ವಿಷಯಕ್ಕೆ ಹೋಗು

ಸದಸ್ಯ:Abhinethri/ಅಂಜಲೈ ಅಮ್ಮಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

 

ಅಂಜಲೈ ಅಮ್ಮಲ್ ಅವರು ತಮಿಳುನಾಡಿನ ಕಡಲೂರಿನ ಸಮಾಜ ಸೇವಕಿ ಮತ್ತು ಸುಧಾರಕರಾಗಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಆಕೆ ಏಳೂವರೆ ವರ್ಷ ಜೈಲಿನಲ್ಲಿದ್ದರು.೧೯೩೭ಮತ್ತು ೧೯೪೬ರಲ್ಲಿ ತಮ್ಮ ಚುನಾವಣಾ ಗೆಲುವಿನ ನಂತರ ಕಾಂಗ್ರೆಸ್ ಶಾಸಕರಾಗಿ ಸೇವೆ ಸಲ್ಲಿಸಿದ್ದ ಅವರು ತಮಿಳುನಾಡು ರಾಜ್ಯ ಶಾಸಕಾಂಗಕ್ಕೆ ಆಯ್ಕೆಯಾದ ಆರಂಭಿಕ ಮಹಿಳೆಯರಲ್ಲಿ ಒಬ್ಬರಾಗಿದ್ದರು.[೧]

ಜೀವನಚರಿತ್ರೆ[ಬದಲಾಯಿಸಿ]

ಅವರು ೧೯೩೧ ರಲ್ಲಿ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ ರಾಜಕೀಯ ಚಟುವಟಿಕೆಯನ್ನು ಪ್ರಾರಂಭಿಸಿದರು ಮತ್ತು ನೀಲ್ ಪ್ರತಿಮೆ ಸತ್ಯಾಗ್ರಹ, ಉಪ್ಪು ಸತ್ಯಾಗ್ರಹ ಮತ್ತು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದರು. ಆಕೆಯ ಧೈರ್ಯ ಎಷ್ಟು ಪ್ರಸಿದ್ಧವಾಗಿತ್ತೆಂದರೆ ಮಹಾತ್ಮ ಗಾಂಧಿ ಆಕೆಯನ್ನು "ದಕ್ಷಿಣ ಭಾರತದ ಝಾನ್ಸಿ ರಾಣಿ" ಎಂದು ಕರೆದರು. ಗಾಂಧಿಯವರು ಅಂಜಲೈ ಅಮ್ಮಲ್ ಅವರನ್ನು ಭೇಟಿಯಾಗಲು ಕಡಲೂರುಗೆ ಬಂದಾಗ, ಬ್ರಿಟಿಷ್ ಸರ್ಕಾರವು ಅವರು ಭೇಟಿಯಾಗುವುದನ್ನು ನಿಷೇಧಿಸಿತು. ಆದರೆ ಅಂಜಲೈ ಅಮ್ಮಲ್ ಬುರ್ಖಾ ಧರಿಸಿ ಅವರನ್ನು ಭೇಟಿಯಾಗುವಲ್ಲಿ ಯಶಸ್ವಿಯಾದರು. ಆಕೆ ತನ್ನ ಒಂಬತ್ತು ವರ್ಷದ ಮಗಳನ್ನು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದರು, ಆಕೆಗೆ ಸ್ವತಃ ಗಾಂಧೀಜಿಯವರು ಲೀಲಾವತಿ ಎಂದು ಹೆಸರಿಟ್ಟರು.

