ವಿಷಯಕ್ಕೆ ಹೋಗು

ಸದಸ್ಯ:Raifa A A/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂತರ್ಜಾಲ ಪ್ರಯೋಜನಗಳು ಕಾರ್ಯತಂಡದ ಉತ್ಪಾದಕತೆ : ಅಂತರ್ಜಾಲಗಳು ಬಳಕೆದಾರರಿಗೆ ಗುರುತಿಸಲು ಹಾಗು ಮಾಹಿತಿಯನ್ನು ಶೀಘ್ರದಲ್ಲಿ ಸಂಗ್ರಹಿಸಲು ಸಹಾಯಮಾಡುತ್ತವೆ. ಅಲ್ಲದೇ ಅವರ ಪಾತ್ರ ಹಾಗು ಜವಾಬ್ದಾರಿಗಳಿಗೆ ಅನುಸಾರವಾಗಿ ಅನ್ವಯಗಳನ್ನು ಬಳಕೆ ಮಾಡಬಹುದು. ವೆಬ್ ಬ್ರೌಸರ್ ಇಂಟರ್ಫೇಸ್ ನ ಸಹಾಯದಿಂದ, ಬಳಕೆದಾರರು, ದತ್ತಾಂಶ ಸಂಗ್ರಹದಲ್ಲಿರುವ ಸಂಸ್ಥೆಗೆ ಬೇಕಾದ ಯಾವುದೇ ದತ್ತಾಂಶವನ್ನು ಯಾವುದೇ ಸಮಯದಲ್ಲಿ ಸುಲಭದಲ್ಲಿ ಪಡೆಯಬಹುದು. ಅಲ್ಲದೇ- ಇದು ಭದ್ರತಾ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ - ಇದು ಸಂಸ್ಥೆಯ ಯಾವುದೇ ಕಾರ್ಯತಾಣಗಳೊಳಗಿರಬಹುದು. ತಮ್ಮ ಕಾರ್ಯವನ್ನು ಬೇಗನೆ ಮುಗಿಸಲು ನೌಕರರ ಸಾಮರ್ಥ್ಯವನ್ನು ಹೆಚ್ಚು ನಿಖರವಾಗಿ ಹೆಚ್ಚಿಸುವುದು, ಹಾಗು ತಮ್ಮ ಮಾಹಿತಿ ಸರಿಯಾಗಿದೆಯೆಂಬ ಭರವಸೆ ನೀಡುವುದು. ಇದು ಬಳಕೆದಾರರಿಗೆ ಒದಗಿಸಲಾದ ಸೇವೆಗಳನ್ನು ಉತ್ತಮಪಡಿಸಲೂ ಸಹ ಸಹಾಯಮಾಡುತ್ತದೆ. ಸಮಯ : ಅಂತರ್ಜಾಲಗಳು ಸಂಸ್ಥೆಗಳಿಗೆ, ನೌಕರರಿಗೆ ಅಗತ್ಯವಿದ್ದ ಸಮಯದಲ್ಲಿ ಮಾಹಿತಿಯನ್ನು ಹಂಚಿಕೆ ಮಾಡಲು ಅವಕಾಶ ನೀಡುತ್ತದೆ; ನೌಕರರು ಇಲೆಕ್ಟ್ರಾನಿಕ್ ಮೇಲ್ ನ ಮೂಲಕ ಮಾಹಿತಿಯ ಅವ್ಯವಸ್ಥೆಯಿಂದಾಗಿ ಉಂಟಾಗುವ ಗೊಂದಲಕ್ಕಿಂತ, ತಮಗೆ ಅನುಕೂಲವಾಗುವ ರೀತಿಯಲ್ಲಿ ಮಾಹಿತಿಯನ್ನು ಅವರು ಸಂಯೋಜಿಸಬಹುದು. ಸಂವಹನ : ಅಂತರ್ಜಾಲಗಳು ಒಂದು ಸಂಸ್ಥೆಯೊಳಗೆ ಸಮಗ್ರವಾಗಿ ಹಾಗು ಸಮಾನವಾಗಿ ಸಂವಹನದ ಪ್ರಬಲ ಸಾಧನವಾಗಿ ಕಾರ್ಯನಿರ್ವಹಿಸುತ್ತವೆ. ಸಂಪರ್ಕ-ಸಂವಹನದ ದೃಷ್ಟಿಕೋನದಿಂದ, ಅಂತರ್ಜಾಲಗಳು ಸಂಸ್ಥೆಯುದ್ದಕ್ಕೂ ಸಮಗ್ರವಾದ ನಿಲುಕಿನಲ್ಲಿರುವ ಕಾರ್ಯ ನೀತಿಯ ಉಪಕ್ರಮವನ್ನು ಜಾಗತಿಕವಾಗಿ ಅಗತ್ಯ ಮಾಹಿತಿ ತಿಳಿಸಲು ಸಹಕಾರಿಯಾಗಿವೆ.