ವಿಷಯಕ್ಕೆ ಹೋಗು

ಸದಸ್ಯ:Anjali 1940569

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ

ನನ್ನ ಹೆಸರು ಅಂಜಲಿ, ನಾನು ಹುಟ್ಟಿದ್ದು ಬೆಂಗಳೂರು.ನನ್ನ ತಂದೆಯ ಹೆಸರು ವಿ ಚಲಪತಿ ಹಾಗೂ ತಾಯಿ ಎಲ್ ಭಾರತಿ .ನಾನು ಹುಟ್ಟಿದ್ದು ಸೆಪ್ಟೆಂಬರ್ 24 2001 ನಾನು ನನ್ನ ಬಾಲ್ಯದ ವಿದ್ಯಾಭ್ಯಾಸವನ್ನು ನವೀನ ವಿದ್ಯಾಕೇಂದ್ರದಲ್ಲಿ ಮುಗಿಸಿದೆ ಅನಂತರ ಪ್ರಾರ್ಥಮಿಕ ಹಾಗೂ ಹಿರಿಯ ಪ್ರಾರ್ಥಮಿಕ ಶಿಕ್ಷಣವನ್ನು ಕಿಶೋರ ವಿದ್ಯಾಭವನದಲ್ಲಿ ಮುಗಿಸಿದೆ ,ಅನಂತರ ನಾನು ಮೊದಲನೇ ವರ್ಷದ ಪಿಯುಸಿಯನ್ನು ವೆಂಕಟಾದ್ರಿ ಇಂಡಿಪೆಂಡೆಂಟ್ ಪಿಯು ಕಾಲೇಜಿನಲ್ಲಿ ಮುಗಿಸಿ ಆನಂತರ ನಾನು ದ್ವಿತೀಯ ಪಿಯುಸಿಗೆ ಡಿ ಆರ್ ಅಕಾಡೆಮಿ ಕಾಲೇಜಿಗೆ ಬಂದೆ ,ಇದು ಬೆಂಗಳೂರಿನಲ್ಲಿ ಇದೆ .

ವಿದ್ಯಾಭ್ಯಾಸ

ನನಗೆ ಹತ್ತನೆಯ ತರಗತಿಯಲ್ಲಿ 94 ಪರ್ಸೆಂಟ್ ಬಂದಿದೆ ಹಾಗೂ ದ್ವಿತೀ ಪಿಯುಸಿನಲ್ಲಿ 87 ಪರ್ಸೆಂಟ್ ಬಂದಿದೆ . ಹೀಗೆ ನಾನು ನನ್ನ ವಿದ್ಯಾಭ್ಯಾಸವನ್ನು ಮುಗಿಸಿದೆ ,ನಾನು ದ್ವಿತೀಯ ಪಿಯುಸಿಗೆ ಬೆಂಗಳೂರಿಗೆ ಬಂದಾಗ, ನಾನು ಹಾಸ್ಟೆಲ್ ನಲ್ಲಿ ಇದ್ದೆ ಅಲ್ಲಿ ಬಹಳ ರಾಜ್ಯಗಳಿಂದ ವಿದ್ಯಾರ್ಥಿಗಳು ಬಂದಿದ್ದರು ಒಬ್ಬೊಬ್ಬರದು ಒಂದೊಂದು ರೀತಿಯ ಕಳೆಯಿತು ಈ ಒಂದು ವರ್ಷ ಬೆಂಗಳೂರಿಗೆ ಬಂದು ನಾನು ಬಹಳಷ್ಟು ಕಲಿತೆ, ಬರೀ ವಿದಯಾರ್ಥಿಗಳಿಂದಲೇ ಅಲ್ಲ ಅಲ್ಲಿನ ಶಿಕ್ಷಕರಿಂದಲೂ ಬಹಳಷ್ಟು ಕಲಿತೆ ಅಲ್ಲಿ ನಮಗೆ ಜೀವಶಾಸ್ತ್ರಕ್ಕೆ ಒಬ್ಬ ಶಿಕ್ಷಕರು ಬರುತ್ತಿದ್ದರು ಅವರು ಮಾಡುವ ಪಾಠದ ಶೈಲಿಯಿಂದ ನನಗೆ ಜೀವಶಾಸ್ತ್ರದ ಮೇಲೆ ಇನ್ನಷ್ಟು ಆಸಕ್ತಿ ಮೂಡಿತು . ಹೀಗಾಗಿ ನಾನು ಜೀವಶಾಸ್ತ್ರದ ಬಗ್ಗೆ ಇನ್ನಷ್ಟು ತಿಳಿಯ ಬೇಕೆಂದು ನಿರ್ಧರಿಸಿದೆ .

