ವಿಷಯಕ್ಕೆ ಹೋಗು

ಸದಸ್ಯ:ರೇಣುಕಾ/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೀವಕೋಶದ ರಚನೆ[ಬದಲಾಯಿಸಿ]

ಪ್ರತಿಯೊಂದು ಜೀವ ಕೋಶವು ಮೂರು ಭಾಗಗಳಿಂದ ಕೂಡಿದೆ ಅವು ಯಾವುದೆಂದರೆ ಕೋಶ ಪೊರೆ,ಕೋಶದ್ರವ್ಯ(ಸೈಟೊಪ್ಲಾಸಂ),ಕೋಶ ಕೇಂದ್ರ(ನ್ಯೂಕ್ಲಿಯಸ್).ಕೋಶದ್ರವ್ಯ ಮತ್ತು ಕೋಶಕೇಂದ್ರವನ್ನು ಒಟ್ಟಾಗಿ ಪ್ರೋಟೊಪ್ಲಾಸ್ಂ ಎಂದು ಕರೆತಯುತ್ತಾರೆ.

ಆಕಾರ ಮತ್ತು ಗಾತ್ರ[ಬದಲಾಯಿಸಿ]

ಜೀವಕೋಶಗಳು ಆಕಾರ ಮತ್ತು ಗಾತ್ರದಲ್ಲಿ ವೈವಿದ್ಯತೆಯನ್ನು ಪ್ರದರ್ಶಿಸುತ್ತವೆ.ಕೆಲವು ಬ್ಯಾಕ್ಟೀರಿಯಾಗಳು ದುಂಡಾಕಾರವಾಗಿದ್ದರೆ,ಯೀಸ್ಟ್ ಅಂಡಾಕಾರವಾಗಿದೂ ನರಕೋಶಗಳು ನೀಳಾಕಾರವಾಗಿರುತ್ತದೆ.ಅಮೀಬಾಗಳಿಗೆ ನಿರ್ದಿ‍‌‌‍‌‌‌‌‌‌‌‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಶ್ಟ ಆಕಾರವಿರುದಿಲ್ಲ.

ಕೋಶ ಪೊರೆ[ಬದಲಾಯಿಸಿ]

ಪ್ರತಿಯೊಂದು ಜೀವಕೋಶವು ಒಂದು ತೆಳುವಾದ ಪೊರೆಯಿಂದ ಆವೃತವಾಗಿರುತ್ತದೆ.ಈ ಪೊರೆಗೆ ಕೋಶ ಪೊರೆ ಎಂದು ಹೆಸರು.ಈ ಪೊರೆಯು ಸಸ್ಯ ಮತ್ತು ಪ್ರಾಣಿಗಳ ಜೀವಕೋಶ ಎರಡರಲ್ಲೂ ಕಂಡುಬರುತ್ತದೆ.ಇದು ಕೋಶದ ಒಳಗೆ ಹೋಗುವ ಮತ್ತು ಹೊರಗೆ ಬರುವ ಎರಡೂ ವಸ್ತುಗಳ ಚಲನೆಯನ್ನು ನಿಯಂತ್ರಿಸುತ್ತದೆ.ನಿರ್ದಿಶ್ಟ ವಸ್ತುಗಳನ್ನು ಮಾತ್ರ ಹಾದುಹೊಗಲು ಬಿಡುವುದರಿಂದ ಈ ಪೊರಗೆ ಅರೆಪಾರೆಗಮ್ಯ ಎಂದು ಹೆಸರು.ಇದಲ್ಲದೆ ಕೊಶ ಪೊರೆಯು ಕೋಶದ ಆಕಾರವನ್ನು ಕಾಪಾಡುತ್ತದೆ.ಕೋಶಪೊರೆಯ ಮೂಲಕ ಚಲಿಸುವ ವಸ್ತುಗಳು ಚಲಿಸುವ ಕ್ರಿಯೆಗಳು ಹೀಗಿವೆ

ವಿಸರಣೆ[ಬದಲಾಯಿಸಿ]

ಇದು ಒಂದು ಬಗೆಯ ಭೌತಿಕ ಕ್ರಿಯೆಯಾಗಿದ್ದು ,ಇದರಲ್ಲಿ ಅಣುಗಳು ಅಧಿಕ ಸಾಂದ್ರತೆಯಿಂದ ಕಡಿಮೆ ಸಾಂದ್ರತೆಯ ಕಡೆಗೆ ಗೊತ್ತು ಗುರಿಯಿಲ್ಲದೆ ಚಲಿಸುತ್ತವೆ.ಸಾಂದ್ರತೆಯ ಈ ವ್ಯತ್ಯಾಸಕ್ಕೆ ವಿಸರಣ ಪ್ರವಣತೆ ಅಥವಾ ವಿಸರಣ ವಾಟ ಎಂದು ಹೆಸರು.

