ವಿಷಯಕ್ಕೆ ಹೋಗು

ಸದಸ್ಯ:1810147dhananjaya.S/WEP 2019-20

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾರುಕಟ್ಟೆ ಸಂಶೋಧನೆಯು ಮಾರುಕಟ್ಟೆಗಳು ಮತ್ತು ಗ್ರಾಹಕರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಸಂಘಟಿತ ಪ್ರಯತ್ನವಾಗಿದೆ. ಇದು ವ್ಯಾಪಾರ ತಂತ್ರದ ಪ್ರಮುಖ ಅಂಶವಾಗಿದೆ ಮತ್ತು ಸ್ಪರ್ಧಾತ್ಮಕತೆಯನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಅಂಶವಾಗಿದೆ. ಮಾರುಕಟ್ಟೆ ಸಂಶೋಧನೆಯು ಮಾರುಕಟ್ಟೆಯ ಅಗತ್ಯತೆಗಳು, ಮಾರುಕಟ್ಟೆ ಗಾತ್ರ ಮತ್ತು ಸ್ಪರ್ಧೆಯನ್ನು ಗುರುತಿಸಲು ಹಾಗೂ ವಿಶ್ಲೇಷಿಸಲು ಸಹಾಯ ಮಾಡುತ್ತದೆ. ಇದರ ತಂತ್ರಗಳು ಫೋಕಸ್ ಗುಂಪುಗಳು, ಆಳವಾದ ಸಂದರ್ಶನಗಳು ಮತ್ತು ಜನಾಂಗಶಾಸ್ತ್ರದಂತಹ ಗುಣಾತ್ಮಕ ತಂತ್ರಗಳನ್ನು ಒಳಗೊಳ್ಳುವುದರ ಜೊತೆಗೆ ಗ್ರಾಹಕರ ಸಮೀಕ್ಷೆಗಳು ಮತ್ತು ದ್ವಿತೀಯ ಡೇಟಾದ ವಿಶ್ಲೇಷಣೆಯಂತಹ ಪರಿಮಾಣಾತ್ಮಕ ತಂತ್ರಗಳನ್ನು ಒಳಗೊಂಡಿದೆ.

ಇದು ಸಾಮಾಜಿಕ ಮತ್ತು ಅಭಿಪ್ರಾಯ ಸಂಶೋಧನೆಗಳನ್ನು ಒಳಗೊಂಡಿದ್ದು ಒಳನೋಟವನ್ನು ಪಡೆಯಲು ಅಥವಾ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಬೆಂಬಲಿಸಲು ಅನ್ವಯಿಕ ಸಾಮಾಜಿಕ ವಿಜ್ಞಾನಗಳ ಅಂಕಿಅಂಶ ಮತ್ತು ವಿಶ್ಲೇಷಣಾತ್ಮಕ ವಿಧಾನಗಳು ಮತ್ತು ತಂತ್ರಗಳನ್ನು ಬಳಸಿಕೊಂಡು ವ್ಯಕ್ತಿಗಳು ಅಥವಾ ಸಂಸ್ಥೆಗಳ ಬಗ್ಗೆ ಮಾಹಿತಿಯನ್ನು ವ್ಯವಸ್ಥಿತವಾಗಿ ಸಂಗ್ರಹಿಸುವುದು ಮತ್ತು ವ್ಯಾಖ್ಯಾನಿಸುವುದಾಗಿದೆ.

ಮಾರುಕಟ್ಟೆ ಸಂಶೋಧನೆ, ವ್ಯಾಪಾರೋದ್ಯಮ ಸಂಶೋಧನೆ ಮತ್ತು ಮಾರ್ಕೆಟಿಂಗ್ ವ್ಯವಹಾರ ಚಟುವಟಿಕೆಗಳ ಅನುಕ್ರಮವಾಗಿದ್ದು ಕೆಲವೊಮ್ಮೆ ಇವುಗಳನ್ನು ಅನೌಪಚಾರಿಕವಾಗಿ ನಿರ್ವಹಿಸಲಾಗುತ್ತದೆ.

ಮಾರ್ಕೆಟಿಂಗ್ ಸಂಶೋಧನೆಯ ಕ್ಷೇತ್ರವು ಮಾರುಕಟ್ಟೆ ಸಂಶೋಧನೆಗಿಂತ ಹೆಚ್ಚು ಹಳೆಯದಾಗಿದೆ. ಎರಡೂ ಗ್ರಾಹಕರನ್ನು ಒಳಗೊಂಡಿದ್ದರೂ ಮಾರ್ಕೆಟಿಂಗ್ ಸಂಶೋಧನೆಯು ನಿರ್ದಿಷ್ಟವಾಗಿ ಮಾರುಕಟ್ಟೆ ಪ್ರಕ್ರಿಯೆಗಳ ಬಗ್ಗೆ ಕಾಳಜಿ ವಹಿಸುತ್ತದೆ. ಉದಾಹರಣೆಗೆ ಜಾಹೀರಾತು ಪರಿಣಾಮಕಾರಿತ್ವ ಮತ್ತು ಮಾರಾಟದ ಪರಿಣಾಮಕಾರಿತ್ವ. ಆದರೆ ಮಾರುಕಟ್ಟೆ ಸಂಶೋಧನೆಯು ನಿರ್ದಿಷ್ಟವಾಗಿ ಮಾರುಕಟ್ಟೆಗಳು ಮತ್ತು ವಿತರಣೆಗೆ ಸಂಬಂಧಿಸಿದೆ. ಮಾರ್ಕೆಟಿಂಗ್ ಸಂಶೋಧನೆಯೊಂದಿಗೆ ಮಾರುಕಟ್ಟೆ ಸಂಶೋಧನೆಯನ್ನು ಗೊಂದಲಗೊಳಿಸುವುದಕ್ಕಾಗಿ ಎರಡು ವಿವರಣೆಗಳನ್ನು ನೀಡಲಾಗಿದ್ದು, ಪದಗಳ ಹೋಲಿಕೆ ಮತ್ತು ಮಾರುಕಟ್ಟೆ ಸಂಶೋಧನೆಯು ಮಾರ್ಕೆಟಿಂಗ್ ಸಂಶೋಧನೆಯ ಉಪವಿಭಾಗವಾಗಿದೆ. ಎರಡೂ ಕ್ಷೇತ್ರಗಳಲ್ಲಿ ಪರಿಣತಿ ಮತ್ತು ಅಭ್ಯಾಸಗಳನ್ನು ಹೊಂದಿರುವ ಪ್ರಮುಖ ಕಂಪನಿಗಳಿಂದಾಗಿ ಮತ್ತಷ್ಟು ಗೊಂದಲವು ಅಸ್ತಿತ್ವದಲ್ಲಿದೆ.

