ವಿಷಯಕ್ಕೆ ಹೋಗು

ಸದಸ್ಯ:Ayisha shariya

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                                                                        "ನನ್ನ ಪರಿಚಯ"
 ನನ್ನ ಹೆಸರು ಆಯಿಶಾ ಶಾರಿಯ.ನಾನು ನನ್ನ ತಂದೆ,ತಾಯಿ,ಅಕ್ಕನೊಂದಿಗೆ ವಿಟ್ಲ ಎಂಬ ಒಂದು ಸಣ್ಣ ಊರಿನಲ್ಲಿ ವಾಸಿಸುತಿದ್ದೇನೆ.ನನ್ನ ತಂದೆಯ ಹೆಸರು ಹಮೀದ್,ಪ್ರಾಮಾಣಿಕ ಸ್ವಭಾವವುಳ್ಳ ಅವರು ನನ್ನ ತಂದೆ ಎನ್ನುವುದಕ್ಕಿಂತ ಒಂದು ಒಳ್ಳೆಯ ಗೆಳೆಯ ಎನ್ನಬಹುದು.ನನ್ನ ತಾಯಿ ಜೈನಾಬಿ,ನನ್ನನ್ನು ಯಾವಾಗಲು ಚೇಷ್ಟೆ ಮಾಡುತ್ತಿರುತ್ತಾರೆ.ನನ್ನ ಅಕ್ಕ ಶಾಝಿಯ ವ್ರತ್ತಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರೂ,ಸ್ವಭಾವತಃ ಗೆಳತಿಯ ಹಾಗೆ.ನನ್ನ ಭಾವ ಸಂಶುದ್ದೀನ್ ಇವರ ಬಗ್ಗೆ ಹೇಳಬೇಕೆಂದರೆ,ಅಣ್ಣನ ಹಾಗೆ ನೋಡಿಕೊಳ್ಳುವ ಮನುಷ್ಯ.ಇನ್ನು ನಮ್ಮ ಮನೆಯಲ್ಲಿರುವ ಒಂದು ವಿಶೇಷ ವ್ಯಕ್ತಿಯೆಂದರೆ,ಎಲ್ಲರಿಗು ಪ್ರಿಯವಾದ ನನ್ನ ಅಕ್ಕನ ಮಗಳು.ಶನಾಯ ಎಂಬ ನಾಮಧ್ಯೇಯವುಳ್ಳ ಈ ಹುಡುಗಿ ತನ್ನ ಪುಟ್ಟ ಪುಟ್ಟ ಹೆಜ್ಜೆಯಲ್ಲಿ ಸ್ವರ್ಗವನ್ನು ತೋರಿಸುತ್ತಾಳೆ. ನಮ್ಮ ಸಂಸಾರ ಚಿಕ್ಕದಾದರು ಪ್ರೀತಿ,ವಿಶ್ವಾಸದಿಂದ ಕೂಡಿದ ಸುಂದರ ಸಂಸಾರವಾಗಿದೆ.
    ೧೭ ವಯಸ್ಸಿನ ನಾನು ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಬಿಎಸ್ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ಭೌತಶಾಸ್ತ್ರದಲ್ಲಿ ಎಂಎಸ್ಸಿ ಮಾಡಬೇಕೆಂಬುವುದು ನನ್ನ ಜೀವನದ ಮುಖ್ಯ ಗುರಿಯಾಗಿದೆ.ನನ್ನನ್ನು ಈ  ಹಂತಕ್ಕೆ ತಲುಪಿಸಿದ್ದು ನನ್ನ ಪ್ರಾಥಮಿಕ ಶಾಲೆ."ಸಂತ ರೀಟ" ವಿಟ್ಲ ಇಲ್ಲಿ ನನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ನಾನು ಈ ಸಮಾಜದಲ್ಲಿ ಒಂದು ಹೆಣ್ಣಾಗಿ ನಿಂತುಕೊಳ್ಳುವ ಆತ್ಮವಿಶ್ವಾಸವನ್ನು ನನ್ನ ಶಾಲೆ ನನ್ನಲ್ಲಿ ತುಂಬಿಸಿದೆ.ನನ್ನ ಮುಂದಿನ ಪಿ.ಯು. ವಿದ್ಯಾಭ್ಯಾಸವನ್ನು "ಸಹ್ಯಾದ್ರಿ" ಕಾಲೇಜಿನಲ್ಲಿ ಮುಗಿಸಿದ್ದೇನೆ.ನನ್ನ ಅಮೂಲ್ಯವಾದ ಈ ಎರಡು ವರ್ಷಗಳು ಬದುಕಿನಲ್ಲಿ ಹೇಗೆ ಸಂದರ್ಭಗಳನ್ನು ಎದುರಿಸಬೇಕೆಂಬ ಪಾಠವನ್ನು ಹೇಳಿಕೊಟ್ಟಿದೆ.
     ಕವನ ಬರೆಯುವುದು,ನಿರೂಪಣೆ ಮಾಡುವುದು ಹಾಗೆಯೇ ಚೆನ್ನಾಗಿ ನಿದ್ದೆ ಮಾಡುವುದು ನನ್ನ ಹವ್ಯಾಸವಾಗಿದೆ.ಹಾಗೆಯೇ ರಾಜ್ಯಮಟ್ಟದಲ್ಲಿ ಏರ್ಪಡಿಸಲಾದ "ಸಿರಿಗನ್ನಡ" ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ೫ನೆಯ ಸ್ಥಾನ ಪಡೆದಿದ್ದೇನೆ. "ಬದುಕಿನಲ್ಲಿ ಹೆಣ್ಣಾಗಿ ಹುಟ್ಟಿದ ಮೇಲೆ ಈ ಸಮಾಜದಲ್ಲಿ ಏನಾದರು ಸಾಧಿಸಿ ಹೆತ್ತವರಿಗೆ ಹಾಗೂ ಸಮಾಜಕ್ಕೆ ಒಳ್ಳೆಯ ಹೆಸರು ತಂದುಕೊಡುವುದೇ ನನ್ನ ಜೀವನದ ಮುಖ್ಯ ಉದ್ದೇಶ".