ಅಭಿಸರಣೆ[ಬದಲಾಯಿಸಿ]

ನೀರಿನ ಅಣುಗಳ ವಿಸರಣೆಯನ್ನು ಅಭಿಸರಣೆ ಎಂದು ಹೆಸರು.ನೀರಿನ ಅಣುಗಳು ದುರ್ಬಲ ದ್ರಾವಣದಿಂದ ಅಧಿಕ ಸಾಂದ್ರತೆಯ ದ್ರಾವಣದೆಡೆಗೆ ಅರೆಪಾರಗಮ್ಯ ಪೊರೆಯ ಮೂಲಕ ಚಲಿಸುವ ಪ್ರಕ್ರಿಯೆಗೆ ಅಭಿಸರಣೆ ಎಂದು ಹೆಸರು. ಅಭಿಸರಣೆ ಮತ್ತು ವಿಸರಣೆ ಪ್ರಕ್ರಿಯೆಗಳು ಭೌತಿಕ ಕ್ರಿಯೆಗಳು.ಈ ಕ್ರಿಯೆಯಲ್ಲಿ ವಸ್ತುಗಳು ವಸ್ತುಗಳು ಚಲಿಸುವುದಕ್ಕೆ ಶಕ್ತಿ ವೆಚ್ಚವಾಗುವುದಿಲ್ಲ.

ಕೋಶ ಭಿತ್ತಿ[ಬದಲಾಯಿಸಿ]

ಸಸ್ಯಜೀವಕೋಶದಲ್ಲಿ ಕೋಶ ಪೊರೆಯ ಹೊರಭಾಗದಲ್ಲಿ ಗಡುಸಾದ ಹೊದಿಕೆ ಇದೆ.ಇದಕ್ಕೆ ಕೋಶಭಿತ್ತಿ ಎಂದು ಹೆಸರು.

ಕೋಶ ವಿಭಜನೆ[ಬದಲಾಯಿಸಿ]

ಒಂದು ಜೀವಕೋಶ ಪ್ರೌಡಾವಸ್ಥೆಗೆ ತಲುಪಿದಾಗ ವಿಭಜನೆ ಹೊಂದಿ ಎರಡು ಮರಿ ಕೋಶಗಳಾಗುವ ಕ್ರಿಯೆಗೆ ಕೋಶ ವಿಭಜನೆ ಎಂದು ಹೆಸರು.ಬಹು ಕೋಶೀಯ ಜೀವಿಗಳಲ್ಲಿ ಮೈಟಾಸಿಸ್ ಹಾಗು ಮಿಯಾಸಿಸ್ ಎಂಬ ಎರಡು ಬಗೆಯ ಕೋಶ ವಿಭಜನೆಯನ್ನು ಗುರುತಿಸಬಹುದು.

ಮೈಟಾಸಿಸ್[ಬದಲಾಯಿಸಿ]

ಎಲ್ಲಾಆ ಜೀವಿಗಳ ಕಾಯಕೋಶದಲ್ಲಿ ಕಂಡುಬರುವ ಕೋಶವಿಭಜನೆಗೆ ಮೈಟಾಸಿಸ್ ಅಥವಾ ಕಾಯಕೋಶವಿಭಜನೆ ಎಂದು ಹೆಸರು.ಒಂದು ಜೀವ ಕೋಶವು ಮೈಟಾಸಿಸ್ ವಿಭಜನೆ ಹೊಂದಿ ಎರಡು ಮರಿ ಕೋಶಗಳು ಜನನವಾದಗ ಪ್ರತಿ ಮರಿ ಕೋಶವು ತಾಯಿ ಕೋಶದಲ್ಲಿದ್ದ ಸಂಖ್ಯೆಯ ವರ್ಣ ತಂತುವನ್ನು ಹೊಂದಿರುತ್ತದೆ.ಹಾಗಾಗಿ ಇದನ್ನು ಸಮವಿಭಾಜಕ ಕೋಶವಿಭಜನೆ ಎಂದು ಕರೆಯುತ್ತಾರೆ.ಜೀವಕೋಶಗಳಲ್ಲಿ ಮೈಟಾಸಿಸ್ ನಡೆಯುವ ಮೊದಲು ಹಾಗು ನಡೆಯುವಾಗ ಅನೇಕ ಚಟುವಟಿಕೆಗಳು ಉಂಟಾಗುತ್ತವೆ.ಅವುಗಳನ್ನು ಎರಡು ಪ್ರಮುಖ ಹಂತಗಳಾಗಿ ವಿಂಗಡಿಸಲಾಗಿದೆ. ೧.ಕೋಶಕೇಂದ್ರ ವಿಭಜನೆ (ಕ್ಯಾರಿಯೊಕೈನೆಸಿಸ್) ೨.ಕೋಶರಸ ವಿಭಜನೆ (ಸೈಟೋಕೈನೆಸಿಸ್) ಮೈಟಾಸಿಸ್ ವಿಭಜನೆ ಪ್ರಾರಂಭವಾಗುವ ಮೊದಲು ಕೋಶವು ಕೆಲವು ಸಿದ್ಧತಾ ಹಂತಗಳನ್ನು ಮಾಡಿಕೊಳ್ಳುತ್ತದೆ.ಈ ಹಂತವನ್ನು ಸಿದ್ದತಾ ಹಂತ ಅತವಾ ಇಂಟೆರ್ ಫೇಸ್ ಎಂದು ಕರೆಯಲಾಗಿದೆ. ಸಿದ್ದತ ಹಂತದಲ್ಲಿ ಎಲ್ಲ ವರ್ಣ ತಂತುಗಳಲ್ಲಿರುವ ಡಿ.ಎನ್.ಎ ಅಣುವು ಸ್ವಪ್ರತೀಕರಣಗೊಳ್ಳುವುದು.ಇದು ಮುಂದಿನ ಪೀಳಿಗೆಯ ಜೀವಕೋಶಗಳಲ್ಲಿ ಅನುವಂಶಿಕ ವಸ್ತು ಸಮಾನಾಗಿ ವಿತರಿಸಲು ಸಹಾಯಕ.

