ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Sahana.d.f/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಫಿ ಉದ್ಯಮಕೆ ವರದಾನ ಇಕೊ ಕಾಫಿ ಪಲ್ಪಿಂಗ ಘಟಕ[ಬದಲಾಯಿಸಿ]

ದಿನೇ ದಿನೇ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ಹವಾಮಾನ ವೈಪರೀತ್ಯ, ರೋಗ ಬಾಧೆಗಳಿಂದ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ಇದೀಗ ಕೊಂಚ ನಿರಾಳವಾಗಿದೆ. ಇತ್ತೀಚೆಗೆ ಪರಿಚಯಿಸಲಾದ ಇಕೊ ಕಾಫಿ ಪಲ್ಪಿಂಗ್ ಘಟಕದಿಂದ ಸಣ್ಣ ಕಾಫಿ ಬೆಳೆಗಾರರೂ ತಾವು ಬೆಳೆದ ಕಾಫಿಯನ್ನು ಕಡಿಮೆ ನೀರಿನ ಬಳಕೆ ಹಾಗೂ ಮಾಲಿನ್ಯವಿಲ್ಲದೆ ಸಂಸ್ಕರಿಸುವ ಸುಧಾರಿತ ತಂತ್ರಜ್ಞಾನದ ಬಳಕೆ ಜನಪ್ರಿಯವಾಗುತ್ತಿದೆ.ಕಾಫಿ ಬೆಳೆ ಇತರ ತೋಟಗಾರಿಕಾ ಬೆಳೆಯಂತೆ ಆಗಿದ್ದರೂ ಸಂಸ್ಕರಣೆ ಬಹು ಮಹತ್ವದ್ದಾಗಿದೆ. ಏಕೆಂದರೆ ದೇಶದಲ್ಲಿ ಬೆಳೆಯಲಾಗುವ ಶೇ 70ರಷ್ಟು ಕಾಫಿಯು ವಿದೇಶಕ್ಕೆ ರಫ್ತಾಗುತ್ತಿದ್ದು, ಉತ್ತಮ ಬೆಲೆ ಸಿಗಲು ಗುಣಮಟ್ಟ ಕಾಯ್ದುಕೊಳ್ಳುವುದು ಬಹು ಮುಖ್ಯ ಹಾಗೂ ಅನಿವಾರ್ಯ ಕೂಡ.ದೇಶದಲ್ಲಿ ವಾರ್ಷಿಕವಾಗಿ ಸುಮಾರು 3.4 ಲಕ್ಷ ಟನ್‌ಗಳಷ್ಟು ಕಾಫಿ ಬೆಳೆಯಲಾಗುತ್ತಿದ್ದು ಇದರಲ್ಲಿ ರಾಜ್ಯದ ಪಾಲು ಸುಮಾರು 2.34ಲಕ್ಷ ಟನ್ ಗಳಾಗಿವೆ. ಪುಟ್ಟ ಜಿಲ್ಲೆ ಕೊಡಗಿನ ಪಾಲು ಸುಮಾರು 1.34ಲಕ್ಷ ಟನ್‌ಗಳು.ವಿಶ್ವದಲ್ಲಿ ಅತೀ ಹೆಚ್ಚು ಕಾಫಿ ಉತ್ಪಾದಿಸುವ ದೇಶ ಬ್ರೆಜಿಲ್‌ನಿಂದ ಪಡೆದುಕೊಳ್ಳಲಾದ ಇಕೊ ಕಾಫಿ ಪಲ್ಪಿಂಗ್ ಘಟಕದ ತಂತ್ರಜ್ಞಾನದ ಬಹು ಮುಖ್ಯ ಅನುಕೂಲವೆಂದರೆ ಇದು ಒಂದು ಕೆ.ಜಿ ಅರೇಬಿಕಾ ಕಾಫಿ ಹಣ್ಣನ್ನು ಸಂಸ್ಕರಿಸಲು ಕೇವಲ ಒಂದು ಲೀಟರ್ ನೀರನ್ನು ಮತ್ತು ರೋಬಸ್ಟಾ ಕಾಫಿ ಸಂಸ್ಕರಣೆಗೆ ಒಂದೂವರೆ ಲೀಟರ್ ನೀರನ್ನು ಬಳಸಿಕೊಳ್ಳುತ್ತದೆ.ಬಹಳ ಹಿಂದಿನಿಂದಲೂ ಇರುವ ಡಿಸ್ಕ್ ಆಧಾರಿತ ಪಲ್ಪಿಂಗ್ ಘಟಕಗಳು ಒಂದು ಕೆ.ಜಿ ಕಾಫಿ ಸಂಸ್ಕರಣೆಗೆ 8 ರಿಂದ 10 ಲೀಟರ್ ನೀರನ್ನು ಬಳಸಿಕೊಳ್ಳುತ್ತಿವೆ. ಇದರಿಂದಾಗಿ ಪರಿಸರ ಮಾಲಿನ್ಯ ಖಚಿತ. ಏಕೆಂದರೆ ಪಲ್ಪಿಂಗ್ ಘಟಕಗಳ ಮಾಲೀಕರು ಕಾಫಿ ಪಲ್ಪ್‌ ಮಾಡಿದ ನೀರನ್ನು ದೊಡ್ಡದಾದ 3-4 ಗುಂಡಿ ತೋಡಿ ಶೇಖರಿಸಬೇಕಾಗುತ್ತದೆ.