ವಿಷಯಕ್ಕೆ ಹೋಗು

ಸದಸ್ಯ:Ashwini rajendran/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ.ಸನ್ ಯಾತ್ ಸೆನ್ ನ ತತ್ವಗಳು[ಬದಲಾಯಿಸಿ]

ಚೀನಾ ದೇಶವನ್ನು ಉತ್ತಮಗೊಳಿಸಲು ಸರಳ ಮಾಗ೯ವೆಂದರೆ ಪ್ರಜಾಪ್ರಭುತ್ವ ಮತ್ತು ಸಮತಾವಾದಗಳು ಸೂಕ್ತ ಎಂಬುದನ್ನು ತಿಳಿದಿದ್ದ. ಇದರ ಹಿನ್ನಲೆಯಲ್ಲಿ ಡಾ.ಸನ್ ಯಾತ್ ಸೆನ್ ತನ್ನ ಹೆಸರಾಂತ "ಮೂರು ಜನತಾ ತತ್ವ" ಗಳನ್ನು ಪ್ರಚಾರಪಡಿಸಿದನು.ಅವು

೧.ರಾಷ್ಟ್ರೀಯತೆ
೨.ಪ್ರಜಾಪ್ರಭುತ್ವ
೩.ಪ್ರಜಾಕಲ್ಯಾಣ

ರಾಷ್ಟ್ರದ ಅಧಿಕಾರ ಸುಭದ್ರವಾಗಿ ಇರಲು ಮತ್ತು ಅಧಿಕಾರಿಗಳು ಜನತೆಯ ಆಶೋತ್ತರಗಳಿಗೆ ಸ್ಪಂದಿಸದಿದ್ದರೆ ಅವನನ್ನು ಅಧಿಕಾರದಿಂದ ಕೆಳಗಿಳಿಸುವ ಹಕ್ಕಿಗಾಗಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದ್ದನು. ಸಮಾಜದ ಒಟ್ಟು ಹಿತಕ್ಕಾಗಿ ಜನತೆಯ ಆಥಿ೯ಕ ಪ್ರಗತಿ ಪ್ರಮುಖವಾದುದು. ಆದುದರಿಂದ ತಾರತಮ್ಯವಿಲ್ಲದೆ ರಾಷ್ಟ್ರದ ಸಂಪನ್ಮೂಲಗಳ ಸಮಾನ ಹಂಚಿಕೆಗೆ ಆಧ್ಯತೆ ನೀಡಿದ್ದನು.ಡಾ. ಸೆನ್ ವಿದೇಶದಲ್ಲಿದ್ದುಕೊಂಡು ಚೀನೀ ಕ್ರಾಂತಿಕಾರಿಗಳಿಗೆ ಮಾಗ೯ದಶ೯ನ ನೀಡಿದ ಮತ್ತು ಅದೇ ಅಲ್ಲದೆ ಬದಲಾವಣೆಯ ವಾತವರಣ ಸೃಷ್ಟಿಸಿದ.ಕ್ರಾಂತಿಯನ್ನು ೧೯೧೧ ರಲ್ಲಿ ಯಶಸ್ವಿಗೊಳಿಸಿದ ಮತ್ತು ದಕ್ಷಿಣ ಚೀನಾದ ನಾನ್ ಕಿಂಗ್ ನಲ್ಲಿ ರಿಪಬ್ಲಿಕ್ ಸ್ಥಾಪಿಸಿದ.ಸೇನಾನಾಯಕ ಯು ಆನ್ ಷಿಕಾಯ್ ನ ನೇತೃತ್ವದಲ್ಲಿ ಮಂಚು ಗಳು ಕ್ರಾಂತಿಯನ್ನು ಹತ್ತಿಕ್ಕುವ ಸಂಚು ಹೂಡಿದರು. ಅದು ಸಫಲವಾಗಲಿಲ್ಲ. ಸೆನ್ ರಿಪಬ್ಲಿಕ್ ನ ಅಧ್ಯಕ್ಷನಾದ. ಅದೇ ರೀತಿ ಸೆನ್ ದೇಶದ ಸಮಗ್ರತೆ ಮತ್ತು ಏಕತೆಯ ಅವಶ್ಯಕತೆಯನ್ನು ಅರಿತು ಯು ಆನ್ ಷಿಕಾಯ್ ಗೆ ತನ್ನ ಅಧ್ಯಕ್ಷ ಪದವಿಯನ್ನು ಬಿಟ್ಟು ಕ್ಕೊಟ್ಟು ಸೆನ್ ರೈಲು ಖಾತೆಯ ಉಸ್ತುವಾರಿಯಲ್ಲಿ ಮುಂದುವರೆದನು. ನಂತರ ಹಲವಾರು ಕ್ರಾಂತಿಕಾರಿ ಪಕ್ಷಗಳನ್ನು ಸೇರಿಸಿ ಕುಮಿಂಗ್ ಟನ್ ಎಂಬ ಹೊಸ ರಾಷ್ಟ್ರೀಯ ಪಕ್ಷವನ್ನು ೧೯೧೨ ರಲ್ಲಿ ಸ್ಥಾಪಿಸಿದುದು.