ಸಂಘಟನೆಯ ಸಂಪೂರ್ಣ ಆರಂಭಿಕ ಕಾರ್ಯವಿಧಾನಗಳನ್ನು ಅವು ದೃಢಪಡಿಸಲು ಸಮರ್ಥವಾಗಿವೆ. ಮಾಹಿತಿಯ ಮಾದರಿಯನ್ನು ಸುಲಭವಾಗಿ ತಿಳಿಯಪಡಿಸುವುದು ಉಪಕ್ರಮದ ಉದ್ದೇಶವಾಗಿದೆ. *ಅದು ಉಪಕ್ರಮವು ಏನನ್ನು ಸಾಧಿಸಲು ಉದ್ದೇಶಿಸಿದೆ, ಉಪಕ್ರಮದ ಹಿಂದಿರುವ ಅಂಶಗಳು ಯಾವವು, ಇಲ್ಲಿಯವರೆಗೂ ದೊರೆತ ಫಲಿತಾಂಶ, ಹಾಗು ಹೆಚ್ಚಿನ ಮಾಹಿತಿಗಾಗಿ ಯಾರನ್ನು ಸಂಪರ್ಕಿಸಬೇಕು. ಅಂತರ್ಜಾಲದಲ್ಲಿ ಈ ಮಾಹಿತಿಯನ್ನು ಒದಗಿಸುವ ಮೂಲಕ, ಸಿಬ್ಬಂದಿಯು ಕಾರ್ಯವಿಧಾನದೊಂದಿಗೆ ಇಂದಿನತನಕದ ಮಾಹಿತಿಯನ್ನು ಸಂಗ್ರಹಿಸಿ ಕಲೆಹಾಕುವ ಅವಕಾಶ ದೊರೆಯುತ್ತದೆ. ಸಂವಹನದ ಕೆಲ ಉದಾಹರಣೆಗಳೆಂದರೆ ಚಾಟ್, ಇಮೇಲ್, ಹಾಗು ಅಥವಾ ಬ್ಲಾಗ್ ಗಳು. ಅಂತರ್ಜಾಲವು ಸಂವಹನದಿಂದಾಗಿ ಒಂದು ಸಂಸ್ಥೆಗೆ ನೆರವಾದ ವಾಸ್ತವ ಜಗತ್ತಿನ ಒಂದು ಉತ್ತಮ ಉದಾಹರಣೆಯೆಂದರೆ, ನೆಸ್ಲೆ ಸಂಸ್ಥೆ, ಇದು ಸ್ಕ್ಯಾಂಡಿನೇವಿಯದಲ್ಲಿ ಆರಂಭಿಸಿದ ಹಲವಾರು ಆಹಾರ ಸಂಸ್ಕರಣ ಘಟಕಗಳ ಬಗ್ಗೆ ಅಂತರ್ಜಾಲ ಸಂವಹನದಿಂದ ಹೊರ ಜಗತ್ತಿಗೆ ಇದರ ಬಗ್ಗೆ ಮಾಹಿತಿ ದೊರೆಯಿತು. ಅವರ ಪ್ರಮುಖ ಬೆಂಬಲದ, ನೆರವಿನ ವ್ಯವಸ್ಥೆಯು ಪ್ರತಿ ದಿನ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿ ವ್ಯವಾಹರಿಕ ಸಮಸ್ಯೆಗಳನ್ನು ಬಗೆಹರಿಸಬೇಕಿತ್ತು. ನೆಸ್ಲೆ ಸಂಸ್ಥೆಯು ಅಂತರ್ಜಾಲದ ಮೇಲೆ ತನ್ನ ಬಂಡವಾಳ ಹೂಡಲು ನಿರ್ಧರಿಸಿದಾಗ, ಅದು ಇದರಿಂದ ಆಗುವ ಉಳಿತಾಯವನ್ನು ಬೇಗನೆ ಗುರುತಿಸಿತು. ಮ್ಯಾಕ್ಗೋವರ್ನ್ ಪ್ರಕಾರ ಪ್ರಶ್ನೆಗಳಿಗಾಗಿ ಮಾಡಲಾಗುತ್ತಿದ್ದ ದೂರವಾಣಿ ಕರೆಗಳ ನಂತರ ಉಂಟಾಗುತ್ತಿದ್ದ ಉಳಿತಾಯವು ಅಂತರ್ಜಾಲದ ಮೇಲೆ ಹೂಡಲಾದ ಬಂಡವಾಳಕ್ಕಿಂತ ಮೂಲಭೂತವಾಗಿ ಅಧಿಕವಾಗಿತ್ತು. ವೆಬ್ ಪ್ರಕಟಣೆ , ಹೈಪರ್ ಮೀಡಿಯ ಹಾಗು ವೆಬ್ ತಂತ್ರಜ್ಞಾನಗಳನ್ನೂ ಬಳಸಿಕೊಂಡು ಸಂಸ್ಥೆಯುದ್ದಕ್ಕೂ ಅಡ್ಡಿ ಆತಂಕಗಳೊಂದಿಗೆ ನಿಧಾನ ಗತಿಯ ಕಾರ್ಪೋರೆಟ್ ಜ್ಞಾನ ನಿರ್ವಹಣೆ ಹಾಗು ಸುಲಭವಾಗಿ ತಲುಪಲು ಅವಕಾಶ ನೀಡುತ್ತದೆ. ಉದಾಹರಣೆಗಳಲ್ಲಿ: ನೌಕರರ ಕೈಪಿಡಿ, ಪ್ರಯೋಜನಗಳ ದಾಖಲೆ ಆಧಾರ, ಕಂಪನಿಯ ನೀತಿ-ಸೂತ್ರಗಳು, ವ್ಯಾಪಾರ ಗುಣಮಟ್ಟಗಳು, ನ್ಯೂಸ್ ಫೀಡ್ ಗಳು, ಹಾಗು ತರಬೇತಿಯನ್ನೂ ಸಹ ಒಳಗೊಂಡಿದೆ.