ಇತಿಹಾಸ[ಬದಲಾಯಿಸಿ]

೧೯೩೦ ರ ದಶಕದಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ರೇಡಿಯೋದ ಸುವರ್ಣ ಯುಗದ ಜಾಹೀರಾತಿನ ಉತ್ಕರ್ಷದ ಒಂದು ಭಾಗವಾಗಿ ಮಾರುಕಟ್ಟೆ ಸಂಶೋಧನೆಯು ಪರಿಕಲ್ಪನೆ ಮತ್ತು ಔಪಚಾರಿಕ ಅಭ್ಯಾಸವನ್ನು ಪ್ರಾರಂಭಿಸಿದರೂ ಇದು ೧೯೨೦ರ ಡೇನಿಯಲ್ ಸ್ಟಾರ್ಚ್ ಅವರ ಕೆಲಸವನ್ನು ಆಧರಿಸಿದೆ. ಸ್ಟಾರ್ಚ್ "ಜಾಹೀರಾತನ್ನು ನೋಡಬೇಕು, ಓದಬೇಕು, ನಂಬಬೇಕು, ನೆನಪಿಸಿಕೊಳ್ಳಬೇಕು ಮತ್ತು ಮುಖ್ಯವಾಗಿ ಕಾರ್ಯನಿರ್ವಹಿಸಬೇಕು, ಪರಿಣಾಮಕಾರಿ ಎಂದು ಪರಿಗಣಿಸಬೇಕು" ಎಂಬ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದರು. ಜಾಹೀರಾತುದಾರರು ಅವರು ವಿಭಿನ್ನವಾಗಿ ಪ್ರಾಯೋಜಿಸಿದ ಮಾದರಿಗಳಿಂದ ಜನಸಂಖ್ಯಾಶಾಸ್ತ್ರದ ಮಹತ್ವವನ್ನು ಅರಿತುಕೊಂಡರು.

ಗ್ಯಾಲಪ್ ಸಂಸ್ಥೆಯು ಸಾರ್ವಜನಿಕ ಅಭಿಪ್ರಾಯ ಸಂಗ್ರಹವನ್ನು ಆವಿಷ್ಕರಿಸಲು ಸಹಾಯ ಮಾಡಿತು. ಇಂದು, ಮಾರುಕಟ್ಟೆ ಸಂಶೋಧನೆಯು ಅದನ್ನು ಪಾವತಿಸುವ ಒಂದು ಮಾರ್ಗವಾಗಿದೆ.

ವ್ಯಾಪಾರ/ಯೋಜನೆಗಾಗಿ ಮಾರುಕಟ್ಟೆ ಸಂಶೋಧನೆ[ಬದಲಾಯಿಸಿ]

ಮಾರುಕಟ್ಟೆ ಸಂಶೋಧನೆಯು ಗ್ರಾಹಕರ ಅಗತ್ಯತೆಗಳು ಮತ್ತು ನಂಬಿಕೆಗಳ ಅವಲೋಕನವನ್ನು ಪಡೆಯುವ ಒಂದು ಮಾರ್ಗವಾಗಿದೆ. ಅವರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ಕಂಡುಹಿಡಿಯುವುದನ್ನು ಸಹ ಇದು ಒಳಗೊಂಡಿರುತ್ತದೆ. ಉತ್ಪನ್ನವನ್ನು ಹೇಗೆ ಮಾರಾಟ ಮಾಡಬಹುದು ಎಂಬುದನ್ನು ನಿರ್ಧರಿಸಲು ಸಂಶೋಧನೆಯನ್ನು ಬಳಸಬಹುದು. ಪೀಟರ್ ಡ್ರಕ್ಕರ್ ಅವರು ಮಾರುಕಟ್ಟೆ ಸಂಶೋಧನೆಯು ಮಾರ್ಕೆಟಿಂಗ್‌ನ ಸರ್ವೋತ್ಕೃಷ್ಟತೆ ಎಂದು ನಂಬಿದ್ದರು. ಮಾರುಕಟ್ಟೆ ಸಂಶೋಧನೆಯು ಉತ್ಪಾದಕರು ಮತ್ತು ಮಾರುಕಟ್ಟೆಯು ಗ್ರಾಹಕರನ್ನು ಅಧ್ಯಯನ ಮಾಡುವ ಮತ್ತು ಗ್ರಾಹಕರ ಅಗತ್ಯತೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವ ಒಂದು ಮಾರ್ಗವಾಗಿದೆ. ಮಾರುಕಟ್ಟೆ ಸಂಶೋಧನೆಯಲ್ಲಿ ಎರಡು ಪ್ರಮುಖ ವಿಧಗಳಿವೆ: ಪ್ರಾಥಮಿಕ ಸಂಶೋಧನೆ, ಇದು ಪರಿಮಾಣಾತ್ಮಕ ಮತ್ತು ಗುಣಾತ್ಮಕ ಸಂಶೋಧನೆ ಮತ್ತು ದ್ವಿತೀಯಕ ಸಂಶೋಧನೆಗಳಾಗಿ ಉಪವಿಭಾಗವಾಗಿದೆ.

