ವಿಷಯಕ್ಕೆ ಹೋಗು

ಸದಸ್ಯ:Kathreena V.V/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಫಾರ್ಮಕಾಲಜಿ' ಆರೋಗ್ಯದಲ್ಲೂ ರೋಗಗಳಲ್ಲೂ ಮೈ ಅಂಗರಚನೆ, ನಿಜಗೆಲಸಗಳ ತಿಳಿವಳಿಕೆ ಮುಂದಿನ 3 ಶತಮಾನಗಳಲ್ಲಿ ಕೂಡಿಬಂದಿತಾದರೂ ರೋಗಚಿಕಿತ್ಸೆ ಮಾತ್ರ ಒಂದು ಕಲೆಯಾಗಿತ್ತೇ ಹೊರತು ವಿಜ್ಞಾನ್ರವಾಗಿರಲಿಲ್ಲ. ವೈದ್ಯದಲ್ಲಿ ಬಳಸುವ ಮದ್ದುಗಳಿಗೇ ಡೇಲ್ (1692) ಫಾರ್ಮಕಾಲಜಿ (ಔಷಧವಿಜ್ಞಾನ) ಪದವನ್ನು ಮೊದಲು ಬಳಸಿದ್ದ. ಆಗಿನ ಕಾಲದಲ್ಲಿ ಒಣಗಿಸಿದ ಕರಿನಾಗರ, ನರಿಗಳ ಪುಪ್ಪುಸ, ಗಲ್ಲಿಗೇರಿದವರ ತಲೆ ಸುಂಡುಗಳ ಜೊತೆಗೆ ಕೆಲವು ಗುಣಕಾರಿ ಮದ್ದುಗಳೂ ವೈದ್ಯದಲ್ಲಿ ಬಳಕೆಯಲ್ಲಿದ್ದುವು. 1850ರ ಸುಮಾರಿನಲ್ಲಿ ಫ್ರೆಂಚ್ ಅಂಗಕೆಲಸ ವಿಜ್ಞಾನಿ ಫ್ರಾಂಕಾಯ್ಸ್‌ ಮೆಜೆಂಡಿ ತೋರಿಸಿಕೊಡುವ ತನಕ ಮದ್ದುಗಳ ವರ್ತನೆಯನ್ನು ತಿಳಿಯಲು ಪ್ರಯೋಗಾಲಯದ ಶೋಧನೆಗಳ ಸುಳಿವೇ ಇರಲಿಲ್ಲ. ಮೈಯಲ್ಲಿ ನಡೆಯುತ್ತಿರುವ ನಿಜಗೆಲಸಗಳಲ್ಲಿನ ಬದಲಾವಣೆಗಳನ್ನು ಗುರುತಿಸಿ ಅಳೆಯುವಂಥ ವಿಧಾನಗಳನ್ನು ಹೊಸ ಅಂಗ ಕೆಲಸ ವಿಜ್ಞಾನಿಗಳು ಹೊರತಂದ ಮೇಲೆ ರಾಸಾಯಾನಿಕ ವಸ್ತುಗಳ ಮೈಮೇಲಿನ ಪ್ರಭಾವಗಳನ್ನು ಗುರುತಿಸುವಂತಾಯಿತು. ಇದಕ್ಕೂ ಹೆಚ್ಚಿನದಾಗಿ, ರಸಾಯನ ವಿಜ್ಞಾನದಲ್ಲಿ ಬಹಳ ಮುನ್ನಡೆಯಾಗಿತ್ತು. ಒಂದೊಂದೂ ಒಂದೊಂದು ತೆರೆನಾಗಿದ್ದುದರಿಂದ ಕಚ್ಚುಮದ್ದು, ಮೂಲಿಕೆಗಳ ಕಷಾಯಗಳಿಂದ ಪ್ರಯೋಗ ಈಡೇರುತ್ತಿರಲಿಲ್ಲ. 19ನೆಯ ಶತಮಾನದ ಮೊದಲಲ್ಲಿ ಫ್ರಾನ್ಸ್‌, ಜರ್ಮನಿಗಳ ರಸಾಯನ ವಿಜ್ಞಾನಿಗಳು ಗಿಡಮರಗಳಿಂದ ಚೊಕ್ಕ ರೂಪದಲ್ಲಿ ಕ್ವೀನೀನು, ಮಾರ್ಫೀಯ, ಸ್ಟಿಕ್ನೀನು, ಅಟ್ರೋಪೀನುಗಳೇ ಮುಂತಾದುವನ್ನು ಬೇರ್ಪಡಿಸಿದಾಗ ಸ್ಥಿತಿ ಉತ್ತಮವಾಯಿತು.

