ಸದಸ್ಯ:122.179.72.73/sandbox
Appearance
ಅಪ್ಪ ಅಮ್ಮ ಮಾತ್ರದೇವೋಭವ, ಪಿತ್ರದೇವೋಭವ ಎಂಬ ವಾಕ್ಯದ ಅರ್ಥವನ್ನು ಸಂಪೂರ್ಣವಾಗಿ ಮನನ ಮಾಡಿಕೊಳ್ಳಲು ಸಾಧ್ಯವಾಗದಿದ್ದರೂ, ನಾ ಕಂಡಂತೆ ತಂದೆ-ತಾಯಿ ಜಗತ್ತಿನ ಯಾವುದೇ ವಸ್ತುವಿಗೂ ಹೋಲಿಸಲಾಗದ, ಬೆಲೆಕಟ್ಟಲಾಗದ ಅತ್ಯಮೂಲ್ಯವಾದ ಜಗತ್ತಿನ ಶ್ರೇಷ್ಠ ಸಂಗತಿಗೂ ಮಿಗಿಲಾದವರಾಗಿದ್ದಾರೆ. ಗೊತ್ತಿರದ, ಕಂಡಿರದ ಎಲ್ಲೋ ಕೇಳಿದ ವಿಚಾರವನ್ನು ಕುರಿತು ಪುಟಗಟ್ಟಲೆ ಬರೆಯುವುದಕ್ಕಿಂತ ಸದಾ ನನ್ನ ಒಳಿತಿಗಾಗಿ ಜೀವನವನ್ನೇ ಮುಡಿಪಾಗಿಟ್ಟಿರುವ ನನ್ನಪ್ಪ-ನನ್ನಮ್ಮನ ಬಗ್ಗೆ ಬರೆಯುವುದೇ ಸೂಕ್ತವೆಮ್ದು ನನ್ನ ಅನಿಸಿಕೆ. ಇವರು ನ್ನ್ನ ಪಾಲಿಗೆ ದೇವರಿಗಿಂತ ಮಿಗಿಲು ಉತ್ತಮ ಸೇಹಿತನಾಗಿ ಮಾರ್ಗದರ್ಶಕನಾಗಿ, ಸಲಹೆಗಾರನಾಗಿ ನನ್ನೊಡನಿರುವ ನನ್ನಪ್ಪ ನನ್ನ ಬಗ್ಗೆ ಕಟ್ಟಿದ ಕನಸುಗಳೆಷ್ಟೋ? ಮಮತೆಯ ಮಾತೆಯಾಗಿ, ಅಕ್ಕರೆಯ ಅಕ್ಕನಂತೆ ಸಲಹುವ ನನ್ನಮ್ಮನ ಆಸೆ ಅದಿನೆಷ್ಟೊ? ಹೌದು, ನನ್ನಪ್ಪ ನನ್ನಮ್ಮನ ಬಗ್ಗೆ ಬರೆಯಲು ಕುಳಿತಾಗಲೇ ನನ್ನ ಮೇಲೆ ಎಂತಹ ಜವಾಬ್ದಾರಿ ಕಾಣದಂತೆ ನನ್ನ ಮೆಚ್ಚಿನ ಆ ಇಬ್ಬರು ಸ್ನೇಹಿತರು ಹೊರಿಸಿದ್ದಾರೆ ಎಂದು ಅರಿವಾದದ್ದು.