ವಿಷಯಕ್ಕೆ ಹೋಗು

ಸದಸ್ಯ:Praptha jain/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೊಮ್ಮಗಳು

[ಬದಲಾಯಿಸಿ]

ವರ್ಣನೆ

[ಬದಲಾಯಿಸಿ]

ತಂಪು ನೆಲದಲ್ಲಿ ಬೆಳೆಯವ ಹಲವು ಕವಲುಗಳಿಂದ ಕೂಡಿದ ಪುಟ್ವ ಗಿಡ. ಎಲೆ ಹಸಿರು ಮತ್ತು ಕೆಳಕ್ಕೆ ಬಾಗಿರುವುವು.ಹೂಗಳು ಪುಟ್ವವು ಮತ್ತು ಗಂಟು ಕಟ್ವಿದಂತಿವುವು. ತಿಳಿ ನೀಲಿವರ್ಣ ಹೊಂದಿರುವುವು. ಇದರ ಎಲೆಗಳು ಮತ್ತು ಹೂಗಳು ಹಿಚು ಮಾವಿನ ಕಾಯಿ ಹೂಗಳಂತೆ ಸುವಾಸನೆಯಿಂದ ಕೂಡಿರುವುವು. ರೋಮವಿಲ್ಲದ ಒಂದೇ ಕಾಯಿಯಲ್ಲಿ ಒಂದೇ ಬೀಜವಿರುವುದು. ಕವಲಗಳು ಕೊನೆಯಲ್ಲಿ ಹೂ ಬಿಡುವುದು. ಬೀಜಗಳಿಗೆ ತಿಳಿ ಹಳದಿ ವರ್ಣವಿರುವುದು ಮತ್ತು ಹಿಪ್ಪಲಿಯಂತೆ ಒರಟಾಗಿರುವುವು ಎಲೆಗಳನ್ನು ಅಗಿದರೆ ಬಾಯಲ್ಲಿ ನೀರೂರುವುದು ಮತ್ತು ಕರಕರ ಅನ್ನುವುದು. ಹೀಗೆ ನಾಲಿಗೆಯ ಮೇಲಿರುವ ಮಲಿನತೆಯನ್ನು ತೊಡೆದು ಹಾಕುವುದು.[]

ಸರಳ ಚಿಕಿತ್ಸೆಗಳು

[ಬದಲಾಯಿಸಿ]

ಹೃದಯ ಹಿತಕಾರಿ, ಜ್ಞಾಪಕಶಕ್ತಿ ಹೆಚ್ಚಿಸುವುದು, ಮೆದುಳಿಗೆ ಹಿತ,ರಕ್ತ ವೃದ್ಧಿ ಮತ್ತು ಶುದ್ದಿ ಮಾಡುವುದು.ಹಸಿವನ್ನು ಹೆಚ್ಚಿಸಿ ಜೀರ್ಣಶಕ್ತಿಯನ್ನು ಅಧಿಕಗೊಳಿಸುತ್ತದೆ. ರುಚಿಕಾರಕ ಮತ್ತು ಪಿತ್ತಜ್ವರವನ್ನು ನಾಶ ಮಾಡುತ್ತದೆ.

ರಕ್ತ ಶುದ್ದಿ ,ಹೃದಯ ದೌರ್ಬಲ್ಯ ಮತ್ತು ಹ್ರದಯ ಕಂಪನ ನಿವಾರಣೆ

[ಬದಲಾಯಿಸಿ]

ಎಲೆ ಮತ್ತು ಹೂಗಳ ಸಮೇತ ಹೊಮ್ಮಗಳು ಗಿಡವನ್ನು ತಂದು. ಚೆನ್ನಾಗಿ ತೊಳೆದು ಸ್ಪಲ್ಪ ಕರಿಮೆಣಸು ಸೇರಿಸಿ ನುಣ್ಣಗೆ ಅರೆದು, ಶೋಧಿಸಿ ಕುಡಿಯುವುದು.

ಕಣ್ಣಿನ ದೋಷಕ್ಕೆ

[ಬದಲಾಯಿಸಿ]

