . ಮಂಗಳೂರು ಅರಬ್ಬೀ ಸಮುದ್ರ ಮತ್ತು ಪಶ್ಚಿಮ ಘಟ್ಟ ಪರ್ವತ ನಡುವೆ ಇದ್ದು, ಮತ್ತು ದಕ್ಷಿಣ ಪಶ್ಚಿಮ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತ ಕೇಂದ್ರ. ಇದರ ಪ್ರಾಚೀನ ಕಡಲತೀರಗಳು, ವಿಶಾಲವಾದ ರಸ್ತೆಗಳು ಮತ್ತು ಶಾಂತ ಪ್ರದೇಶಗಳಲ್ಲಿ ಈ ನಗರಿ ಭಾರತದ ಎಂಟನೆ ನಗರವೆಂದು ಘೋಷಿಸಲಾಯಿತು. ಮಂಗಳೂರು ಬೆಂಗಳೂರು ನಂತರ ಅದರ ಎರಡನೇ ಟಾಪ್ ವ್ಯಾಪಾರ ತಾಣವಾಗಿದೆ ಮತ್ತು ಕರ್ನಾಟಕದ ಭಾರತದ 13 ನೇ ಸ್ಥಾನ ನೀಡಿದೆ. ಇದು ಅರೇಬಿಯನ್ ಮೇಲೆ ಬಂದರು ಆಗಿ ಅಭಿವೃದ್ಧಿಗೊಳಿಸಿದ ಸಮುದ್ರ ಉಳಿದ, ಇಂದಿಗೂ ಭಾರತದ ಪ್ರಮುಖ ಬಂದರು. ನೇತ್ರಾವತಿ ಮತ್ತು ಗುರುಪುರ ನದಿಗಳಿಂದುಂಟಾದ ಹಿನ್ನೀರಿನ ಮೇಲೆ ಪ್ರದೇಶದಲ್ಲಿರುವ ಮಂಗಳೂರು ಸಾಮಾನ್ಯವಾಗಿ ಮಲಬಾರ್ ಕರಾವಳಿ ಸಮುದ್ರ ಸಂಚಾರ ವೇದಿಕೆ ಅಂಶವಾಗಿ ಬಳಸಲಾಗುತ್ತದೆ. ನಗರದ ಸಮಶೀತೋಷ್ಣ ಮತ್ತು ಈಶಾನ್ಯ ಮಾನ್ಸೂನ್ ಅರಬ್ಬೀ ಸಮುದ್ರ ಶಾಖೆಯ ಮಾರ್ಗದಲ್ಲಿ ನೆಲೆಗೊಂಡಿದೆ. ಮಂಗಳೂರಿನ ಬಂದರು 75 ಪ್ರತಿ ಭಾರತದ ಕಾಫಿ ರಫ್ತು ಶೇ ಹಾಗೂ ದೇಶದ ಕ್ಯಾಶ್ಯೂ ರಫ್ತಿನಲ್ಲಿ ಬಹು ಪಾಲನ್ನು ನಿರ್ವಹಿಸುತ್ತದೆ. ಮಂಗಳೂರು ಕದಂಬ, ವಿಜಯನಗರ ಸಾಮ್ರಾಜ್ಯ, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ಮತ್ತು ಪೋರ್ಚುಗೀಸ್ ಸೇರಿದಂತೆ ಹಲವಾರು ಪ್ರಮುಖ ಶಕ್ತಿಗಳುಆಳಿದ್ದವು ಮಾಡಲಾಯಿತು. ಬ್ರಿಟಿಷರ ಮತ್ತು