ವಿಷಯಕ್ಕೆ ಹೋಗು

ಸದಸ್ಯ:Kavya salian v/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಡದ ಕುಣಿತ[ಬದಲಾಯಿಸಿ]

ಕೊಡದ ಕುಣಿತ ಬೆಳಗಾವಿ ಜಿಲ್ಲೆಯಲ್ಲಿ ಕಂಡುಬರುವ ಒಂದು ವಿಶಿಷ್ಟವಾದ ಕುಣಿತ.ಬೆಳಗಾವಿ ಜಿಲ್ಲೆಯ ಮರಾಠಿಗರದಲ್ಲಿ ಪ್ರಚಲಿತವಿರುವ ಈ ಕಲೆಯ ಮೂಲ ಮಹಾರಾಷ್ಟೃ.ಹಬ್ಬ ಹರಿದಿನ,ಜಾತ್ರೆ ತೇರು,ಪರಿಸೆಗಳಲ್ಲಿ ಹಾಗೂ ಸಂತೋಷದ ಸಂದರ್ಭಗಳಲ್ಲಿ ಈ ಕಲೆಯನ್ನು ಪ್ರದರ್ಶಿಸುತ್ತಾರೆ.ಕೊಡ ಅಥವಾ ಬಿಂದಿಗೆಯನ್ನು ಊದುತ್ತಾ ಕುಣಿಯುವುದರಿಂದ 'ಕೊಡದ ಕುಣಿತ' ಎನಿಸಿಕೊಂಡಿದೆ. ಇಪ್ಪತ್ತರಿಂದ ಮೂವತ್ತು ಜನರಿರುವ ಈ ಕುಣಿತದಲ್ಲಿ ಒಂದೊಂದು ಬಣ್ಣದ ನಿಕ್ಕರ್ ಮತ್ತು ಬನೀನು,ತಲೆಗೊಂದು ಬಣ್ಣದ ವಸ್ತ್ರ,ಕಾಲಿಗೆ ಗೆಜ್ಜೆ,ಕೈಯಲ್ಲಿ ತಾಮ್ರ ಅಥವಾ ಹಿತ್ತಾಳೆಯ ಕೊಡ ಅಥವಾ ಬಿಂದಿಗೆ ಇವಿ‍‍‍‍‍‍‍‍‍‍ಷ್ಟು ಅವರ ವೇಷಭೂಷಣ.ಕೊಡವನು ಬಾಯಿ ಹತ್ತಿರ ಹಿಡಿದು 'ಭೋಂಭೋಂ'ಎಂದು ಊದುತ್ತಾ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ.ಪ್ರಧಾನ ಕಲಾವಿದನೊಬ್ಬ ಮಧ್ಯ ನಿಂತು ಕೊಳಲೂದುತ್ತಾನೆ.ಕೊಳಲಿನ ನಾದ ಬದಲಾದಂತ ಕುಣಿತದ ರೂಪವೂ ಬದಲಾಗುತ್ತದೆ.ಕುಣಿತದಲ್ಲಿ ಕ್ರಷ್ಣ ಲೀಲೆಗೆ ಸಂಭಂಧಿಸಿದ ಆಟಗಳೂ ಇವೆ.ಮಧ್ಯೆ ನಿಂತು ಕೊಳಲು ಊದುವ ಪ್ರಧಾನ ಗಾಯಕ ಕ್ರಷ್ಣನೆಂದು ಆತನ ಸುತ್ತ ತಿರುಗುತ್ತ ಬಿಂದಿ ಹಿಡಿದು ಕುಣಿಯುವವರೆಲ್ಲಾ ಗೋಪಿಕಾಸ್ತ್ರೀಯರೆಂದು ಕಲ್ಪನೆ ಮಾಡಿದ.ಅಷ್ಟರಲ್ಲಿ ದಾಸಯ್ಯನು ಶಂಖ ಊದುತ್ತ,ಜಾಗಟೆ ಬಾರಿಸುತ್ತ ಬರುತ್ತಾನೆ.[೧] ಕರ್ನಾಟಕ ಜನಪದ ಕಲೆಗಳ ಕೋಶ ಹಿ. ಚಿ. ಬೋರಲಿಂಗಯ್ಯ, ೧೯೯೬, ಪ್ರಸಾರಾಂಗ:ಕನ್ನಡ ವಿಶ್ವವಿದ್ಯಾಲಯ, ಹಂಪಿ



ಉಲ್ಲೇಖ[ಬದಲಾಯಿಸಿ]

  1. ಕರ್ನಾಟಕ ಜನಪದ ಕಲೆಗಳ ಕೋಶ,