ಇನ್ನೂ ಹೂ ಅರಳುವ ಹೊಮ್ಮಗಳು ಗಿಡವನ್ನು ತಂದು,ಚೆನ್ನಾಗಿ ತೊಳೆದು ನೆರಳಲ್ಲಿ ಒಣಗಿಸುವುದು. ಒಣಗಿಸಿದ ಹೊಮ್ಮಗಳು ಗಿಡದ ಅರ್ಧದಷ್ಷು ಕರಿಮೆಣಸು ಸೇರಿಸಿ, ನುಣ್ಣಗೆ ಅರೆದು ಚೂರ್ಣ ಮಾಡಿ, ಕೆಂಪು ಕಲ್ಲುಸಕ್ಕರೆ ಮತ್ತು ಹಸನಾದ ಹಸುವಿನ ತುಪ್ಪ ಸೇರಿಸಿ, ಪ್ರತಿನಿತ್ಯ ಬೆಳಗಿನ ಹೊತ್ತು ಸೇವಿಸುವುದು. ಇದರಿಂದ ಕಣ್ಣೆನ ದೋಷಗಳು ನಿವಾರಣೆಯಾಗುವುವು ಮತ್ತು ಕಣ್ಣೆನ ಪೊರೆ ಹರಡುವಿಕೆ ನಿಲ್ಲುವುದು. ಒಂದು ಹೊಮ್ಮಗಳು ಹೂವನ್ನು ನೀರಿಲ್ಲಿದೆ ಒಂದೇ ದಿವಸ ಬೆಳಿಗ್ಗೆ ನುಂಗಿದರೆ ಒಂದು ವರ್ಷ ಪೂರ್ತಿ ಬೇನೆಗಳು ಬರುವುದಿಲ್ಲ ಎನ್ನುವ ನಂಬಿಕೆಯುಂಟು

ಮೆದುಳಿನ ಶಕ್ತಿ ಮತ್ತು ಚ್ಚಾಪಕ ಶಕ್ತಿ ವ್ರದ್ದಿಪಡಿಸಲು

[ಬದಲಾಯಿಸಿ]

ಹೊಮ್ಮಗಳು ಹೂಗಳನ್ನು ತಂದು, ನೆರಳಲ್ಲಿ ಒಣಗಿಸಿ, ಸಮ ಪ್ರಮಾಣ ಕೆಂಪು ಕಲ್ಲು ಸಕ್ಕರೆ ಪುಡಿ ಸೇರಿಸಿ ಪ್ರತಿದಿವಸ ಬೆಳಿಗ್ಗೆ ಹಸುವಿನ ಹಾಲಿನೊಂದಿಗೆ ಸೇವಿಸುವುದು. ಬಹಳ ಉಪಯೋಗಿ ಮತ್ತು ಖಾತ್ರಿ ಚಿಕಿತ್ಸೆ.ಗಂಡ ಮಾಲೆಯ ಹಸಿ ಎಲೆಗಳನ್ನು ತಂದು ಕಲ್ಲತ್ತಿನಲ್ಲಿ ಹಾಕಿ ನುಣ್ಣಗೆ ಅರೆದು ತೆಳು ಮತ್ತು. ಶುಭ್ರವಾದ ಬಟ್ಟೆಯಲ್ಲಿ ಸೋಸಿ ರಸ ಹಿಂಡಿಕೊಳ್ಳವುದು ಅರೆದು ತೆಳು ಮತ್ತು ಶುಭ್ರವಾದ ಬಟ್ಟೆಯಲ್ಲಿ ಸೋಸಿ ರಸ ಹಿಂಡಿಕೊಳ್ಳುವುದು ಅರ್ಧ ಟೀ ಚಮಚ ರಸಕ್ಕೆ ಸ್ವಲ್ಪ ಕೆಂಪು ಕಲ್ಲು ಸಕ್ಕರೆ ಪುಡಿ ಸೇರಿಸಿ ಸೇವಿಸುವುದು.

ಚರ್ಮವ್ಯಾದಿಗಳಲ್ಲಿ ಗಜಕರ್ಣ, ಹುಳುಕಡ್ಡಿ ಮತ್ತು ತುರಿಯಲ್ಲಿ

[ಬದಲಾಯಿಸಿ]

ಒಂದು ಟೀ ಚಮಚ ಹೊಮ್ಮಗಳು ಎಲೆಗಳ ರಸಕ್ಕೆ ಒಂದೆರಡು ಕಾಳು ಮೆಣಸಿನ ಚೂರ್ಣ ಸೇರಿಸಿ ನೀರಿನೊಂದಿಗೆ ಸೇವಿಸುವುದು.

ಉಲ್ಲೇಖ

[ಬದಲಾಯಿಸಿ]
  1. ಪುಸ್ತಕದ ಹೆಸರು: ಬಾಬಾ ಬುಡನ್ ಗಿರಿ ಮತ್ತು ಸಿದ್ದರ ಬೆಟ್ಟದ ಅಪೂವ‍ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು ಸಂಪಾದಕರು: ವೈದ್ಯ ಎ.ಆರ್.ಎಂ. ಸಾಹೇಬ್ ಪ್ರಕಾಶಕರು: ಮಠಾಧೀಶರು, ಸದ್ಗುರು ದಾದಾ ಹಯಾತ್ ಮೀರ್ ಖಲಂದರ್ ಪೀಠ, ಬಾಬಾಬುಡನ್ ಗಿರಿ, ಚಿಕ್ಕಮಗಳೂರು