ಚೊಕ್ಕ ರೂಪದಲ್ಲಿ ಮದ್ದುಗಳು ದೊರಕುವಂತಾಯಿತು. ಜರ್ಮನಿಯಲ್ಲಿ ಮುಖ್ಯವಾಗಿ ಬಣ್ಣವಸ್ತುಗಳ ತಯಾರಿಕೆಯಲ್ಲಿ ಉಪಉತ್ಪನ್ನಗಳಾಗಿ ಬಂದವೇ ಹೊಸ ಮದ್ದುಗಳ ವಿಕಾಸಕ್ಕೆ ಮೂಲವಾದುವು. ಗುಂಡಿಗೆಯ ಬಡಿತ ವೇಗ, ಉಸಿರಾಟದ ಕ್ರಮ, ಮೂತ್ರಸುರಿಕೆ, ಜೊಲ್ಲು ಸುರಿತವೇ ಮುಂತಾದ ಅಂಗಕೆಲಸಗಳ ಮೇಲೆ ಈ ಹೊಸ ರಾಸಾಯನಿಕಗಳ ಪ್ರಭಾವ ಕಂಡ, ಇಲ್ಲವೇ ಅಂಗಕೆಲಸಗಳನ್ನು ಶೋದಿಸುವುದರಲ್ಲಿ ಇವನ್ನು ಮೊದಮೊದಲಲ್ಲಿ ಬಳಸಿದ ಜನರೇ ಅಂದಿನ ಔಷಧ ವಿಜ್ಞಾನಿಗಳಾಗಿದ್ದರು. ಹೀಗಿರುವಾಗ ಔಷಧವಿಜ್ಞಾನದಲ್ಲೇ ಪ್ರಯೋಗಗಳನ್ನು ನಡೆಸಲೆಂದೇ ಡೊಪಾರ್ಟಿನಲ್ಲಿ ಮೊದಲು ಕಾಲಿಟ್ಟ ಬುಖೀಂ (1847-47) ಮೈಯಲ್ಲಿ ಮದ್ದುಗಳ ಪ್ರಭಾವವನ್ನು ಸುಮ್ಮನೆ ವಿವರಿಸಿವುದೇ ಅಲ್ಲದೆ ಅರ್ಥವನ್ನೂ ಹೇಳಬೇಕೆಂದ. ತನ್ನ ಕಾಲಿನ ಮೇಲೇ ತಾನು ನಿಂತ ಪ್ರಯೋಗವಿಜ್ಞಾನವಾಗಿ ಔಷಧವಿಜ್ಞಾನವನ್ನು ನೆಲೆಗೊಳಿಸಿದವ ಜರ್ಮನಿಯ ಮಹಾವಿಜ್ಞಾನಿ ಅಸ್ವಾಲ್ಡ್‌ ಸ್ಮೀಡರ್ಬರ್ಗ್, ಆಹಾರ ವಸ್ತುಗಳನ್ನು ಬಿಟ್ಟರೆ ಮೈಮೇಲೆ ರಾಸಾಯನಿಕಗಳಿಂದಾಗುವ ಕೆಡುಕನ್ನು ತಿಳಿವುದೇ ಇದರ ಉದ್ದೇಶವೆಂದು ವಿವರಿಸಿದ. ಔಷಧವಿಜ್ಞಾನದ ಮೊಟ್ಟಮೊದಲ ಪಠ್ಯಪುಸ್ತಕವನ್ನು ಬರೆದವನೂ ಇವನೇ. ಔಷಧವಿಜ್ಞಾನದಲ್ಲಿನ ಪ್ರಯೋಗಗಳ ವರದಿಗಳಿಗೇ ಮೀಸಲಾದ ಮೊದಲ ಪತ್ರಿಕೆ ಹೊರಡಿಸಲು ನೆರವಾಗಿ ಸ್ಟ್ರಾಸ್ಬರ್ಗಿನಲ್ಲಿ ಔಷಧವಿಜ್ಞಾನಕ್ಕಾಗಿ ಒಂದು ಶಾಲೆಯನ್ನು ತೆರೆದವನೂ ಇವನೇ. ಈ ಶಾಲೆ ಪ್ರಪಂಚದ ಎಲ್ಲೆಡೆಗಳಿಂದಲೂ ಕಲಿತವರನ್ನು ಸೆಳೆಯಿತು. ಪ್ರಪಂಚದ ಬೇರೆ ಬೇರೆ ದೇಶಗಳ ವಿಶ್ವವಿದ್ಯಾನಿಲಯಗಳಲ್ಲಿ ಔಷಧವಿಜ್ಞಾನ ಇಲಾಖೆಗಳನ್ನು ತೆರೆದವರು ಒಂದಿಲ್ಲೊಂದು ರೀತಿಯಲ್ಲಿ ಇಲ್ಲಿ ಕಲಿತು ಚಿಗುರಿ ಮೊಳೆತವರೇ.

