ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Shakirshaaz12

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                                                ......'ಆಮ್ ಆದ್ಮಿ ಪಕ್ಷ'.....

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಕೇವಲ ಎರಡು ವರ್ಷಗಳಷ್ಟೇ ವಯಸ್ಸಾಗಿರುವ ಈ ಪಕ್ಷದ ಅಪೂರ್ವ ಸಾಧನೆ ಬರೆದು ಮುಗಿಸುವಷ್ಟಲ್ಲವಾದರೂ ನನ್ನ ಚುಟುಕಾದೊಂದು ಅನುಭವವನ್ನು ಹಂಚಿಕೊಳ್ಳಲು ಮುಂದೆ ಬಂದೆ.

ನಾನು ಮೊದಮೊದಲು ಭಾರತದಲ್ಲಿ ಹುಟ್ಟುತ್ತಿರುವ ಅನೇಕಾನೇಕ ಪಕ್ಷದಂತೆ ಇದನ್ನೂ ಲೆಕ್ಕ ಮಾಡಿದ್ದೆ. ಆದರೆ 'ಆಮ್ ಆದ್ಮಿ ಪಕ್ಷ'ದ ಮೊದಲ ಪ್ರಯತ್ನದಲ್ಲೇ ಅದಕ್ಕೆ ಲಭಿಸಿದ ಮತವನ್ನು ನೋಡಿದಾಗ ಮನದಟ್ಟು ಮಾಡಿಕೊಂಡೆ ಇದು ಸಾಮಾನ್ಯ ಪಕ್ಷ ಅಲ್ಲ ಬದಲಾಗಿ 'ಸಾಮಾನ್ಯ ಜನರ' ಪಕ್ಷವಾಗಿದೆ ಎಂದು.

ನಂತರ ಬೆಳೆದ ಬೆಳವಣಿಗೆಯು ನನ್ನ ಆ ತೀರ್ಮಾನವನ್ನು ಕೈ ಬಿಡುವಂತೆ ಮಾಡಿತ್ತು ಮಾತ್ರವಲ್ಲದೆ ಇನ್ನು ಈ ಪಕ್ಷಕ್ಕೆ ಉಳಿಗಾಲವಿಲ್ಲ ಎಂಬ ತಪ್ಪು ಅಭಿಪ್ರಾಯವನ್ನೂ ನನ್ನಲ್ಲಿ ಹುಟ್ಟುಹಾಕಿತ್ತು. ಆದರೆ ಇಂದು ಅದು ದಿಲ್ಲಿಯಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿತಲ್ಲದೆ ಮಾಧ್ಯಮಗಳ ಪೊಳ್ಳು 'ಮೋದೀಕರಣ' ಸ್ವಪ್ನವನ್ನು ಧ್ವಂಸಗೊಳಿಸಿ, ಪ್ರಾಜಾಪ್ರಭುತ್ವದ ಹೊಸ ಅಧ್ಯಾಯವನ್ನು ಸೃಷ್ಟಿಸಿದೆ 'ಸಾಮಾನ್ಯ ಜನರಿಂದ, ಸಾಮಾನ್ಯ ಜನರಿಗಾಗಿ, ಸಾಮಾನ್ಯ ಜನರ ಸರಕಾರ'.

ನನಗಿಂದು ಮನದಟ್ಟಾಯಿತು ಭಾರತದ 'ಸಾಮಾನ್ಯ ಜನರು' ಆಗ್ರಹಿಸುವುದು ಹಿಂದೂ ರಾಷ್ಟ್ರವನ್ನಲ್ಲ ಬದಲಾಗಿ 'ಭ್ರಷ್ಟ ಕಾಂಗ್ರೆಸ್' ಮುಕ್ತ ಸ್ವತಂತ್ರ ಭಾರತವನ್ನೆಂದು.

ನಾನು ಕೂಡ ಸ್ವತಂತ್ರ ಭಾರತದ 'ಆಮ್ ಆದ್ಮಿ'ಯಾಗಲು ತೀರ್ಮಾನಿಸಿದೆ, ನಿಮ್ಮನ್ನೂ 'ಸಾಮಾನ್ಯ ಜನ'ರಾಗಿ ಕಾಣಲು ಇಚ್ಚಿಸುತ್ತೇನೆ..

ದಿಲ್ಲಿಯ 'ಸಾಮಾನ್ಯ ಜನರ' ಆವೇಶ ಭಾರತದ ಮೂಲೆ ಮೂಲೆಗೂ ತಲುಪಲಿ ಎಂಬ ಹಾರೈಕೆಯೊಂದಿಗೆ






                                                                                     "ಒಬ್ಬ ಸಾಮಾನ್ಯ ಹುಡುಗ"