ಮೈಸೂರು ಅರಸರು, ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಮಧ್ಯೆ ಹೋರಾಟದ ಒಂದು ಮೂಲವಾಗಿತ್ತು. ಟಿಪ್ಪು ಸುಲ್ತಾನ್ ಸುಲ್ತಾನ್ Batteri ಎಂಬ ಮೈಸೂರು ತನಕ ಸುರಂಗ ಪ್ರವೇಶ ಹೊಂದಿವೆ ಎಂದು ಊಹಿಸಲಾಗಿದೆ ಪ್ರಸಿದ್ಧ ಹೊರಠಾಣೆ ನಿರ್ಮಿಸಲಾಗಿದೆ. ಅಂತಿಮವಾಗಿ 1799 ರಲ್ಲಿ ಬ್ರಿಟಿಷ್ ವಶಪಡಿಸಿಕೊಳ್ಳಲಾಯಿತು, ಮಂಗಳೂರು 1947 ರಲ್ಲಿ ಭಾರತದ ಸ್ವಾತಂತ್ರ್ಯದ ತನಕ ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿತ್ತು ನಗರ 1956 ರಲ್ಲಿ (ಈಗಿನ ಕರ್ನಾಟಕ) ಮೈಸೂರು ರಾಜ್ಯ ಏಕೀಕೃತ

ಅಹಿಂಸಾ[ಬದಲಾಯಿಸಿ]

ಗಾಂಧೀಜಿ ಅವರನ್ನು ಅಹಿಂಸಾತ್ಮಕ ಹೋರಾಟಕ್ಕೆ ರೂಪಕವಾಗಿ ಇಂದು ಇಡೀ ಜಗತ್ತೇ ನೋಡುತ್ತಿದೆ. ವಸಾಹತು ವಿರೋಧಿ ಹೋರಾಟಕ್ಕೆ ಖಚಿತವಾದ ಅಹಿಂಸಾತ್ಮಕ ಸ್ವರೂಪವನ್ನು ತಂದುಕೊಟ್ಟವರು ಅವರು. ‘ಅಹಿಂಸಾತ್ಮಕ’ ಎಂದಾಗ ಅದರ ಅರ್ಥ ಮೊದಲನೆಯದಾಗಿ ನಿರಾಯುಧರಾಗಿ ನಡೆಸುವ ಪ್ರತಿಭಟನೆ. ನೇರವಾದ ಯದ್ಧಕ್ಕಿಳಿ ಯದೇ ಸತ್ಯಕ್ಕಾಗಿ, ನ್ಯಾಯಕ್ಕಾಗಿ ಪಟ್ಟುಹಿಡಿಯು ವುದು. ಕಾಯ್ದೆ ಭಂಗ, ಅಸಹಕಾರ ಮುಂತಾದ ಪ್ರತಿರೋಧದ ಬಗೆಗಳು- ಸತ್ಯಾಗ್ರಹವೆಂದು ಕರೆಸಿಕೊಳ್ಳುತ್ತವೆ. ಗಾಂಧೀಜಿ ಹೋರಾಟಕ್ಕೆ ಇಳಿಯುವ ಮೂರು ದಶಕಗಳಿಗೆ ಮುಂಚೆಯೇ, ಜನರ ಸಹಭಾಗಿತ್ವ ದಲ್ಲಿ ಭಾರತದಲ್ಲಿ ಹೋರಾಟ ನಡೆದಿತ್ತು. ೧೮೫೭ರ ನಂತರ ಶಸ್ತ್ರಸಜ್ಜಿತವಾದ ಹೋರಾಟ ಗಳು ಕಾಣುವುದಿಲ್ಲ. ೧೯೦೫ ರಲ್ಲಿ ಬಂಗಾಳ ವಿಭಜನೆ ವಿರೋಧಿಸಿ ನಡೆದ ಚಳವಳಿಯಾಗಲೀ, ಹೋಂ ರೂಲ್ ಚಳವಳಿಯಾಗಲೀ ಸಂಯಮದ ಹೋರಾಟಗಳೇ ಆಗಿದ್ದವು. ವಸಾಹತು ನೀತಿಯನ್ನು ಸಂವಿಧಾನದ ಚೌಕಟ್ಟಿನಲ್ಲೇ ಪ್ರಶ್ನಿಸುತ್ತಾ ಬಂದ ಗೋಖಲೆ, ದಾದಾಬಾಯ್ ನವರೋಜಿ ಅವರು ಆ ವೇಳೆಗಾಗಲೇ ಇಂತಹದ್ದೊಂದು ಮಾರ್ಗವನ್ನು ಕಂಡುಕೊಂಡಿ ದ್ದರು. ಸತ್ಯಾಗ್ರಹವನ್ನು ಸ್ಪಷ್ಟ ರಾಜಕೀಯ ಸಿದ್ಧಾಂತವಾಗಿಸಿದ ಹೆಗ್ಗಳಿಕೆ ಗಾಂಧೀಜಿಗೆ ಸಲ್ಲುತ್ತದೆ. ರಾಜಕೀಯ ಸೂತ್ರವಾಗಿ ‘ಅಹಿಂಸೆ’ ಪರಿಕಲ್ಪನೆಯನ್ನು ನೋಡುವುದಾದರೆ ಅದರ ಹಿಂದೆ ಭಾರತದ ಅತ್ಯಂತ ಪ್ರಾಚೀನ ಪ್ರಯೋಗಗಳನ್ನು ನೆನೆಯಬೇಕಾಗುತ್ತದೆ. ಜೈನ ಧರ್ಮ ಅಹಿಂಸೆಯನ್ನು ಪ್ರತಿಪಾದಿಸುತ್ತದೆ. ‘ಅಹಿಂಸೊ ಪರಮೊ ಧರ್ಮಃ’ ಎಂದು ಪ್ರತಿಪಾದಿಸುತ್ತದೆ. ಆದರೆ ಅದನ್ನು ವ್ಯಕ್ತಿ ನೆಲೆಯಲ್ಲಿ ಆಚರಿಸುತ್ತದೆ. ಅದೊಂದು ರಾಜಕೀಯ ಚಿಂತನೆಯಾಗಿ ರೂಪುಗೊಳ್ಳಲಿಲ್ಲ. ಹಾಗೆ ರಾಜಕೀಯ ಸಿದ್ಧಾಂತವಾಗಿ ರೂಪು ಪಡೆದದ್ದು ಬುದ್ಧನಿಂದ. ಅಹಿಂಸೆ, ಯುದ್ಧ ವಿರೋಧಿ ನಿಲುವಾಗಿ ಅರ್ಥ ಪಡೆಯಿತು. ಬುದ್ಧನ ವಿಚಾರಗಳನ್ನು ರಾಜಕೀಯ ತತ್ವವಾಗಿ ಆಚರಣೆಗೆ ತರಲು ಸಾಧ್ಯವಾಗಿದ್ದು ಅಶೋಕನಿಗೆ. ಯುದ್ಧವನ್ನು ಕೈಬಿಟ್ಟು ಅಹಿಂಸೆಯ ಚಿಂತನೆ ಯನ್ನು ಹರಡುವುದನ್ನು ತನ್ನ ಗುರಿಯಾಗಿಸಿ ಕೊಂಡನು. ಜಗತ್ತಿನ ಚರಿತ್ರೆಯಲ್ಲೇ ಅಶೋಕ ಕಂಡುಕೊಂಡ ಮಾರ್ಗ ಅದ್ವಿತೀಯವಾದುದು. ’ಅಹಿಂಸೆ’ ಎಂಬ ಆದರ್ಶವೇ ಅಶೋಕನಿಗೆ ಶಸ್ತ್ರವಾಗಿ ಪರಿಣಮಿಸಿತು. ಅಹಿಂಸೆಯನ್ನು ರಾಜಕೀಯ ಚಿಂತನೆಯಾಗಿ ನೀಡಿದ ಬುದ್ಧ, ದೇವರ ಬಗೆಗೆ ಮಾತ್ರ ಮೌನ ವಹಿಸಿದ್ದನ್ನು ನಾವಿಂದು ಮತ್ತೆ ಪರಿಗಣಿಸಬೇಕಾಗಿದೆ. ಆಧುನಿಕ ಕಾಲಘಟ್ಟದಲ್ಲಿ ಅಹಿಂಸೆ, ರಾಜಕೀಯ ಚಿಂತನೆಯಾಗಬೇಕಾದ ಅನಿವಾರ್ಯವನ್ನು ಕಂಡುಕೊಳ್ಳಲು ಸಾಧ್ಯ ವಾಗಿದ್ದು ಗಾಂಧೀಜಿಗೆ. ವಿಪರ್ಯಾಸವೆಂದರೆ ಬುದ್ಧನ ಚಿಂತನೆಗಳನ್ನು ಆದರ್ಶವಾಗಿ ಗಾಂಧೀಜಿ ಎತ್ತಿ ಹಿಡಿಯಲಿಲ್ಲ. ಬಡತನ, ಶೋಷಣೆ ಇವು ಅವರ ಹೋರಾಟದ ಬದ್ಧತೆಯಾಗಿದ್ದರೂ ಪರಿಹಾರದ ನೆಲೆಗಳು ಬೇರೆಯಾಗಿದ್ದವು. ರಾಜಕೀಯದಲ್ಲಿ ಅಧ್ಯಾತ್ಮವನ್ನು ಬಯಸಿದರು. ಹಾಗೆ ಬುದ್ಧನ ಕಡೆಗೆ ನೋಡಿದವರು ಅಂಬೇಡ್ಕರ್. ಬುದ್ಧನ ನಂತರ ದೇವರ ಬಗೆಗೆ ಮಾತನಾಡದೆ ವಾಸ್ತವ ನೆಲೆಗಟ್ಟಿನ ಮೇಲೆ ನೋವಿಗೆ ಉತ್ತರ ಹುಡುಕಿದವರು ಕಾರ್ಲ್‌ ಮಾರ್ಕ್ಸ್. ಗಾಂಧಿ ಅವರನ್ನು ಮಾರ್ಕ್ಸ್‌ಗೆ ಹೋಲಿಸು ವುದು ಇಲ್ಲಿ ನನ್ನ ಉದ್ದೇಶವಲ್ಲ. ಹಾಗೆ ಎರಡು ವ್ಯಕ್ತಿತ್ವಗಳನ್ನು ಹೋಲಿಸಿ ನೋಡುವುದರಲ್ಲಿ ನನಗೆ ಅರ್ಥವಿಲ್ಲವೆನಿಸುತ್ತದೆ ಅಥವಾ ಅಕಾಡೆಮಿಕ್ ಆದ ವ್ಯಾಯಾಮವೆನಿಸುತ್ತದೆ. ಬುದ್ಧ, ಮಾರ್ಕ್ಸ್‌, ಗಾಂಧಿ ತಮಗೆ ತಾವೇ ಬದುಕನ್ನು ಪೂರೈಸಿದ ವ್ಯಕ್ತಿಗಳಲ್ಲ. ಇವರ ಬರಹ, ಭಾಷಣ ಕಡೆಗೆ ಬದುಕು ಸಮಾಜದ ಮೇಲೆ ತೀವ್ರ ಪರಿಣಾಮವನ್ನು ಉಂಟು ಮಾಡಿದ್ದರಿಂದ ಇವರ ವಿಚಾರಗಳನ್ನು ಹಲವು ಮಗ್ಗುಲುಗಳಿಂದ ಪ್ರಶ್ನಿಸಬೇಕಾಗಿದೆ.

