ಸದಸ್ಯ:Omkar R K
ಪ್ರಾಥಮಿಕ ಪರಿಚಯ
[ಬದಲಾಯಿಸಿ]ನನ್ನ ಹೆಸರು ಓಂಕಾರ್.ಆರ್.ಕಟಗಿ. ನನ್ನ ತಂದೆಯ ಹೆಸರು ರವಿಂದ್ರನಾಥ ಹಾಗೂ ನನ್ನ ತಾಯಿಯ ಹೆಸರು ಅನಸೂಯ. ೦೨ ಸೆಪ್ಟೆಂಬರ್ ೧೯೯೯ರಂದು ಶಿವಮೊಗ್ಗದಲ್ಲಿ ಮಲ್ಲಿಕಾರ್ಜುನ ನರ್ಸಿಂಗ್ ಹೋಮ್ ಎಂಬ ಆಸ್ಪತ್ರೆಯಲ್ಲಿ ನನ್ನ ಜನನವಾಯಿತು. ನಾನು ಬೆಳೆದ್ದದ್ದು ಬೆಂಗಳೂರಿನಲ್ಲಿಯೇ. ಕ್ರೈಸ್ಟ್ ಸ್ಕೂಲ್(Christ School) ಎಂಬ ಶಾಲೆಯಲ್ಲಿ ನನ್ನ ಓದು ಪ್ರಾರಂಭವಾಯಿತು. ಚಿಕ್ಕ ವಯಸ್ಸಿನಿಂದಲೇ ನಾನು ಬಹಳ ಚೆನ್ನಾಗಿ ಓದುತ್ತಿದ್ದೆ. ಶಾಲೆಯಲ್ಲಿ ಸತತ ಬಾರಿಗೆ ಹಲವಾರು ಬಾರಿ ನಾನು ವರ್ಗದ ನಾಯಕನಾಗಿದ್ದೆ.
ಆಟ ಓಟದ ಮೇಲಿನ ಆಸಕ್ತಿ
[ಬದಲಾಯಿಸಿ]ಕ್ರಿಕೆಟ್ ಮೇಲಿನ ಗಮನ
[ಬದಲಾಯಿಸಿ]ಬೇರೆ ಮಕ್ಕಳ ಹಾಗೆ ನನಗೆ ಮೊಬೈಲ್ ಅಥವಾ ಕಂಪ್ಯೂಟರ್ ಗಳಲ್ಲಿ ಆಡುವ ಆಸಕ್ತಿ ಇರಲಿಲ್ಲ, ಚಿಕ್ಕಂದಿನಲ್ಲಿಯೇ ನನ್ನನ್ನು ಕ್ರಿಕೆಟ್ ಆಟ ಕಲಿಯಲು ನನ್ನ ತಂದೆ ನನಗೆ ಪ್ರೋತ್ಸಾಹ ನೀಡಿದರು. ಕ್ರಿಕೆಟ್ ಆಡಲು ಮತ್ತು ತರಬೇತಿ ಪಡೆಯಲು ನಾನು ಸೆಂಟ್ರಲ್ ಕಾಲೇಜಿನಲ್ಲಿ(Central College), ಕೃಷ್ಣಪ್ಪಾರವರು ಸ್ಥಾಪಿಸಿದ್ದ ಹಾಗೂ ಸ್ವತಃ ಅವರೇ ನಡೆಸುತ್ತಿದ್ದ ಆರ್.ಕೆ.ಕ್ರಿಕೆಟ್(R.K.Cricket Academy) ಅಕಾಡಮಿ ಎಂಬ ಜಾಗದಲ್ಲಿ ಸೇರಿಕೊಂಡೆ. ಅದೇ ಸಮಯದಲ್ಲಿ ನಾನು ಕ್ರಿಕೆಟಿನ ಬಗ್ಗೆ ಬಹಳ ಹುಚ್ಛು ಹಿಡಿಸಿಕೊಳ್ಳಬಾರದು ಹಾಗೂ ಓದಿನ ಬಗ್ಗೆ ಗಮನ ಕೊಡಬೇಕು ಎಂದು ತಿಳಿಹೇಳಿದರು. ಆದ್ದರಿಂದ ನಾನು ಅದರ ಬಗ್ಗೆ ಅಷ್ಟೊಂದು ಗಮನ ಕೊಡಲಿಲ್ಲ. ಕ್ರಿಕೆಟ್ ಕಲಿಯುವುದರೊಂದಿಗೆ ಯೋಗ ಸಹಾ ಕಲಿಯುತ್ತಾ ಬೆಳೆದೆ. ಆಡುತ್ತಾ ಆಡುತ್ತಾ ನನಗೆ ಅದರ ಬಗ್ಗೆ ಗಮನ ಜಾಸ್ತಿಯಾಯಿತು, ಟಿವಿಯಲ್ಲಿ ನೋಡುತ್ತಿದ್ದ ದೊಡ್ಡ ಆಟಗಾರರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಅಥವಾ ವಿರೇಂದ್ರ ಸೆಹ್ವಾಗರಂತೆ ನಾನು ಒಬ್ಬ ಉತ್ತಮ ಆಟಗಾರನಾಗಬೇಕು ಎಂದೆಲ್ಲಾ ಅನಿಸತೊಡಗಿತು. ಸರಿಯಾದ ಸಮಯಕ್ಕೆ ಇದನ್ನು ಕಂಡ ನನ್ನ ತಂದೆ ನನ್ನ ಕ್ರಿಕೆಟ್ ಕನಸಿನ ಬಾಗಿಲು ಮುಚ್ಚಿದರು. ಕ್ರಿಕೆಟ್ ಆಡುವುದನ್ನು ಬಿಟ್ಟಾಗ ನಾನು ೫ನೇಯ ತರಗತಿಯಲ್ಲಿದ್ದೆ.
ಫ಼ುಟ್ಬಾಲ್ ಜೀವನ ಮತ್ತು ಆಟದ ಮೇಲಿನ ಆಸಕ್ತಿಗೆ ತಾತ್ಕಾಲಿಕ ನಿಲುಗಡೆ
[ಬದಲಾಯಿಸಿ]ಬಹುಶ್ಯಃ ನಾನು ಕ್ರಿಕೆಟ್ ಬಿಡದಿದ್ದರೂ ಚೆನ್ನಾಗಿ ಓದುತಿದ್ದೆ ಎಂದು ಈಗಲೂ ನನಗೆ ಅನಿಸುತ್ತದೆ. ಸುಮಾರು ಒಂದು ವರ್ಷ ನಾನು ಎನೂ ಆಡಲಿಲ್ಲ, ಓದಿನ ಬಗ್ಗೆ ಗಮನ ಹರಿಸಿದೆ. ೭ನೇಯ ತರಗತಿಯಲ್ಲಿದ್ದಾಗ ಆಸ್ಟಿನ್ ಟೌನ್(Austin Town) ಎಂಬ ಜಾಗದಲ್ಲಿ ಮೇರಿ ಮತ್ತು ಅರುಣ್ ಎಂಬವರ ಬಳಿ ಫುಟ್ಬಾಲ್ ಕಲಿಯಲು ಆರಂಭಿಸಿದೆ. ಅಲ್ಲಿ ಒಂದು ವರ್ಷ ಫುಟ್ಬಾಲ್ ಕಲಿತೆ. ಫುಟ್ಬಾಲ್ ಆಡುವಾಗ ಜೋರಾಗಿ ಬಿದ್ದು ನನ್ನ ಎಡಗೈ ಮೂಳೆಯನ್ನು ಮುರಿದುಕೊಂಡು ಅದರಿಂದ ಗುಣಮುಖಾನಾಗಲು ಸುಮಾರು ೪ ತಿಂಗಳುಗಳಾಯಿತು. ಇದರ ಭಯದಿಂದ ನಾನು ಯಾವುದೇ ಆಟವನ್ನು ಆಡಲು ಇಚ್ಛಿಸ್ಸುತಿರಲ್ಲಿಲ್ಲ.