ಮಾರುಕಟ್ಟೆ ಸಂಶೋಧನೆಯ ಮೂಲಕ ತನಿಖೆ ಮಾಡಬಹುದಾದ ಅಂಶಗಳು ಸೇರಿವೆ:

  • ಮಾರುಕಟ್ಟೆ ಮಾಹಿತಿ: ಮಾರುಕಟ್ಟೆ ಮಾಹಿತಿಯ ಮೂಲಕ ಮಾರುಕಟ್ಟೆಯಲ್ಲಿನ ವಿವಿಧ ಸರಕುಗಳ ಬೆಲೆಗಳು, ಪೂರೈಕೆ ಮತ್ತು ಬೇಡಿಕೆಯ ಪರಿಸ್ಥಿತಿಯನ್ನು ತಿಳಿಯಬಹುದು. ಮಾರುಕಟ್ಟೆ ಸಂಶೋಧಕರು ತಮ್ಮ ಗ್ರಾಹಕರಿಗೆ ಸಾಮಾಜಿಕ, ತಾಂತ್ರಿಕ, ಮತ್ತು ಮಾರುಕಟ್ಟೆಯ ಕಾನೂನು ಅಂಶಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಮೂಲಕ ಹಿಂದೆ ಗುರುತಿಸಿದ್ದಕ್ಕಿಂತ ವಿಶಾಲವಾದ ಪಾತ್ರವನ್ನು ಹೊಂದಿದ್ದಾರೆ.
  • ಮಾರುಕಟ್ಟೆ ವಿಭಜನೆ: ಮಾರುಕಟ್ಟೆ ವಿಭಾಗವು ಮಾರುಕಟ್ಟೆ ಅಥವಾ ಜನಸಂಖ್ಯೆಯನ್ನು ಒಂದೇ ರೀತಿಯ ಪ್ರೇರಣೆಗಳೊಂದಿಗೆ ಉಪಗುಂಪುಗಳಾಗಿ ವಿಭಾಗಿಸುತ್ತದೆ. ಭೌಗೋಳಿಕ ವ್ಯತ್ಯಾಸಗಳು, ಜನಸಂಖ್ಯಾ ವ್ಯತ್ಯಾಸಗಳು (ವಯಸ್ಸು, ಲಿಂಗ, ಜನಾಂಗೀಯತೆ, ಇತ್ಯಾದಿ), ತಾಂತ್ರಿಕ ವ್ಯತ್ಯಾಸಗಳು, ಮಾನಸಿಕ ವ್ಯತ್ಯಾಸಗಳು ಮತ್ತು ಉತ್ಪನ್ನದ ಬಳಕೆಯಲ್ಲಿನ ವ್ಯತ್ಯಾಸಗಳ ಮೇಲೆ ವಿಭಾಗಿಸಲು ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಬಿ೨ಬಿ ಸೆಗ್ಮೆಂಟೇಶನ್ ಫರ್ಮೋಗ್ರಾಫಿಕ್ಸ್ ಅನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.
  • ಮಾರುಕಟ್ಟೆ ಪ್ರವೃತ್ತಿಗಳು: ಮಾರುಕಟ್ಟೆಯ ಪ್ರವೃತ್ತಿಗಳು ಒಂದು ನಿರ್ದಿಷ್ಟ ಅವಧಿಯಲ್ಲಿ ಮಾರುಕಟ್ಟೆಯ ಮೇಲ್ಮುಖ ಅಥವಾ ಕೆಳಮುಖ ಚಲನೆಯಾಗಿದೆ. ಒಂದು ಹೊಸ ಆವಿಷ್ಕಾರದೊಂದಿಗೆ ಪ್ರಾರಂಭಿಸಿದರೆ ಮಾರುಕಟ್ಟೆಯ ಗಾತ್ರವನ್ನು ನಿರ್ಧರಿಸುವುದು ಹೆಚ್ಚು ಕಷ್ಟಕರವಾಗಿರುತ್ತದೆ. ಈ ಸಂದರ್ಭದಲ್ಲಿ ನೀವು ಸಂಭಾವ್ಯ ಗ್ರಾಹಕರ ಸಂಖ್ಯೆ ಅಥವಾ ಗ್ರಾಹಕರ ವಿಭಾಗಗಳಿಂದ ಅಂಕಿಅಂಶಗಳನ್ನು ಪಡೆಯಬೇಕಾಗುತ್ತದೆ.
  • ಎಸ್‌ಡಬ್ಲ್ಯೂ‌ಒಟಿ ವಿಶ್ಲೇಷಣೆ: ಎಸ್‌ಡಬ್ಲ್ಯೂ‌ಒಟಿ ಎನ್ನುವುದು ವ್ಯಾಪಾರ ಘಟಕದ ಸಾಮರ್ಥ್ಯಗಳು, ದೌರ್ಬಲ್ಯಗಳು, ಅವಕಾಶಗಳು ಮತ್ತು ಬೆದರಿಕೆಗಳ ಲಿಖಿತ ವಿಶ್ಲೇಷಣೆಯಾಗಿದೆ. ಮಾರ್ಕೆಟಿಂಗ್ ಮತ್ತು ಉತ್ಪನ್ನ ಮಿಶ್ರಣಗಳನ್ನು ಹೇಗೆ ಅಭಿವೃದ್ಧಿಪಡಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳುವ ಸ್ಪರ್ಧೆಗಾಗಿ ಎಸ್‌ಡಬ್ಲ್ಯೂ‌ಒಟಿ ಅನ್ನು ಸಹ ಬರೆಯಬಹುದು. ಎಸ್‌ಡಬ್ಲ್ಯೂ‌ಒಟಿ ವಿಧಾನವು ತಂತ್ರಗಳನ್ನು ನಿರ್ಧರಿಸಲು ಮತ್ತು ಮರುಮೌಲ್ಯಮಾಪನ ಮಾಡಲು ಹಾಗೂ ವ್ಯವಹಾರದ ಪ್ರಕ್ರಿಯೆಗಳನ್ನು ವಿಶ್ಲೇಷಿಸಲು ಸಹಾಯ ಮಾಡುತ್ತದೆ.
  • ಪಿ‌ಇಎಸ್‌ಟಿ ವಿಶ್ಲೇಷಣೆ: ಪಿ‌ಇಎಸ್‌ಟಿ ಬಾಹ್ಯ ಪರಿಸರದ ಬಗ್ಗೆ ಒಂದು ವಿಶ್ಲೇಷಣೆಯಾಗಿದೆ. ಇದು ಸಂಸ್ಥೆಯ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ತಾಂತ್ರಿಕ ಬಾಹ್ಯ ಅಂಶಗಳ ಸಂಪೂರ್ಣ ಪರೀಕ್ಷೆಯನ್ನು ಒಳಗೊಂಡಿದ್ದು ಇದು ಸಂಸ್ಥೆಯ ಉದ್ದೇಶಗಳು ಅಥವಾ ಲಾಭದಾಯಕತೆಯ ಮೇಲೆ ಪರಿಣಾಮ ಬೀರಬಹುದು. ಅವು ಸಂಸ್ಥೆಗೆ ಲಾಭವಾಗಬಹುದು ಅಥವಾ ಅದರ ಉತ್ಪಾದಕತೆಗೆ ಹಾನಿಯಾಗಬಹುದು.
  • ಬ್ರ್ಯಾಂಡ್ ಹೆಲ್ತ್ ಟ್ರ್ಯಾಕರ್: ಬ್ರ್ಯಾಂಡ್ ಟ್ರ್ಯಾಕಿಂಗ್ ಎನ್ನುವುದು ಬ್ರಾಂಡ್‌ನ ಆರೋಗ್ಯವನ್ನು ನಿರಂತರವಾಗಿ ಅಳೆಯುವ ವಿಧಾನವಾಗಿದೆ. ಬ್ರ್ಯಾಂಡ್ ಜಾಗೃತಿ, ಬ್ರಾಂಡ್ ಇಕ್ವಿಟಿ, ಬ್ರ್ಯಾಂಡ್ ಬಳಕೆ ಮತ್ತು ಬ್ರ್ಯಾಂಡ್ ನಿಷ್ಠೆಯಂತಹ ಹಲವಾರು ವಿಧಾನಗಳಲ್ಲಿ ಬ್ರ್ಯಾಂಡ್ ಆರೋಗ್ಯವನ್ನು ಅಳೆಯಬಹುದು.

