ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:NISHCHITHA B.P/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾಧವನೂರಿನ ಜಲಪಾತಗಳು: ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಸದಾಕಾಲವೂ ದುಮ್ಮಿಕ್ಕುವ ಹಲವಾರು ಜಲಪಾತಗಳಿವೆ. ಇವುಗಳಲ್ಲಿ ಕೆಲವು ಫಾಲ್ಸ್‌ಗಳು ಅಪರಿಚಿತವಾಗಿಯೇ ಉಳಿದುಕೊಂಡಿದೆ ಕೂಡ್ಲು ತೀರ್ಥ ಉಡುಪಿ ಜಿಲ್ಲೆಯ ಹೆಬ್ರಿಯಿಂದ ಸೋಮೇಶ್ವರಕ್ಕೆ ತೆರಳುವಾಗ 2 ಕಿ.ಮೀ. ಮೊದಲು ಸೀತಾನದಿ ಡೈವರ್ಶನ್ ಸಿಗುತ್ತದೆ. ಅಲ್ಲಿಂದ 5 ಕಿ.ಮೀ. ಮಣ್ಣಿನ ರಸ್ತೆ ಇದೆ. ಎರಡೂವರೆ ಕಿ.ಮೀ. ದೂರದವರೆಗೆ ಮಣ್ಣಿನ ದಾರಿಯಲ್ಲಿ ವಾಹನದಲ್ಲಿ ಬಂದು ಮೇಗದ್ದೆಗೆ ಬರಬೇಕು. ಇಲ್ಲಿಂದ ಇನ್ನು ಎರಡೂವರೆ ಕಿ.ಮೀ. ಬಲಕ್ಕೆ ಬಂದರೆ ಕೂಡ್ಲುತೀರ್ಥ ಅಥವಾ ಸೀತಾನದಿ ಜಲಪಾತ ಕಾಣಸಿಗುತ್ತದೆ. 160 ಫೀಟ್ ಎತ್ತರದಿಂದ ಸುತ್ತ ಕಲ್ಲಿನ ಆವರಣದ ನಡುವಿನಿಂದ ಯಾವ ಅಡೆತಡೆಯೂ ಇಲ್ಲದೆ ನೇರವಾಗಿ ಧುಮ್ಮಿಕ್ಕುವ ಜಲಧಾರೆಯನ್ನು ನೋಡುವುದೇ ವಿಸ್ಮಯ. ಇಲ್ಲೇ ಮೇಗದ್ದೆಯಿಂದ ಎಡಭಾಗಕ್ಕೆ ಬಂದರೆ ಬಣಂಜಾರು ಎನ್ನುವ ಜನವಸತಿ ಪ್ರದೇಶವಿದೆ. ಅಲ್ಲಿಂದ 6 ಕಿ.ಮೀ. ಅರಣ್ಯದ ನಡುವೆ ನಡೆದು ಬಂದರೆ ಬರ್ಕಣ ಎಂಬ ಜಲಪಾತವೂ ಕಾಣುತ್ತದೆ. ಇಲ್ಲಿ ಗೈಡ್‌ನ್ನು ಅವಶ್ಯವಾಗಿ ಅವಲಂಬಿಸಲೇಬೇಕು. ಹಲವಾರು ಕಿರು ದಾರಿಗಳು ಅವರಷ್ಟಕ್ಕೇ ಬರುವ ಚಾರಣಿಗರನ್ನು, ಪರಿಸರಪ್ರಿಯರನ್ನು ಹಾದಿ ತಪ್ಪಿಸುತ್ತವೆ. ಸಾಕಷ್ಟು ಅಪಾಯಕಾರಿ ಕಂದಕಗಳೂ ಇಲ್ಲಿವೆ. ಜಲಪಾತದ ಬುಡದಲ್ಲಿ ನಿಂತು 180 ಫೀಟ್ ಎತ್ತರದಿಂದ ಮೂರು ಪದರಗಳಾಗಿ ಬೀಳುವ ಜಲಪಾತವನ್ನು ಆಸ್ವಾದಿಸಬಹುದು. ಆಗುಂಬೆ ಘಾಟಿಯಿಂದ ಮೇಲೆ ಬಂದು ವ್ಯೆವ್ ಪಾಯಿಂಟ್‌ನಲ್ಲಿ ನಿಂತು ದೂರದಿಂದ ಈ ಜಲಪಾತದ ದೃಶ್ಯವನ್ನು ಸವಿಯಬಹುದು. ಶೃಂಗೇರಿ, ಕಿಗ್ಗದಿಂದ ನರಸಿಂಗ ಬೆಟ್ಟದಿಂದ ಕೆಳಗೆ ಇಳಿದರೂ ಈ ಜಲಪಾತದ ಚೆಲುವನ್ನು ಅನುಭವಿಸಬಹುದು. ಅತ್ಯಂತ ಕಷ್ಟದ ಹಾದಿ ಇದು. ಜೇನುಗೂಡುಗಳಂತೂ ಇಲ್ಲಿ ತುಂಬಿಕೊಂಡಿವೆ. ಹೆಬ್ರಿ, ಮಣಿಪಾಲ ಹಾಗೂ ಆಗುಂಬೆಯಲ್ಲಿ ವಸತಿ ವ್ಯವಸ್ಥೆ ಇದೆ. ಬೆಳ್ಕಲ್ ತೀರ್ಥ ಬೆಳ್ಕಲ್ ತೀರ್ಥ 1200 ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತ. ಇದು ಕುಂದಾಪುರ ತಾಲೂಕು ಜಡ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದೂರಿನಲ್ಲಿದೆ. ಬೈಂದೂರು ಮತ್ತು ಕುಂದಾಪುರದಿಂದ ಬೆಳ್ಕಲ್ ತೀರ್ಥಕ್ಕೆ ಪಯಣ ಬೆಳೆಸಬಹುದು. ಬೈಂದೂರು-ಕೊಲ್ಲೂರು ರಾಜ್ಯ ಹೆದ್ದಾರಿಯಲ್ಲಿ ಹಾಲ್ಕಲ್‌ನಲ್ಲಿ ಬಲಕ್ಕೆ ತಿರುಗಿ ಜಡ್ಕಲ್ ಮೂಲಕ ಮುದೂರು, ಅಲ್ಲಿಂದ 8 ಕಿ.ಮೀ. ದೂರದಲ್ಲಿ ಬೆಳ್ಕಲ್ ತೀರ್ಥ ಎದುರುಗೊಳ್ಳುತ್ತದೆ. 4 ಕಿ. ಮೀ. ರಸ್ತೆಯಿದ್ದು, ಅಲ್ಲಿಂದ 4 ಕಿ. ಮೀ. ಕಾಡಹಾದಿಯಲ್ಲಿ ಪಯಣಿಸಬೇಕು. ಕುಂದಾಪುರದಿಂದ ಜಡ್ಕಲ್-ಮುದೂರು ಮಾರ್ಗವಾಗಿ ಬೆಳ್ಕಲ್ ತೀರ್ಥಕ್ಕೆ ಪಯಣ ಬೆಳೆಸಬಹುದು. ಕುಂದಾಪುರ - ಬೈಂದೂರಿನಿಂದ 40ಕಿ.ಮೀ. ದೂರದಲ್ಲಿದೆ. ಬೆಳ್ಕಲ್‌ತೀರ್ಥದಲ್ಲಿ ಎಳ್ಳಮಾವಾಸ್ಯೆ ಜಾತ್ರೆ ನಡೆಯುತ್ತದೆ. ಅಂದು ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ತೀರ್ಥದ ಜಲವನ್ನು ಕೊಂಡೊಯ್ಯಲಾಗುತ್ತದೆ. ಸಾವಿರಾರು ಸಂಖ್ಯೆಯಲ್ಲಿ ನೆರೆಯುವ ಭಕ್ತರು ಗೋವಿಂದ ಎಂದು ಕೂಗಿದಾಗ ಜಲಪಾತದ ನೀರು ಸಿಂಚನವಾಗುತ್ತದೆ ಎಂಬ ನಂಬಿಕೆ ಇರುವುದರಿಂದ ಬೆಳ್ಕಲ್ ತೀರ್ಥವನ್ನು ಗೋವಿಂದ ತೀರ್ಥವೆಂದೂ ಕರೆಯುತ್ತಾರೆ. ಮಳೆಗಾಲದಲ್ಲಿನ ಪಯಣ ಕಷ್ಟಕರ. ಬೇಸಿಗೆಯಲ್ಲಿ ಟ್ರೆಕ್ಕಿಂಗ್ ಆಸಕ್ತರು, ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಯಾವುದೇ ವಸತಿ ವ್ಯವಸ್ಥೆ ಇಲ್ಲ. ಕೋಸಳ್ಳಿ ಜಲಪಾತ ಊಹೆಗೂ ನಿಲುಕದ ಜಲರಾಶಿಯ ಹಾಲ್ನೊರೆಯ ಚಿತ್ತಾರ ಮೈದುಂಬಿ ಹರಿಯುವ ಕೋಸಳ್ಳಿ ಜಲಪಾತದ ವಾಸ್ತವ ನೋಟ ಟ್ರೆಕ್ಕಿಂಗ್ ಪ್ರಿಯರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಶಿರೂರು ಸಮೀಪದ ಕೋಸಳ್ಳಿ ಜಲಪಾತ ನೂರಾರು ಅಡಿಗಳಷ್ಟು ಎತ್ತರದಿಂದ ಧುಮ್ಮಿಕ್ಕುತ್ತದೆ. ಉಡುಪಿಯಿಂದ 80 ಕಿ. ಮೀ. ದೂರದ ಶಿರೂರಿನಿಂದ ಪೂರ್ವಾಭಿಮುಖವಾಗಿ ಸಾಗಿ 8 ಕಿ. ಮೀ. ದೂರದ ತೂದಳ್ಳಿಯ ಬಳಿಕ 4 ಕಿ. ಮೀ. ಕಾಲ್ನಡಿಗೆಯಲ್ಲಿ ಕಾಡುದಾರಿಯಲ್ಲಿ ಸಾಗಿದಾಗ ಕೋಸಳ್ಳಿ ಜಲಪಾತ ಕಾಣಸಿಗುತ್ತದೆ.