ಕೋಶಕೇಂದ್ರ ವಿಭಜನೆ[ಬದಲಾಯಿಸಿ]

ಕೋಶ ವಿಭಜನೆ ಪ್ರಾರಂಭವಾದೊಡನೆ ಕೋಶದಲ್ಲಿ ನಡೆಯುವ ಪ್ರಮುಖ ಬದಲಾವಣೆಗಳನ್ನು ಪ್ರೊಫೇಸ್ ,ಮೆಟಾಫೇಸ್ ,ಅನಾಫೇಸ್ ಮತ್ತು ಟೀಲೊಫೇಸ್ ಎಂಬ ನಾಲ್ಕು ಹಂತಗಳನ್ನು ಗುರುತಿಸಬಹುದು.

ಪ್ರೊಫೇಸ್[ಬದಲಾಯಿಸಿ]

ಕೋಶಕೇಂದ್ರ ವಿಭಜನೆಯಾವಧಿಯಲ್ಲಿ ಪ್ರೊಫೇಸ್ ಹಂತವು ಹೆಚ್ಚು ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ.ವರ್ಣಗ್ರಾಹಕ ಜಾಲ ಒಡೆದು ತಂತುಗಳಾಗಿ ಮಾರ್ಪಡುವುದರಿಂದ ವಿಭಜನೆ ಪ್ರಾರಂಭವಾಗುತ್ತದೆ.ನೀಳವಾಗಿದ್ದ ಡಿ.ಎನ್.ಎ ಅಣುವು ಸುರುಳಿಯಾಗಿ ಗಿಡ್ಡವಾದ ವರ್ಣತಂತುಗಳಾಗಿ ಗೋಚರಿಸುತ್ತದೆ.ಪ್ರೊಫೇಸ್ ಮುಂದುವರಿದಂತೆ ಪ್ರತಿಯೊಂದು ವರ್ಣ ತಂತುವು ನೀಳ ಅಕ್ಷದಲ್ಲಿ ಎರಡಾಗಿ ಸೀಳಿರುವಂತೆ ಕಾಣುತ್ತದೆ.ಈ ಸಮಾನಂತರ ತಂತುಗಳಿಗೆ ಕ್ರೋಮಾಟಿಡ್ಗಳು ಎಂದು ಹೆಸರು.ಎರಡು ಕ್ರೋಮಾಟಿಡ್ಗಳನ್ನು ಸೆಂಟ್ರೊಮಿಯರ್ ಎಂಬ ಬಿಂದು ಬಂಧಿಸಿರುತ್ತದೆ.

     ಇದೇ ಸಮಯದಲ್ಲಿ ಎರಡು ಕೇಂದ್ರ ಬಿಂದುಗಳು (ಸೆಂಟ್ರಿಯೊಲ್ ಗಳು)ಎರಡು ಧ್ರುವಗಳತ್ತ ದೂರ ಸರಿಯುತ್ತವೆ.ಅವುಗಳ ಸುತ್ತಲು ಸಣ್ಣ ಎಳೆಗಳು ಕೋಶರಸದಿಂದ ಉತ್ಪತ್ತಿಯಾಗುವುದರಿಂದ ಎರಡು ಕೇಂದ್ರಬಿಂದುಗಳು ನಕ್ಷತ್ರಗಳಂತೆ ಕಾಣುತ್ತವೆ.ಇವುಗಳಿಗೆ ಆಸ್ಟೆರ್ ಗಳು(ತಾರೆಗಳು) ಎಂದು ಹೆಸರು.ಇವೆರಡರ ಮಧ್ಯೆ ಉದ್ದವಾದ ಕೋಶರಸ ಎಳೆಗಳು ಕಾಣಿಸಿಕೊಳ್ಳುತ್ತವೆ.ಈ ಎರಡೂ ಆಸ್ಟರ್ ಗಳ ಮಧ್ಯೆ ಎಳೆಗಳು ಕದಿರಿನಾಕಾರದಲ್ಲಿ ಕಾಣುವುದರಿಂದ ಇವುಗಳಿಗೆ ಕದಿರು ಎಳೆಗಳು ಎಂದು ಹೆಸರು.ಕಿರು ಕೋಶಕೇಂದ್ರ ಹಾಗು ಕೋಶಪೊರೆ ಅದ್ರಶ್ಯವಾಗುತ್ತದೆ.ಈಗ ವರ್ಣ ತಂತುಗಳು ಕೋಶರಸದಲ್ಲಿ ಹರಡಿಕೊಂಡಂತೆ ಕಾಣುತ್ತವೆ.ಕೇಂದ್ರ ಬಿಂದುಗಳು ಮತ್ತು ಆಸ್ಟರ್ ಗಳು ಪ್ರಾಣಿ ಜೀವಕೋಶದಲ್ಲಿ ಮಾತ್ರ ಕಂಡುಬರುತ್ತವೆ.ಸಸ್ಯ ಜೀವಕೋಶಗಳಲ್ಲಿ ಇರುವುದಿಲ್ಲ.