ಮಾರ್ಕೆಟಿಂಗ್ ಪರಿಣಾಮಕಾರಿತ್ವ ಅಳೆಯಬಹುದಾದ ಮತ್ತೊಂದು ಅಂಶವೆಂದರೆ :

  • ಜಾಹೀರಾತು ಸಂಶೋಧನೆ
  • ಪ್ರೇಕ್ಷಕರ ಸಂಶೋಧನೆ
  • ಆಯ್ಕೆ ಮಾಡೆಲಿಂಗ್
  • ಸ್ಪರ್ಧಿ ವಿಶ್ಲೇಷಣೆ
  • ಗ್ರಾಹಕರ ವಿಶ್ಲೇಷಣೆ (ಗುರಿ ಗ್ರಾಹಕರ ವಿಭಾಗ)
  • ಮಾರ್ಕೆಟಿಂಗ್ ಮಿಶ್ರಣ ಮಾಡೆಲಿಂಗ್
  • ಉತ್ಪನ್ನ ಸಂಶೋಧನೆ
  • ಅಪಾಯದ ವಿಶ್ಲೇಷಣೆ
  • ಸಿಮ್ಯುಲೇಟೆಡ್ ಟೆಸ್ಟ್ ಮಾರ್ಕೆಟಿಂಗ್

ಮಾರುಕಟ್ಟೆ ಸಂಶೋಧನೆಯ ಪಾತ್ರ[ಬದಲಾಯಿಸಿ]

ಆಡಳಿತ ನಿರ್ವಹಣಾ ವ್ಯವಸ್ಥೆಗೆ ಪ್ರಸ್ತುತವೂ, ನಿಖರವೂ, ವಿಶ್ವಾಸಾರ್ಹವೂ ಮತ್ತು ನ್ಯಾಯ ಸಮ್ಮತವೂ ಆದ ಮಾಹಿತಿಯನ್ನು ಒದಗಿಸುವುದು ಮಾರುಕಟ್ಟೆ ಸಂಶೋಧನೆಯ ಪ್ರಮುಖ ಕೆಲಸ. ಸೂಕ್ತವಲ್ಲದ ನಿರ್ಣಯ ಕೈಗೊಳ್ಳುವುದರಿಂದಾಗಿ, ಸ್ಪರ್ಧಾತ್ಮಕ ಮಾರಾಟಗಾರಿಕೆ ಪರಿಸ್ಥಿತಿಯಲ್ಲಿ ಉತ್ಪಾದನಾ ವೆಚ್ಚ ಏರುಗತಿಯಲ್ಲೇ ಸಾಗುವುದರಿಂದ ಯುಕ್ತ ಮಾಹಿತಿಗಳನ್ನು ಮಾರುಕಟ್ಟೆ ಸಂಶೋಧನೆಯು ಅಗತ್ಯವಾಗಿ ಒದಗಿಸಬೇಕಿದೆ. ಕಚ್ಚೆದೆಯ ಭಾವನೆ, ಅಂತಃಪ್ರಜ್ಞೆ ಅಥವಾ ಕೇವಲ ಪ್ರಾಮಾಣಿಕ ನಿರ್ಧಾರಗಳ ಮೇಲಷ್ಟೇ ಯುಕ್ತ ನಿರ್ಣಯಗಳು ಆಧರಿಸಿರುವುದಿಲ್ಲ.

