ವಿಷಯಕ್ಕೆ ಹೋಗು

ಸದಸ್ಯ:Lekharavindran/ಅನುಭವದ ಕಲಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನುಭವದ ಕಲಿಕೆ

"ಅನುಭವದ ಕಲಿಕೆಯು" ಅನುಭವದ ಮೇಲೆ ಧ್ಯಾನ ಮಾಡಿ ಕಲಿಯುವ ಪೃಕ್ರೀಯೆ. [೧] ಅನುಭವದ ಕಲಿಕೆಯು ರೋಟ್ ಅಥವ ಡೈಡ್ಯಾಕ್ತಿಕ್ ಕಲಿಕೆಯಗಳಿಂದ ಭಿನ್ನವಾಗಿದೆ. ಇವುಗಳಲ್ಲಿ ಕಲಿಯುವವನು ನಿಷ್ಕ್ರಿಯವಾಗಿರುತ್ತಾನೆ. [೨] ಇದು ಇತರ ಕ್ರಿಯಾತ್ಮಕ ಕಲಿಕೆಯ ವಿಧಾನಗಳನ್ನು ಹೋಲಿಸುತ್ತಾದರೂ, ಅವರಿಗಿಂತ ಸೂಕ್ಷ್ಮರೀತಿಯಲ್ಲಿ ಭಿನ್ನತೆಯನ್ನು ಒಳಗೊಂಡಿದೆ. [೩]

ಅನುಭವದ ಕಲಿಕೆಯನ್ನು ಹಲವುಬಾರಿ "ಅನುಭವದ ಶಿಕ್ಷಣ" ಕ್ಕೆ ಹೋಲಿಸಲಾಗುತ್ತದೆ. ಅನುಭವದ ಶಿಕ್ಷಣ ಒಂದು ವಿಶಾಲವಾದ ತತ್ವಶಾಸ್ತ್ರನೇ ಸರಿ; ಅನುಭವದ ಕಲಿಕೆಯು ಒಂದು ರೀತಿಯ ವೈಯುಕ್ತಿಕ ಪ್ರಕ್ರಿಯೆ. [೪] ಅನುಭವದ ಶಿಕ್ಷಣವನ್ನು ಅನುಭವದ ಕಲಿಕೆಯಜೊತೆ ತುಲನೆ ಮಾಡುವುದರಲ್ಲಿ, ಅನುಭವದ ಕಲಿಕೆಯು ಕಲಿಯುವವನ ಹಾಗು ಕಲಿಯುವ ಸಂದರ್ಭ ಮತ್ತು ಕ್ರಮಸ್ಥಿತಿಯನ್ನು ಉದ್ದೇಸಿಸುತ್ತದೆ.

ಅನುಭವದ ಕಲಿಕೆಯ ಪರಿಕಲ್ಪನೆ ಪ್ರಾಚೀನವಾದದ್ದು. ಸುಮಾರು ಕ್ರಿ.ಪು. ೩೫೦ ಶತಮಾನದಲ್ಲಿ ಆರಿಸ್ಟೊಟಲ್ ತಮ್ಮ "ನಿಕೊಮಕಿಯನ್ ಎಥಿಕ್ಸ್'ನಲ್ಲಿ "ನಾವು ಮಾಡುವ ಮುಂಚೆ ಕಲಿಯಬೇಕಾದ ಕೆಲಸಗಳನ್ನು, ನಾವು ಮಾಡಿ ಕಲಿಯಬೇಕು' ಎಂದು ಬರೆದಿದ್ದಾರೆ. [೫] ಆದರೆ, ಸ್ಪಸ್ಟವಾದ ಶೈಕ್ಷಣಿಕ ಕ್ಷೇತ್ರವಾಗಿ ಅದು ಬಹಳ ನೂತನ ವಿಚಾರ. ೧೯೭೦ರಲ್ಲಿ, ಡೇವಿಡ್ ಎ. ಕೊಲ್ಬೆರವರು ಜಾನ್ ಡುವಿ, ಕರ್ಟ್ ಲುವಿನ್ ಹಾಗು ಜ್ಯಾಂ ಪಿಯಾಜೆಟ್ರ್ ರವರಿಂದ ಅನುಭವದ ಕಲಿಕೆಯ ನವೀನ ತತ್ವದ ಬೆಳವಣಿಗೆ ಮಾಡಿದರು. [೬]


ಕೊಲ್ಬೆರವರ ಅನುಭವದ ಕಲಿಕೆಯ ಮಾದರಿ[ಬದಲಾಯಿಸಿ]

ಅನುಭವದ ಕಲಿಕೆಯು ವ್ಯಕ್ತಿಯ ಕಲಿಯುವ ಪ್ರಕ್ರಿಯೆಯನ್ನು ಕೇಂದ್ರೀಕರಿಸುತ್ತದೆ. ಉದಾಹರಣೆಗೆ, ಪುಸ್ತಕದಿಂದ ಪ್ರಾಣಿಗಳ ಬಗ್ಗೆ ಒದುವ ಬದಲು, ಮ್ರ್‍ಅಗಾಲಯಕ್ಕೆ ಭೇಟಿ ನೀಡಿ ಕಲಿಯುವುದು. ಇಲ್ಲಿ, ಒಬ್ಬ ಬೆರೆಯವರಿಂದ ಕೇಳದೆ ಅಥವ ಪರರ ಅನುಭವವನ್ನು ಓದದೆ, ಸ್ವತಃ ತಾನಾಗಿ ಹೊಸ ಅನುಭವವನ್ನು ಪಡೆಯುತ್ತಾನೆ. ಹಾಗೆಯೇ, ಇಂತರ್ನ್ಶಿಪ್ ಮತ್ತು ಕೆಲಸದ ಮುನ್ನ ಮಾಡುವ ಕಾರ್ಯಗಳು ವಿಧ್ಯಾರ್ಥಿಯ ಪರಿಸರವನ್ನು ಪೂರ್ಣ ಅರಿವನ್ನು ಹೆಚ್ಚಿಸುತ್ತದೆ.

ಇನ್ನೊಂದು ಉದಾಹರಣೆಯಿಂದ ಕೊಲ್ಬೆರವರ ಅನುಭವದ ಕಲಿಕೆಯ ನಾಲ್ಕು ಪ್ರಕ್ರಿಯೆಗಳನ್ನು ವಿವರಿಸಬಹುದು. ಅದು, ಮೊಟರ್ ಬೈಕನ್ನು ಕಲಿಯುವ ಉದಾಹರಣೆ. [೭][೮] ಇದರಲ್ಲಿ, ವಿಧ್ಯಾರ್ಥಿಯು ಬೈಕನ್ನು ನಿಜವಾಗಿ ಅನುಭವಿಸುತ್ತಾನೆ. ಇದು ಸ್ಪಷ್ಟವಾದ ಕಲಿಕೆಯ ಘಟ್ಟ.[೧೦] ಇದು ವೀಕ್ಷಣೆಗೆ ಮೂಲವಾಗಿ, ವಿದ್ಯಾರ್ಥಿಗೆ ಯಾವುದು ಸರಿಯಾಗಿ ಹಾದು ಯಾವುದು ಸರಿಯಾಗದೆ ಕೆಲಸಮಾಡುತ್ತದೆ ಎಂದು ಗೊತ್ತಾಗುತ್ತದೆ. ಇದರಿಂದ ಬೈಕನ್ನು ಇನ್ನೊಂದು ಸಲ ಓಡಿಸುವಾಗ ಉಪಯೋಗವಾಗುತ್ತದೆ. (ಎಬ್ಸ್ಟ್ಯಾಕ್ಟ್ ಕೊನ್ಸೆಪ್ಟ್) ಎಲ್ಲ ಹೊಸ ಪ್ರಯತ್ನಗಳು ಹಳೆಯ ಅನುಭವಗಳ ಮೇಲೆ ಆಧರಿತವಾಗಿ, ಯೋಚನೆ ಮತ್ತು ಪರಿಕಲ್ಪನೆಯ ಚಕ್ರವಾಗಿ ಪರಿವರ್ತನೆಯಾಗುತ್ತವೆ. [೯]

ಅನುಭಾವದ ಕಲಿಕೆಯ ಮೂಲವಸ್ತು[ಬದಲಾಯಿಸಿ]

