ವಿಷಯಕ್ಕೆ ಹೋಗು

ಸದಸ್ಯ:K radha reddy/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂತ ಅಲೋಶಿಯಸ್ ಚಾಪೆಲ್ ಮಂಗಳೂರಿನ ಹೃದಯ ಭಾಗದಲ್ಲಿದೆ. ಲೈಟ್ ಹೌಸ್ ಹಿಲ್ ನಲ್ಲಿರುವ ಸಂತ ಅಲೋಶಿಯಸ್ ಕಾಲೇಜು ಆವರಣದಲ್ಲಿರುವ ಈ ಚಾಪೆಲ್ ನ ಕಟ್ಟಡ ಜೆಸುವಿಟ್ ಮಿಶನರಿಗಳಿಂದ ೧೮೮೪ರಲ್ಲಿ ನಿರ್ಮಿಸಲ್ಪಟು,೧೮೯೯ರಲ್ಲಿ ಇಟಲಿಯನ್ ಕ್ರೈಸ್ತ ಧರ್ಮಭೋಧಕ-ಕಲಾವಿದ ಆಂಟೋನಿಯೋ ಮೋಶಿನಿಯು ಇಲ್ಲಿನ ಒಳಗೋಡೆಗಳನ್ನು ಕುಸುರಿ ಕಲೆಯಿಂದ ಸಿಂಗರಿಸಿದ.

ಇತಿಹಾಸ

[ಬದಲಾಯಿಸಿ]

ಸಂತ ಅಲೋಶಿಯಸ್ ಚಾಪೆಲ್ ರೋಮಿನ ಚಾಪೆಲ್ ಗಳಿಗೆ ಸರಿದೂಗುವಂತಹ ಸುಂದರ ಕಲಾವಂತಿಕೆಯನ್ನು ಹೊಂದಿದೆ.ಇಲ್ಲಿನ ಗೋಡೆಗಳ ಇಂಚಿಂಚುಗಳಲ್ಲೂ ಅದ್ಭುತ ವರ್ಣಚಿತ್ರಗಳನ್ನು ಬಿಡಿಸಲಾಗಿದೆ.ಈ ಚಿತ್ರಕಾರ ಇಟೆಲಿಯಿಂದ ಆಗಮಿಸಿದ ಬ್ರದರ್ ಮೋಶಿನಿ. ಸಂತ ಅಲೋಶಿಯಸ್ ಗೋನ್ಸಗಾ ಅವರ ಜೀವನದ ವಿವಿಧ ಸಂದ್ರಭಗಳನ್ನು ಚಾಪೆಲಿನ ಮೇಲ್ಛವಣಿಯ ಮಧ್ಯಭಾಗದ ವರ್ಣಚಿತ್ರಗಳಲ್ಲಿ ಮೂಡಿಸಲಾಗಿದೆ . ಎಡಭಾಗದ ಮೊದಲ ಮೂರುಸಲುಗಳಲ್ಲಿ ಅಲೋಶಿಯಸ್ ಮಗುವಾಗಿದ್ದಾಗ. ಫ್ಲಾರೆನ್ಸ್ ನಲ್ಲಿ ಮಾತೆ ಮರಿಯಮ್ಮಳ ಅಲ್ತರಿನೆದುರು ತನ್ನನ್ನು ದೇವರಿಗರ್ಪಿಸುದಾಗಿ ಪ್ರಮಾಣಿಸುವ ಚಿತ್ರ ,ತನ್ನ ನಗರದ ಜನತೆಗೆ ದೇವರ ಮಹಿಮೆಯನ್ನು ಉಪದೇಶಿಸುವ ಚಿತ್ರ,ಅಲೋಶಿಯಸರ ಪ್ರಥಮ ಸೇವದೀಕ್ಷೆಯ ಚಿತ್ರ, ಜೆಸುವಿಟ್ ದೀಕ್ಷೆಗಗಿ ಅಭ್ಯರ್ಥನ ಸಲ್ಲಿಸುವ ಸನ್ನಿವೇಶ ಮೂಂತದ ಚಿತ್ರಗಳಿವೆ. ಅಲೋಶಿಯಸರ ಮೂಂದಿನ ಹಂತಗಳ ಘಟನೆಗಳು ಅಲ್ತರಿನ ಮೇಲ್ಬದಿ ಗೋಡೆಯ ಚಿತ್ರಗಳಲ್ಲಿ ಕಾಣಿಸಲಾಗಿದೆ. ನಡುವಣ ಚಿತ್ರ ರೋಮಿನಲ್ಲಿ ಫ್ಲೇಗ್ ಕಾಣಿಸಿಕೊಂಡಾಗ ಸಂತ್ರಸ್ತರಿಗೆ ಅಲೋಶಿಯಸ್ ಸೇವೆ ನೀಡುತ್ತಿರುದನ್ನು ತೋರಿಸಲಾಗಿದೆ. ಫ್ಲೇಗಿನೊಂದಿಗೆ ಹೋರಾಡುತ್ತಾ ಅಲೋಶಿಯಸ್ ತನ್ನ ೨೧ನೆಯ ವಯಸ್ಸಿನಲ್ಲೇ ಪ್ರಾಣ ತೆತ್ತರು .ಕೆಳಕ್ಕೆ ಚಾಚಿಕೊಂಡಿರುವ ಛಾವಣಿಯಲ್ಲಿ ಪ್ರವಾದಿಗಳು ಹೂವಿನ ಹಾರಗಳೊಂದಿಗೆ ಬಿಳಿ ಸಾರುವ ನೋಟವಿದೆ. ಇಲ್ಲಿನ ಹೂಹಾರಗಳು ಒಂದೊಂದೂ ಪ್ರತ್ಯಪ್ರತ್ಯೇಕ ಹೂಗಳಿಂದ ಕೂಡಿದೆ. ಹಾರ ಹಿಡಿದ ದೇವದೂತರ ಅಳೆತ್ತರ ಚಿತ್ರಗಳಿವೆ . ಮೇಲ್ಭಾಗದ ವೃತ್ತವು ಚರ್ಚಿನ ನಂತರ ಚಿತ್ರಗಳನ್ನು ಹೊಂದಿದರೆ ಕೆಳಭಾಗದ ವೃತ್ತದಲ್ಲಿ ಜೆಸುವೆಟ್ ಸಂತರ ಚಿತ್ರಗಳಿವೆ. ಹಿಂಭಾಗದ ಗೋಡೆಯಲ್ಲಿ ಏಸು ಕ್ರಿಸ್ತರು ಮಕ್ಕಳೊಂದಿಗೆ ಗೆಳತನದಲ್ಲಿರುವ ಚಿತ್ರಗಳಿವೆ. ಏಸುಕ್ರಿಸ್ತರ ಜೀವನ ಘಟನಾವಳಿಯನ್ನು ತೋರಿಸುವ ಹಲವಾರು ಚಿತ್ರಗಳೂ ಇಲ್ಲಿವೆ. ಫ್ರೆಶ್ಕೋ ಹಾಗೂ ಕ್ಯಾನ್ ವಾಸ್ ಎರಡೂ ವಿಧದ ಚಿತ್ರಗಳು ಈ ಚಾಪೆಲಿನಲ್ಲಿವೆ.[]