ಗ್ರಾಹಕರ ಬೇಡಿಕೆಗಳನ್ನು ಗುರುತಿಸುವ ಮತ್ತು ಪೂರೈಸುವ ಪ್ರಕ್ರಿಯೆಯಲ್ಲಿ ಮಾರಾಟ ನಿರ್ವಾಹಕರು ಹಲವಾರು ಭವಿಷ್ಯೋದ್ದೇಶದ ಮತ್ತು ತಂತ್ರೋಪಾಯದ ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ಅವರು ಪ್ರಬಲ ಅವಕಾಶಗಳು, ಉದ್ಧೇಶಿತ ಮಾರುಕಟ್ಟೆ ಅವಕಾಶ, ಮಾರುಕಟ್ಟೆ ವಿಭಜನೆ, ಮಾರಾಟಗಾರಿಕೆ ಆಯ್ಕೆ, ಯೋಜನೆಗಳ ರೂಪಿಸುವುದು ಮತ್ತು ಅವುಗಳನ್ನು ಕಾರ್ಯಾನುಷ್ಠಾನಕ್ಕೆ ಇಳಿಸುವುದು, ಮಾರಾಟಗಾರಿಕೆ ನಿರ್ವಹಣೆ ಮತ್ತು ನಿಯಂತ್ರಣ ಮೊದಲಾದವುಗಳ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಈ ನಿರ್ಣಯಗಳು ಉತ್ಪಾದನೆ, ಬೆಲೆ ನಿರ್ಧಾರ, ಪ್ರಚಾರ ಮತ್ತು ವಿತರಣೆಯ ನಿಯಂತ್ರಿತ ಮಾರುಕಟ್ಟೆ ಅಂಶಗಳ ನಡುವಿನ ಪರಸ್ಪರ ಕ್ರಿಯೆಗಳ ಸಂಕೀರ್ಣವಾಗಿದೆ. ಇನ್ನಷ್ಟು ಜಟಿಲತೆಗಳು ಸಾಮಾನ್ಯ ಅರ್ಥವ್ಯವಸ್ಥೆ, ತಾಂತ್ರಿಕತೆ, ಸಾರ್ವಜನಿಕ ನಿಯಮ ಮತ್ತು ಕಾನೂನುಗಳು, ರಾಜಕೀಯ ಪರಿಸ್ಥಿತಿ, ಸ್ಪರ್ಧೆ ಹಾಗೂ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳಂತಹ ನಿಯಂತ್ರಿಸಲಾಗದ ಅಂಶಗಳಿಂದ ಸೇರಿಸಲ್ಪಡುತ್ತವೆ. ಈ ಮಿಶ್ರಣದಲ್ಲಿನ ಮತ್ತೊಂದು ಅಂಶವೆಂದರೆ ಗ್ರಾಹಕರ ಸಂಕೀರ್ಣತೆ. ವ್ಯಾಪಾರೋದ್ಯಮ ಸಂಶೋಧನೆಯು ಮಾರಾಟಗಾರಿಕೆಯ ಅಂಶಗಳನ್ನು ಪರಿಸ್ಥಿತಿ ಮತ್ತು ಗ್ರಾಹಕರೊಂದಿಗೆ ಸಂಪರ್ಕ ಕಲ್ಪಿಸಲು ಮಾರಾಟಗಾರಿಕೆ ನಿರ್ವಾಹಕರಿಗೆ ಸಹಾಯ ಮಾಡುತ್ತದೆ. ನಿಖರವಾದ ಮಾರಾಟಗಾರಿಕೆಯ ಅಸ್ಥಿರ ಅಂಶಗಳು, ಪರಿಸ್ಥಿತಿ ಮತ್ತು ಗ್ರಾಹಕರ ಬಗೆಗಿನ ಪ್ರಸಕ್ತ ಮಾಹಿತಿಯನ್ನು ಒದಗಿಸುವುದರ ಮ‌ೂಲಕ ಕೆಲವು ಅನಿಶ್ಚಿತತೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮಾರಾಟಗಾರಿಕೆ ಕ್ಷೇತ್ರದಲ್ಲಿ, ಯೋಜನೆಗಳ ಬಗೆಗಿನ ಗ್ರಾಹಕರ ಪ್ರತಿಕ್ರಿಯೆಯನ್ನು ಖಾತರಿಯಾಗಿ ಅಥವಾ ನಿಖರವಾಗಿ ಊಹಿಸುವುದು ಪ್ರಸಕ್ತ ಮಾಹಿತಿಯಿಲ್ಲದೆ ಸಾಧ್ಯವಾಗುವುದಿಲ್ಲ. ಕಾರ್ಯಾಚರಣೆಯಲ್ಲಿರುವ ವ್ಯಾಪಾರೋದ್ಯಮ ಸಂಶೋಧನಾ ಯೋಜನಗೆಳು ನಿಯಂತ್ರಿಸಬಹುದಾದ ಮತ್ತು ನಿಯಂತ್ರಿಸಲಾಗದ ಅಂಶಗಳು ಹಾಗೂ ಗ್ರಾಹಕರ ಬಗೆಗಿನ ಮಾಹಿತಿಯನ್ನು ಒದಗಿಸುತ್ತವೆ; ಈ ಮಾಹಿತಿಯು ಉದ್ಯಮದ ನಿರ್ವಾಹಕರು ತೆಗೆದುಕೊಂಡ ನಿರ್ಧಾರಗಳ ಪರಿಣಾಮವನ್ನು ಹೆಚ್ಚಿಸುತ್ತದೆ.

ಮಾರುಕಟ್ಟೆ ಸಂಶೋಧನೆ ಪ್ರಕಾರಗಳು[ಬದಲಾಯಿಸಿ]

ಈ ಕೆಳಗಿನವನ್ನೂ ಒಳಗೊಂಡಂತೆ ವ್ಯಾಪಾರೋದ್ಯಮ ಸಂಶೋಧನೆಯ ತಂತ್ರಜ್ಞಾನಗಳಲ್ಲಿ ಹಲವಾರು ಪ್ರಕಾರಗಳಿವೆ:

