ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Salome Martis/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವರದಕ್ಶಿಣೆಯ ವೈಪರೀತ್ಯದ ಪಿಡುಗು[ಬದಲಾಯಿಸಿ]

ಭಾರತದ ಇಂದಿನ ಸಾಮಾಜಿಕ ಪಿಡುಗುಗಳ್ಳಲ್ಲಿ ವರದಕ್ಶಿಣೆಯ ಸಮಸ್ಯೆಯ ಬೃಹದಾಕಾರದ ಪೆಡಂಭೂತವಾಗಿ ಬೆಳೆದು ಜನಜನತೆಯನ್ನು ಕಡುಕಶ್ಟ ರೀತಿಯಲ್ಲಿ ಕಾಡುತ್ತಿದೆ. ಅದರಲ್ಲೂ ಈ ಭೂತ ಅಸಹಾಯಕ ಸಂಕೀರ್ಣ ಸ್ತಿತಿಯಲ್ಲಿರುವ ಬಡತನದ ಬೇನೆಯಿಂದ ಬಳಲಿ ಬೆಂಡಾಗಿರುವ ಬಡ ಕುಟುಂಬಗಳನ್ನೇ ಕಬಳಿಸುತ್ತಿದೆ. ಕಬಳಿಸಿದರೂ ಕೊರತೆ ಇಲ್ಲವೂ ಏನೋ. ಇತ್ತ ಸಾಯಲು ಬಿಡದೆ ಅತ್ತ ಬದುಕಲು ಅವಕಾಶ ಕೊಡದೆ ಅಂತರ್ಪಿಶಾಚಿಯ ದುಸ್ಥಿತಿಯನ್ನು ಈ ಬಡ ಕುಟುಂಬಗಳಿಗೆ ವರಪ್ರದಾನ ರೀತಿಯಲ್ಲಿ ನೀಡಿದೆ. ಇದರ ವ್ಯಾಪಕತೆ ವಿಶ್ವಾದ್ಯಂತ ಇದೆ. ಆದರೆ ಬಹು ವ್ಯಾಪಕತೆಯ ದುಶ್ಪರಿಣಾಮ ಭಾರತೀಯ ಬಡಕುಟುಂಬಗಳ ಮೇಲೆ ಉಂಟಾಗುತ್ತಿರುವುದು ಸ್ಪಶ್ಟವೆನಿಸಿದೆ. ಇದು ಇಶ್ಟೋಂದು ವ್ಯಾಪಕರೀತಿಯಲ್ಲಿ ಬೆಳೆದಿರುವಂತ ನಿಜ. ಹಾಗಾದರೆ ಉಗಮ ಉಂಟಾದ ಬಗೆ ತಾನೇ ಹೇಗೆ? ತುಂಬ ಹಿಂದೆ ಅಂದರೆ ಪ್ರಾಚೀನ ಕಾಲದಲ್ಲಿ ಇದರ ಪ್ರಚಾರ ಇರಲಿಲ್ಲ ಮಧ್ಯಕಾಲಿನ ಸಮಾಜದಲ್ಲಿ ಇದರ ಉಗಮ ಉಂಟಾದಂತೆ ಕಂಡು ಬಂದಿದೆ. ತಾಯಿ ತಂದೆಯರಿಗೆ ತಮ್ಮ ಮಗಳನ್ನು ತೌರು ಮನೆಯಿಂದ ಗಂಡನ ಮನೆಗೆ ಕಳುಹಿಸಿ ಕೊಡುವಾಗ ಅವರ ಪ್ರೀತಿ ವಾತ್ಸಲ್ಯದ ಕರುಹಿನ ಪ್ರೀತಿಯಲ್ಲಿ ಸಾಕಶ್ಟು ಅಮೂಲ್ಯವಾದ ಉಡುಗೋರೆಗಳನ್ನು ಚಿನ್ನ ಬೆಳ್ಳಿ ವಜ್ರ ವೈಢೂರ್ಯ ಮುತ್ತು ರತ್ನಗಳ ಆಭರಣಗಳ ರೀತಿಯಲ್ಲಿ ಮನಸ್ಸಂತೋಶದಿಂದ ಶುಭ ಹಾರೈಕೆಯೊಂದಿಗೆ ನೀಡಿ ಕಳುಹಿಸುತ್ತಿದ್ದರು.