ವಿಷಯಕ್ಕೆ ಹೋಗು

ಸದಸ್ಯ:Bharathbharadwajhs/sandbox3

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಡು ಮುಟ್ಟದ ಬಳ್ಳಿ[ಬದಲಾಯಿಸಿ]

ವರ್ಣನೆ[ಬದಲಾಯಿಸಿ]

ರಸ್ತೆ ಬದಿಯಲ್ಲಿ, ಹೊಲಗಳ ಬದುಗಳ ಮೇಲೆ, ತೋಟದಲ್ಲಿ ಹಾಗೂ ಕಾಡಿನಲ್ಲಿ ಬೆಳೆಯುವಂತಹ ಉಪಯುಕ್ತವಾದಂತಹ ಗಿಡಮೂಲಿಕೆಯ ಸಸ್ಯ ಇದಾಗಿದೆ. ನೆಲದ ಮೇಲೆ ಅಥವಾ ಮುಳ್ಳು ತಂತಿಗಳ ಮೇಲೆ ಹಬ್ಬುತ್ತದೆ. ಬುಡದಿಂದ ಹೊರಟು ಬಳ್ಳಿಗಳು ಒಂದಕ್ಕೊಂದು ಹೆಣೆದುಕೊಂಡು ಬೆಳೆಯುತ್ತದೆ. ಎಲೆಗಳು ಹಸಿರು ಮತ್ತು ಮೃದುವಾಗಿರುತ್ತದೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಎಲ್ಲರಿಗೂ ಚಿರಪರಿಚಿತವಿರುವ ಗಿಡಮೂಲಿಕೆ ಇದಾಗಿದೆ.

ಸರಳ ಚಿಕಿತ್ಸೆಗಳು[ಬದಲಾಯಿಸಿ]

ಈ ಬಳ್ಳಿಯ ಎಲೆ, ಬೇರು, ಬಳ್ಳಿ ಬಹಳ ಉಪಯೋಗಿ ಭಾಗಗಳು. ಪಿತ್ತವನ್ನು ಶಮನ ಮಾಡಿ ಹುಣ್ಣು ಮತ್ತು ಕುರವನ್ನು ಶಮನ ಮಾಡುವುದು.

ಗಾಯಗಳಲ್ಲಿ ಹುಳುಗಳು ಬಿದ್ದರೆ[ಬದಲಾಯಿಸಿ]

ಈ ಬಳ್ಳಿಯ ಒಂದುಹಿಡಿ ಹಸಿರೆಲೆಯನ್ನು ತಂದು ಚೆನ್ನಾಗಿ ಜಜ್ಜಿ ರಸ ಹಿಂಡಿ ಹುಣ್ಣಿನ ಮೇಲೆ ಲೇಪಿಸುವುದು.

ರಕ್ತ ಪಿತ್ತದಲ್ಲಿ[ಬದಲಾಯಿಸಿ]

ಈ ಬಳ್ಳಿಯ ಹಸಿರೆಲೆಗಳನ್ನು ತಂದು ಚೆನ್ನಾಗಿ ಜಜ್ಜಿ ರಸ ಹಿಂಡಿ ಶುಭ್ರವಾದ ಬಟ್ಟೆಯಲ್ಲಿ ಸೋಸುವುದು. ಇದರಲ್ಲಿ ಕಾಲು ಚಮಚ ರಸಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ಕಲ್ಲು ಸಕ್ಕರೆ ಪುಡಿ ಸೇರಿಸಿ ಕುಡಿಸುವುದರಿಂದ ರಕ್ತ ಪಿತ್ತ ಕಡಿಮೆಯಾಗುತ್ತದೆ.

ಹೊಟ್ಟೆ ನೋವಿಗೆ[ಬದಲಾಯಿಸಿ]

ಒಂದು ಹಿಡಿ ಆಡು ಮುಟ್ಟದ ಬಳ್ಳಿಯ ಹಸಿರೆಲೆಗಳನ್ನು ನೀರಿನಲ್ಲಿರಿಸಿ ರಸ ತೆಗೆದುಕೊಂಡು ಕಾಲು ಚಮಚ ರಸವನ್ನು ಕುಡಿಸುವುದು ಅಥವಾ ಒಣಗಿದ ಎಲೆಗಳ ಕಷಾಯ ಮಡಿ ಕುಡಿಸುವುದು.