ಆಮ್ ಆದ್ಮಿ[ಬದಲಾಯಿಸಿ]

ತಲೆಗೆ ಬಿಳಿ ಟೋಪಿ, ಕೈಯಲ್ಲಿ ಪೊರಕೆ, ಭಾರತದ ರಾಜಕೀಯದಲ್ಲಿ ಒಂದು ಹೊಸ ಅವತಾರ. ಎರಡು ವರ್ಷಗಳ ಹಿಂದೆ ಆರಂಭವಾದ ಭ್ರಷ್ಟಾಚಾರ ವಿರೋಧಿ ಚಳವಳಿ ಒಂದು ರಾಜಕೀಯ ಪಕ್ಷವನ್ನು ಹುಟ್ಟುಹಾಕಿದೆ. ಅಣ್ಣಾ ಹಜಾರೆ ನೇತೃತ್ವದ ಈ ಹೋರಾಟ ಭಾರತದಾದ್ಯಂತ ಸಂಚಲನವನ್ನು ಹುಟ್ಟು¬ಹಾಕಿತು. ಕಡೆಕಡೆಗೆ ‘ದೇವತಾ ಮನುಷ್ಯರು’ ಹೋರಾಟಕ್ಕಿಳಿದು ಜನಲೋಕಪಾಲ ಮಸೂದೆ¬ಗಾಗಿ ಆರ್ಭಟಿಸತೊಡಗಿದಾಗ ಅವರ ಹೋರಾ¬ಟದ ಬಗೆಗೆ ಅನುಮಾನ ಹುಟ್ಟುವಂತಾಯಿತು. ರಾಜಕೀಯ ಪಕ್ಷವಾಗುವುದನ್ನು ವಿರೋಧಿ¬ಸಿದ ಅಣ್ಣಾ ಹಜಾರೆ ಅವರಿಂದ ಬೇರ್ಪಟ್ಟು ಹೊಸತೊಂದು ಪಕ್ಷ ಕಟ್ಟಿ ¬ದೆಹಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದು ಅರವಿಂದ ಕೇಜ್ರಿವಾಲರ ತೀವ್ರಗತಿಯ ಚಲನೆಯಾಗಿತ್ತು. ದೆಹಲಿಯಲ್ಲಿ ಹೊಸ ಪಕ್ಷ ಆಡಳಿತ ನಡೆಸ¬ಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಕಳೆದ ಮೂರು ತಿಂಗಳಿಂದ ನರೇಂದ್ರ ಮೋದಿ ಭಾರತದ ಪ್ರಮುಖ ಆಕರ್ಷಣೆಯ ವ್ಯಕ್ತಿಯಾಗಿ ಮೆರೆದಾಗ ಅದನ್ನು ಎದುರಿಸುವುದು ಕಾಂಗ್ರೆಸ್‌ಗೆ ದೊಡ್ಡ ಸವಾಲಿನ ವಿಚಾರವೇ ಆಗಿತ್ತು. ಪರವಾಗಿ ಅಥವಾ ವಿರೋಧವಾಗಿ ಚರ್ಚೆಗೆ ಒಳಗಾದ ಮೋದಿ, ಮಾಧ್ಯಮಗಳ ವಿಸ್ತಾರವಾದ ಜಾಗವನ್ನು ಆವರಿಸಿದ್ದು ಸಾಕಷ್ಟು ಜನರಿಗೆ ನುಂಗಲಾರದ ತುತ್ತಾಗಿತ್ತು. ಧರ್ಮ¬ವನ್ನು ಬಿಟ್ಟು ಚಾರಿತ್ರಿಕ ವ್ಯಕ್ತಿ ಸರ್ದಾರ್ ವಲ್ಲಭಭಾಯಿ ಪಟೇಲರನ್ನು ಚುನಾವಣೆಯ ಕೇಂದ್ರ ವಿಚಾರವಾಗಿಸಿದ್ದು ಬಿಜೆಪಿಯ ಹೊಸ ರಾಜಕೀಯ ನಾಟಕ. ಬಹುಶಃ ಪಟೇಲರಂತೆ ಮೋದಿ¬ಯನ್ನು ಉಕ್ಕಿನ ಮನುಷ್ಯ ಎಂದು ಬಿಂಬಿ¬ಸು¬ವುದು, ಅಲ್ಲದೇ ಪಟೇಲರ ಇತರ ಗುಣಗ¬ಳನ್ನೂ ಮೌನದಲ್ಲಿ ಆರಾಧಿಸುವುದೂ ಇದರ ಉದ್ದೇಶವಾಗಿರಬೇಕು. ಕಾಂಗ್ರೆಸ್‌ಗೆ ಹಲವು ಗೊಂದಲಗಳು. ಆಳುವ ಪಕ್ಷ ತನ್ನ ಸಾಧನೆಯ ಮೇಲೆ ಮತ ಯಾಚಿಸ¬ಬೇಕು. ಇಲ್ಲವೇ ಹೊಸ ಭರವಸೆಗಳನ್ನು ಕಟ್ಟ¬ಬೇಕು. ಪ್ರಧಾನಿ ಮನಮೋಹನ್ ಸಿಂಗ್ ಎಂದೂ ಚುನಾವಣಾ ಪ್ರಚಾರದ ಹೊಣೆಯನ್ನು ಇಡಿ¬ಯಾಗಿ ನಿಭಾಯಿಸಿದವರಲ್ಲ. ಕಾಂಗ್ರೆಸ್‌ನ ಚುನಾ¬ವಣಾ ಪ್ರಚಾರಾಂದೋಲನವನ್ನು ಇಬ್ಬರು ಮೂವರು ಪಕ್ಷದ ಪ್ರತಿನಿಧಿಗಳು ವಹಿಸಿಕೊಂಡು ನಡೆಸುವುದು ಸಾಮಾನ್ಯ ಶೈಲಿ. ಆದರೆ ಈ ಬಾರಿ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಹೇಳದೆಯೂ ರಾಹುಲ್ ಗಾಂಧಿ ಮುಂಚೂಣಿಯಲ್ಲಿ ಕಾಣಿಸಿ¬ಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ಗೆ ಬೀಳುವ ಅರ್ಧ ಭಾಗದ ಮತ ಸಾಂಪ್ರದಾಯಿಕವಾದುದು. ಕಾಂಗ್ರೆಸ್ ಪಕ್ಷಕ್ಕಾಗಿ ಮತ ನೀಡಲಾಗುತ್ತದೆ, ವ್ಯಕ್ತಿಯನ್ನು ನೋಡು¬ವು¬ದಿಲ್ಲ. ಅದರಲ್ಲೂ ಸಂವಿಧಾನಾತ್ಮಕ ರಕ್ಷಣೆ ಬಯ¬ಸುವ ಸಮುದಾಯಗಳು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತವೆ. ಕಾಂಗ್ರೆಸ್ ತನ್ನ ಸಿದ್ಧಾಂತಕ್ಕೆ ಸದಾ ಬದ್ಧವಾಗಿದೆಯೆಂದೇನೂ ಅಲ್ಲ. ಅದರ ಆರ್ಥಿಕ ಸಿದ್ಧಾಂತ ಹೊರನೋಟಕ್ಕೆ ಕಾಣುವಂತೆ ಸದಾ ಬಡವರ ಪರವಾಗಿಯೂ ಇಲ್ಲ. ರಾಜ¬ಕಾರಣಿ¬ಗಳೇ ಬಂಡವಾಳಗಾರರಾಗಿ ರೂಪಿತ¬ವಾಗಿರುವ ಈ ಹೊತ್ತಿನಲ್ಲಿ ಬಂಡವಾಳಶಾಹಿಯ ವಿರುದ್ಧವಾಗಿ ಅವರು ನಿಲ್ಲುತ್ತಾರೆಂದು ನಿರೀಕ್ಷಿ¬ಸು¬ವುದು ಅಸಂಬದ್ಧವಾಗಿದೆ.