ಅನುಭವದ ಕಲಿಕೆಯು ಶಿಕ್ಷಕರಿಲ್ಲದೆ ಅಸ್ತಿತ್ವದ್ದಲ್ಲಿರುತ್ತದೆ ಮತ್ತು ಪೂರ್ಣವಾಗಿ ವ್ಯಕ್ತಿಯ ಅರ್ಥಮಾಡುವ ಪ್ರಕ್ರಿಯದ ಮೇಲೆ ಹೊಂದಿರುತ್ತದೆ. ಜ್ನಾನ ಸಂಪಾದನೆ ನೈಸರ್ಗಿಕವಾಗಿ ಒಂದು ಅಂತರ್ಗತ ಕಾರ್ಯಾವಾದರು, ಅನುಭವದ ಕಲಿಕೆಯಲ್ಲಿ ಇತರ ಮೂಲಗಳಿರುತ್ತವೆ. ಕೊಲ್ಬೆಯ ಪ್ರಕಾರ, ಜ್ನಾನವು ವೈಯುಕ್ತಿಕವಾಗಿ ಮತ್ತು ಪರಿಸರದಿಂದ ಕೂಡ ಸಿಗುತ್ತದೆ. ಕೊಲ್ಬೆರವರು, ಜ್ನಾನವನ್ನು ಸಂಪಾದಿಸಲು ನಾಲ್ಕು ಸಾಮರ್ಥ್ಯಗಳು ಬೇಕೆಂದು ಹೇಳುತ್ತಾರೆ.

  • ವಿದ್ಯಾರ್ಥಿಯು ಹೃತ್ಪೂರ್ವಕವಾಗಿ ಅನುಭವವನ್ನು ಅಂಗಿಕರಿಸಲು ಸಿದ್ದನಾಗಬೇಕು
  • ವಿದ್ಯಾರ್ಥಿಯು ಅನುಭವದ ಮೇಲೆ ವಿಚಾರಮಾಡಲು ಸಿದ್ದನಾಗಬೇಕು
  • ವಿದ್ಯಾರ್ಥಿಯು ಅನುಭವದ ಮೇಲೆ ವಿಶ್ಲೇಷಣಾತ್ಮಕವಾಗಿ ಕಾರ್ಯ ನಡೆಸಲು ಸಿದ್ದನಾಗಬೇಕು
  • ವಿದ್ಯಾರ್ಥಿಯಲ್ಲಿ ನಿರ್ಣಯ ಮಾಡಲು ಹಾಗು ಸಮಸ್ಯೆಗೆ ಪರಿಹರ ಹುಡುಕುವ ಸಾಮರ್ಥ್ಯ ಇರಬೇಕು.

ಜಾರಿಗೊಳಿಸುವ ವಿಧಾನ[ಬದಲಾಯಿಸಿ]

ಅನುಭವದ ಕಲಿಕೆಯಲ್ಲಿ ಸ್ವಇಚ್ಛೆ, ಕಲಿಯಲು ಉದ್ದೇಶ ಹಾಗು ಕಲಿಯುವ ಅಸಕ್ತ ಹಂತವಿರಬೇಕು.[೧೦] ಕೊಲ್ಬೆಯವರ ಅನುಭವದ ಕಲಿಕೆಯ ಚಕ್ರವನ್ನು ಇಲ್ಲಿ ಉಪಯೋಗಿಸಬಹುದು. ಜೆನಿಫರ್ ಎ. ಮೂನ್ ಈ ಚಕ್ರವನ್ನು ಉದ್ದೇಶಿಸಿ ಹೇಳುವುದೇನೆಂದರೆ, ಅನುಭವದ ಕಲಿಕೆಯು ಪೂರ್ಣವಾಗಿ ಉಪಯುಕ್ತವಾಗಬೇಕಾದರೆ, ೧. ವೈಚಾರಿಕತೆಯ ಹಂತ ೨. ಅಂತರ್ಗತವಾಗಿರುವ ಅನುಭವದ ಕಲಿಕೆಯಿಂದ ಉತ್ಪನ್ನವಾಗುವ ಕಲಿಕೆಯ ಹಂತ ೩. ಮೌಲ್ಯಮಾಪನದಿಂದ ಕಲಿಯುವ ಹಂತಗಳು ಇರಬೇಕು. [೧೧] ಈ ರೀತಿಯ ಕಲಿಕೆಯಿಂದ ನಮ್ಮ ವಿಮರ್ಶೆ, ಅಭಿಪ್ರಾಯ ಹಾಗು ಕೌಶಲ್ಯಗಳಲ್ಲಿ ಬದಲಾವಣೆಗಳು ಕಂಡುಬರುತ್ತವೆ.