ಸರ್ಪದ ವಿಷಕ್ಕೆ[ಬದಲಾಯಿಸಿ]

ಈ ಬಳ್ಳಿಯ ಹಸಿರೆಲೆಗಳನ್ನು ತಂದು ನೀರಿನಲ್ಲಿ ನುಣ್ಣಗೆ ಅರೆದು ರಸವನ್ನು ಕುಡಿಸುವುದು.

ಕೈಮಸಕು( ಮದ್ದೀಡು )[ಬದಲಾಯಿಸಿ]

ಆಡುಸೋಗೆ ಬಳ್ಳಿಯ ಹಸಿರೆಲೆಗಳನ್ನು ನುಣ್ಣಗೆ ಜಜ್ಜಿ ರಸ ತೆಗೆಯುವುದು. ಅರ್ಧ ಟೀ ಚಮಚ ರಸಕ್ಕೆ ಸ್ವಲ್ಪ ಹಸುವಿನ ಹಾಲು ಸೇರಿಸಿ ಚೆನ್ನಾಗಿ ಕದಡಿ ಒಂದು ಏಲಕ್ಕಿ ಕಾಳು ಚೂರ್ಣ ಹಾಕಿ ಬೆಳಿಗ್ಗೆ ಒಂದು ಸಾರಿ ಕುಡಿಸುವುದು. 4-5 ಸಾರಿ ವಾಂತಿಯಾಗಿ ಹಾಕಿರಬಹುದಾದ ಮದ್ದು ಬಿದ್ದು ಹೋಗುವುದು. ವಾಂತಿಯು ಹೆಚ್ಚಾದರೆ ತುಪ್ಪ ಮತ್ತು ಮಜ್ಜಿಗೆಯ ಅನ್ನ ಉಣಿಸುವುದು.

ಅರೆ ತಲೆ ನೋವಿಗೆ[ಬದಲಾಯಿಸಿ]

ಆಡು ಮುಟ್ಟದ ಎಲೆಯ ರಸ 20 ಗ್ರಾಂ, ನಾರುಂ ಬೇಳೆಯ ಸೊಪ್ಪಿನ ರಸ 20 ಗ್ರಾಂ ಸೇರಿಸಿ ಹಸುವಿನ ತುಪ್ಪದಲ್ಲಿ ಹಾಕಿ ಕಾಯಿಸುವುದು. ತಲೆಗೆ ಹಚ್ಚಿ ಅಭ್ಯಂಜನ ಸ್ನಾನ ಮಾಡುವುದರಿಂದ ತಲೆ ನೋವು ಶಮನವಾಗುತ್ತದೆ.

ಪಿತ್ತ ಮತ್ತು ಕಫದಲ್ಲಿ[ಬದಲಾಯಿಸಿ]

ಆಡು ಮುಟ್ಟದ ಬಳ್ಳಿಯ ಬೇರನ್ನು ತಂದು ತೊಳೆದು ಚೆನ್ನಾಗಿ ಜಜ್ಜಿ, ಬಟ್ಟೆಯಲ್ಲಿ ಹಾಕಿ ಹಿಂಡಿ ರಸ ತೆಗೆಯುವುದು. ಒಂದೂಕಾಲು ಚಮಚ ರಸವನ್ನು ಹಾಲಿನೊಂದಿಗೆ ಸೇರಿಸಿ ಕೊಡುವುದು. ಇದರಿಂದ ಬೆವರು ಬಂದು ವಾಂತಿ ಆಗಿ ಪಿತ್ತದೊಂದಿಗೆ ಸೇರಿರುವ ಕಫವು ಪರಿಹಾರವಾಗುವುದು. ವಾಂತಿ ಹೆಚ್ಚಾದರೆ ಮಜ್ಜಿಗೆಯ ಅನ್ನ ತಿನ್ನುವುದು.

ವಿಶೇಷ ಎಚ್ಚರಿಕೆ[ಬದಲಾಯಿಸಿ]

ಆಡು ಮುಟ್ಟದ ಬಳ್ಳಿಯ ಔಷಧವನ್ನು ಹೊಟ್ಟೆಗೆ ಕೊಡುವಾಗ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.