ಅಂಜಲೈ ಅಮ್ಮಲ್ ಅವರ ಮೊಮ್ಮಗಳು ಮಂಗೈ ಎ, ಇವರು "ನನ್ನ ಅಜ್ಜಿ, ಅಂಜಲೈ ಅಮ್ಮಾಲ್ ನಾಲ್ಕೂವರೆ ವರ್ಷಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿದ್ದರು ಮತ್ತು ಅವರು ಜೈಲಿನಲ್ಲಿ ತಮ್ಮ ಕೊನೆಯ ಮಗನಿಗೆ ಜನ್ಮ ನೀಡಿದರು. ಅವರ ಜೀವನಚರಿತ್ರೆ 8ನೇ ತರಗತಿಯ ಎರಡನೇ ಸೆಮಿಸ್ಟರ್ ತಮಿಳು ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ. ನನ್ನ ಅಜ್ಜ, ಮುರುಗಪ್ಪ, ನನ್ನ ತಾಯಿಯ ಚಿಕ್ಕಮ್ಮ ಲೀಲಾವತಿ ಮತ್ತು ಅವರ ಪತಿ ಜಮಧಗ್ನಿ ಕೂಡ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು",ಎಂದು ವಿವರಿಸುತ್ತಾರೆ.

೧೯೩೦ ರಲ್ಲಿ, ವಿದೇಶಿ ಸರಕುಗಳ ವಿರುದ್ಧ ಪ್ರತಿಭಟಿಸಲು ಮದ್ರಾಸಿನ ಗೋಡೌನ್ ಸ್ಟ್ರೀಟ್‌ನಲ್ಲಿ ಅಂಗಡಿಗಳನ್ನು ಮುತ್ತಿಗೆ ಹಾಕಿದ್ದರು.ಆಗ ಅಂಜಲೈ ಅಮ್ಮಲ್ ಅವರನ್ನು ಬಂಧಿಸಲಾಯಿತು.. ನ್ಯಾಯಾಲಯದಲ್ಲಿ ತನ್ನ ವಿಚಾರಣೆಯಲ್ಲಿ, ಆಕೆ ತಪ್ಪನ್ನು ನಿರಾಕರಿಸಿ ತನ್ನನ್ನು ಸಮರ್ಥಿಸಿಕೊಂಡಳು ಹಾಗೂ ಪೊಲೀಸರು ಪ್ರತಿಭಟನಾಕಾರರನ್ನು ಕಠಿಣವಾಗಿ ನಡೆಸಿಕೊಂಡಿದ್ದಾರೆ ಎಂದು ಆರೋಪಿಸದಳು. [೨]

೧೯೩೧ರಲ್ಲಿ ಅವರು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.೧೯೩೨ರಲ್ಲಿ, ಆಕೆ ಮತ್ತೊಂದು ಹೋರಾಟದಲ್ಲಿ ಭಾಗವಹಿಸಿದರು, ಇದಕ್ಕಾಗಿ ಆಕೆಯನ್ನು ವೆಲ್ಲೂರು ಜೈಲಿಗೆ ಕಳುಹಿಸಲಾಯಿತು. ವೆಲ್ಲೂರು ಜೈಲಿಗೆ ಕಳುಹಿಸಿದಾಗ ಆಕೆ ಗರ್ಭಿಣಿಯಾಗಿದ್ದಳು. ಹೆರಿಗೆಯ ಕಾರಣದಿಂದಾಗಿ ಆಕೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಆಕೆಯ ಮಗ ಜನಿಸಿದ ಎರಡು ವಾರಗಳೊಳಗೆ ಆಕೆಯನ್ನು ವೆಲ್ಲೂರು ಜೈಲಿಗೆ ಕಳುಹಿಸಲಾಯಿತು.[೩] ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ, ಅವರು ಮೂರು ಬಾರಿ ತಮಿಳುನಾಡು ವಿಧಾನಸಭೆ ಸದಸ್ಯರಾಗಿ ಆಯ್ಕೆಯಾದರು.

ಆಕೆ೧೯೬೧ ರ ಫೆಬ್ರವರಿ೨೦ರಂದು ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]

  1. Varadhan, Narasimha (10 November 2022). "A freedom fighter from Tamil Nadu who ought to be remembered more". The Hindu.
  2. Varadhan, Narasimha (10 November 2022). "A freedom fighter from Tamil Nadu who ought to be remembered more". The Hindu.Varadhan, Narasimha (10 November 2022). "A freedom fighter from Tamil Nadu who ought to be remembered more". The Hindu.
  3. "Honour first woman MLA". thehindu.com. 10 December 2014. Archived from the original on 17 May 2022.