ಶಾಲೆಗಳಲ್ಲಿ ಅನುಭವದ ಕಲಿಕೆ[ಬದಲಾಯಿಸಿ]

ಥಿಂಕ್ ಗ್ಲೋಬಲ್ ಶಾಲೆ ನಾಲ್ಕು ವರ್ಷ ಆಧಾರಿತ ಪ್ರೌಢ ಶಾಲೆ. ಇದು ಪ್ರತಿ ಶೈಕ್ಷಣಿಕ ಅವಧಿಯಲ್ಲಿ ಒಂದು ಹೊಸ ದೇಶದಲ್ಲಿ ತರಬೇತಿಯನ್ನು ಕೈಗೊಳ್ಳುತ್ತದೆ. ಸಾಂಸ್ಕೃತಿಕ ಕಲಿಕೆ, ಸಂಗ್ರಹಾಲಯಗಳ ಭೇಟಿ, ನೈಸರ್ಗಿಕ ವೀಕ್ಷಣೆ ಮುಂತಾದವುಗಳ ಮೂಲಕ ಅನುಭವ ಆಧಾರಿತ ಕಲಿಕೆಯನ್ನು ನೀಡುತ್ತದೆ.

ಡಾಸನ್ ಶಾಲೆ - ಶೈಕ್ಷಣಿಕ ವರ್ಷದ ಎರಡು ವಾರಗಳಲ್ಲಿ ನೆರೆಹೊರೆ ರಾಜ್ಯಗಳಲ್ಲಿ ಸಮುದಾಯ ಸೇವೆ, ಗ್ರಂಥಾಲಯದ ಭೇಟಿ, ವೈಙ್ನಾನಿಕ ಸಂಸ್ಥೆಗಳ ಭೇಟಿಗಳ ಮೂಲಕ ಅನುಭವ ಆಧಾರಿತ ಕಲಿಕೆಯನ್ನು ಜಾರಿಗೊಳಿಸುತ್ತದೆ. ಇದಲ್ಲದೆ, ಅನೇಕ ಕ್ರೀಡ ಚಟುವಟಿಕೆಗಳ ಮೂಲವೂ ನಡೆಸುತ್ತದೆ. ಎಲೇನ - ಪ್ರಾಣಿ ಜೀವ ಆಧಾರಿತ ಕಲಿಕೆ ರೊಮಾನಿಯ, ಹಂಗರಿ ಮತ್ತು ಜೋರ್ಜಿಯ ಪ್ರ್‍ಅಕೃತಿ ಸಂರಕ್ಷಣೆ ಹಾಗು ಭೂ ನಿರ್ವಹಣೆ; ಜರ್ಮನಿ ಇವುಗಳ ಸಹಯೋಗದಲ್ಲಿ ಪ್ರಾಣಿ ಜೀವಶಾಸ್ತ್ರ ಸಂಗ್ರಹಣ ಹಾಗು ಇನ್ನಿತರ ಹಲವಾರು ಯೋಜನೆಗಳನ್ನು ಯೂರೋಪಿನ ಶಾಲೆಗಳಲ್ಲಿ ಕೈಗೊಳ್ಳುತ್ತಿದೆ. ಹೀಗೆ, ಮಕ್ಕಳಲ್ಲಿ ಪರಿಸರಾ ಸಂರಕ್ಷಣೆಯ ಅರಿವು ಹಾಗು ಪ್ರಕೃತಿಯ ಸೊಬಗಿನ ಮೌಲ್ಯಗಳನ್ನು ಮೂಡುತ್ತವೆ.[೧೨]

ವಾಣಿಜ್ಯ ಶೈಕ್ಷಣಿಕ ಕ್ಷೇತ್ರದಲ್ಲಿ ಅನುಭವ ಆಧಾರಿತ ಕಲಿಕೆ[ಬದಲಾಯಿಸಿ]