ಮೆಟಾಫೇಸ್[ಬದಲಾಯಿಸಿ]

ಇದು ಕೋಶಕೇಂದ್ರ ವಿಭಜನೆಯ ಅತ್ಯಂತ ಸಂಕ್ಷಿಪ್ತ ಹಂತ.ಈ ಹಂತದಲ್ಲಿ ವರ್ಣತಂತುಗಳ ಸಂಖ್ಯೆ ,ಆಕಾರ ,ರೂಪ ಮುಂತಾದವುಗಳನ್ನು ವೀಕ್ಷಿಸಬಹುದು.ಈ ಹಂತದಲ್ಲಿ ವರ್ಣ ತಂತುಗಳು ಕೋಶದ ಮಧ್ಯ ಭಾಗಕ್ಕೆ ಚಲಿಸುತ್ತವೆ ಹಾಗೂ ಕೋಶದ ಸಮಭಾಜಕ ಪ್ರದೇಶದಲ್ಲಿ ಜೋಡಣೆಗೊಳ್ಳುತ್ತವೆ.ಇದಕ್ಕೆ ಸಮಾನಾಂತರ ಫಲಕ ಎಂದು ಹಸರು.ಅವುಗಳು ಕದಿರು ಎಳೆಗಳಿಗೆ ಸೆಂಟ್ರೋಮಿಯರ್ ಗಳಿಂದ ಬಂಧಿಸಲ್ಪಟ್ಟಿರುತ್ತದೆ.ಸಾಲಾಗಿ ಬಂದು ನಿಂತ ವರ್ಣ ತಂತುಗಳು ಕೋಶವು ಯಾವ ಸಮತಲದಲ್ಲಿ ಮುಂದೆ ವಿಭಜಿಸಬೇಕೆಂಬುದನ್ನು ನಿರ್ಧರಿಸುತ್ತದೆ.

ಅನಫೇಸ್[ಬದಲಾಯಿಸಿ]

ಈ ಹಂತದಲ್ಲಿ ಪ್ರತಿ ವರ್ಣತಂತುವಿನ ಕ್ರೊಮ್ಯಾಟಿಡ್ ಗಳನ್ನು ಹಿಡಿದಿಟ್ಟುಕೊಂಡಿದ್ದ ಸೆಂಟ್ರೊಮಿಯರ್ ಎರಡಾಗಿ ವಿಭಜನೆ ಹೊಂದುತ್ತದೆ.ವರ್ಣ ತಂತುವಿನಲ್ಲಿರುವ ಪ್ರತಿಯೊಂದು ಕ್ರೊಮ್ಯಾಟಿಡ್ ಗೂ ಒಂದು ಸೆಂಟ್ರೊಮಿಯರ್ ಲಭಿಸುತ್ತದೆ.ಈಗ ಆ ಎರಡು ತಂತುಗಳು ಬೇರ್ಪಟ್ಟು ವಿರುದ್ಧ ದಿಕ್ಕಿನಲ್ಲಿ ಚಲಿಸಲು ಪ್ರಾರಂಭವಾಗುತ್ತದೆ.ಕೆಲವು ಕದಿರೆಗಳು ಸೆಂಟ್ರೊಮಿಯರ್ ಗೆ ಅಂಟಿಕೊಂಡಿದ್ದು ಕ್ರೊಮ್ಯಾಟಿಡ್ ತಂತುಗಳನ್ನು ತಮ್ಮ ಧ್ರುವಗಳತ್ತ ಎಳೆದುಕೊಳ್ಳುತ್ತವೆ.ಹೀಗೆ ವಿರುದ್ಧ ದಿಕ್ಕಿಗೆ ತೆರಳುವ ವರ್ಣ ತಂತುಗಳ ಎರಡು ತಂಡಗಳ ಮಧ್ಯೆ ಹೊಸ ರೀತಿಯ ಕೋಶರಸದ ಎಳೆಗಳು ಕಾಣಿಸಿಕೊಳ್ಳುತ್ತವೆ.ಇವುಗಳಿಗೆ ಅಂತರ್ವಲಯಗಳು ಎಂದು ಹೆಸರು.