  • ಜಾಹೀರಾತು ಗುರುತಿಸುವಿಕೆ – ಆವರ್ತಕ ಅಥವಾ ನಿರಂತರ ಮಾರುಕಟ್ಟೆಯ ಸಂಶೋಧನೆಯಾಗಿದೆ, ಇದು ಬ್ರ್ಯಾಂಡ್‌ ಅರಿವು, ಬ್ರ್ಯಾಂಡ್‌ ಆದ್ಯತೆ ಮತ್ತು ಉತ್ಪನ್ನದ ಬಳಕೆಯಂತಹ ಮಾಪನಗಳನ್ನು ಬಳಸಿಕೊಂಡು ಬ್ರ್ಯಾಂಡ್‌ನ ನಿರ್ವಹಣೆಯ ಬಗ್ಗೆ ಮೇಲ್ವಿಚಾರಣೆ ನಡೆಸುತ್ತದೆ. (ಯಂಗ್, 2005)
  • ಜಾಹೀರಾತು ಸಂಶೋಧನೆ – ಇದನ್ನು ಜಾಹಿರಾತುಗಳ ಮಾದರಿ ಪರಿಶೀಲನೆ ಅಥವಾ ಯಾವುದೇ ಮಾಧ್ಯಮಕ್ಕೆ ಅದರ ಪರಿಣಾಮವನ್ನು ಗುರುತಿಸಲು ಬಳಸಲಾಗುತ್ತದೆ. ಜನರ ಗಮನವನ್ನು ಸೆಳೆಯಲು, ಸಂದೇಶ ತಿಳಿಸಲು, ಬ್ರ್ಯಾಂಡ್ ಹೆಸರನ್ನು ಬೆಳೆಸಲು ಮತ್ತು ಉತ್ಪನ್ನ ಅಥವಾ ಸೇವೆಯನ್ನು ಕೊಂಡುಕೊಳ್ಳುವಂತೆ ಗ್ರಾಹಕರನ್ನು ಪ್ರಚೋದಿಸಲು ಜಾಹಿರಾತಿಗಿರುವ ಸಾಮರ್ಥ್ಯದ ಆಧಾರದಲ್ಲಿ ಈ ಸಂಶೋಧನೆಯನ್ನು ಮಾಡಲಾಗುತ್ತದೆ. (ಯಂಗ್, 2005)
  • ಬ್ರ್ಯಾಂಡೆಡ್‌ ಸರಕಿನ ಸಂಶೋಧನೆ - ಬ್ರ್ಯಾಂಡ್ ಹೊಂದಿರುವ ಸರಕಿನ ಜೊತೆ ಗ್ರಾಹಕರು ಹೇಗೆ ಅನುಕೂಲವಾಗಿ ಸ್ಪಂದಿಸುತ್ತಾರೆ?
  • ಬ್ರ್ಯಾಂಡ್ ಸಂಬಂಧ ಸಂಶೋಧನೆ - ಗ್ರಾಹಕರು ಬ್ರ್ಯಾಂಡ್‌ನೊಂದಿಗೆ ಸಂಬಂಧ ಕಲ್ಪಿಸಿಕೊಳ್ಳಲು ಏನು ಮಾಡುತ್ತಾರೆ?
  • ಬ್ರ್ಯಾಂಡ್ ಗುಣಲಕ್ಷಣ ಸಂಶೋಧನೆ - ಬ್ರ್ಯಾಂಡ್‌ನ ಭರವಸೆಗಳನ್ನು ವಿವರಿಸುವ ಪ್ರಮುಖ ಲಕ್ಷಣಗಳು ಯಾವುವು?
  • ಬ್ರ್ಯಾಂಡ್ ಹೆಸರಿನ ಪರಿಶೀಲನೆ - ಉತ್ಪನ್ನಗಳಿಗೆ ಇಡಲಾದ ಹೆಸರಿನ ಬಗ್ಗೆ ಗ್ರಾಹಕರಲ್ಲಿ ಉಂಟಾಗುವ ಭಾವನೆಗಳೇನು
  • ವಾಣಿಜ್ಯ ಸ್ವರೂಪೀ ಜಾಡಿನ ಸಂಶೋಧನೆ - ಜಾಹೀರಾತು, ಪ್ಯಾಕೇಜ್ ವಿನ್ಯಾಸ, ವೆಬ್‌ಸೈಟ್‌ ಇತ್ಯಾದಿಗಳಿಗೆ ವೀಕ್ಷಕರ ಗೋಚರ ವರ್ತನಾ ವಿಶ್ಲೇಷಣೆಯ ಪರಿಶೀಲನೆ.
  • ಪರಿಕಲ್ಪನೆಯ ಪರಿಶೀಲನೆ - ಉದ್ಧೇಶಿತ ಗ್ರಾಹಕರಿಂದ ಪರಿಕಲ್ಪನೆಯ ಸ್ವೀಕಾರದ ಪರಿಶೀಲನೆಗಾಗಿ ಇದನ್ನು ಬಳಸಲಾಗುತ್ತದೆ.
  • ಸಾತ್ವಿಕ ಬೇಟೆ(=ಕೂಲ್‌ಹಂಟಿಂಗ್) - ಫ್ಯಾಷನ್, ಸಂಗೀತ, ಚಲನಚಿತ್ರ, ದೂರದರ್ಶನ, ಯುವಜನರ ಸಂಸ್ಕೃತಿ ಮತ್ತು ಜೀವನಶೈಲಿ ಮೊದಲಾದವುಗಳಲ್ಲಿನ ಹೊಸದಾದ ಅಥವಾ ಈಗಾಗಲೇ ಬೇರುಬಿಟ್ಟಿರುವ ಸಾಂಸ್ಕೃತಿಕ ಶೈಲಿಯ ಬದಲಾವಣೆಗಳನ್ನು ಅವಲೋಕಿಸಲು ಮತ್ತು ಭವಿಷ್ಯ ನುಡಿಯಲು ಇದನ್ನು ನಡೆಸಲಾಗುತ್ತದೆ.
  • ಕೊಳ್ಳುಗರ ನಿರ್ಧಾರ ಪ್ರಕ್ರಿಯೆಗಳ ಸಂಶೋಧನೆ - ಕೊಂಡುಕೊಳ್ಳಲು ಜನರನ್ನು ಯಾವುದು ಪ್ರೇರೇಪಿಸುತ್ತದೆ ಹಾಗೂ ಅವರು ಯಾವ ನಿರ್ಧಾರ-ಮಾಡುವ ಪ್ರಕ್ರಿಯೆಯನ್ನು ಬಳಸುತ್ತಾರೆ ಎಂಬುದನ್ನು ಇಲ್ಲಿ ಪರಿಶೀಲನೆಗೆ ಒಳಗಾಗುತ್ತದೆ.