ಉತ್ತಮ ಶಿಕ್ಷಣದ ಮಟ್ಟ ಹೆಚ್ಚುತ್ತಿರುವುದರಿಂದ ವಾಣಿಜ್ಯ ಹಾಗು ಹಣಕಾಸಿನ ಕಾರ್ಯಕ್ರಮಗಳಲ್ಲಿ ಅನುಭವ ಆಧಾರಿತ ಕಲಿಕೆ ಅತ್ಯಗತ್ಯ. ಉದಾಹರಣೆಗೆ, ಕ್ಲ್ಯಾರ್ಕ್ ಮಾತ್ತು ವೈಟ್ ರವರ ಪ್ರಕಾರ, ಈ ರೀತಿಯ ಶಿಕ್ಷಣ ಮುಖ್ಯವಾದದು. ಹೀಗೆ ಮಾಡುವಲ್ಲಿ, ವಿದ್ಯಾರ್ಥಿಗಳಲ್ಲಿ ವೃತ್ತಿ ಜೀವನದ ಮೌಲ್ಯದ ಅರಿವು ಮೂಡುತ್ತದೆ.[೧೩] ಒಂದು ಶಾಲೆಯಲ್ಲಿಯೂ ಇದರ ಪರಿಣಾಮ ಕಾಣಬಹುದು. ಕೊಲ್ಬೆರವರು ನಾಲ್ಕು ಕಲಿಕಾ ಶೈಲಿಗಳನ್ನು ನೀಡುತ್ತಾರೆ. ಒಬ್ಬ ವ್ಯಕ್ತಿಯ ಕಲಿಕಾ ರೀತಿಯ ವಿಶ್ಲೀಷಣೆ ಇದರ ಮೂಲಕ ಮಾಡಬಹುದು. ೧. ವಿಧಗಳು 'ಡೈವರ್ಜರ್, ಅಸಿಮಿಲೆಟರ್, ಅಕೊಮೊಡೇಟರ್ ಮತ್ತು ಕನ್ವರ್ಜರ್' ಕೊಲ್ಬೆರವರ ಎಲ್.ಎಸ್.ಐ. ಕರೆಯುತ್ತಾರೆ. ೨೦೦೨ರಲ್ಲಿ ರಾಬರ್ಟ ಲಿಯೊ ರವರು ಎಂಟು ಬಗ್ಗೆಯ ವಿಶ್ಲೇಷಣೆ ಮಾಡಿದರು. ಇದರ ಫಲಿತಾಂಶ್ ಎಲ್ಲಾ ವ್ಯಕ್ತಿಗಳಿಗೆ ಈ ನಾಲ್ಕು ರೀತಿಯ ಕಲಿಕಾ ವಿಧಗಳು ಒಟ್ಟಾಗಿ ಇರುವುದಿಲ್ಲ. ಕೆಲವರಲ್ಲಿ ಹೆಚ್ಚು ರೀತಿಯಲ್ಲಿ ಅಸಿಮಿಲೆಷನ್ ಇದ್ದು ಕಡಿಮೆ ದರದಲ್ಲಿ ಎಕೊಮೊಡೇಷನ್ ಇರುವುದು. ಇದು ವಾಣಿಜ್ಯ ಕ್ಷೇತ್ರದಲ್ಲಿ ಅದೇ ರೀತಿ ಹಣ ಕಾಸಿನ ಕ್ಷೇತ್ರದಲ್ಲಿ ಒಂದು ರೀತಿಯಲ್ಲಿ ಕನ್ವರ್ಜರ್ ಹಾಗು ಇನ್ನೊಂದು ರೀತಿಯಲ್ಲಿ ಎಕೊಮೊಡೆಟರ್. ಎಲ್ಲಾ ಶಿಕ್ಷಕರು ಈ ನಾಲ್ಕು ರೀತಿಯ ಕಲಿಕಾ ಶೈಲಿಯನ್ನು ಅಳವಡಿಸಿಕೊಳ್ಳಬೇಕಾಗಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು. [೧೪] ಶಿಕ್ಷಣದಲ್ಲಿ ವೃದ್ದಿ ಜೀವನದ ತುಡುಕನ್ನು ನೀಡುತ್ತ ಅನೇಖ ರೀತಿಯಲ್ಲಿ ಕಲಿಕಾ ವಿಧಗಳನ್ನು ಎಲ್ಲಾ ಮಟ್ಟದಲ್ಲಿ ನೀಡಲಾಗುತ್ತಿದೆ. ಆಟೋಟಗಳ ಮೂಲಕ ತರಭೇತಿ ನೀಡಲಾಗುತ್ತಿದೆ.

