ವಿಷಯಕ್ಕೆ ಹೋಗು

ಸದಸ್ಯ:Megha144609

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವರದಕ್ಷಿಣೆ

   ಇತ್ತೀಚಿನ ಸಮಾಜದಲ್ಲಿ ಹಲವು ಸಾಮಾಜಿಕ ಪಿಡುಗುಗಳಿವೆ. ಅವುಗಳಲ್ಲಿ ಕೆಲವೊಂದು ಮೂಢನಂಬಿಕೆ, ವರದಕ್ಷಿಣೆ ಕಿರುಕುಳ, ಬಾಲ್ಯ ವಿವಾಹ, ಇತ್ಯಾದಿ. ಸಾಮಾಜಿಕ ಪಿಡುಗುಗಳಲ್ಲಿ ಒಂದು ಪ್ರಮುಖವಾದ ಪಿಡುಗು ಎಂದರೆ ವರದಕ್ಷಿಣೆ.
   ವರದಕ್ಷಿಣೆ ಎನ್ನುವುದು ಹೆಣ್ಣಿನ ಜೀವನಕ್ಕೆ ಅಡ್ಡವಾಗಿ ಬಂದಿರುವ ಒಂದು ಹೆಮ್ಮರ, ಮದುವೆಯ ಸಮಯದಲ್ಲಿ ಹೆಣ್ಣಿನ ಮನೆಯವರು ಗಂಡಿಗೆ ಕೊಡುವ ಹಣ, ಬಂಗಾರ, ನಿವೇಶನ ಇವುಗಳನ್ನೇ ವರದಕ್ಷಿಣೆ ಎನ್ನುತ್ತಾರೆ. ಹಿಂದಿನ ಕಾಲದಲ್ಲಿ ತಂದೆ ಮಗಳ ಮೇಲಿನ ಪ್ರೀತಿಗಾಗಿ ಕೊಡುತ್ತಿದ್ದ ದಕ್ಷಿಣೆ ಇತ್ತೀಚಿನ ದಿನದಲ್ಲಿ ಒಂದು ಭಯಾನಕವಾದ ಸಾಮಾಜಿಕ ಪಿಡುಗಾಗಿದೆ.
   ಈ ವರದಕ್ಷಿಣೆ ಎನ್ನುವ ಒಂದು ಕೆಟ್ಟ ವ್ಯವಸ್ಥೆಯಿಂದಾಗಿ ಅದೆಷ್ಟೊ ಹೆಣ್ಣು ಮಕ್ಕಳು ತಮ್ಮ ಪ್ರಾಣ, ಜೀವನವನ್ನು ಕಳೆದುಕೊಂಡಿದ್ದಾರೆ. ವರದಕ್ಷಿಣೆ ಕೊಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ಕೆಲವು ಹೆತ್ತವರು ಹೆಣ್ಣು ಮಕ್ಕಳನ್ನು ಸಾಕಲು ಯೋಚನೆ ಮಾಡುತ್ತಾರೆ. ವರದಕ್ಷಿಣೆ ಕೊಡುವುದು ತಪ್ಪು, ತೆಗೆದುಕೊಳ್ಳುವುದು ಸಹ ತಪ್ಪು ಎಂದು ತಿಳಿದಿದ್ದರೂ ಸಹ ಈ ಸಮಾಜ ಅದನ್ನು ಒಪ್ಪುತ್ತಿಲ್ಲ.
   ವರದಕ್ಷಿಣೆಯಿಂದಾಗಿ ಹಲವಾರು ಹೆಣ್ಣುಮಕ್ಕಳ ಜೀವನ ಹಾಳಾಗಿ ಹೋಗುತ್ತದೆ. ನಮ್ಮ ಸಮಾಜದಲ್ಲಿ ಕೇವಲ ಈ ವರದಕ್ಷಿಣೆಗಾಗಿಯೇ ಮದುವೆ ಮಾಡಿಕೊಳ್ಳುವ ಗಂಡಸರು ಸಾಕಷ್ಟು ಜನರಿದ್ದಾರೆ.
   ಒಟ್ಟಿನಲ್ಲಿ ವರದಕ್ಷಿಣೆ ಹೆಣ್ಣಿನ ಜನುಮಕ್ಕೆ ಅಂಟಿಕೊಂಡ ಒಂದು ದೊಡ್ಡ ಶಾಪ. ವಿದ್ಯಾವಂತರಾದ ನಾವು ಈ ವರದಕ್ಷಿಣೆಯೆನ್ನುವ ಈ ಪಿಡುಗನ್ನು ಹೋಗಲಾಡಿಸಲು ನಮ್ಮ ಕೈಲಾದ ಪ್ರಯತ್ನವನ್ನು ನಾವು ಮಾಡಬೇಕು.

ವರದಕ್ಷಿಣೆ ಕೊಡಬೇಡಿ, ವರದಕ್ಷಿಣೆ ಕೇಳಬೇಡಿ.....

            ಹೆಣ್ಣಿನ ಜೀವನ ಉಳಿಸಿ.....