ಸದಸ್ಯ:Manjula sahukar/sandbox2
ಗೋಚರ
ರೆಕ್ಕೆ ಅವರೆ
[ಬದಲಾಯಿಸಿ](ಸೋಫೋಕಾರ್ಪಸ್ ಟೆಟ್ರಾಗೋನೋಲೇಬಸ್ L.(DC) Winged Bean(Psophocarpus tetragonolobus L.(DC) ಕುಟುಂಬ:ಫ್ಯಾಬೇಸಿ(fabaceae)
ಸಸ್ಯಮೂಲ-ಪರಿಚಯ
[ಬದಲಾಯಿಸಿ]ಜಗತ್ತಿನ ಆಹಾರ ಬೆಳೆಗಳಲ್ಲಿ ಅತಿ ಮುಖ್ಯವಾದ ಸ್ಥಾನ ಹೂಂದಿರುವ ರೆಕ್ಕೆ ಅವರೆಯ ತವರು ತಿಳಿಯದಿರುವುದು ನಿಜಕ್ಕೂ ವಿಷಾದಕರ.ಆದರೆ ಬರ್ಕಿಲ್(೧೯೩೫)ರವರು ಮಡಗಾಸ್ಕರ್ ಅಥವಾ ಮಾರಿಷಸ್ ಇರಬಹುದು ಎಂದು ಊಹಿಸಿದ್ದಾರೆ.ಇದು ಬಳ್ಳಿಯಾಗಿ ಹಬ್ಬುವುದು ಮತ್ತು ಹೆಚ್ಚು ಸಸಾರಜನಕದ ಅಂಶ ಹೂಂದಿರುವುದು.ಕಾಯಿಗಳಿಗೆ ರೆಕ್ಕೆಗಳು ಮತ್ತು ನಾಲ್ಕು ಮುಖಗಳಿರುತ್ತವೆ.ಆದುದರಿಂದಲೇ ಇದಕ್ಕೆ 'ರೆಕ್ಕೆ ಅವರೆ' ಎಂಬ ಹೆಸರಿರುವುದು.
ಔಷಧೀಯ ಗುಣಗಳು
[ಬದಲಾಯಿಸಿ]- ಇದು ಅನೇಕ ಅಮೈನೋ ಆಮ್ಲಗಳನ್ನೂಳಗೂಂಡಿದೆ.
- ಇದರ ಕಾಳನ್ನು ಸಿಪ್ಪೆಯೊಂದಿಗೆ ಉಪಯೋಗಿಸಿದರೆ ಮಲಬದ್ಧತೆ ಮತ್ತು ಹೊಟ್ಟೆ ಉಬ್ಬರ ಉಂಟಾಗುವುದಿಲ್ಲ.
- ಇದರ ಸೇವನೆ ಎದೆಹಾಲು ಮತ್ತು ರಕ್ತವೃದ್ಧಿ ಮಾಡುತ್ತದೆ.
ಮಣ್ಣು ಮತ್ತು ಹವಾಗುಣ
[ಬದಲಾಯಿಸಿ]- ಉಷ್ಣವಲಯದ ತರಕಾರಿಯಾಗಿರುವುದರಿಂದ ಬಿಸಿಯಿಂದ ಕೂಡಿದ ಆರ್ದ್ರ್ ಹವಾಗುಣ ಉತ್ತಮ.
- ಮಳೆಗಾಲದ ಆರಂಭ ಬೀಜ ಬಿತ್ತಲು ಸೂಕ್ತ ಸಮಯ.
- ಇದರ ಬೇಸಾಯಕ್ಕೆ ಗೋಡು ಮಣ್ಣಿನ ಭೂಮಿ ಒಳ್ಳೆಯದು.
- ಸಾರಜನಕ ಕಡಿಮೆ ಇರುವ ಮಣ್ಣಿನಲ್ಲೂ ಬೆಳೆಸಬಹುದು.
ತಳಿಗಳು
[ಬದಲಾಯಿಸಿ]ನಮ್ಮ ದೇಶದಲ್ಲಿ ಈ ಬೆಳೆಯ ತಳಿಗಳು ಕಡಿಮೆ.ಆದರೆ ದೊಡ್ದ ಕಾಯಿ ಬಿಡುವಂತಹ ಮತ್ತು ಸಣ್ಣ ಕಾಯಿ ಬಿಡುವಂತಹ ತಳಿಗಳೆಂಬ ಎರಡು ವರ್ಗಗಳಿವೆ.