ಕಾಲೇಜಿನ ದಿನಗಳು

ಇದಾದ ನಂತರ ನಾನು ನನ್ನ ಡಿಗ್ರಿಯನ್ನು ಮುಗಿಸಲು ಬೆಂಗಳೂರಿಗೆ ಬಂದೆ, ಅಲ್ಲ ಕ್ರೈಸ್ಟ ಯೂನಿವರ್ಸಿಟಿಯಲ್ಲಿ ಸೇರಿಕೊಂಡೆ .ಈಗ ನಾನು ಮೊದಲನೇ ವರ್ಷದ cbz ಕೋರ್ಸ್ನಲ್ಲಿ ಸೇರಿಕೊಂಡಿದ್ದೇನೆ. ನನಗೆ ಜೀವಶಾಸ್ತ್ರದ ಮೇಲೆ ಬಹಳ ಇಷ್ಟ ವಿರುವುದರಿಂದ ನಾನು ಈ ಕೋರ್ಸನ್ನು ಆಯ್ಕೆ ಮಾಡಿಕೊಂಡೆ. ಕ್ರೈಸ್ಟ್ ಯೂನಿವರ್ಸಿಟಿ ದಕ್ಷಿಣ ಭಾರತದಲ್ಲಿ ಅತಿ ಪ್ರತಿಷ್ಠ ವಾದ ಯೂನಿವರ್ಸಿಟಿ ಎಂದು ಹೇಳಬಹುದು.ಈ ಯೂನಿವರ್ಸಿಟಿಯಲ್ಲಿ ವಿಶೇಷವೆಂದರೆ ಇದರ ಆಚಾರ-ವಿಚಾರಗಳು , ಇವರು ನಮ್ಮ ಸಂಪ್ರದಾಯವನ್ನು ಉಳಿಸುವುದರಲ್ಲಿ ಬಹಳ ಪ್ರಯತ್ನ ಮಾಡುತ್ತಾರೆ .ಇಲ್ಲಿ ಬಹಳಷ್ಟು ಕಾರ್ಯಕ್ರಮಗಳು ಚಟುವಟಿಕೆಗಳು ನಡೆಯುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗೂ ಬಹಳ ಅವಕಾಶಗಳು ಇರುತ್ತದೆ ಇದನ್ನು ಉಪಯೋಗಿಸಿಕೊಂಡರೆ ಅವರಿಗೆ ಜೀವನದಲ್ಲಿ ಯಶಸ್ವಿಯಾಗಬಹುದು.

ಈ ಯೂನಿವರ್ಸಿಟಿಗೆ ಭಾರತದ ಎಲ್ಲಾ ರಾಜ್ಯಗಳಿಂದಲೂ ಹಾಗೂ ವಿದೇಶದಿಂದಲೂ ವಿದ್ಯಾರ್ಥಿಗಳು ಬರುತ್ತಾರೆ. ಇಲ್ಲಿದೆ ವಿಶೇಷವೇನೆಂದರೆ ಇಲ್ಲಿನ ಶಿಕ್ಷಕರು ಮಕ್ಕಳ ಜೊತೆ ಸ್ನೇಹದಿಂದ ಬೆರೆಯುತ್ತಾರೆ ಹಾಗೂ ಪಾಠವನ್ನು ಶಿಸ್ತಿನಿಂದ ಹೇಳಿಕೊಡುತ್ತಾರೆ . ನನಗೆ ಜೀವಶಾಸ್ತ್ರದ ಮೇಲೆ ಬಹಳಷ್ಟು ಕುತೂಹಲ ವಿರುವುದರಿಂದ ನಾನು ಈ ಕೋರ್ಸನ್ನು ಆಯ್ಕೆ ಮಾಡಿಕೊಂಡೆ. ನನಗೆ ಜೀವಶಾಸ್ತ್ರದ ಬಗ್ಗೆ ತಿಳಿಯಲು ಬಹಳಷ್ಟು ಕುತೂಹಲ ಏಕೆಂದರೆ ಇದರಲ್ಲಿ ಪರಿಸರ ,ಜೀವಿಗಳ ಬಗ್ಗೆ ಹೇಳಿಕೊಡುತ್ತಾರೆ . ಇದನ್ನು ತಿಳಿದುಕೊಂಡು ನಾನು ಮುಂದೆ ರಿಸರ್ಚ್ ಫೀಲ್ಡಿಗೆ ಹೋಗಬೇಕೆಂದು ನಿರ್ಧರಿಸಿದ್ದೇನೆ. ಅಂದರೆ ನಾನು ನನ್ನ ಬಿಎಸ್ಸಿ ಯನ್ನು ಮುಗಿಸಿ ಅನಂತರ ಎಂಎಸ್ಸಿ ಮಾಡುತ್ತೇನೆ thumb|bangalore ,

ಬೆಂಗಳೂರು

.ಬೆಂಗಳೂರು ನಗರವು ಕ್ರಿ.ಶ.1537ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಾಣವಾಯಿತು. ಇದು ದಕ್ಷಿಣ ಪ್ರಸ್ಥಭೂಮಿಯ ಮೇಲಿದ್ದು, ಕರ್ನಾಟಕದ ಆಗ್ನೇಯ ದಿಕ್ಕಿನಲ್ಲಿದೆ. ಭಾರತದ ೫ನೇ ದೊಡ್ಡ ಮಹಾನಗರವಾಗಿರುವ ಬೆಂಗಳೂರು ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ೩ನೇ ಸ್ಥಾನದಲ್ಲಿದೆ. ಜಗತ್ತಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಮಹತ್ತರವಾದ ಕಾಣಿಕೆ ನೀಡುತ್ತಾ ಬಂದಿರುವ ಕಾರಣ ಬೆಂಗಳೂರು ವಿಶ್ವಾದ್ಯಂತ ಭಾರತದ 'ಸಿಲಿಕಾನ್ ವ್ಯಾಲಿ' ಎಂದೇ ಪ್ರಸಿದ್ಧ. ಸಮುದ್ರ ಮಟ್ಟದಿಂದ ಸುಮಾರು ೩೦೦೦ ಅಡಿ (೯೧೪.೪ ಮೀ)ಗಳಿಗಿಂತ ಎತ್ತರದಲ್ಲಿರುವ ಬೆಂಗಳೂರು ನಗರವು ವರ್ಷವಿಡೀ ಆಹ್ಲಾದಕರ ವಾತಾವರಣ ಹೊಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೆರೆಗಳನ್ನು ಹೊಂದಿದೆ. 'ಕಬ್ಬನ್ ಪಾರ್ಕ್', 'ಲಾಲ್ ಬಾಗ್'ಗಳಂತಹ ದೊಡ್ಡ ಉದ್ಯಾನವನಗಳನ್ನು ಹೊಂದಿರುವ ಈ ನಗರವು 'ಉದ್ಯಾನ ನಗರಿ' ಎಂದೂ ಪ್ರಸಿದ್ಧ. ವಿಶ್ವದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳ ಅಚ್ಚುಮೆಚ್ಚಿನ ೧೦ ನಗರಗಳಲ್ಲಿ ಬೆಂಗಳೂರು ಕೂಡ ಒಂದು.

ಬೆಂಗಳೂರು ಸಮುದ್ರ ಮಟ್ಟ ದಿಂದ ೯೦೦ ಮೀ ಎತ್ತರದಲ್ಲಿದೆ[೧]. ಭೌಗೋಳಿಕವಾಗಿ ೧೨° ೩೯' ಉ ಹಾಗೂ ೧೩° ಉ ಅಕ್ಷಾಂಶದಲ್ಲಿದ್ದರೂ ಕೂಡ ಬೆಂಗಳೂರಿನಲ್ಲಿ ಸದಾಕಾಲ ತಂಪು ವಾತಾವರಣವಿರುವುದು, ಸುಮಾರು ೨೪°C ರಿಂದ ೩೫°C ರವರೆಗೆ ಉಷ್ಣಾಂಶವಿರುವುದು. ಸದಾಶಿವನಗರದ ರಮಣಶ್ರೀ ಪಾರ್ಕ್ ಬೆಂಗಳೂರಿನ ಅತೀ ಎತ್ತರದ ಪ್ರದೇಶವಾಗಿದೆ. ಈ ಮೊದಲು ಮಲ್ಲೇಶ್ವರದ ವಯ್ಯಾಲಿ ಕಾವಲ್ ಎತ್ತರದ ಪ್ರದೇಶವಾಗಿತ್ತು. ಬೆಂಗಳೂರಿನ ಹೊಸಕೆರೆಹಳ್ಳಿ ಅತಿ ತಗ್ಗಿನ ಪ್ರದೇಶವಾಗಿ ವಿಧಾನಸೌಧವು ಕರ್ನಾಟಕದ ವಿಧಾನ ಮಂಡಲದ ಸಭೆ ನಡೆಯುವ ಕಟ್ಟಡ [೧].ಇದರ ನಿರ್ಮಾಣವು ಮಾಜಿಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಆಡಳಿತದ ಅವಧಿಯಲ್ಲಿ ನಿರ್ಮಾಣವಾಯಿತು. ವಿಧಾನಸೌಧಕ್ಕೆ 1951 ಜುಲೈ 13ರಂದು ಅಂದಿನ ಪ್ರಧಾನಿಯಾಗಿದ್ದ ಜವಾಹರಲಾಲ್‌ ನೆಹರು ಶಂಕುಸ್ಥಾಪನೆ ಮಾಡಿದರು. ೧೯೫೨ರಲ್ಲಿ ಪ್ರಾರಂಭವಾದ ಕಟ್ಟಡ ನಿರ್ಮಾಣ ಕಾರ್ಯವು ಪೂರ್ಣಗೊಳ್ಳಲು ನಾಲ್ಕು ವರ್ಷಗಳಾದವು. ೫೦೦೦ಕ್ಕೂ ಹೆಚ್ಚು ಕೆಲಸಗಾರರು ಈ ಕಟ್ಟಡ ನಿರ್ಮಾಣದಲ್ಲಿ ಪಾಲ್ಗೊಂಡಿದ್ದರು. ರಾಜ್ಯ ಸಾರ್ವಜನಿಕ ಕಾರ್ಯಗಳ ಇಲಾಖೆಯಲ್ಲಿ ಮುಖ್ಯ ಎಂಜಿನಿಯರ್‌ ಹಾಗೂ ವಾಸ್ತುಶಿಲ್ಪಿಯಾಗಿದ್ದ ಮಾಣಿಕ್ಯಂ ಕಟ್ಟಡ ನಿರ್ಮಾಣದ ಉಸ್ತುವಾರಿ ನೋಡಿಕೊಂಡರು. ಇದರ ವಾಸ್ತುಶಿಲ್ಪವು ಮೈಸೂರು ದ್ರಾವಿಡ ಶೈಲಿ ಎಂದು ಕೆಲವರು ಕರೆಯುತ್ತಾರೆ.[೨]. ಈ ಕಟ್ಟಡದ ವಾಸ್ತುಶೈಲಿಯಲ್ಲಿ ಇಂಡೋ ಸಾರ್ಸೆನಿಕ್ ಮತ್ತು ದ್ರಾವಿಡ ಶೈಲಿಯ ಹಲವಾರು ಅಂಶಗಳು ಆಡಕವಾಗಿದೆ.[೩] ಕರ್ನಾಟಕದ ಗೆಜೆಟ್‌ ಪ್ರಕಾರ ಅಂದು ವಿಧಾನಸೌಧ ಕಟ್ಟಲು ತಗುಲಿದ ವೆಚ್ಚ ₹ 1.75ಕೋಟಿ


ವಿಧಾನ ಸೌಧ

ವಿಧಾನಸೌಧವು ಕರ್ನಾಟಕದ ವಿಧಾನ ಮಂಡಲದ ಸಭೆ ನಡೆಯುವ ಕಟ್ಟಡ [೧].ಇದರ ನಿರ್ಮಾಣವು ಮಾಜಿಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಆಡಳಿತದ ಅವಧಿಯಲ್ಲಿ ನಿರ್ಮಾಣವಾಯಿತು. ವಿಧಾನಸೌಧಕ್ಕೆ 1951 ಜುಲೈ 13ರಂದು ಅಂದಿನ ಪ್ರಧಾನಿಯಾಗಿದ್ದ ಜವಾಹರಲಾಲ್‌ ನೆಹರು ಶಂಕುಸ್ಥಾಪನೆ ಮಾಡಿದರು. ೧೯೫೨ರಲ್ಲಿ ಪ್ರಾರಂಭವಾದ ಕಟ್ಟಡ ನಿರ್ಮಾಣ ಕಾರ್ಯವು ಪೂರ್ಣಗೊಳ್ಳಲು ನಾಲ್ಕು ವರ್ಷಗಳಾದವು. ೫೦೦೦ಕ್ಕೂ ಹೆಚ್ಚು ಕೆಲಸಗಾರರು ಈ ಕಟ್ಟಡ ನಿರ್ಮಾಣದಲ್ಲಿ ಪಾಲ್ಗೊಂಡಿದ್ದರು. ರಾಜ್ಯ ಸಾರ್ವಜನಿಕ ಕಾರ್ಯಗಳ ಇಲಾಖೆಯಲ್ಲಿ ಮುಖ್ಯ ಎಂಜಿನಿಯರ್‌ ಹಾಗೂ ವಾಸ್ತುಶಿಲ್ಪಿಯಾಗಿದ್ದ ಮಾಣಿಕ್ಯಂ ಕಟ್ಟಡ ನಿರ್ಮಾಣದ ಉಸ್ತುವಾರಿ ನೋಡಿಕೊಂಡರು. ಇದರ ವಾಸ್ತುಶಿಲ್ಪವು ಮೈಸೂರು ದ್ರಾವಿಡ ಶೈಲಿ ಎಂದು ಕೆಲವರು ಕರೆಯುತ್ತಾರೆ.[೨].

ಈ ಕಟ್ಟಡದ ವಾಸ್ತುಶೈಲಿಯಲ್ಲಿ ಇಂಡೋ ಸಾರ್ಸೆನಿಕ್ ಮತ್ತು ದ್ರಾವಿಡ ಶೈಲಿಯ ಹಲವಾರು ಅಂಶಗಳು ಆಡಕವಾಗಿದೆ.[೩] ಕರ್ನಾಟಕದ ಗೆಜೆಟ್‌ ಪ್ರಕಾರ ಅಂದು ವಿಧಾನಸೌಧ ಕಟ್ಟಲು ತಗುಲಿದ ವೆಚ್ಚ ₹ 1.75ಕೋಟಿ. ಬಾಲ್ಕನಿಗಳಿಗೆ ರಾಜಸ್ತಾನಿ ಶೈಲಿಯ ಮೆರುಗು ಇದೆ. ಬೆಟ್ಟಹಲಸೂರಿನಿಂದ ತರಿಸಲಾದ ಕಲ್ಲುಗಳಿಗೆ ಬಣ್ಣಗಳ ಲೇಪನವಿಲ್ಲದೆ ಮೂಲ ರೂಪವನ್ನೇ ಉಳಿಸಿಕೊಂಡಿರುವುದು ಕಟ್ಟಡದ ಭವ್ಯತೆಯನ್ನು ಹೆಚ್ಚಿಸಿದೆ. ವಿಧಾನಸೌಧದ ಬಾಗಿಲುಗಳು, ಕಿಟಕಿಗಳಿಗೆ ಬಳಕೆಯಾಗಿರುವುದು ಹುಣಸೂರು ತೇಗ. ಅವುಗಳಲ್ಲಿನ ಕೆತ್ತನೆ, ನೀಡಲಾದ ಪಾಲಿಶ್‌ ಮೆರುಗು ಎಲ್ಲರ ಗಮನ ಸೆಳೆಯುತ್ತಿವೆ.ಸರ್ಕಾರದ ಸಚಿವಾಲಯ ಹಾಗೂ ಶಾಸಕಾಂಗ ಎರಡೂ ಒಂದೇ ಕಡೆ ಇರುವುದು ಕಟ್ಟಡದ ವಿಶೇಷ. ಇಂಥ ವ್ಯವಸ್ಥೆ ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲ. ಸುಮಾರು 700 ಅಡಿ ಉದ್ದ ಹಾಗೂ 350 ಅಡಿ ಅಗಲ ಹೊಂದಿರುವ ವಿಧಾನಸೌಧದಲ್ಲಿ ಒಟ್ಟು ನಾಲ್ಕು ಮಹಡಿಗಳಿವೆ.

