ಸದಸ್ಯ:Rohnithreddy.c/ನನ್ನ ಪ್ರಯೋಗಪುಟ
ಆಗರ ಊರಿನ ಜಾತ್ರೆ
ಅಗರ ಊರಿನ ಜಾತ್ರೆ ಪರಿಚಯ
[ಬದಲಾಯಿಸಿ]ನಾನು ನಿಮಗೆ ಅಗರ ಊರಿನ ಜಾತ್ರೆ ಬಗ್ಗೆ ತಿಳಿಸುತ್ತೇನೆ. ಈ ಊರಿನ ಜಾತ್ರೆ ಬಗ್ಗೆ ತಿಳಿಯುವ ಮುಂಚೆ ಈ ಊರಿನ ಬಗ್ಗೆ ಸ್ವಲ್ಪ ತಿಳಿಯೋಣ.
ಅಗರ ಎಂಬುವುದು ಬೆಂಗಳೂರು ದಕ್ಷಿಣ ಕಡೆ ಅಲ್ಲಿ ಇದೆ , ಈ ಊರನ್ನು ನಾವು H S R layout ಮತ್ತು ಕೋರಮಂಗಲ ಮದ್ಯದಲ್ಲಿ ಕಾಣಬಹುದು . ಎಲ್ಲಿ ನಾವು ದೊಡ್ಡದಾದ ಆಂಜಿನೆಯ ನ ವಿಗ್ರಹ ವನ್ನು ನಾವು ನೋಡಬಹುದು , ಇಲ್ಲಿ ಒಂದು ರಸ್ತೆ ಯುದ್ದಕ್ಕೂ ದೇವಸ್ಥಾನ ಗಳು ತುಂಬಿವೆ , ಅಗರ ಊರು ಒರಿಯನ್ ದೇವಸ್ಥಾನ , ಆಂಜನೇಯನ ದೇವಸ್ಥಾನ, ಅಯ್ಯಪ್ಪ ದೇವಸ್ಥನ, ಅಗರ ಕೆರೆಗೆ ಪ್ರಮುಕ್ಯ ವಾಗಿದೆ.

ಅಗರ ಊರಿನ ಜಾತ್ರೆ ಯಾವಾಗಲೂ ಹೊಳಿ ದಿನ ಜಾತ್ರೆ ನಡಿಸುತ್ತದೆ . ಅಗರ ಊರಿನ ಜಾತ್ರೆ ತುಂಬಾ ವೈಭವದಿಂದ ನಡೆಸುತ್ತಾರೆ . ಅಗರ ಊರಿನ ಜಾತ್ರೆ ಹದಿಮೂರು ದಿನದ ಜಾತ್ರೆ .ಮುಕ್ಯವಾದ ದಿನ ಎಂದರೆ ಬ್ರಹ್ಮೋತ್ಸವ ,ಈ ಉತ್ಸವ ಮುನ್ನ ಆರು ಉತ್ಸವಗಳು ನಡೆಯುತ್ತವೆ , ಬ್ರಹ್ಮೋತ್ಸವ ಆದಮೇಲೆ ಆರು ಉತ್ಸವಗಲು ನಡೆಯುತ್ತೇವೆ.ಪ್ರತಿಒಂದು ಉತ್ಸವ ಒಂದೊಂದು ಕುಟುಂಬ ದವರು ನಡೆಸುತ್ತಾರೆ .
ಉತ್ಸವಗಲು
[ಬದಲಾಯಿಸಿ]ಉತ್ಸವಗಳ ಹೆಸರುಗಳು ಏನಂದರೆ :
೧)ಅಂಕುರಪರ್ಣ ಉತ್ಸವ
೨)ದ್ವಾಜರೋಹಣ ಉತ್ಸವ
೩)ಹಂಸವಾಹನೋತತ್ಸವ
೪)ಸಿಂಹವಹನಾತ್ಸವ
೫)ಕಲ್ಯಾಣೋತ್ಸವ
೬)ಗಜವಹಣ ಉತ್ಸವ
೭) ಬ್ರಹ್ಮೋತ್ಸವ (ಪ್ರಮಾಮುಕ್ಯ ವಾದುದು)
೮)ಶೇಶವಾಹಣ ಉತ್ಸವ
೯)ಹಸುವಾಂತ ಉತ್ಸವ
೮೦)ಕೀಳಕುದರೆ ಉತ್ಸವ
೧೧)ಗರುಡ ಉತ್ಸವ
೧೨)ಶಯನ ಉತ್ಸವ
೧೩)ಮಹಾಭಿಷೇಕ