==ಟಲೋಫೇಸ್[ಬದಲಾಯಿಸಿ]

ಇದು ಕೋಶಕೇಂದ್ರ ವಿಭಜನೆಯ ಕೊನೆಯ ಹಂತ.ಈ ಹಂತದಲ್ಲಿ ಕೋಶದ ಪ್ರತಿ ಧ್ರುವ ಪ್ರದೇಶದಲ್ಲಿ ಒಂದು ಹೊಸ ಮರಿ ಕೋಶಕೇಂದ್ರ ರಚನೆಯಾಗುತ್ತದೆ.ವಿರುದ್ಧ ದಿಕ್ಕಿನ ಧ್ರುವಗಳತ್ತ ತೆರಳಿದ ವರ್ಣ ತಂತುಗಳು ಎಳೆಗಳು ಮತ್ತೆ ಪರಸ್ಪರ ಸುತ್ತಿಕೊಂಡು ವರ್ಣ ಗ್ರಾಹಕ ಜಾಲವಾಗುತ್ತದೆ.ಈ ಜಾಲದ ಸುತ್ತಲೂ ಹೊಸ ಕೋಶಕೇಂದ್ರ ಪೊರೆ ಹಾಗೂ ಜಾಲದಲ್ಲಿ ಹೊಸ ಕಿರು ಕೋಶಕೇಂದ್ರ ರಚನೆಯಾಗುತ್ತದೆ.ಹೀಗೆ ಎಲ್ಲಾ ವಿಧದಲ್ಲೂ ಪರಸ್ಪರ ಹೋಲುವ ಒಂದೇ ಸಂಖ್ಯೆಯ ವರ್ಣ ತಂತುಗಳಿರುವ ಎರಡು ಮರಿ ಕೋಶಕೇಂದ್ರಗಳು ಉಂಟಾಗುತ್ತವೆ.ಕೋಶರಸದಲ್ಲಿದ್ದ ಎಲ್ಲಾ ಎಳೆಗಳು ಅದ್ರಶ್ಯವಾಗುತ್ತವೆ.ಹೀಗೆ ಟೀಲೋಫೇಸ್ ಕೊನೆಗೊಂಡು ಕೋಶಕೇಂದ್ರ ವಿಭಜನೆ ಪೂರ್ಣಗೊಳ್ಳುತ್ತದೆ.ಈ ಕೋಶಕೇಂದ್ರ ವಿಭಜನೆಗೆ ಕ್ಯಾರಿಯೊಕೈನೆಸಿಸ್ ಎಂದು ಹೆಸರು.

ಕೋಶರಸ ವಿಭಜನೆ[ಬದಲಾಯಿಸಿ]

ಟೀಲೋಫೇಸ್ ಮುಗಿಯುತಿದ್ದಂತೆಯೆ ಕೋಶರಸ ವಿಭಜನೆ ಪ್ರಾರಂಭವಾಗುವುದು.ಟಲೊಫೇಸ್ ಕೊನೆಗೊಳ್ಳುತಿದ್ದಂತೆಯೇ ಕೋಶವು ಎರಡಾಗಿ ವಿಭಜಿಸಲು ಪ್ರಾರಂಭವಾಗುವುದು.ಪ್ರಾಣಿಕೋಶಗಳಲ್ಲಿ ಕೋಶಹದ ಮಧ್ಯ ಭಾಗವು ಹೊರಗಿನಿಂದ ಒಳಗೆ ಕ್ರಮೇಣ ಸಂಪೀಡನೆಗೊಂಡು ಎರಡಾಗಿ ಕತ್ತರಿಸುತ್ತದೆ.ಕೋಶವು ಸೀಳಿ ಎರಡು ಮರಿ ಕೋಶಗಳಾಗುತ್ತವೆ.ಕೋಶರಸ ವಿಭಜನೆಗೆ ಸೈಟೊಕೈನೆಸಿಸ್ ಎಂದು ಹೆಸರು .

    ಮೈಟಾಸಿಸ್ ಕೋಶ ವಿಭಜನೆಯಿಂದ ಜನಿಸುವ ಎರಡು ಮರಿ ಕೋಶಗಳಲ್ಲಿ ಸಮಾನಾಂತರ ವರ್ಣತಂತುಗಳ ಸಂಖ್ಯೆ ತಾಯಿ ಕೋಶದಲ್ಲಿದ್ದಷ್ಟೆ ಇರುವುದು.ಈ ಸಂಖ್ಯೆಗೆ ದ್ವಿಗುಣಿತ ಸಂಖ್ಯೆ ಅಥವಾ ಡಿಪ್ಲಾಯಿಡ್ ಎಂದು ಹೆಸರು.ಈ ಸಂಖ್ಯೆಯನ್ನು 2n ಎಂದು ಸೂಚಿಸುವುದು.[೧]

ಉಲ್ಲೇಖ[ಬದಲಾಯಿಸಿ]

<references>

ಮಿಯಾಸಿಸ್[ಬದಲಾಯಿಸಿ]