ಚಾಪೆಲ್ ಕಲಾವಿದ ಮೋಶಿನಿ

[ಬದಲಾಯಿಸಿ]

ಅಂಟೋನಿಮೊ ಮೋಶಿನಿಯವರು ಇಟೆಲಿಯ ಟೆಝ್ಝನೋ ಎಂಬ ಹಳ್ಳಿಯಲ್ಲಿ ೧೮೫೪ರ ಜನವರಿಯ ೧೭ರಂದು ಜನಿಸಿದರು. ಎಳವೆಯಲ್ಲಿ ಇವರು ಕಲಾಭಿರುಚಿಯನ್ನು ಗಮನಿಸಿ ಅವರನ್ನು ಬೆರ್ಗಾನಿಯಾದ ಕರಾರಾ ಆಕಾಡೆಮಿ ಎನ್ನುವ ಕಲಾಶಾಲೆಗೆ ಸೇರಿಸಲಾಯಿತು. ಅಲ್ಲಿ ಮೋಶಿನಿ ನುರಿತ ಶಿಕ್ಷಕರಿಂದ ತರಬೇತಿ ಪಡೆದು ಪೈಂಟಿಗ್ ಕಲೆಯಲ್ಲಿ ನಿಷ್ಣಾತರಾದರು. ಮುಂದೆ ರೋಮ್ ನಗರದಲ್ಲಿ ವೆಟಿಕನ್ ನ ಹೆಸರಾಂತ ಕಲಾ ವಿಭಾಗಗಳನ್ನು ಅಭ್ಯಸಿಸಿದರು. ೧೮೮೯ರಲ್ಲಿ ಅಂಟೋನಿಯೋ ತನ್ನ ಕಲಾಪ್ರದರ್ಶನ ನಡೆಸಿ ಖ್ಯಾತರಾಗುವುದರೊಂದಿಗೆ ದೈವಿಕ ಸೇವೆಯನ್ನು ಕೈಕೊಂಡರು. ಮುಂದೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಚಾಪೆಲ್ ಚಿತ್ರ ನಿರ್ಮಾಣಕ್ಕಾಗಿ ಅವರನ್ನು ಮಂಗಳೂರಿಗೆ ಕಳುಹಿಸಲಾಯಿತು. ಇಲ್ಲಿ ಎರಡು ವರ್ಷಗಳ ಅವಧಿಯಲ್ಲಿ ಮೋಶಿನಿ ಅದ್ವಿತೀಯ ಚಿತ್ರಗಳಿಂದ ಚಾಪೆಲನ್ನು ಅತ್ಯಾಕರ್ಷಕಗೊಳಿಸಿದರು.

ಉಲ್ಲೇಖಗಳು

[ಬದಲಾಯಿಸಿ]
  1. https://mangalorehistory.blogspot.in/2013/02/blog-post.html