ಉತ್ಸವದ ದಿನಗಳು ದೇವೆರ ವಾಹನ ಗಳನ್ನು ಆಚೆ ತಂದು ಅದನ್ನು ಚೆನ್ನಾಗಿ ತೊಳೆದು, ಅಲಂಕಾರ ಮಾಡಿದ ಪಾಲಕ್ಕಿ ಯಲ್ಲಿ ಇಡುತ್ತಾರೆ, ರಾತ್ರಿ ದೇವರನ್ನು ಚೆನ್ನಾಗಿ ಅಲಂಕಾರ ಮಾಡಿ ಮಂಗಳಾರತಿ ಮಾಡಿ ಜನರು ತಮ್ಮ ಭುಜಗಳ ಮೇಲೆ ದೇವರನ್ನು ಎತ್ತುಕೊಂಡು ಅಲಂಕಾರ ಮಾಡಿದ ಪಲ್ಲಕ್ಕಿ ಯಲ್ಲಿ ಇದ್ದ ದೇವರ ವಾಹನ ಮೇಲೆ ಕೂರಿಸಿ , ಜನರು ತೆಂಗಿನ ಕಾಯಿ ಪಟಾಕಿ ಗಳನ್ನು ಹೊಡೆದು ಪಾಲಕ್ಕಿ ಯನ್ನು ಕದಲಿಸಿ ಊರೆಲ್ಲ ಒಂದು ಸುತ್ತು ಹಾಕಿ
ದಾರಿಯುದ್ದಕ್ಕೂ ಮಂಗಳಾರತಿ ಗಳನ್ನು ಮಾಡುತ್ತಾ ಪಟಾಕಿ ಗಳನ್ನು ಹೊಡೆಯುತ್ತಾ , ತಮಟೆ ಯನ್ನು ಹೊಡೆಯುತ್ತಾ ಮತ್ತೆ ದೇವಸ್ಥಾನ ಅತ್ತಿರ ಬರುತ್ತೇವೆ.
ಅದರಲ್ಲಿ ವಿಶೇಷವಾದ ದಿನ ಆರನೆಯ ದಿನ ಏನೆಂದರೆ ನರಸಿಂಹ ಉತ್ಸವ ,
ನರಸಿಂಹ ಉತ್ಸವದ ದಿನ ಎಲ್ಲ ಯುವಕರು ತುಂಬಾ ಉತ್ಸಾಹದಿಂದ ಬರುತ್ತಾರೆ, ದೇವಸ್ತಾನ ದ ಒಳಗಡೆ ದೇವರಿಗೆ ಪೂಜೆ ಮಾಡಿ ಮಂಗಳಾರತಿ ಕೊಟ್ಟು ದೇವರನ್ನು ಭುಜದ ಮೇಲೆ ಎತ್ತಿಕೊಂಡು,ಎಲ್ಲ ಉತ್ಸವದಂತೆ ಈ ಸಲ ದೇವರನ್ನು ಪಾಲಕ್ಕಿ ಮೇಲೆ ಕೂರಿಸುವುದಿಲ್ಲ ಆಚೆಗೆ ಬರುವಂತೆ ತೆಂಗಿನ ಕಾಯಿ ಪಟಾಕಿಗಳನ್ನು ಹೊಡೆಯುತ್ತಾ ಇರುತ್ತಾರೆ ಆಗ ದೇವರನ್ನು ಎತ್ತುಕೊಂಡು ತಲ್ಲಾಡುತ್ತ ಆಕಡೆ ಇಂದ ಈಕಡೆ ಎಲ್ಲ ಯುವಕರು ತುಂಬಾ ಉತ್ಸಹದಿಂದ ಇರುತ್ತಾರೆ .
ಬ್ರಂಹೋತ್ಸವ
[ಬದಲಾಯಿಸಿ]
ಮುಕ್ಯವಾದ ದಿನ ಎಂದರೆ ಬ್ರಂಹೋತ್ಸವ,
ಈ ದಿನ ಬೆಳಗ್ಗೆ ದೇವರಿಗೆ ಅಲಂಕಾರವನ್ನು ತುಂಬಾ ಚೆನ್ನಾಗಿ ಮಾಡಿರುತ್ತಾರೆ ದೇವಸ್ಥಾನ ವನ್ನು ಹೂವು ಗಳಿಂದ ತುಂಬಿ ನೋಡುವುದಕ್ಕೆ ಕಣ್ಣಿಗೆ ಬಹಳ ಚೆನ್ನಾಗಿರುತ್ತದೆ. ನಾವು ಕೇರಳ ಬೇರೆ ಬೇರೆ ಜಗಗಳಿಂದ ಬಂದು ವಿಧವಿಧವಾದ ತಮಟೆಯ ನೋಡುವ ಅವಕಾಶ ಸಿಗುತ್ತದೆ ,ದಾರಿ ಉದ್ದಕ್ಕೂ ಬೊಂಬೆಗಳು, ಫ್ಯಾನ್ಸಿ ಬಟ್ಟೆ, ಹುಡುಗಿಯರಿಗೆ ಬಳೆಗಳು ಹೋಲೆಗಳು ಎಲ್ಲ ತರದ ವಸ್ತುಗಳು ಸಿಗುತ್ತವೆ ಮತ್ತು ಚಿಕ್ಕ ಮಕ್ಕಳಿಗೆ ಆಟ ಆಡುವುದಕ್ಕೆ ಆಟಗಳು