ವಿಷಯಕ್ಕೆ ಹೋಗು

ಸದಸ್ಯ:Rithika V Amin/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಿಮ್ಯಾಲೆ ಕುಣಿತ[ಬದಲಾಯಿಸಿ]

ಆಸಾದಿ ಕುಣಿತದ ರೀತಿಯಲ್ಲಿಯೇ ಹಬ್ಬದ ದಿನ ಅತ್ಯಂತ ಮುಕ್ತವಾಗಿ ತನ್ನ ಅಭೀಪ್ಸೆ ಅಥವಾ ಪ್ರತಿಭಟನೆಯನ್ನು ಸಾಂಕೇತಿಕವಾಗಿ ವ್ಯಕ್ತಪಡಿಸುವ ಮತ್ತೊಂದು ಆಚರಣಾತ್ಮಕ ಕಲೆ ಇದು.ಮಂಡ್ಯ ಜಿಲ್ಲೆಯ ಅರಕೆರೆ ಹಾಗೂ ಕಿಕ್ಕೇರಿಗಳಲ್ಲಿ ಮಾರಿಹಬ್ಬದ ಸಂದರ್ಭಗಳಲ್ಲಿಯೇ ಪ್ರದರ್ಶಿತವಾಗುವ ಈ ಕಲೆಯನ್ನು 'ದಿಮ್ಸಾಲೆ' ಎಂದು ಕರೆಯುತ್ತಾರೆ. ಇದು ಆಸಾದಿ ಕುಣಿತದ ‍‍‍‌‌‍‌‌ಮುಂದಿನ ಹಂತ ಎಂದೇ ಹೇಳಬಹುದಾಗಿದೆ. ಆಸಾದಿ ನಾಲಿಗೆಯ ಮೂಲಕ ವ್ಯಕ್ತಪಡಿಸುವ ಅಸಹನೆಯನ್ನು ಈ ಆಚರಣೆಯಲ್ಲಿ ಅಭಿನಯ ಪೂರ್ವಕ ಕ್ರಿಯೆಯಲ್ಲಿಯೇ ವ್ಯಕ್ತಪಡಿಸಲಾಗುತ್ತದೆ. ಮಂಡ್ಯ ಜಿಲ್ಲೆಯ ಶೂಲದ ಹಬ್ಬದ ಸಂದರ್ಭದ ಮಾರಮ್ಮನ ಪೂಜಾರಿಯಾದ ಬೆಸ್ತ ಜನಾಂಗದ ವ್ಯಕ್ತಿ ಈ ಕುಣಿತವನ್ನು ನೆರವೇರಿಸುತ್ತಾನೆ. <ref>ಕರ್ನಾಟಕ ಜನಪದ ಕಲೆಗಳ ಕೋಶ,<ಕರ್ನಾಟಕ ಜನಪದ ಕಲೆಗಳ ಕೋಶ ಹಿ. ಚಿ. ಬೋರಲಿಂಗಯ್ಯ, ೧೯೯೬, ಪ್ರಸಾರಾಂಗ:ಕನ್ನಡ ವಿಶ್ವವಿದ್ಯಾಲಯ, ಹಂಪಿ/ref>




ಉಲ್ಲೇಖ[ಬದಲಾಯಿಸಿ]