ಗಣರಾಜ್ಯದ ಉಳಿವಿಗಾಗಿ ಹೋರಾಟ[ಬದಲಾಯಿಸಿ]

ಗಣರಾಜ್ಯದ ಏಳಿಗೆ ಮತ್ತು ಸುಭದ್ರತೆಗಾಗಿ ಅಧ್ಯಕ್ಷ ಯು ಆನ್ ಷಿಕಾಯ್ ಶ್ರಮಿಸುತ್ತಾನೆ ಎಂಬುದು ಡಾ. ಸೆನ್ ನಂಬಿಕೆಯಾಗಿತ್ತು.ಆದರೆ ಯು ಆನ್ ಷಿಕಾಯ್ ಚಕ್ರವತಿ೯ಯಾಗ ಹೊರಟುದು ಇವನ ಎಲ್ಲ ಆಶೋತ್ತರಗಳನ್ನು ಹುಸಿಗೊಳಿಸಿತು.ಪರಿಣಾಮವಾಗಿ ಯು ಆನ್ ಷಿಕಾಯ್ ಮತ್ತು ಸೆನ್ ರ ನಡುವೆ ಜಗಳ ಉಂಟಾಗಿ ಕೊನೆಗೆ ಸೆನ್ ದೇಶ ಭ್ರಷ್ಟರಾಗಿ ಹೋಗಬೇಕಾಯಿತು. ಜಪಾನಿನಲ್ಲೇ ೧೯೧೬ ರ ವರೆಗು ಉಳಿದನು. ಆ ಸಮಯದಲ್ಲಿ ಸೆನ್ ಹೆಂಡತಿ ವೃದ್ದ ತಂದೆ ತಾಯಿಗಳ ಯೋಗಕ್ಷೇಮ ನೋಡಿಕೊಳ್ಳಬೇಕೆಂಬ ನೆಪ ಹೇಳಿ ಅವನ ಜೊತೆ ಹೋಗಲು ನಿರಾಕರಿಸಿದಳು. ಇದರ ಒಂದು ಪರಿಣಾಮವಾಗಿ ಅವಳಿಗೆ ವಿವಾಹ ವಿಚ್ಚೇದನ ನೀಡಿ ಕ್ರಾಂತಿಕಾರಿ ಮಹಿಳೆ ಚುಂಗ್ ಲಿಂಗ್ ಅಂಬುವಳನ್ನು ವಿವಾಹ ಮಾಡಿಕೊಳ್ಳಲಾಯಿತು. ಯು ಆನ್ ಷಿಕಾಯ್ ೧೯೧೬ ರ ಜೂನ್ ನಲ್ಲಿ ಮರಣ ಹೊಂದಿದ. ಈ ಅವಕಾಶವನ್ನು ಬಳಸಿಕೊಂಡ ಸನ್ ಯಾತ್ ಸೆನ್ ದಕ್ಷಿಣದ ಪ್ರಾಂತಗಳನ್ನು ಕ್ರೋಡಿಕರಿಸಿ ಚೀನಾ ಗಣರಾಜ್ಯವೆಂದು ಘೋಷಿಸಿದ. ಕ್ಯಾಂಟನ್ ಅದರ ರಾಜಧಾನಿಯಾಯಿತು.

ಕುಮಿನ್ ಟಾಂಗ್ ನಲ್ಲಿ ಒಡಕು[ಬದಲಾಯಿಸಿ]