ಆದರೆ ಮಳೆ ಸಂದರ್ಭದಲ್ಲಿ ಇವು ತುಂಬಿ ಹರಿದು ಜಲ ಮಾಲಿನ್ಯ ಉಂಟಾಗುತ್ತದೆ. ಇದರಿಂದ ಕುಡಿಯುವ ನೀರು ಮಲಿನಗೊಳ್ಳುವುದಷ್ಟೇ ಅಲ್ಲ, ಜಲಚರಗಳು ಸಾವನ್ನಪ್ಪುತ್ತವೆ. ಇಕೊ ಘಟಕಗಳು ಬರುವುದಕ್ಕೂ ಮೊದಲು ಪರಿಸರ ಮಾಲಿನ್ಯ ಅಧಿಕಾರಿಗಳು ಮಾಲಿನ್ಯ ಮಾಡಿದ್ದಕ್ಕಾಗೇ ಅನೇಕ ಘಟಕಗಳಿಗೆ ಬೀಗ ಮುದ್ರೆ ಹಾಕಿದ್ದರು.ಇಕೊ ಕಾಫಿ ಪಲ್ಪಿಂಗ್ ಘಟಕಗಳನ್ನು ನಿರ್ಮಿಸಲು ಕಾಫಿಮಂಡಳಿ ಉತ್ತೇಜನ ನೀಡುತ್ತಿದ್ದು ಸುಮಾರು 5 ಲಕ್ಷ ರೂಪಾಯಿಗಳವರೆಗೆ ಸಹಾಯ ಧನವನ್ನೂ ನೀಡುತ್ತಿದೆ. ಈ ಘಟಕ ನಿರ್ಮಾಣ ವೆಚ್ಚ ಸುಮಾರು 15 ರಿಂದ 20ಲಕ್ಷ ರೂಪಾಯಿಗಳಾಗಿದ್ದು ಸಣ್ಣ ಬೆಳೆಗಾರರು ನಿರ್ಮಿಸಲು ಸಾಧ್ಯವಾಗುವುದಿಲ್ಲ. ಕಾಫಿ ಉದ್ಯಮದಲ್ಲಿ 5 ಎಕರೆಗಿಂತ ಕಡಿಮೆ ಹಿಡುವಳಿ ಹೊಂದಿರುವ ಸಣ್ಣ ಕಾಫಿ ಬೆಳೆಗಾರರ ಸಂಖ್ಯೆಯೇ ಶೇಕಡಾ 90 ರಷ್ಟಿದೆ. ಇವರಿಗೆ ನೆರವಾಗಲೆಂದು ಕಾಫಿ ಮಂಡಳಿ ಸ್ವಸಹಾಯ ಸಂಘಗಳು ನಿರ್ಮಿಸುವ ಇಕೊ ಪಲ್ಪಿಂಗ್ ಘಟಕಗಳಿಗೂ ಸಹಾಯ ಧನದ ನೆರವನ್ನು ವಿಸ್ತರಿಸಿದೆ. ಸೋಮವಾರಪೇಟೆ ಸಮೀಪದ ಹಿರಿಕರ ಗ್ರಾಮದಲ್ಲಿ ದೇಶದಲ್ಲೇ ಮೊದಲನೆಯದಾದ ಇಕೊ ಪಲ್ಪಿಂಗ್ ಘಟಕವನ್ನು ಬಸವೇಶ್ವರ ಸ್ವಸಹಾಯ ಸಂಘ ಸ್ಥಾಪಿಸಿದ್ದಾರೆ. 2014ರ ನವೆಂಬರ್‌ನಲ್ಲಿ ಇದರ ಉದ್ಘಾಟನೆಯಾಗಿದೆ. ‘ಕಳೆದ ಎರಡು ಸೀಸನ್‌ನಲ್ಲಿ ಈ ಘಟಕ ಸುಮಾರು ಮೂರು ಲಕ್ಷ ರೂಪಾಯಿಗಳ ನಿವ್ವಳ ಲಾಭವನ್ನೂ ಗಳಿಸಿದೆ’ ಎನ್ನುತ್ತಾರೆ ಸಂಘದ ಕಾರ್ಯದರ್ಶಿ ಕೀರ್ತಿ ಮುತ್ತಣ್ಣ. ಈ ಘಟಕದ ಸ್ಥಾಪನೆಗೆ ಸುಮಾರು 18.5 ಲಕ್ಷ ರೂಪಾಯಿ ವೆಚ್ಚವಾಗಿದ್ದು ಮುಂದಿನ ನಾಲ್ಕು ವರ್ಷಗಳಲ್ಲಿ ಸಾಲ ಮುಕ್ತಗೊಳ್ಳುವ ವಿಶ್ವಾಸ ಅವರದ್ದು.ಮುಂದಿನ ವರ್ಷ ಒಬ್ಬ ಸಿಬ್ಬಂದಿಯನ್ನು ನೇಮಿಸಲಾಗುವುದು’ ಎನ್ನುತ್ತಾರೆ ಅವರು.ಸೋಮವಾರಪೇಟೆ ಸಮೀಪದ ತೋಳೂರುಶೆಟ್ಟಳ್ಳಿಯಲ್ಲಿಯೂ ಸ್ವಸಹಾಯ ಸಂಘದ ಮೂಲಕ ಪಲ್ಪಿಂಗ್ ಘಟಕ ಸ್ಥಾಪಿಸಲಾಗಿದ್ದು ಚಿಕ್ಕಮಗಳೂರು ಜಿಲ್ಲೆಯ ಆಲೂರು ಸಮೀಪದಲ್ಲಿ ಮೂರನೇ ಘಟಕವನ್ನು ಸ್ಥಾಪಿಸಲಾಗಿದೆ.