ಒಂದನೇ ಮಹಡಿಯಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತ್‌ ಸಭಾಂಗಣಗಳಿದ್ದು ವಿಶಾಲವಾಗಿದೆ. ದೊಡ್ಡದಾದ ಈ ಸಭಾಂಗಣದ ಮಧ್ಯಭಾಗದಲ್ಲಿ ಒಂದೂ ಕಂಬ ಇಲ್ಲದಿರುವುದು ಇನ್ನೊಂದು ವಿಶೇಷ.ಪ್ರತಿ ಮಹಡಿಯಲ್ಲಿಯೂ ನಲವತ್ತರಿಂದ ನಲವತ್ತೈದು ಕೊಠಡಿಗಳಿದ್ದು 3ನೇ ಮಹಡಿಯಲ್ಲಿ ಕ್ಯಾಬಿನೆಟ್‌ ಹಾಲ್‌ ಹಾಗೂ ಕಾನ್‌ಫರೆನ್ಸ್‌ ಹಾಲ್‌ ಇದೆ.


ಕಬ್ಬನ್ ಪಾರ್ಕ್

೩೦೦ ಎಕರೆ ವಿಸ್ತೀರ್ಣದ ಕಬ್ಬನ್ ಪಾರ್ಕನ್ನು ಲಾರ್ಡ್ ಕಬ್ಬನ್‍ರವರು, ೧೮೬೪ ರಲ್ಲಿ ಸ್ಥಾಪಿಸಿದರು. ಈ ಉದ್ಯಾನವು ಬೆಂಗಳೂರಿನ ಪ್ರಮುಖ ಜಾಗದಲ್ಲಿದೆ. ವಿಧಾನ ಸೌಧಕ್ಕೆ ಭೇಟಿ ನೀಡುವ ಸಮಯದಲ್ಲಿ ಕಬ್ಬನ್ ಪಾರ್ಕ್ ಹತ್ತಿರದಲ್ಲೇ ಸಾಗಬೇಕು, ಅದು ಎಲ್ಲರ ಕಣ್ಣಿಗೆ ಕಾಣುತ್ತದೆ. ಬೆಂಗಳೂರು ರೈಲ್ವೆ ಸ್ಟೇಷನ್‍ಗೆ ಕೇವಲ ೫ ಕಿ. ಮೀ ದೂರದಲ್ಲಿದೆ. ನಡೆದಾಡಲು ಇಷ್ಟವಿರುವ ಜನರಿಗೆ, (ಬೆಳಗಿನ ವಾಕಿಂಗ್ ಪ್ರಿಯರಿಗೆ), ಇದು ಹೇಳಿಮಾಡಿಸಿದ ಜಾಗ. ಸುಂದರವಾದ ಗಿಡ-ಬಳ್ಳಿ ವೃಕ್ಷಗಳು ಸುಂದರವಾಗಿ ಸಜಾಯಿಸಿದ ವಿಶಾಲವಾದ ಲಾನ್‍ಗಳು, ನೀರಿನ ಚಿಲುಮೆಗಳು, ಬಣ್ಣ- ಬಣ್ಣದ ಹೂವಿನ ಗಿಡ ಮರಗಳು ಮುದಕೊಡುತ್ತವೆ. ಪ್ರತಿಮರದ ಕಾಂಡದಮೇಲೂ ಚೆನ್ನಾಗಿ ಕಾಣಿಸುವಂತೆ ಬರೆದಿದ್ದಾರೆ. ವೈಜ್ಜಾನಿಕ ವಿವರಗಳನ್ನು, ಹಾಗೂ ಮರಗಳ ವಯಸ್ಸುಗಳು ದಾಖಲಾಗಿವೆ. ಮಕ್ಕಳಿಗೆ ಆಟಕ್ಕೆ ಹಲವಾರು ಸಾಧನಗಳಿವೆ. ಮಕ್ಕಳ-ರೈಲಿನಲ್ಲಿ ಸವಾರಿಮಾಡುವ ಮಕ್ಕಳು, ಗಿರಿ, ವನ, ಬೆಟ್ಟ,ಕಾಡುಗಳ ಮಧ್ಯೆ ಹಾದು ಸಾಗುವ ಸುಂದರ ಅನುಭವಗಳನ್ನು ಪಡೆಯುತ್ತಾರೆ. ಕಬ್ಬನ್ ಪಾರ್ಕ್‍ನಲ್ಲಿ ಪಾಟರಿಯನ್ನು ಕಲಿಸುವ ಶಾಲೆಗಳಿವೆ, ಮತ್ತು ಹಲವು ಕಲಿಕೆಗಳಿಗೆ ಶಾಲೆಗಳಿವೆ. ಕಾರ್ಯಾಗಾರಗಳನ್ನು ಹಮ್ಮಿಕೊಂಡು ಅನೇಕ ಕಲೆಗಳನ್ನು ಕಲಿಸುವ ಪ್ರಬಂಧವಿದೆ.


ಲಾಲ್ ಬಾಗ್

ಲಾಲ್‌ಬಾಗ್,ಕೆಂಪು ತೋಟ, ಅಥವಾ ಲಾಲ್‌ಬಾಗ್ ಸಸ್ಯೋದ್ಯಾನ, ವರ್ಣರಂಜಿತ ಫಲ-ಪುಷ್ಪ-ಹಣ್ಣು-ಕಾಯಿಗಳಿಗೆ ಪ್ರಸಿದ್ಧವಾದ ಸಸ್ಯೋದ್ಯಾನ, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿದೆ. ಈ ಉದ್ಯಾನವನವನ್ನು ನಿರ್ಮಿಸಲು ಮೈಸೂರಿನ ಆಡಳಿತ ನಡೆಸುತ್ತಿದ್ದ ಹೈದರಾಲಿ ಸೂಚಿಸಿದ್ದನು. Vagidhe ಪ್ರಸಿದ್ಧ ಗಾಜಿನ ಮನೆಯನ್ನು ಹೊಂದಿದ್ದು ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಸಮಯದಲ್ಲಿ ಫಲ ಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತದೆ. ಇದಲ್ಲದೇ ಮತ್ಸ್ಯಾಗಾರ ಮತ್ತು ಕೆರೆಯನ್ನು ಹೊಂದಿದ್ದು ಬೆಂಗಳೂರಿನಲ್ಲಿರುವ ಒಂದು ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ. [೧]