ಗುರಿ, ವಿಧಾನಗಳು ಮದ್ದುಗಳಿಂದ ಮೈಮೇಲೆ ಆಗುವ ಪ್ರಬಾವಗಳನ್ನು ಚೆನ್ನಾಗಿ ತಿಳಿಯಬೇಕಾದರೆ ಮೊದಲು ಅಂಗಗಳ ನಿಜಗೆಲಸಗಳನ್ನು ತಿಳಿದುಕೊಂಡು ಅಳೆಯುವುದು ಗೊತ್ತಿರಬೇಕು. ಅಲ್ಲದೆ, ಪೆಟ್ಟು, ಗಾಯ, ರೋಗಗಳಿಂದ ಅಂಗರಚನೆ, ನಿಜಗೆಲಸಗಳಲ್ಲಿ ಆಗುವ ಬದಲಾವಣೆಗಳನ್ನು ತಿಳಿಸಿಕೊಡುವ ರೋಗವಿಜ್ಞಾನದ (ಪೆಥಾಲಜಿ) ಅರಿವು ಚೆನ್ನಾಗಿರಬೇಕು. ಇದನ್ನು ತಿಳಿಯಲು ಬದುಕಿರುವ ಪ್ರಾಣಿಗಳ ಅಂಗಗಳನ್ನು ಬರಿಗಣ್ಣಿನಿಂದ ನೋಡುವುದಲ್ಲದೆ ಊತಕಗಳು, ಜೀವಕಣಗಳನ್ನು ಸೂಕ್ಷ್ಮದರ್ಶಿಯ ಅಡಿಯಲ್ಲೂ ಮೈರಸಗಳು, ಮಲ, ಮೂತ್ರ, ಬೆವರೇ ಮುಂತಾದವನ್ನು ರಾಸಾಯನಿಕವಾಗೂ ಪರೀಕ್ಷಿಸಬೇಕಾಗಬಹುದು. ಮೈಯೊಳಗಿನ ನಿಜಗೆಲಸಗಳ ಮೇಲೆ ಮದ್ದುಗಳ ಪ್ರಭಾವ ಗೊತ್ತಾಗಬೇಕಾದರೆ ಜೀವರಸಾಯನವಿಜ್ಞಾನ ತಿಳಿದಿರಲೇಬೇಕು. ನಂಜುರೋಧಕಗಳು (ಆಣಟಿಸೆಪ್ಟಿಕ್ಸ್‌), ಜೀವನಿರೋಧಕ (ಆಂಟಿಬಂiೆÆಟಿಕ್) ಮದ್ದುಗಳ ಪ್ರಭಾವ ಕಾಣಬೇಕಾದರೆ ಏಕಾಣುಜೀವಿವಿಜ್ಞಾನದ (ಬ್ಯಾಕ್ಟೀರಿಯಾಲಜಿ) ಕಲ್ಪನೆ, ವಿಧಾನಗಳ ತಿಳಿವಳಿಕೆ ಇರಲೇಬೇಕು. ಗಿಡಮೂಲಿಕೆ, ನಾರುಬೇರುಗಳಲ್ಲಿನ ಮದ್ದುಗಳನ್ನು ಪಡೆಯಲು ರಸಾಯನವಿಜ್ಞಾನ, ಸಸ್ಯವಿಜ್ಞಾನಗಳು ಗೊತ್ತಿರಬೇಕಾಗುತ್ತದೆ. ಒಂದು ಮದ್ದಿನ ರಾಸಾಯನಿಕ ರಚನೆಗೂ ಮೈಯಲ್ಲಿ ಅದರ ವರ್ತನೆಗೂ ನಿಕಟ ಸಂಬಂಧ ಇರುವುದನ್ನು ಔಷಧವಿಜ್ಞಾನಪರಿಣತರು ಬಲುಬೇಗನೆ ಕಂಡುಕೊಂಡರು. ರಸಾಯನವಿಜ್ಞಾನಪಟುಗಳು ಮೂಲದವನ್ನು ಹೋಲುವ ಹೊಸ ಮದ್ದುಗಳನ್ನು ತಯಾರಿಸಿದಂತೆಲ್ಲ ಇದು ಇನ್ನಷ್ಟು ಖಚಿತವಾಗುತ್ತ ಬಂದಿದೆ. ಮದ್ದುಗಳಲ್ಲಿ ಗೊತ್ತಾದ ಪ್ರಭಾವಕ್ಕೆ ಕಾರಣವಾದ ರಾಸಾಯನಿಕ ರಚನೆಯ ಅಣ್ವಂಶ ತಿಳಿದರೆ, ಕೊಂಚಮಟ್ಟಿಗೆ ಬದಲಿಸಿ ಇನ್ನೂ ಒಳ್ಳೆಯ ನಿರಪಾಯಕರ ಮದ್ದುಗಳನ್ನು ಕೃತಕವಾಗಿ ತಯಾರಿಸಲು ಅನುಕೂಲ. ಬಳಕೆ ಮದ್ದುಗಳಲ್ಲಿ ಬಹುಪಾಲು ಇಂಗಾಲ ಪರಮಾಣುಗಳಿರುವುದರಿಂದ ಜೈವಿಕ ರಸಾಯನವಿಜ್ಞಾನದ ಪರಿಣತೆಯೂ ಇರಬೇಕು.