  • ಪೂರ್ವ ಭಾವಿ ಪರಿಶೀಲನೆ – ಇದು ಜಾಹಿರಾತಿನ ಬಗ್ಗೆ ಕೇಳುಗ ವರ್ಗಕ್ಕಿರುವ ಲಕ್ಷ್ಯದ ಮಟ್ಟ, ಬ್ರ್ಯಾಂಡ್ ಸಂಯೋಜನೆ, ಪ್ರೇರಣೆ, ಮನರಂಜನೆ ಮತ್ತು ಸಂವಹನವನ್ನು ಪರಿಶೀಲಿಸುವುದರ ಮ‌ೂಲಕ ಹಾಗೂ ಜಾಹೀರಾತಿನ ಗಮನ ಮತ್ತು ಭಾವನೆಗಳನ್ನು ಭೇದಿಸುವುದರ ಮ‌ೂಲಕ ಮಾರುಕಟ್ಟೆಯಲ್ಲಿ ಜಾಹೀರಾತಿನ ನಿರ್ವಹಣೆಯ ಬಗ್ಗೆ ಅದು ಪ್ರಕಟಗೊಳ್ಳುವ ಮೊದಲೇ ಭವಿಷ್ಯ ನುಡಿಯುತ್ತದೆ. (ಯಂಗ್, ಪುಟ 213)
  • ಗ್ರಾಹಕರನ್ನು ತೃಪ್ತಿಪಡಿಸುವ ಬಗೆಗಿನ ಸಂಶೋಧನೆ - ಇದು ವ್ಯಾಪಾರದಿಂದ ತೃಪ್ತಿಪಟ್ಟ ಗ್ರಾಹಕರ ಬಗ್ಗೆ ತಿಳಿಸುವ ಪರಿಮಾಣಾತ್ಮಕ ಅಥವಾ ಗುಣಾತ್ಮಕ ಅಧ್ಯಯನ.
  • ಬೇಡಿಕೆ ಅಂದಾಜು - ಉತ್ಪನ್ನಕ್ಕಿರುವ ಬೇಡಿಕೆಯ ಸರಿಸುಮಾರು ಮಟ್ಟವನ್ನು ಅಂದಾಜುಮಾಡುತ್ತದೆ.
  • ಹಂಚಿಕೆ ಮಾರ್ಗಗಳ ಪರಿಶೋಧನೆ - ಉತ್ಪನ್ನ, ಬ್ರ್ಯಾಂಡ್ ಅಥವಾ ಕಂಪೆನಿಯೊಂದರ ಬಗೆಗಿನ ಹಂಚಿಕೆದಾರರ ಮತ್ತು ಚಿಲ್ಲರೆ ವ್ಯಾಪಾರಿಗಳ ವರ್ತನೆಯ ಮೌಲ್ಯಮಾಪನ ಮಾಡುತ್ತವೆ.
  • ಇಂಟರ್ನೆಟ್ ತಂತ್ರದಿಂದ ಮಾಹಿತಿ ಸಂಗ್ರಹ - ಚಾಟ್‌, ಫೋರಮ್‌, ವೆಬ್ ಪುಟ, ಬ್ಲಾಗ್‌ ಮೊದಲಾದವುಗಳ ಮ‌ೂಲಕ ಇಂಟರ್ನೆಟ್‌ನಲ್ಲಿ ಗ್ರಾಹಕರ ಅಭಿಪ್ರಾಯಗಳನ್ನು ಹುಡುಕುವುದು. ಇವುಗಳಲ್ಲಿ ಜನರು ಉತ್ಪನ್ನಗಳ ಬಗೆಗಿನ ಅವರ ಅನುಭವಗಳನ್ನು ಸ್ವತಂತ್ರವಾಗಿ ವ್ಯಕ್ತಪಡಿಸುತ್ತಾರೆ, ಈಗ ಇದು "ಅಭಿಪ್ರಾಯ ರೂಪಿಸುವಲ್ಲಿ " ಪ್ರಬಲವಾಗುತ್ತಿವೆ.
  • ವ್ಯಾಪಾರೋದ್ಯಮದ ಪರಿಣಾಮ ಮತ್ತು ವಿಶ್ಲೇಷಣೆ - ಪ್ರತಿಯೊಂದು ಮಾರಾಟಗಾರಿಕೆ ಚಟುವಟಿಕೆಗಳ ಪರಿಣಾಮವನ್ನು ಕಂಡುಹಿಡಿಯಲು ಮಾದರಿಗಳನ್ನು ರೂಪಿಸುವುದು ಮತ್ತು ಫಲಿತಾಂಶಗಳನ್ನು ಅಳೆಯುವುದು.
  • 'ನಿಗೂಢ ಗ್ರಾಹಕ ಅಥವಾ ಗುಪ್ತ ವ್ಯಾಪಾರ' - ವ್ಯಾಪಾರೋದ್ಯಮ ಸಂಶೋಧನೆ ಸಂಸ್ಥೆಯ ಉದ್ಯೋಗಿ ಅಥವಾ ಪ್ರತಿನಿಧಿಯು ಮಾರಾಟಗಾರನನ್ನು ಭೇಟಿಯಾಗುವ ಅವನು ಅಥವಾ ಅವಳು ಉತ್ಪನ್ನಕ್ಕಾಗಿ ವ್ಯಾಪಾರ ಮಾಡುವುದನ್ನು ಗುರುತಿಸುತ್ತಾನೆ. ಈ ಸಂದರ್ಭದಲ್ಲಿ ಸಂಸ್ಥೆಯ ವ್ಯಕ್ತಿ ಅನಾಮಿಕನಾ/ಳಾಗಿ ಉಳಿದು ಬಿಡುತ್ತಾನೆ. ನಂತರ ಮಾರಾಟಗಾರ ತನ್ನ ಸಂಪೂರ್ಣ ಅನುಭವವನ್ನು ದಾಖಲಿಸುತ್ತಾನೆ. ಈ ವಿಧಾನವನ್ನು ಗುಣಮಟ್ಟ ನಿಯಂತ್ರಣಕ್ಕಾಗಿ ಅಥವಾ ಸ್ಪರ್ಧಾತ್ಮಕ ಉತ್ಪನ್ನಗಳ ಬಗ್ಗೆ ಸಂಶೋಧನೆ ಮಾಡುವುದಕ್ಕಾಗಿ ಬಳಸಲಾಗುತ್ತದೆ.
  • ನಿಲುವಿನ ಸಂಶೋಧನೆ - ಸ್ಪರ್ಧಿಗಳಿಗೆ ಸಂಬಂಧಿತ ಬ್ರ್ಯಾಂಡ್‌ಗಳನ್ನು ಉದ್ಧೇಶಿತ ಮಾರುಕಟ್ಟೆಯು ಹೇಗೆ ನೋಡುತ್ತದೆ? - ಬ್ರ್ಯಾಂಡ್‌ನ ಉದ್ಧೇಶವೇನು?