೧೭೬೦ರಲ್ಲಿ ಹೈದರಾಲಿಯು ಈ ಸಸ್ಯೋದ್ಯಾನವನ್ನು ನಿರ್ಮಿಸಲು ಸೂಚಿಸಿದ್ದನು. ಆದರೆ ಇದನ್ನು ಈತನ ಮಗ ಟಿಪ್ಪು ಸುಲ್ತಾನ್ ಪೂರ್ಣಗೊಳಿಸಿದನು. ಹೈದರಾಲಿಯು ಆತನ ಅಧಿಕಾರಾವಧಿಯಲ್ಲಿ ಪ್ರಖ್ಯಾತಿಯನ್ನು ಪಡೆದಿದ್ದ ಮೊಘಲ್ ಉದ್ಯಾನಗಳ ಮಾದರಿಯಲ್ಲಿ ಈ ಉದ್ಯಾನವನ್ನು ನಿರ್ಮಿಸಲು ನಿರ್ಧರಿಸಿದ್ದನು. ಹೈದರಾಲಿ ಈ ಪ್ರಸಿದ್ಧ ಸಸ್ಯೋದ್ಯಾನಗಳ ಯೋಜನೆಯನ್ನು ನಿರ್ಮಿಸುವ ಯೋಜನೆ ಹಮ್ಮಿಕೊಂಡಿದ್ದನು ಮತ್ತು ಇವನ ಮಗ ಹಲವಾರು ದೇಶಗಳಿಂದ ಸಸ್ಯಗಳು ಮತ್ತು ಮರಗಳನ್ನು ಆಮದು ಮಾಡಿಕೊಂಡು ತೋಟಗಾರಿಕೆಯ ಸಂಪತ್ತನ್ನು ಹೆಚ್ಚಿಸಿದನು. ಹೈದರಾಲಿಯು ತೋಟಗಾರಿಕೆಯಲ್ಲಿ ಉತ್ತಮ ತಿಳಿವಳಿಕೆಹೊಂದಿದ್ದ ತಿಗಳ ಸಮುದಾಯದ ಜನರನ್ನು ಈ ಕೆಲಸಕ್ಕಾಗಿ ನೇಮಿಸಿದ್ದನು.-

ಲಾಲ್‌ಬಾಗ್ ೨೪೦ ಎಕರೆ ಪ್ರದೇಶವನ್ನು ಹೊಂದಿರುವ (೯೭೧,೦೦೦ ಚದರ ಅಡಿ. - ಸುಮಾರು ೧ ಕಿಮೀ².) ಉದ್ಯಾನವಾಗಿದ್ದು ದಕ್ಷಿಣ ಬೆಂಗಳೂರಿನಲ್ಲಿದೆ. ಹಲವಾರು ಸಂಖ್ಯೆಯಲ್ಲಿ ಪುಷ್ಪ ಪ್ರದರ್ಶನ ನಡೆಸುತ್ತಿದ್ದು, ಗಣರಾಜ್ಯ ದಿನದಂದು (ಜನವರಿ ೨೬) ವಿಶೇಷ ಪ್ರದರ್ಶನವಿರುತ್ತದೆ. ಈ ಉದ್ಯಾನವು ೧,೦೦೦ಕ್ಕಿಂತ ಹೆಚ್ಚಿನ ಫ್ಲೋರಾ ಜಾತಿಯ ಗಿಡಗಳನ್ನು ಹೊಂದಿದೆ. ಇದಲ್ಲದೇ ಉದ್ಯಾನವು ೧೦೦ಕ್ಕಿಂತ ಹೆಚ್ಚು ವರ್ಷ ವಯಸ್ಸಾದ ಮರಗಳನ್ನು ಹೊಂದಿದೆ.[೧][೩]

ಇದು ಸಿದ್ದಾಪುರ ವೃತ್ತದ ಬಳಿಯಿದೆ. ಈ ದ್ವಾರದಿಂದ ಒಳಗೆ ನಡೆದು ಹೋಗುತ್ತಾ ಉದ್ಯಾನದ ಸೌಂದರ್ಯವನ್ನು ಸವಿಯಲು ಅನುಕೂಲ. ಉದ್ಯಾನದ ಹೊರಗಿನ ಕಾಂಪೌಂಡ್ ಗೋಡೆ ಕೃಂಬಿಗಲ್ ರಸ್ತೆಗೆ ಹೊಂದಿಕೊಂಡಿದೆ. ರಸ್ತೆಯ ಮತ್ತೊಂದು ಭಾಗ, ಆರ್.ವಿ.ಕಾಲೇಜ್‌ನ ಕಾಂಪೌಂಡ್ ಗೋಡೆಗೆ ತಗುಲಿದಂತಿದೆ. ಈ ದ್ವಾರದ ಕಡೆಯಿಂದ ನ್ಯಾಷನಲ್ ಕಾಲೇಜ್, ಮಹಾರಾಷ್ಟ್ರ ಮಹಿಳಾ ವಿದ್ಯಾಲಯ, ಚಿಕ್ಕ ಮಾವಳ್ಳಿ, ದೊಡ್ಡ ಮಾವಳ್ಳಿಗಳಿಗೆ ಹೋಗಬಹುದು. ಆಕಡೆ, ಕೃಷ್ಣರಾವ್ ಸರ್ಕಲ್, ಇಂಡಿಯನ್ ಇನ್ಸ್ ಟಿ ಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಮಾಡೆಲ್ ಹೌಸ್ ಸ್ಟ್ರೀಟ್, ಯಡಿಯೂರ್ ಟರ್ಮಿನಸ್‌ಗಳಿಗೆ ಹೋಗಬಹುದು.

