ವಿಷಯಕ್ಕೆ ಹೋಗು

ಸದಸ್ಯ:Bhagyashree Walikara/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                                   ನನ್ನ ಪರಿಚಯ

ನನ್ನ ಹೆಸರು ಭಾಗ್ಯಶ್ರೀ ವಾಲಿಕಾರ. ನಾನು 8 ಆಗಸ್ಟ್ 1997 ನಲ್ಲಿ ಒಂದು ಹಳ್ಳಿಯಲ್ಲಿ ಜನಿಸಿದೆ. ನನ್ನ ತಂದೆಯ ಹೆಸರು ಗುತ್ತಪ್ಪ. ಅವರು ಬೆಳಗಾವಿಯಲ್ಲಿ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ನನ್ನ ತಾಯಿಯ ಹೆಸರು ಸಾಂಬಾಯಿ. ಅವರು ಮನೆಯಲ್ಲಿ ಕೆಲಸ ಮಾಡುತ್ತಾರೆ. ನನ್ನ ತಮ್ಮನ ಹೆಸರು ಅಕ್ಷಯ. ಅವನು ಪಿಯು ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಾನೆ. ನನ್ನ ಅಣ್ಣನ ಹೆಸರು ಶಿವಾನಂದ. ಅವನು ಈಗ ಕೆಲಸ ಮಾಡುತ್ತಿದ್ದಾನೆ. ನನ್ನ ಹವ್ಯಾಸಗಳೇನೆಂದರೆ ದಿನಾ ಪತ್ರಿಕೆ ಓದುವುದು, ಹಾಡುಗಳನ್ನು ಕೇಳುವುದು, ಟಿವಿ ನೋಡುವುದು. ನಾನು ಪ್ರಾಥಮಿಕ ವ್ಯಾಸಾಂಗವನ್ನು ಬಿಜಾಪುರದಲ್ಲಿರುವ ಸ್ನೇಹಿ ಸಂಗಮ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದ್ದೇನೆ. ನನ್ನ ಪ್ರೌಢ ಶಿಕ್ಷಣದ ವ್ಯಾಸಂಗವನ್ನು ಸ್ನೇಹಿ ಸಂಗಮ ಪ್ರೌಢ ಶಾಲೆಯಲ್ಲಿ ಮುಗಿಸಿದ್ದೇನೆ. ನನ್ನ ಇಷ್ಟದಂತೆಯೇ ನನಗೆ ಪ್ರಿಯವಾದ ವಾಣಿಜ್ಯ ವಿಷಯವನ್ನು ಲೊಯೆಲ್ಲಾ ಪಿಯು ಕಾಲೇಜಿನಲ್ಲಿ ಮುಗಿಸಿದ್ದೇನೆ. ನನಗೆ ಅಲ್ಲಿ ಒಳ್ಳೆಯ ಶಿಕ್ಷಣ ದೊರೆತ ಕಾರಣ ನಾನು ಒಳ್ಳೆಯ ಅಂಕಗಳಿಂದ ಉತ್ತೀರ್ಣಗೊಂಡೆ. ‘ಲೊಯೊಲಾ’ ಎಂಬ ಬೆಪ್ಟಿಸ್ಟರ ಕ್ರಿಶ್ಚಿಯನ್ ಇನ್ಸ್ಟಿಟ್ಯುಟ್ ನಲ್ಲಿ ಕಲಿಯುವ ಅವಕಾಶವು ನನಗೆ ಕೊಟ್ಟ ದೈರ್ಯ ಅಷ್ಟಿಟ್ಟಲ್ಲ. ಈ ಇನ್ಸ್ಟಿಟ್ಯುಟ್ ನನಗೆ ಪಿಯುಸಿಯಲ್ಲಿ 80% ಅಂಕವನ್ನು ಗಳಿಸಿ ಈಗ ಕರ್ನಾಟಕದಲ್ಲಿ ಅತ್ಯುನ್ನತ ಶಕ್ಷಣ ನೀಡುತ್ತಿರುವ ಅತೀ ದೊಡ್ಡ ಶಿಕ್ಷಣ ಸಂಸ್ಥೆಯಿಂದ ಅಲೋಶಿಯಸ್ ನಲ್ಲಿ ಕಲಿಯುವ ಅವಕಾಶ ಮಾಡಿಕೊಂಡಿದ್ದೇನೆ. ನಾನು ಮುಂದೆ ವಾಣಿಜ್ಯದ ವಿಷಯದಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕೆಂದುಕೊಂಡಿದ್ದೇನೆ. ಇದು ನನ್ನ ಬಗ್ಗೆ ಒಂದು ಕಿರು ಪರಿಚಯ.