ಸೆನ್ ಗೆ ಸಮಸ್ಯೆಗಳು ಎದುರಾದವು ಮತ್ತು ತನ್ನ ಪಕ್ಷದಲ್ಲೇ ಭಿನ್ನಾಭಿಪ್ರಾಯಗಳನ್ನು ಎದುರಿಸಬೇಕಾಯಿತು.ಅದೇ ಅಲ್ಲದೆ ಗಣರಾಜ್ಯದ ಸೇನೆಯ ನೆರವಿನಿಂದ ಉತ್ತರ ಚೀನಾವನ್ನು ಹತೋಟಿಗೆ ತರುವ ಇವನ ಪ್ರಯತ್ನಕ್ಕೆ ಜನರಲ್ ಚೆನ್ ನ ವಿರೋಧ ಬಂದಿತು.ಕೊನೆಗೆ ಕ್ಯಾಂಟನ್ ತೊರೆದು ಷಾಂಗೈಗೆ ತೆರಳಿದ ಸೆನ್ ಸ್ವಲ್ಪಕಾಲದಲ್ಲೇ ತನ್ನ ವಿರೋಧಿ ಚೆನ್ ನನ್ನು ಹತ್ತಿಕ್ಕಿ ಪಕ್ಷದಲ್ಲಿ ಏಕತೆ ತಂದನು.ಆಥಿ೯ಕ ಮತ್ತು ಮಿಲಿಟರಿ ಶಕ್ತಿಯಲ್ಲಿ ಅದು ಇನ್ನು ಶೈಶವಾವಸ್ಥೆಯಲ್ಲಿ ಇದ್ದಿತು. ಆದ್ದರಿಂದ ಪ್ರಬಲ ರಾಷ್ಟ್ರಗಳ ನೆರವು ಹಾಗು ಮನ್ನಣೆ ಇದಕ್ಕೆ ಅವಶ್ಯಕವಾಗಿದ್ದಿತು.ಆ ಮನ್ನಣೆಗಾಗಿ ಸೆನ್ ಪಾಶ್ಯಾತ್ಯ ರಾಷ್ಟ್ರಗಳಾದ ಪ್ರಾನ್ಸ್, ಅಮೆರಿಕ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ಮೊರೆ ಇಟ್ಟನು. ಅವರಿಂದ ತಿರಸ್ಕಾರ ದೊರೆತ್ತದ್ದರಿಂದ ಸೆನ್ ಕಮ್ಯುನಿಸ್ಟನಲ್ಲದಿದ್ದರು ಕಮ್ಯುನಿಸ್ಟ ರಾಷ್ಟ್ರವಾದ ರಷ್ಯಾದ ಕಡೆ ಸಲಹೆ ಹಾಗೂ ಸಹಾಯಕ್ಕಾಗಿ ವಾಲಬೇಕಾಯಿತು.ಕುಮಿನ್ ಟಾಂಗ್ ಪಕ್ಷವನ್ನು ರಷ್ಯಾನ್ನರು ಬಲಪಡಿಸಲು ನೆರವಾದರು.ಅನಂತರ ಸೆನ್ ರಷ್ಯನ್ ಸಲಹೆಗಾರರನ್ನು ಪಡೆದು ಪಕ್ಷವನ್ನು ಶಿಸ್ತಿನ ನೆಲೆಗಟ್ಟಿನ ಮೇಲೆ ಪುನರ್ ರಚಿಸಿದನು.ರಾಷ್ಟ್ರೀಯ ಏಕತೆಗೆ ಪ್ರಬಲವಾದ ಸೈನ್ಯದ ಅವಶ್ಯಕತೆ ಇದ್ದಿತು. ಈ ದೃಷ್ಟಿಯಿಂದಲೆ ಸೆನ್ ರಾಷ್ಯಾದ ತರಬೇತಿ ಪಡೆದ ಚಿಯಾಂಗ್ ಕೈ ಷೇಕ್ ನ ಉಸ್ತುವಾರಿಯಲ್ಲಿ ವಾಂಪೋ ಮಿಲಿಟರಿ ಅಕಾಡೆಮಿಯನ್ನು ಸ್ಥಾಪಿಸಿದನು.ಸಮರ್ಥ ಸೇನಾ ನಾಯಕರನ್ನು ಮತ್ತು ರಾಜಕೀಯ ಧುರೀಣರನ್ನು ತರಬೇತು ಮಾಡುವುದು ಇದರ ಕಾಯ೯ವಾಗಿತ್ತು. ಸೆನ್ ಸ ನಿಲುವು ಎಂದರೆ ಮೊದಲನೇಯ ಮಹಾಯುದ್ದದಲ್ಲಿ ಚೀನಾ ಭಾಗವಹಿಸಕೂಡದು ಎಂಬುದು ಇವನ ನಿಲುವಾಗಿತ್ತು.ಇವನಿಗೆ ಬೆಂಬಲ ನೇಡಿದವನು ಉತ್ತರ ಚೀನಾದ ಲಿ ಯು ಆನ್ ಹಂಗ್ ಆದರೆ ಈ ಮಧೆ ಚೀನಾಮತ್ತೊಮ್ಮೆ ಏಕತೆಯನ್ನು ಕಳೆದುಕೊಡಿತು. ಕುಮಿನ್ ಟಾಂಗ್ ಪಕ್ಷದ ಸದಸ್ಯರು ಸೆನ್ ನ ನೇತೃತ್ವದಲ್ಲಿ ೧೯೧೭ ರಲ್ಲಿ ದಕ್ಷಿಣದ ಕ್ಯಾಂಟನ್ ನಲ್ಲಿ ತಮ್ಮದೇ ಆದ ಸಕಾ೯ರವನ್ನು ರಚಿಸಿಕೊಂಡರು. ಮತ್ತೆ ಚೀನಾದಲ್ಲಿ ಎರಡು ಸಖಾಆ೯ರಾಘಾಲೂ ಆಸ್ತಿತ್ವಕ್ಕೆ ಬಂದು ಏಕತೆ ಇಲ್ಲದಂತಾಯಿತು.

