ವಿಷಯಕ್ಕೆ ಹೋಗು

ಸದಸ್ಯ:Myschandru/ಎ. ಕೆ. ಸಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಜಯ್ ಕುಮಾರ್ ಸಿಂಗ್

ಅಧಿಕಾರ ಅವಧಿ
ಜುಲೈ ೮, ೨೦೧೩ – ಆಗಸ್ಟ್‌ ೧೭, ೨೦೧೬
ಪೂರ್ವಾಧಿಕಾರಿ ಭೂಪಿಂದರ್ ಸಿಂಗ್
ಉತ್ತರಾಧಿಕಾರಿ ಜಗದೀಶ್ ಮುಖಿ

ಅಧಿಕಾರ ಅವಧಿ
ಜುಲೈ ೧೮, ೨೦೧೪ – ಮೇ ೨೯, ೨೦೧೬
ಪೂರ್ವಾಧಿಕಾರಿ ವಿರೇಂದ್ರ ಕಟಾರಿಯಾ
ಉತ್ತರಾಧಿಕಾರಿ ಕಿರಣ್ ಬೇಡಿ
ವೈಯಕ್ತಿಕ ಮಾಹಿತಿ
ಜನನ (1953-01-11) ೧೧ ಜನವರಿ ೧೯೫೩ (ವಯಸ್ಸು ೭೧)

ಲೆಫ್ಟಿನೆಂಟ್ ಜನರಲ್ ಅಜಯ್ ಕುಮಾರ್ ಸಿಂಗ್, ಪಿವಿಎಸ್ಎಂ, ಎವಿಎಸ್ಎಂ, ಎಸ್ಎಂ, ವಿಎಸ್ಎಂ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮಾಜಿ ಲೆಫ್ಟಿನೆಂಟ್ ಗವರ್ನರ್ ಆಗಿದ್ದಾರೆ [] [] ಅವರು ರೆವಾ ಸೈನಿಕ್ ಶಾಲೆ ಮತ್ತು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಭಾರತೀಯ ಸೇನೆಯ ದಕ್ಷಿಣ ಕಮಾಂಡ್ನ ಮಾಜಿ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಕೂಡ ಕಾರ್ಯನಿರ್ವಹಿಸಿದ್ದಾರೆ. []

ಸಿಂಗ್ ಅವರನ್ನು ೨೦೧೩ರ ಜುಲೈನಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ೧೧ನೇ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಲಾಯಿತು ಮತ್ತು ೨೦೧೩ರ ಜುಲೈ ೮ರಂದು ಅಧಿಕಾರ ವಹಿಸಿಕೊಂಡರು.[] ಅವರಿಗೆ ೨೦೧೪ರ ಜುಲೈಯಿಂದ ೨೦೧೬ರ ಮೇವರೆಗೆ ಪುದುಚೇರಿಯ ಆಡಳಿತದ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಯಿತು.

ಅಂಡಮಾನ್ ನ ಮೊದಲ ವೈದ್ಯಕೀಯ ಕಾಲೇಜು, ಎಎನ್ಐಐಎಂಎಸ್(ANIIMS) [] ಮತ್ತು ಮತ್ತು ದಕ್ಷಿಣ ಅಂಡಮಾನ್ ನ ಎರಡನೇ ಪದವಿ ಕಾಲೇಜು, ಎಎನ್.ಸಿಓಎಲ್(ANCOL) ಅನ್ನು ಪ್ರಾರಂಭಿಸುವ ಮೂಲಕ ಅಂಡಮಾನ್ ಸಮಾಜಕ್ಕೆ ನೀಡಿದ ಕೊಡುಗೆಗಳಿಗೆ ಸಿಂಗ್ ಹೆಸರುವಾಸಿಯಾಗಿದ್ದಾರೆ.[]

೨೦೧೬ರ ಆಗಸ್ಟ್ ೧೯ರಂದು ಅಧಿಕಾರವನ್ನು ಹಸ್ತಾಂತರಿಸಿದ ನಂತರ ಸಿಂಗ್ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಂದ [] ನಿರ್ಗಮಿಸಿದರು.

