ವಿಷಯಕ್ಕೆ ಹೋಗು

ಸದಸ್ಯ:Sahana.d.f/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಓಝೋನ್ ಪದರ

ಓಝೋನ್ ಪದರವು ಭೂಮಂಡಲದ ಸುತ್ತ ಇರುವ ಪದರ.೧೯೧೩ ರಲ್ಲಿ ಚಾರ್ಲ್ಸ್ ಫ್ಯಾಬ್ರಿಯ ಮತ್ತು ಹೆನ್ರಿ ಬ್ಯುಸನ್ ಈ ಪದರವನ್ನು ಸಂಶೊದನೆ ಮಾಡಿದ್ದರು ಇದು ಭೂಮಿಯಿಂದ ೨೦-೩೦ ಕೀಮೀ ಎತ್ತರದಲ್ಲಿದೆ. ಇದರ ದಪ್ಪಮ ಕಾಲದೊಂದಿಗೆ ಹಾಗೂ ಅಕ್ಷಾಂಶದೊಂದಿಗೆ ಬದಲಾಗುತ್ತದೆ. ಬ್ರಿಟಿಷ್ ಭೌತಶಾಸ್ತ್ರಜ್ಞ ಸಿಡ್ನಿ ಚ್ಯಾಪ್ಮ್ಯಾನ್ ಓಝೋನ ಪದರದ ರಚನೆಯನ್ನು ಕುರಿತುವಿವರಣೆಯನ್ನು ನೀಡಿದ್ದರು .ಓಝೋನ್ ಪದರದಲ್ಲಿ ಆಮ್ಲಜನಕವು ದ್ಯುತಿರಾಸಾಯನಿಕ ಯಾಂತ್ರಿಕ ವ್ಯವಸ್ಥೆಯನ್ನು ಒಳಗಾಗಿ ಓಝೋನ್ ಆಗಿ ಪರಿವರ್ತನೆಗೊಳ್ಳೌತ್ತದೆ. ವಾಯುಮಂಡಲದಲ್ಲಿ ಈ ಪ್ರಕಿಯೆಯಿಂದ ಓಝೋನ್ ಪದರ ಅನಾದಿಕಾಲದಿಂದ ಇದೆ.

O2 + ℎνuv → 2O
O + O2 ↔ O3
ಈ ಪದರವು ಸೂರ್ಯನಿಂದ ಬರುವ ಶೆಖಡಾ ೯೭-೯೯ ಮಧ್ಯಮ ಆವರ್ತನ ನೇರಳಾತೀತ ಬೆಳಕನ್ನು ಹೀರಿಕೊಂಡು ಭೂಮಿಯನ್ನು ರಕ್ಶಿಸುತ್ತದೆ. ನೇರಳಾತೀತ ಬೆಳಕು ಜೀವಿಗಳಿಗೆ ಬಹು ಹಾನಿಕಾರಕವಾದದ್ದು. ಆದರಿಂದ ಓಝೋನ್ ಪದರ ಜೀವ ಸಂಕುಲದ ಇರುವಿಕೆಗೆ ಅತ್ಯವಶ್ಯಕವಾದದ್ದು. ಮಾನವನ ಹಲವು ಚಟುವಟಿಕೆಗಳಿಂದ ಓಝೋನ್ ಪದರದಲ್ಲಿ ರಂಧ್ರಗಳು ಕಾಣಿಸಿಕೊಳ್ಳೂತ್ತಿದೆ.ಇದಕ್ಕೆ ಮುಖ್ಯ ಕಾರಣ ಸೀಎಫ಼್ ಸೀ ಎಂಬ ರಾಸಾಯನಿಕ ಅನಿಲ. ಅಶ್ಟೆ ಅಲ್ಲದೇ ನೈತ್ರಸ್ ಆಕ್ಸೈದಡ್, ನಿತ್ರಿಕ್ ಆಕ್ಸೈಡ್ ಕೂಡ ಈ ಕ್ರಿಯೆಯಲ್ಲಿ ಭಾಗವಹಿಸುತ್ತದೆ. ಓಝೋನ್ ಪದರದಲ್ಲಿ ರಂಧ್ರಗಳು ಕಾಣಿಸಿಕೊಳ್ಳುವುದರಿಂದ ಹಲವಾರು ದುಶ್ಪರಿಣಾಮಗಳು ಉಂಟಾಗುತ್ತದೆ. ದೇಶ ವಿದೇಸಗಳಲ್ಲಿ ಈ ವಿಚಾರದ ಮಾಹಿತಿ ಅರಿವಾದಂತೆ , ಇದರ ಕೆಟ್ಟ ಪರಿಣಾಮಗಳ ಬಗ್ಗೆ ತಿಳಿದಾಗ ಅಂತರರಾಷ್ಟ್ರೀಯ ಒಪ್ಪಂದದ ಮೂಲಕ ಅನೇಕ ಕ್ರಮಗಳನ್ನು ಕೈಗೊಳಿಸಲಾಯಿತು.ಸೆಪ್ಟೆಂಬರ್ ೧೬ ರಂದು ಓಝೋನ್ ಪದರದ ಸಂರಕ್ಷಣೆಗೆ ಸಂಬಂಧಿಸಿದ ಅಂತರರಾಷ್ಟ್ರೀಯ ದಿನ ಎಂದು ಘೋಷಿಸಲಾಯಿತು.ವಾಯುದ್ರವ ದ್ರವೌಷಧಗಳ ಉಪಯೋಗದ ಮೇಲೆ ಕಡಿವಾಣ ಹಾಕಲಾಯಿತು.