ಬೆಂಗಳೂರು ಅರಮನೆ

ಅರಮನೆಯು ಸದಾಶಿವನಗರ ಮತ್ತು ಜಯಮಹಲ್ ಮಧ್ಯದ, ನಗರದ ಹೃದಯ ಭಾಗವಾದ ಪ್ಯಾಲೇಸ್ ಗಾರ್ಡನನಲ್ಲಿದೆ. ಈ ಕಟ್ಟಡ ನಿರ್ಮಾಣದ ಹಿಂದಿನ ಉದ್ದೇಶವು, ಇದನ್ನು ಇಂಗ್ಲೆಂಡಿನ ವಿನ್ಸರ ಕ್ಯಾಸಲನ ಹಾಗೆ ನಿರ್ಮಿಸಬೇಕೆಂದಿದ್ದು, ಇದರ ಕಾಮಗಾರಿಯು 1862 ರಲ್ಲಿ ರೆವ್.ಗಾರೆಟ್ ಅವರಿಂದ ಪ್ರಾರಂಭವಾಯಿತು. ನಂತರ 1884 ರಲ್ಲಿ ಒಡೆಯರ್ ರಾಜವಂಶಸ್ಥರಾದ ಚಾಮರಾಜ ಒಡೆಯರ್ ಅವರಿಂದ ಖರೀದಿಸಲ್ಪಟ್ಟಿತು.[೨]


ರೆವ್ ಜೆ ಗ್ಯಾರೆಟ್, ಸೆಂಟ್ರಲ್ ಹೈ ಸ್ಕೂಲ್ ನ ಮೊದಲ ಮುಖ್ಯೋpaaದ್ಯರಾಗಿದ್ದರು , 45,000 ಚದರ ಅಡಿ (4200 ಮೀಟರ್) ಒಂದು ಮಹಡಿ ಪ್ರದೇಶದೊಂದಿಗೆ ಈ ಅರಮನೆಯನ್ನು ಕಟ್ಟಿದರು. ಅರಮನೆ ಮತ್ತು ಸುತ್ತಮುತ್ತಲಿನ ಮೈದಾನಗಳಲ್ಲಿ 454 ಎಕರೆ (183 ಹೆ) ಅಷ್ಟು ಭೂಮಿ ಹೊಂದಿದೆ. [೨] ಯುವ ರಾಜಕುಮಾರ ಎಚ್ ಚಾಮರಾಜ ಒಡೆಯರ್ ಅವರಿಂದ ರೂ.40,000 ವೆಚ್ಚದಲ್ಲಿ ಅವರ ಶಿಕ್ಷಣ ಉಸ್ತುವಾರಿ ಹೊಂದಿದ್ದ ಬ್ರಿಟಿಷ್ ಅಧಿಕಾರಿಗಳು 1873ರಲ್ಲಿ ಅರಸರ ಅರಮನೆ ಖರೀದಿಸಿತು ಮತ್ತು ನಂತರ ಅರಮನೆಯನ್ನು ನವೀಕರಿಸಿದರು.

.

ಅರಮನೆ ಕೋಟೆಯ ಗೋಪುರಗಳು, ಕೋಟೆ ಮತ್ತು ಗೋಪುರಗಳನ್ನೊಳಗೊಂಡ ಟ್ಯೂಡರ್ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಯಿತು. ಒಳಾಂಗಣದಲ್ಲಿ ಸೊಗಸಾದ ಮರದ ಕೆತ್ತನೆಗಳು, ಹೂವಿನ ಅಲಂಕಾರ, ಸುಂದರ ಕಮಾನುಗಳು ಮತ್ತು ಸೂಕ್ಷ್ಮ ಕೆತ್ತೆನೆ ಒಳಗೊಂಡ ವರ್ಣಚಿತ್ರಗಳು ಮೇಲ್ಛಾವಣಿಯ ಮೇಲೆ ಅಲಂಕರಿಸಲಾಗಿತ್ತು. ನವ-ಶಾಸ್ತ್ರೀಯ, ವಿಕ್ಟೋರಿಯನ್ ಮತ್ತು ಎಡ್ವರ್ಡಿಯನ್ ಶೈಲಿಯ ರೀತಿಯಲ್ಲಿ ಪೀಠೋಪಕರಣಗಳನ್ನು, ಜಾನ್ ರಾಬರ್ಟ್ಸ್ ಮತ್ತು ಲಾಜರ್ ಅವರು ಖರೀದಿ ಮಾಡಿದರು. ಉದ್ಯಾನಗಳ ಸಂರಕ್ಷಣೆ ಮತ್ತು ತೋಟಗಾರಿಕೆ ಗುಸ್ತಾವ್ ಹರ್ಮನ್ ಕ್ರುಮ್ಬಿಎಗೆಲ್ ಅವರ ಕರ್ತವ್ಯವಾಗಿದೆ. ಒಟ್ಟು 35 ಕೊಠಡಿಗಳನ್ನು ಅರಮನೆಯಲ್ಲಿ ನಿರ್ಮಿಸಲಾಗಿತ್ತು ಮತ್ತು ಅವುಗಳಲ್ಲಿ ಬಹುಪಾಲು ಮಲಗುವ ಕೋಣೆಗಳಾಗಿದ್ದವು . [೩] ಈ ನವೀಕರಿಸುವಿಕೆ, ವಿಶೇಷವಾಗಿ ಇಂಗ್ಲೆಂಡ್ ಆಮದು ಮಾಡಿಕೊಂಡ ಬಣ್ಣದ ಗಾಜು ಮತ್ತು ಕನ್ನಡಿಗಳು ಅಳವಡಿಕೆ, ಜನರಲ್ ಎಲೆಕ್ಟ್ರಿಕ್ ಒಂದು ಕೈಪಿಡಿ ಲಿಫ್ಟ್ ಮತ್ತು ಮರದ ಪಂಖಗಳ ಖರ್ಚನ್ನು ಒಳಗೊಂಡಿತ್ತು. [೪] 1970 ರಲ್ಲಿ, ಎಚ್ ಜಯಚಾಮರಾಜೇಂದ್ರ ಒಡೆಯರ್ ಅವರು,ಎರಡು ವಿದ್ಯುತ್ ಕಂಪನಿಗಳಿಗೆ ಅಂದಿನ ಗುತ್ತಿಗೆದಾರ ಚಾಮರಾಜು ಎಂಬುವವರ ಹೆಳಿಕೆಯಮೇಲೆ ಆಸ್ತಿ ಸ್ವಾಧೀನವನ್ನು ವರ್ಗಾಯಿಸಿಕೊಟ್ಟಿದ್ದರೆಂದು ಹೇಳಲಾಗುತ್ತದೆ.