ಮುಂದಿನ ವಿದ್ಯಾಭ್ಯಾಸ
[ಬದಲಾಯಿಸಿ]೭ನೇಯ ತರಗತಿಯಲ್ಲಿ ನನ್ನ ಓದು ಅಷ್ಟು ಚೆನ್ನಾಗಿ ನಡೆಯುತ್ತಿರಲಿಲ್ಲ, ಇದರ ಕಾರಣ ನಾನು ಮಾಡುತಿದ್ದ ಸ್ನೇಹಿತರ ಸಹವಾಸ ಇರಬಹುದು ಎಂದು ನನಗೆ ಈಗಲೂ ಅನಿಸುತ್ತದೆ. ನಾನು ೮ನೇಯ ತರಗತಿಯಲ್ಲಿ ಪುನಃ ಚೆನ್ನಾಗಿ ಓದಲು ಆರಂಭಿಸಿದೆ. ನನಗೆ ಚಿಕ್ಕಂದಿನಿಂದಲೂ ಸಂಗೀತದ ಬಗ್ಗೆ ಬಹಳ ಹುಚ್ಛು ಆದರೆ ಎಲ್ಲರ ಮುಂದೆ ಹಾಡಲು ಬಹಳ ಮುಜುಗರ. ೯ನೇಯ ತರಗತಿಯಲ್ಲಿ ಮೊದಲನೆ ಬಾರಿಗೆ ರವಿ ಬೆಳಗೆರೆಯವರ ಬಾಲ್ ಪೆನ್ ಎಂಬ ಚಿತ್ರದ ಒಂದು ಹಾಡನ್ನು ಒಂದು ಗುಂಪಿನೊಂದಿಗೆ ಎಲ್ಲರ ಮುಂದೆ ಹಾಡಿ ಪ್ರಶಸ್ತಿಯನ್ನು ಸಹಾ ಪಡೆದಿದ್ದೆ. ನನಗೆ ಗಣಿತಶಾಸ್ತ್ರ ಎಂದರೆ ಪಂಚಪ್ರಾಣ, ೧೦ನೇಯ ತರಗತಿಯಲ್ಲಿ ನನಗೆ ರಾಷ್ಟ್ರೀಯ ಮಟ್ಟದ ಗಣಿತಶಾಸ್ತ್ರದ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ೨ನೇಯ ಸ್ಥಾನವನ್ನು ಪಡೆದಿದ್ದೆ.