ಹೋಲಿಕೆಗಳು[ಬದಲಾಯಿಸಿ]

ಅನುಭವ ಆಧರಿತ ಕಲಿಕೆಯು ಶೈಕ್ಷಣಿಕಾ ಕಲಿಕೆಗಿಂತ ಹೆಚ್ಚು ಪ್ರಭಾವಶಾಲಿ. ಇದರಿಂದ ವಿಷಯದ ಜ್ಞಾನ ಉತ್ತಮ ಮಟ್ಟಿಗೆ ಸಿಗುವುದು

ಶೈಕ್ಷಣಿಕ ಜೀವನವು ಅಷ್ಟೇ ಪ್ರಭಾವಶಾಲಿ. ಇದರ ಮುಖ್ಯ ತಿರುಳು ನೇರ ಅನುಭವವಿಲ್ಲದೆ ಜ್ಞಾನ ಸಂಗ್ರಾಹಣೆ.

ಅನುಭವ ಆಧಾರಿತ ಕಲಿಕೆಯಲ್ಲಿ ವಿಶ್ಲೇಷಣೆ ಮುಂದಾಳತ್ವ ಹಾಗು ತೊಡಗಿಸಿಕೊಳ್ಳವಂತಹ ಅಂಶಗಳಿದ್ದರೆ ಶೈಕ್ಷಣಿಕ ವಿದ್ಯಾಭ್ಯಾಸದಲ್ಲಿ ಜ್ಞಾನ ಸಂಗ್ರಹಿತ ವಿಧಾನ ಹಾಗು ಅದನ್ನೇ ಮತಳಿ ನಿರ್ಮಾಪಿಸುವ ವಿಧಾನ. [೧೫] ಆದರೆ ಶೈಕ್ಷಣಿಕ ವಿಧಾನವು ತರಗತಿ ಸೀಮಿತ ತಂತ್ರಜ್ಞಾನದ ಮುಖಾಂತರ ಜ್ಞಾನ ನೀಡುತ್ತದೆ. ಆದರೆ ಅನುಭ್ವ ಆಧಾರಿತವು ನಿಜಜೀವನದ ಅನುಭವದ ಬುನಾದಿಯ ಮೇಲೆ ಶಿಕ್ಷಣ ನೀಡುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Felicia, Patrick (2011). Handbook of Research on Improving Learning and Motivation. p. 1003. ISBN 1609604962.
  2. Beard, Colin (2010). The Experiential Learning Toolkit: Blending Practice with Concepts. p. 20. ISBN 9780749459345. {{cite book}}: Invalid |ref=harv (help)
  3. Itin, C. M. (1999). Reasserting the Philosophy of Experiential Education as a Vehicle for Change in the 21st Century. The Journal of Physical Education 22(2), 91-98.
  4. Breunig, Mary C. (2009). "Teaching Dewey's Experience and Education Experientially". In Stremba, Bob; Bisson, Christian A. (ed.). Teaching Adventure Education Theory: Best Practices. p. 122. ISBN 9780736071260. {{cite book}}: Invalid |ref=harv (help)CS1 maint: multiple names: editors list (link)
  5. Nicomachean Ethics, Book 2, Ross translation (1908).
  6. Dixon, Nancy M.; Adams, Doris E.; Cullins, Richard (1997). "Learning Style". Assessment, Development, and Measurement. p. 41. ISBN 9781562860493.
  7. Kraft, R. G. (1994).Bike riding and the art of learning.In L. B. Barnes, C. Roland Christensen, & A. J. Hansen (Eds.), Teaching and the case method.Boston: Harvard Business School Press.
  8. Loo, R. (2002). A Meta-Analytic Examination of Kolb's Learning Style Preferences Among Business Majors. Journal of Education for Business, 77:5, 252-256
  9. Kolb, D. (1984). Experiential Learning: experience as the source of learning and development. Englewood Cliffs, NJ: Prentice Hall. p. 21
  10. Kolb, D (1984). Experiential Learning as the Science of Learning and Development. Englewood Cliffs, NJ: Prentice Hall.
  11. Hutton, M. (1980). Learning from action: a conceptual framework, in S. Warner Weil and M. McGill (eds) Making Sense of Experiential Learning. Milton Keynes: SRHE/Open University Press. pp. 50–9, p.51.
  12. ELENA project leader
  13. Clark, J., & White, G. (2010). "Experiential Learning: A Definitive Edge In The Job Market". American Journal Of Business Education, 3(2), 115-118.
  14. http://www.multimediaplus.com/2014/07/08/experiential-learning/
  15. Stavenga de Jong, J. A., Wierstra, R. F. A. and Hermanussen, J. (2006) "An exploration of the relationship between academic and experiential learning approaches in vocational education", British Journal of Educational Psychology. 76;1. pp. 155-169.