  • ಬೆಲೆಯ ಸ್ಥಿತಿಸ್ಥಾಪಕ ಗುಣದ ಪರಿಶೀಲನೆ - ಬೆಲೆ ಬದಲಾವಣೆಗಳಿಗೆ ಗ್ರಾಹಕರು ಎಷ್ಟು ಸೂಕ್ಷ್ಮ ಗ್ರಾಹಿಯಾಗಿರುತ್ತಾರೆ ಎಂಬುದನ್ನು ಪತ್ತೆ ಮಾಡುತ್ತದೆ.
  • ಮಾರಾಟದ ಬಗ್ಗೆ ಮೊದಲೇ ಅಂದಾಜು ಮಾಡುವಿಕೆ - ಇದು ಬೇಡಿಕೆಯ ಆಧಾರದಲ್ಲಿ ಮಾರಾಟದ ನಿರೀಕ್ಷಿತ ಮಟ್ಟವನ್ನು ಅಂದಾಜು ಮಾಡುತ್ತದೆ. ಜಾಹೀರಾತಿನ ಮತ್ತು ಮಾರಾಟ ಪ್ರಚಾರದ ಖರ್ಚುವೆಚ್ಚ ಇತ್ಯಾದಿ ಇತರ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಇದನ್ನು ಮಾಡಲಾಗುತ್ತದೆ.
  • ವಿಭಾಗೀಯ ಸಂಶೋಧನೆ - ಜನಸಂದಣಿ, ಮನಃಶಾಸ್ತ್ರ ಮತ್ತು ಪ್ರಬಲ ಕೊಳ್ಳುಗರ ವರ್ತನೆಯ ಗುಣಲಕ್ಷಣಗಳನ್ನು ಇದು ನಿರ್ಧರಿಸುತ್ತದೆ.
  • ಆನ್‌ಲೈನ್ ತಂಡ - ವ್ಯಾಪಾರೋದ್ಯಮ ಸಂಶೋಧನೆಯ ಬಗ್ಗೆ ಆನ್‌ಲೈನ್‌ನಲ್ಲಿ ಪ್ರತಿಕ್ರಿಯಿಸಲು ಒಪ್ಪಿಕೊಂಡ ವ್ಯಕ್ತಿಗಳ ಗುಂಪು
  • ಉಗ್ರಾಣ ಪರಿಶೀಲನೆ - ಮಾರುಕಟ್ಟೆ ಪಾಲನ್ನು ಕಂಡುಹಿಡಿಯಲು ಅಥವಾ ಬಿಡಿಮಾರಾಟ ಸಮರ್ಪಕವಾಗಿ ಸೇವೆ ಸಲ್ಲಿಸುತ್ತಿದೆಯೇ ಎಂಬುದನ್ನು ದೃಢೀಕರಿಸಲು ಆಯ್ದ ಅಂಗಡಿಗಳ ಸಂಗ್ರಹಿಸಲ್ಪಟ್ಟ ಮಾದರಿಯನ್ನು ಅಂಕಿಸಂಖ್ಯೆಗೆ ಒಳಪಡಿಸಿ ಇದು ಉತ್ಪನ್ನದ ಮಾರಾಟ ಅಥವಾ ಉತ್ಪನ್ನದ ರೂಪರೇಖೆಯನ್ನು ಅಳತೆ ಮಾಡುತ್ತದೆ.
  • ಪರೀಕ್ಷಾರ್ಥ ಮಾರಾಟ - ಉತ್ಪನ್ನವನ್ನು ವ್ಯಾಪಕ ಮಾರುಕಟ್ಟೆಗೆ ಪರಿಚಯಿಸಿದಾಗ ಅದರ ಸ್ವೀಕಾರ ಹೇಗಿರುತ್ತದೆ ಎಂಬುದನ್ನು ಕಂಡುಹಿಡಿಯಲು ಬಳಸುವ ಸಣ್ಣ-ಪ್ರಮಾಣದಲ್ಲಿ ಉತ್ಪನ್ನದ ಬಿಡುಗಡೆ
  • ಸೂಕ್ಷ್ಮ ವ್ಯಾಪಾರೋದ್ಯಮ ಸಂಶೋಧನೆ - ಇದು ಪ್ರತಿಯೊಬ್ಬರ ಸಾಮಾಜಿಕ ನೆಟ್‌ವರ್ಕ್‌ಗೆ ಸಾಗಿಸುವ ನಿರ್ದಿಷ್ಟ ಸಂವಹನಗಳ ಅಂದಾಜು ಮಾಡುವಿಕೆಯನ್ನು ನಿರೂಪಿಸುವ ವ್ಯಾಪಾರೋದ್ಯಮ ಸಂಶೋಧನೆಯಾಗಿದೆ. ಸೋಷಿಯಲ್ ನೆಟ್‌ವರ್ಕಿಂಗ್ ಪೊಟೆನ್ಶಿಯಲ್ ‌ನ (SNP) ಅಂದಾಜನ್ನು ಮಾರಾಟದ ಪರಿಣಾಮದೊಂದಿಗೆ ಸಂದೇಶ ಮತ್ತು ಮಾಧ್ಯಮದ ನಿರ್ದಿಷ್ಟ ಸಂಯೋಜನೆಯಲ್ಲಿ ROI ಅನ್ನು ಅಂದಾಜು ಮಾಡಲು, ಸೇರಿಸಲಾಗುತ್ತದೆ.

ಈ ಎಲ್ಲಾ ರೀತಿಯ ವ್ಯಾಪಾರೋದ್ಯಮ ಸಂಶೋಧನೆಯನ್ನು ಸಮಸ್ಯೆ-ಪತ್ತೆ ಸಂಶೋಧನೆ ಅಥವಾ ಸಮಸ್ಯೆ-ಪರಿಹಾರ ಸಂಶೋಧನೆ ಎಂಬುದಾಗಿ ವರ್ಗೀಕರಿಸಬಹುದು.

ಉಲ್ಲೇಖ[ಬದಲಾಯಿಸಿ]

https://en.m.wikipedia.org/wiki/Market_research https://blog.hubspot.com › marketing How to Do Market Research: A 6-Step Guide - HubSpot Blog