ಕಾಲೇಜು ಜೀವನ
[ಬದಲಾಯಿಸಿ]೧೦ನೆ ತರಗತಿಯಲ್ಲಿ ಒಳ್ಳೆ ಅಂಕಗಳನ್ನು ಪಡೆದು, ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ(Christ Junior College) ಪ್ರವೇಶ ಪಡೆದೆನು. ಕಾಲೇಜಿನ ಎರಡು ವರ್ಷಗಳು ನನ್ನನ್ನು ಸಂಪೂರ್ಣವಾಗಿ ಬದಲಾಯಿಸಿತು. ಮೊದಲನೆ ವರ್ಷ ನಾನು ನನ್ನ ವರ್ಗದ ನಾಯಕನಾಗಿದ್ಧೆ, ಇದು ನಿಜವಾಗಿಯೂ ನನ್ನ ಜೀವನದ ಬಹಳ ಅದ್ಭುತವಾದ ಅನುಭವವಾಗಿತ್ತು. ನಾನು ವೈದ್ಯನಾಗಬೇಕು ಎಂಬ ಆಸೆಯಿಂದ ಕಾಲೇಜಿನಲ್ಲಿ ವಿಜ್ಞಾನವನ್ನು ನನ್ನ ವಿಷಯವನ್ನಾಗಿ ತೆಗೆದುಕೊಂಡಿದ್ದೆ. ವೈದ್ಯಕೀಯ ವೃತ್ತಿ ನನ್ನದಾಗಬೇಕೆಂದು ಕಷ್ಟ ಪಡುತ್ತಿದ್ದೆ. ಕಾಲೇಜಿನಲ್ಲಿ ಒಳ್ಳೆಯ ವಿದ್ಯಾರ್ಥಿಯಾಗಿದ್ದೆ, ಚೆನ್ನಾಗಿ ಓದುತಿದ್ದೆ. ಆದರೆ ನಾನು ನನ್ನ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಬಹಳ ಉತ್ತಮವಾದ ಸ್ಥಾನವನ್ನು ಪಡೆಯಲು ಸಾಧ್ಯಾವಾಗಲಿಲ್ಲ. ನನ್ನ ದೃಷ್ಟಿಕೋನದಲ್ಲಿ ಇದಕ್ಕೆ ಮೊದಲನೆ ಕಾರಣ ನನ್ನ ಶ್ರಮ ಕಡಿಮೆಯಾಗಿತ್ತು ಮತ್ತು ಎರಡನೆ ಕಾರಣ ಮೀಸಲಾತಿ(ಇದು ಸರಿಯೋ ತಪ್ಪೊ ಎಂಬುದು ನನಗೂ ತಿಳಿಯದು). ಶುದ್ಧ ವೈದ್ಯಕೀಯ ಶಾಸ್ತ್ರದಲ್ಲಿ ನನಗೆ ಮುಂದುವರಿಯಲು ಸಾಧ್ಯವಾಗಲಿಲ್ಲ ಆದರೆ ದಂತ ಶಾಸ್ತ್ರದಲ್ಲಿ ಪದವಿ ಪಡೆಯಲು ಅವಕಾಶ ದೊರಕಿತು. ಆದರೆ ನನಗೆ ಆ ವಿಷಯದಲ್ಲಿ ಆಸಕ್ತಿ ಇರಲಿಲ್ಲ. ಇದರಲ್ಲಿ ನಾನು ವೈಫಲ್ಯನಾದದ್ದು ಈಗಲೂ ನನ್ನನ್ನು ಕಾಡುತ್ತದೆ. ಈಗ ಕ್ರೈಸ್ಟ್ ಯುನಿವರ್ಸಿಟಿಯಲ್ಲಿ(Christ University) ಬಿ.ಎಸ್ಸಿ.(B.Sc.) ಮಾಡುತ್ತಿದ್ದೇನೆ ಹಾಗೂ ನನ್ನ ವಿಶ್ವವಿದ್ಯಾಲಯದಲ್ಲಿಯೆ ಮತ್ತೊಮ್ಮೆ ಕ್ರಿಕೆಟ್ ಆಡಲು ಆರಂಭಿಸಿದ್ದೇನೆ. ಇಂದು ಬೇರೆ ಯೋಚನೆಗಳೊಂದಿಗೆ ನನ್ನ ಜೀವನ ನಡೆಯುತ್ತಿದೆ, ಚೆನ್ನಾಗಿ ಓದಿ ನನ್ನ ಸ್ವಂತ ಕಾಲಿನ ಮೇಲೆ ನಾನು ನಿಂತುಕೊಳ್ಳಬೇಕು ಹಾಗೂ ನನ್ನ ತಂದೆ ತಾಯಿಗೆ ಒಳ್ಳೆಯ ಮಗನಾಗಿರಬೇಕು ಹಾಗೂ ಜಗತ್ತನ್ನು ಸುತ್ತಬೇಕು ಎಂಬುದು ನನ್ನ ಆಸೆ.