ಲೈಂಗಿಕ ರೀತಿಯ ಪ್ರಜನನ ಕ್ರಿಯೆಯಲ್ಲಿ ಹೆಣ್ಣು ಮತ್ತು ಗಂಡು ಪ್ರಜನನ ಕೋಶಗಳು ಸೇರಿ ಯುಗ್ಮಜ ಎನ್ನುವ ಒಂದು ಕೋಶವಾಗುವುದು .ಈ ಕೋಶದಲ್ಲಿ ವರ್ಣ ತಂತುಗಳು ದ್ವಿಗುಣಿತ ಸ್ಂಖ್ಯೆಯಲ್ಲಿರುತ್ತವೆ. ತಾಯಿಯಿಂದ ಒಂದು ತಂಡ ವರ್ಣ ತಂತುಗಳು ಮತು ತಂದೆಯಿಂದ ಒಂದು ತಂಡ ಬಂದಿದ್ದರೂ ಸಹ ದಿಗುಣಿತ ಸಂಖ್ಯೆ ಎರಡರ‍‍‍‍‍‍ಶ್ಟಾಗಿರುವುದಿಲ್ಲ .ಪ್ರಜನನ ಕೋಶಗಳಲ್ಲಿ ನಡೆಯುವ ಕೋಶ ವಿಭಜನೆಯು ಲಿಂಗಾಣುಗಲನ್ನು ಉತ್ಪತ್ತಿ ಮಾಡುತ್ತದೆ.ಈ ಕೋಶ ವಿಭಜನೆಗೆ ಮಿಯಾಸಿಸ್ ಕೋಶವಿಭಜನೆ ಎಂದು ಹೆಸರು.ಈ ಸಂಖ್ಯೆಯನ್ನು ಏಕಗುಣಿತ ಸ್ಂಖ್ಯೆ ಎನ್ನುವರು.ಇದನ್ನು n ಎಂದು ಗುರುತಿಸಲಾಗುವುದು.ಆದ್ದರಿಂದ ಮಿಯಾಸಿಸ್ ಗೆ ಸಂಖ್ಯಾ ಕ್ಷೀಣ ವಿಭಜನೆ ಎಂದು ಹೆಸರು.

ಮಿಯಾಸಿಸ್ ವಿಭಜನೆಯ ಹಂತಗಳು[ಬದಲಾಯಿಸಿ]

ಮಿಯಾಸಿಸ್ ಎರಡು ವಿಭಜನೆಗಳನ್ನು ಒಳಗೊಂಡಿದೆ.ಮೊದಲನೆಯ ವಿಭಜನೆಯನ್ನು ಮಿಯಾಸಿಸ್ ೧ ಮತು ಎರಡನೆಯ ವಿಭಜನೆಯನ್ನು ಮಿಯಾಸಿಸ್ ೨ ಎಂದು ಕರೆಯುತ್ತಾರೆ.ಮಿಯಾಸಿಸ್ ೧ ರಲ್ಲಿ ವರ್ಣ ತಂತುಗಳ ದ್ವಿಗುಣಿತ ಸಂಖ್ಯೆ ಏಕಗುಣಿತ ಸಂಖ್ಯೆಯಾಗಿ ಪರಿವರ್ತನೆಗೊಳ್ಳುವುದು.ಅಂದರೆ ೨ಎನ್ ಸಂಖ್ಯೆ ಎನ್ ಆಗುವುದು. ಮಿಯಸಿಸ್ ೧ರಲ್ಲಿಯೂ ಕೋಶಕೇಂದ್ರ ವಿಭಜನೆ ಹಾಗೂ ಕೋಶರಸ ವಿಭಜನೆ ಎಂಬ ಎರಡು ಹಂತಗಳಿವೆ.

ಮಿಯಸಿಸ್ ೧ರ ಕೋಶಕೇಂದ್ರ ವಿಭಜನೆ[ಬದಲಾಯಿಸಿ]

ಈ ವಿಭಜನೆಯನ್ನು ಪ್ರೊಫೇಸ್ ೧,ಮೆಟಾಫೇಸ್ ೧, ಅನಫೇಸ್ ೧, ಮತ್ತು ಟೀಲೋಫೇಸ್ ೧ ಎಂಬ ನಾಲ್ಕು ಹಂತಗಳನ್ನು ಗುರುತಿಸಲಾಗಿದೆ.ಈ ವಿಭಜನೆಯ ಕೊನೆಯಲ್ಲಿ ಉತ್ಪತ್ತಿಯಾಗುವ ಮರಿಕೋಶಗಳಲ್ಲಿ ಏಕಗುಣಿತ ವರ್ಣತಂತುಗಳಿರುತ್ತವೆ.

ಪ್ರೊಫೇಸ್ ೧[ಬದಲಾಯಿಸಿ]

ಈ ಹಂತದಲ್ಲಿ ಕೋಶಕೇಂದ್ರದಲ್ಲಿರುವ ವರ್ಣಗ್ರಾಹಕ ಜಾಲವು ಸುರುಳಿಗೊಂಡು ದಪ್ಪನಾದ ವರ್ಣತಂತುಗಳಾಗಿ ಮಾರ್ಪಾಡಾಗುತ್ತದೆ.ಕಿರು ಕೋಶ ಕೇಂದ್ರವು ಅದೃಶ್ಯವಾಗುತ್ತದೆ.ಕೋಶ ಕೇಂದ್ರದ ಪೊರೆಯು ಶಿಥಿಲವಾಗಿ ಮಾಯವಾಗುತ್ತದೆ.ಕದಿರು ಎಳೆಗಳು ರಚನೆಯಾಗುತ್ತವೆ.