ಏರ್ ವರ್ಕ್ಸ ನ ಸ್ವತಂತ್ರ ನಿರ್ದೇಶಕರಾಗಿ ಎ. ಕೆ. ಸಿಂಗ್ ಅವರನ್ನು ನೇಮಿಸಲಾಯಿತು.[]

ಪ್ರಶಸ್ತಿಗಳು ಮತ್ತು ಅಲಂಕಾರಗಳು

[ಬದಲಾಯಿಸಿ]
ಪರಮ ವಿಶಿಷ್ಟ ಸೇವಾ ಪದಕ ಅತಿ ವಿಶಿಷ್ಟ ಸೇವಾ ಪದಕ ಸೇನಾ ಪದಕ ವಿಶಿಷ್ಟ ಸೇವಾ ಪದಕ
ಆಪರೇಷನ್ ವಿಜಯ್ ಪದಕ ಆಪರೇಷನ್ ಪರಾಕ್ರಮ್ ಪದಕ ಸೈನ್ಯ ಸೇವಾ ಪದಕ ಹೈ ಆಲ್ಟಿಟ್ಯೂಡ್ ಸೇವಾ ಪದಕ
೫೦ನೇ ಸ್ವಾತಂತ್ರ್ಯೋತ್ಸವ ಪದಕ ೩೦ ವರ್ಷದ ದೀರ್ಘ ಸೇವಾವಧಿಪದಕ ೨೦ ವರ್ಷದ ದೀರ್ಘ ಸೇವಾವಧಿಪದಕ ೯ ವರ್ಷದ ದೀರ್ಘ ಸೇವಾವಧಿಪದಕ

ಉಲ್ಲೇಖಗಳು

[ಬದಲಾಯಿಸಿ]
  1. Sanjib Kumar Roy (17 ಆಗಸ್ಟ್ 2016). "(Prof) Jagdish Mukhi appointed Lt Governor of AN Islands: Lt Governor expresses gratitude to Islanders for their support & love". Andaman Sheekha. Retrieved 14 ಜೂನ್ 2016.
  2. "Najeeb Jung to be new Delhi LG". 2013. Archived from the original on 5 ಜುಲೈ 2013. Retrieved 5 ಜುಲೈ 2013.
  3. "Profile of Lieutenant Governor Andaman & Nicobar Islands". Andaman & Nicobar Administration. Archived from the original on 2 ಏಪ್ರಿಲ್ 2015. Retrieved 4 ಜುಲೈ 2013.
  4. "Lieutenant Governor of the Andaman and Nicobar Islands". Archived from the original on 2 ಏಪ್ರಿಲ್ 2015. Retrieved 12 ಮಾರ್ಚ್ 2014.
  5. "Andaman Sheekha LG expresses gratitude to PM, HM and MoH for Medical College". 2015. Retrieved 3 ಸೆಪ್ಟೆಂಬರ್ 2015.
  6. "Andaman Sheekha LG lays foundation stone for ANCOL". 2015. Retrieved 3 ಸೆಪ್ಟೆಂಬರ್ 2015.
  7. "LG delivers farewell address at DBRAIT". 2016. Archived from the original on 21 ಆಗಸ್ಟ್ 2016. Retrieved 20 ಆಗಸ್ಟ್ 2015.
  8. "Air Works appoints A K Singh independent director". The Times of India. 19 ಮೇ 2020.


Government offices
Preceded by ಅಂಡಮಾನ್ ಮತ್ತು ನಿಕೋಬಾರ್ನ ಲೆಫ್ಟಿನೆಂಟ್ ಗವರ್ನರ್
೨೦೧೩–೨೦೧೬
Succeeded by