ಸದಸ್ಯ:Manjula sahukar/ನನ್ನ ಪ್ರಯೋಗಪುಟ
[೧] ಸಸ್ಯವರ್ಗ:ಕಳ್ಳಿವರ್ಗ
ಇತರೆ ಹೆಸರುಗಳು
[ಬದಲಾಯಿಸಿ]- ಹಿಂದಿ-ಲಾಲ್ ದೂಧಿ
- ಬಂಗಳಿ-ಬರಕೇರು
- ಗುಜರಾತಿ-ದುಧೇಲಿ
- ಮಲಯಾಳಂ-ನೆಲಪಲೈ
- ಸಂಸ್ಕೃತ-ನಾಗಾರ್ಜುನಿ,ಪುಸಿತೊವ
- ತಮಿಳು-ಅಮಮ್ ಪಚ್ಚೈ ಅರಿಸಿ
- ತೆಲುಗು-ನನಬಾಲ್
ವರ್ಣನೆ
[ಬದಲಾಯಿಸಿ]ಇದು ೫೦ಸೆ.ಮೀ. ಎತ್ತರಕ್ಕೆ ಬೆಳೆಯುವ ವಾರ್ಷಿಕ ಮೂಲಿಕೆ. ಇದರ ಕಾಂಡವು ದುಂಡಾಗಿ, ಹಳದಿ ಕೂದಲಿನಿಂದ ಆವರಿಸಲ್ಪಟ್ಟಿರುತ್ತದೆ. ಎಲೆಗಳು ೪ ಸೆ.ಮೀ. ಉದ್ದವಿದ್ದು, ಅಂಚು ಹಲ್ಲಿನಂತೆ ಇರುತ್ತದೆ. ಎಲೆಗಳು ಎದುರುಬದುರಾಗಿ ಜೋಡಿ ಜೋಡಿಯಾಗಿರುತ್ತವೆ. ಮೇಲ್ಭಾಗ ಹಚ್ಚಹಸಿರಾಗಿದ್ದು ಕೆಳಭಾಗ ತೆಳುವಾಗಿರುತ್ತದೆ. ಹೂವು ಸಣ್ಣ ತೊಟ್ಟಿನ ಮೇಲೆ,ಗೊಂಚಲವಾಗಿರುತ್ತದೆ. ಇದು ಸಣ್ಣದು ಮತ್ತು ಸ್ಕಂಧದಿಂದ ಎದ್ದು ಬರುತ್ತದೆ. ಕಾಯಿ ೧ರಿಂದ ೨ಮಿ.ಮೀ ಅಡ್ಡಳತೆಯಾಗಿದ್ದು ೩ ಏಣುಗಳಿಂದ ಕೂಡಿ, ರೋಮವುಳ್ಳದ್ದಾಗಿರುತ್ತದೆ. ಇದು ಕೆಂಪುಗೂಡಿದ ಕಂದು ಬಣ್ಣವಾಗಿ ಸುಕ್ಕಾಗಿರುವುದು. ಇದು ಭಾರತದ ಉಷ್ಣ ಪ್ರದೇಶಗಳಲ್ಲಿನ ಬೀಳು ಜಾಗಗಳಲ್ಲಿ ಕಂಡುಬರುತ್ತದೆ. ಅಲ್ಲದೆ, ಅನೇಕವಾದ ವಿವಿಧ ಮಣ್ಣು ಮತ್ತು ತೇವದ ಜಾಗಗಳಲ್ಲಿ ಸಹ ಇದನ್ನು ಕಾಣಬಹುದು.
ಉಪಯೋಗಗಳು
[ಬದಲಾಯಿಸಿ]- ಇದು ಮಕ್ಕಳ ಉಬ್ಬಸ, ಕೆಮ್ಮು, ಹೊಟ್ಟೆಯೊಳಗಿನ ಹುಳು ಇವುಗಳನ್ನು ನಿವಾರಿಸುವುದು.
- ಇದು ಸ್ತ್ರೀಯರಲ್ಲಿ ಹಾಲಿನ ಪ್ರಮಾಣವನ್ನು ವೃದ್ದಿಸುತ್ತದೆ.
- ಇದರ ಬೇರು ವಾಂತಿಯನ್ನು ನಿಲ್ಲಿಸುವುದು.
- ಇದನ್ನು ತರಕಾರಿಯಂತೆ ಅಡಿಗೆಯಲ್ಲಿ ಉಪಯೋಗಿಸುತ್ತಾರೆ.
ಇತರ ವರ್ಗಗಳು
[ಬದಲಾಯಿಸಿ]ಈ ಗಿಡದ ಇತರ ವರ್ಗದ ಸಸ್ಯಗಳು ಸಹ ಔಷಧ ದ್ರವ್ಯವಾಗಿ ಉಪಯೋಗಿಸಲರ್ಹವಾಗಿವೆ. ಈ ವರ್ಗದ ಇತರ ಕುರುಚಲು ಗಿಡಗಳು, ದಪ್ಪ, ಮಾಂಸಲ ಮತ್ತು ಮುಳ್ಳುಗಳಿಂದ ಕೂಡಿದ್ದು ಪಾಪಸ್ಕಳ್ಳಿ ಕಂಡುಬರುತ್ತವೆ. ಗುಂಡು ಕಾಂಡ ಅಥವಾ ಒಂದು ವಿಧವಾಗಿ ಏಣುಗಳಿದ್ದು, ನಾಗಮುರಿಯಂತೆ ತಿರುವಿದ ಕಾಂಡಗಳನ್ನು ಪಡೆದಿರುತ್ತವೆ. ಇವುಗಳ ಹಾಲು ಖಾರವಾದುದು ಮತ್ತು ವಿಷವುಳ್ಳದು. ಇದರ ಹಾಲು ಚರ್ಮಕ್ಕೆ ತಗಲಿದರೆ ಚರ್ಮದ ಉರಿ ಮತ್ತು ರೋಗಗಳುಂಟಾಗುವುದು.
ಉಲ್ಲೇಖಗಳು
[ಬದಲಾಯಿಸಿ]<reference/>
- ↑ ಔಷಧಿಯ ಗಿಡಗಳು, ಎಸ್.ಕೆ.ಜೈನ್, ನ್ಯಾಷನಲ್ ಬುಕ್ ಟ್ರಸ್ಟ ಇಂಡಿಯಾ. ಪು.ಸಂ. ೭೬