ಮೆಟಾಫೇಸ್ ೧[ಬದಲಾಯಿಸಿ]

ಈ ಹಂತದಲ್ಲಿ ವರ್ನತಂತುಗಳು ಕೋಶದ ಸಮಭಾಜಕ ಸಮತಲಕ್ಕೆ ಚಲಿಸುತ್ತವೆ.ಈ ಸಮಭಾಜಕ ಸಮತಲದ ಎರಡು ಬದಿಗೆ ಸಮರೂಪಿ ವರ್ಣ ತಂತುಗಳ ಎರಡು ತಂಡಗಳು ನೆಲೆಸುತ್ತವೆ.

ಅನಫೇಸ್ ೧[ಬದಲಾಯಿಸಿ]

ಈ ಹಂತದಲ್ಲಿ ವರ್ಣತಂತುಗಳ ಎರಡು ತಂಡಗಳು ವಿರುದ್ಧ ದಿಕ್ಕುಗಳಿಗೆ ಚಲಿಸುತ್ತವೆ. ಆದರೆ ಎರಡು ಕ್ರೊಮ್ಯಾಟಿಡ್ ಗಳನ್ನು ಹಿಡಿದುಕೊಂಡಿರುವ ಸೆಂಟ್ರೊಮಿಯರ್ ವಿಭಜಿಸುವುದಿಲ್ಲ.ಅನಫೆಸ್ ೧ ವೈಶಿಶ್ಟ್ಯವೇನೆಂದರೆ,ವರ್ಣ ತಂತುಗಳು ಏಕಗುಣಿತ ತಂಡಗಳಾಗಿ ಬೇರ್ಪಡುತ್ತವೆ.ಒಂದೊಂದು ಏಕಗುಣಿತ ವರ್ಣತಂತುಗಳ ತಂಡ ಒಂದೊಂದು ಧ್ರುವವನ್ನು ಸೇರುತ್ತವೆ.ಅಂದರೆ ದ್ವಿಗುಣಿತ ವರ್ಣತಂತುಗಳು ಏಕಗುಣಿತವಾಗುವುದು.ಅಡ್ಡ ಹಾಯುವಿಕೆಯಿಂದ ಏಕಗುಣಿತ ವರ್ಣತಂತುತಳಲ್ಲಿನ ಜೀನ್ ಗಳ ಜೋಡಣೆ ತಂದೆತಾಯಿಗಳ ವರ್ಣತಂತುಗಳಲ್ಲಿರುವ ಜೀನ್ ಗಳ ಜೋಡಣೆಗಿಂತ ಭಿನ್ನವಾಗಿರುತ್ತದೆ.

ಟೀಲೊಫೇಸ್[ಬದಲಾಯಿಸಿ]

ಈ ಹಂತದಲ್ಲಿ ಸಮಾನಾಂತರ ವರ್ಣತಂತುಗಳು ವಿರುದ್ದ ಧ್ರುವಗಳನ್ನು ಸೇರುತ್ತವೆ.ಇವು ಏಕಗುಣಿತವಾಗಿದ್ದರೂ ಕ್ರೊಮ್ಯಟಿಡ್ ಗಳನ್ನು ಬೇರ್ಪಟ್ಟಿರುವುದಿಲ್ಲ.ಅಡ್ಡಹಾಯುವಿಕೆಯಿಂದಾಗಿ ಇವು ಒಂದೇ ರೀತಿಯ ಜೀನ್ ಗಳನ್ನು ಹೊಂದಿರುವುದಿಲ್ಲ. ಈ ಕ್ರೊಮ್ಯಾಟಿಡ್ ಗಳನ್ನು ಬೇರ್ಪಡಿಸಲು ಮಿಯಸಿಸ್ ೨ ವಿಭಜನೆ ನಡೆಯುವುದು.ಪ್ರತಿಯೊಂದು ಮರಿಕೋಶದ ಎರಡೂ ಧ್ರುವಗಳಲ್ಲಿರುವ ವರ್ಣತಂತುಗಳು ಸುರುಳಿ ಬಿಚ್ಚಿಕೊಂಡು ನೀಳವಾದ ತೆಳುವಾದ ದಾರಗಳಂತೆ ಪರಿವರ್ತನೆಗೊಳ್ಳುತ್ತದೆ.ಕೋಶ ಕೇಂದ್ರದ ಪೊರೆ ಪುನರ್ರಚಿತವಾಗುತದೆ. ಎರಡೂ ಧ್ರುವಗಳಲ್ಲೂ ಕಿರುಕೋಶಕೇಂದ್ರಗಳು ರೂಪುಗೊಳ್ಳುತವೆ.ಹೀಗೆ ಎರಡು ಕೋಶ ಕೇಂದ್ರ ಗಳು ರೂಪುಗೊಳ್ಳುತ್ತಿದ್ದಂತೆ ಕೋಶ ರಸ ವಿಭಜನೆ ಉಂಟಾಗಿ ಎರಡು ಏಕಗುಣಿತ ಮರಿಕೋಶಗಳು ರೂಪುಗೊಳ್ಳುತ್ತವೆ. ಹೊಸದಾಗಿ ರೊಪುಗೊಂಡ ಎರಡು ಏಕಗುಣಿತ ಮರಿಕೋಶಗಳಲ್ಲಿ ಮಿಯಾಸಿಸ್ ೨ ಏಕಕಾಲದಲ್ಲಿ ಪ್ರಾರಂಭವಾಗುತ್ತದೆ.