ಡಾ. ಸನ್ ಯಾತ್ ಸೆನ್ ನ ಕೊನೆಯ ದಿನಗಳು[ಬದಲಾಯಿಸಿ]

ಚೀನಾದ ಏಕತೆ ಸೆನ್ ನ ಜೀವನದ ಉಸಿರಾಗಿತ್ತು. ಅದಕ್ಕಾಗಿ ಅವಿರತ ಶ್ರಮಿಸಿದನು.ಇದರಿಂದ ಅವನ ಆರೋಗ್ಯ ದಿನೇ ದಿನೇ ಕುಸಿಯತೊಡಗಿತು. ಕೊನೆಯ ತನ್ನ ಹಿತೈಷಿಗಳ ಮಾತನ್ನು ಮೀರಿ ಶಾಂತಿಯುತ ಮಾತುಕತೆಗಾಗಿ ತಾನೇ ೧೯೨೫ ರಲ್ಲಿ ಪೀಕಿಂಗ್ ಗೆ ಭೇಟಿ ಇತ್ತ ಆದರೆ ಅವರಾರೂ ಇವನ ಕಾಳಗಿಗೆ ಬೆಲೆ ಕೊಡಲಿಲ್ಲ.ಇದರಿಂದ ಆಘಾತಗೊಂಡ ಸೆನ್ ಪೀಕೊಂಗ್ ನಲ್ಲಿ ಸ್ನೇಹಿತನ ಮನೆಯೊಂದರಲ್ಲಿ ೧೯೨೫ ರ ಡಿಸೆಂಬರ್ ೧೨ ರಂದು ಕಾಲವಾದನು.

ವ್ಯಕ್ತಿತ್ವ[ಬದಲಾಯಿಸಿ]

ಚೀನಾದ ಏಕತೆಯ ಸಂಕೇತವಾಗಿದ್ದ ಅವರ ಗುರಿ ಸಾಧನೆ ಪೂಣ೯ವಾಗುವ ಮುನ್ನ ಕಾಲವಾದನು.ಇವನ ೩ ತತ್ವಗಳು ಚೀನಾದಲ್ಲಿ ಇನ್ನು ಪೂಣ೯ ಕಾಯ೯ರೂಪಕ್ಕಿಳಿಯಲ್ಲಿಲ್ಲ. ಅವನು ಬರೆದ ಗ್ರಂಥಗಳು " ಚೀನಾದ ಅಂತರರಾಷ್ಟ್ರೀಯ ಬೆಳವಣಿಗೆ" "ಚೀನಾ ಕ್ರಾಂತಿಯ ನೆನಪುಗಳು" ಸೆನ್ ನ ಅದ್ವಿತೀಯ ತಿಳುವಳಿಕೆಗೆ ಕನ್ನಡಿಯಂತಿದೆ.ತನ್ನ ಇಡೀ ಜೀವಿತ ಕಾಲವನ್ನೇ ದೇಶದ ಹಾಗೂ ಜನತೆಯ ಒಳಿತಿಗಾಗಿ ಸವೆಸಿ ಚೀನಿಯರಲ್ಲಿ ರಾಷ್ಟ್ರೀಯತೆಯನ್ನು ಮೊಳೆಸಿದ ಕೀತಿ೯ ಡಾ.ಸನ್ ಯಾತ್ ಸೆನ್ ಗೆ ಸಲ್ಲುತ್ತದೆ.


Reference: ಏಷ್ಯಾ ಇತಿಹಾಸ ಪರಿಚಯ

 -ಪ್ರೊ. ಆರ್.ಎಂ. ಶೇಖರಯ್ಯ