ಈ ಕಂಪನಿಗಳು ಚಾಮುಂಡಿ ಹೊಟೇಲ್ (ಪಿ) ಲಿಮಿಟೆಡ್ (110 ಎಕರೆ) ಮತ್ತು ಶ್ರೀ ವೆಂಕಟೇಶ್ವರ ವಸತಿ ಎಂಟರ್ಪ್ರೈಸಸ್ (ಪಿ) ಲಿಮಿಟೆಡ್ (344 ಎಕರೆ) ಎಂದು ಕರೆಯಲಾಗುತ್ತಿತ್ತು. ಆದರೆ ನಮೂದಿಸಿರುವ ದಿನಾಂಕದಲ್ಲಿ ಕಂಪನಿಗಳು ಇನ್ನೂ ಒಂದುಗೂಡಿಸಬೇಕಾಗಿದ್ದು ಮತ್ತು ಯಾವುದೇ ಮಾರಾಟ ಪತ್ರ ಯಾವುದು ಸಿಕ್ಕಿಲ್ಲ. ಇದು ಒಂದು ಮೋಸದ ವಹಿವಾಟು ಆಗಿತ್ತು. ಮಹಾರಾಜರ ಏಕೈಕ ಪುತ್ರ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಈ ಒಪ್ಪಂದದ ವಿರುದ್ಧ ಸಿವಿಲ್ ದಾವೆ ಹೂಡಿದ್ದರು. ಆದರೆ ಮಹಾರಾಜ ಎಚ್ ಎಚ್ ಜಯಚಾಮರಾಜೇಂದ್ರ ಒಡೆಯರ್ 1974 ರಲ್ಲಿ ನಿಧನರಾದರು ಆದರೂ ಕಾನೂನು ಹೋರಾಟ ಮುಂದುವರಿಸಿದರು ಮತ್ತು ಸರಾಸರಿ ಸಮಯದಲ್ಲಿ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ 1983 ರಲ್ಲಿ ತನ್ನ ಐದು ಸಹೋದರಿಯರಿಗೆ ರಮಣ ಮಹರ್ಷಿ ರಸ್ತೆಯಲ್ಲಿ ತಲ 28 ಎಕರೆ ನೀಡಿದರು (110,000 ಮೀ 2) ಅವರುಗಳ ಹೆಸರು ಇಂತಿವೆ, ಲೇಟ್ ಗಾಯತ್ರಿ ದೇವಿ, ಮೀನಾಕ್ಷಿ ದೇವಿ, ಕಾಮಾಕ್ಷಿ ದೇವಿ, ಇನ್ದ್ರಾಕ್ಷಿ ದೇವಿ ಮತ್ತು ವಿಶಾಲಾಕ್ಷಿ ದೇವಿಯವರು.ಶ್ರೀಕಂಠ ದತ್ತ ನರಸಿಂಹ ರಾಜ ಒಡೆಯರ್ ಅಂತಿಮವಾಗಿ 1990 ಮತ್ತು 1994 ರಲ್ಲಿ ಚಾಮರಾಜು ಗ್ರೂಪ್ ಅವರೊಂದಿಗೆ ರಾಜಿ ಮಾಡಿಕೊಂಡು, 45 ಎಕರೆ (180,000 ಮೀ 2) ಭೂಮಿಯನ್ನು ಜಯಮಹಲ್ ರಸ್ತೆಯಲ್ಲಿ ಹೊರತುಪಡಿಸಿ ಮುಖ್ಯ ಅರಮನೆ ಸೇರಿದಂತೆ ಎಲ್ಲಾ ಆಸ್ತಿಯನ್ನು ತನ್ನ ಭಾಗವಾಗಿ ಮರಳಿ ಪಡೆದರು.