ವಸ್ತುಗಳು ಮತ್ತು ಹಿರಿಯರಿಗೆ ಮತ್ತು ಯುವಕರಿಗೆ ಜೂಜು ಆಟ ಸಾಯಂಕಾಲದ ಹೊತ್ತಿನಲ್ಲಿ ಆಡುತ್ತಾರೆ ಕೆಲವರು ದುಡ್ಡು ಮಾಡುತ್ತಾರೆ ಕೆಲವಾರು ದುಡ್ಡು ಸೋಲುತ್ತಾರೆ ಕೆಲವರು ನೋಡಿ ಆನಂದಿಸುತ್ತಾರೆ. ಮಧ್ಯಾನ ಹಾಂಗೆ ಅಲಂಕಾರ ಮಾಡಿದ ದೇವರನ್ನು ಜನರು ತಗೆದುಕೊಂಡು ಬಂದು ದೊಡ್ಡದಾಗಿ ೫೦ ಅಡಿ ಅಲಂಕಾರ ಮಾಡಿರುವ ತೇರಿನಲ್ಲಿ ಇಟ್ಟು ಮಹಾಮಂಗಳಾರತಿ ಮಾಡಿ ಎಲ್ಲಾರೂ ತೆಂಗಿನ ಕಾಯಿಯನ್ನು ಹೊಡೆದು ಸಾಲಿಗೆ ಜನರು ನಿಂತು ಹಗ್ಗ ವನ್ನು ಹಿಡಿದುಕೊಂಡು ಅಗರ ಪ್ರವೇಶದ್ವಾರ ವರಿಗು ಎಳೆದು ಕೊಂಡು ಹೋಗುತ್ತಾರೆ, ಮತ್ತೆ ಎಲ್ಲರಿಗೂ ಊಟಾ ಹಾಕಿ ಎಲ್ಲರಿಗೂ ಮಜ್ಜಿಗೆ ಕೊಡುತ್ತೇವೆ ,ಇದೆಲ್ಲ ಆಗುವ ಅಷ್ಟರಲ್ಲಿ ಮೂರು ಗಂಟೆಗೆ ಕುಸ್ತಿ ಪೋಟಿ ಆರಂಭ ಆಗುತ್ತದೆ ,ಕುಸ್ತಿ ಆಡುವುದಕ್ಕೆ ಕರ್ನಾಟಕ ದಲ್ಲಿ ಬೇರೆ ಬೇರೆ ಜಾಗದಿಂದ ಬರುತ್ತಾರೆ ನೋಡುವುದಕ್ಕೆ ತುಂಬಾ ಚೆನ್ನಾಗಿ ಇರುತ್ತದೆ, ಮತ್ತೆ ಆ ಎಳೆದುಕೊಂಡು ಹೋದ ತೇರನ್ನು ರಾತ್ರಿ ಆರು ಗಂಟೆಗೆ ಮತ್ತೆ ತಿರುಗಿಸಿ ದೇವಸ್ತಾನ ಪ್ರವೇಶ ವರೆಗೆ ಎಳೆದುಕೊಂಡು ಹೋಗುತ್ತಾರೆ ,ಮತ್ತೆ ರಾತ್ರಿ ಯುದ್ದಕ್ಕೂ ವಿಧವಿಧವಾದ ಪಾಲಕ್ಕಿ ಯನ್ನು ಸಿದ್ದ ಮಾಡಿ ಸಾಲಾಗಿ ಊರನ್ನು ಸುತ್ತುತ್ತಾರೆ, ಅ ದರ್ಶನ ತುಂಬಾ ಚೆನ್ನಾಗ್ ಇರುತ್ತದೆ ಮತ್ತು ಹರಿಕಥೆ ನಾಟಕವನ್ನು ಕೂಡ ಇರುತ್ತದೆ ಇವೆಲ್ಲ ಮುಗಿಯೋ ಅಷ್ಟ್ರಲ್ಲಿ ಬೆಳಗ್ಗೆ ಆರೂ ಗಂಟೆ ಆಗುತ್ತದೆ .
ಅಗರ ಊರಿನ ಜಾತ್ರೆ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ವರಾಗು ಎಲ್ಲರೂ ಆನಂದಿಸುತ್ತಾರೆ. ಎಲ್ಲ ಸಂಬಂಧಿಕರು ಸ್ನೇಹಿತರು ಜೊತೆ ಸೇರುವ ಕಾಲ.ಈ ಜಾತ್ರೆ ಎಲ್ಲಾರೂ ತಮ್ಮ ಜೀವನದಲ್ಲಿ ಒಂದು ಸಲ ಆದ್ರೂ ನೋಡಿ ಆನಂದಿಸಿ ಬೇಕು ಎಂಬುವುದು ನನ್ನ ಕೋರಿಕೆ ಆಸೆ .....