ಮಿಯಸಿಸ್ ೨[ಬದಲಾಯಿಸಿ]

ಈ ವಿಭಜನೆಯಲ್ಲಿಯೂ ಕೋಶ ಕೇಂದ್ರ ವಿಭಜನೆ ಮತ್ತು ಕೋಶ ರಸ ವಿಭಜನೆ ಎಂಬ ಎರಡು ವಿಧಗಳಿವೆ.ಮಿಯಸಿಸ್ ಎರಡರ ಕೋಶ ಕೇಂದ್ರ ವಿಭಜನೆಯಲ್ಲಿ ಪ್ರೊಫೇಸ್ ೨,ಮೆಟಾಫೇಸ್ ೨,ಅನಫೇಸ್ ೨ ,ಮತ್ತು ಟೀಲೊಫೇಸ್ ೨ ಎಂಬ ನಾಲ್ಕು ಹಂತಗಲಳಿವೆ.

ಪ್ರೊಫೇಸ್ ೨[ಬದಲಾಯಿಸಿ]

ಈ ಹಂತದಲ್ಲ್ಲಿ ಜರುಗುವ ಬದಲಾವಣೆಗಳು ಮೈಟಸಿಸ್ ಪ್ರೊಫೇಸ್ ನ ಬದಲಾವಣೆಗಳನ್ನು ಬಹುತೇಕ ಹೋಲುತ್ತವೆ.ಎರಡು ಧ್ರುವಗಳಲ್ಲಿರುವ ಆಸ್ಟರ್ ಗಳ ನಡುವೆ ಕದಿರು ಎಳೆಗಳು ರೂಪುಗೊಳ್ಳುತ್ತವೆ .ಕೋಶಕೆಂದ್ರದ ಪೊರೆ ಅದ್ರುಶ್ಯವಾಗುತ್ತದೆ.ವರ್ಣತಂತುಗಳು ಸ್ವೇಚ್ಛೆಯಾಗಿ ಕೋಶರಸದಲ್ಲಿ ಹರಡಲ್ಪಡುತ್ತವೆ.

ಮೆಟಾಫೇಸ್ ೨[ಬದಲಾಯಿಸಿ]

ಈ ಹಂತದಲ್ಲಿ ವರ್ಣತಂತುಗಳು ಸಮಭಾಜಕ ರೇಖೆಯತ ಬಂದು ತಂಗುತ್ತವೆ.ಕದಿರೆಳೆಗಳೂ ಸೆಂಟ್ರೋಮಿಯರ್ ಗೆ ಅಂಟಿಕೊಳ್ಳುತ್ತವೆ..

ಅನಫೇಸ್ ೨[ಬದಲಾಯಿಸಿ]

ಇಲ್ಲಿ ಸೆಂಟ್ರೋಮಿಯರ್ ಗಳು ಎರಡು ಭಾಗವಾಗಿ ವಿಭಜಿಸುವುದರಿಂದ ಕ್ರೊಮ್ಯಾಟಿಡ್ ಗಳು ಸಂಪೂರ್ಣವಾಗಿ ಬೇರ್ಪಡುತ್ತವೆ.ಈ ರೀತಿ ಬೇರ್ಪಡೆಯಾದ ವರ್ಣ ತಂತುಗಳು ವಿರುದ್ಧ ಧ್ರುವಗಳಿಗೆ ಚಲಿಸುತ್ತವೆ.

ಟೀಲೊಫೇಸ್೨[ಬದಲಾಯಿಸಿ]

ಈ ಹಂತದಲ್ಲಿ ಕೋಶ ಕೇಂದ್ರ ಪುನ್ ರಚನೆಯಾಗುತ್ತದೆ.ಕದಿರೆಳೆಗಳೂ ಮಾಯವಾಗುತ್ತದೆ.ಕೋಶಪೊರೆ ರಚನೆಯಾಗುತ್ತದೆ.ಕೋಶರಸದ ವಿಭಜನೆ ಉಂಟಾಗಿ ನಾಲ್ಕು ಏಕಗುಣಿತ ಮರಿಕೋಶಗಳು ಉಂಟಾಗುತ್ತವೆ.

  1. http://www.uic.edu/classes/bios/bios100/lecturesf04am/lect16.htm