ವಿಷಯಕ್ಕೆ ಹೋಗು

ಸದಸ್ಯ:Sharanugudadur/ನನ್ನ ಪ್ರಯೋಗಪುಟ೨

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಜಿತ್ ಕುಮಾರ್ ಭುಯಾನ್[ಬದಲಾಯಿಸಿ]

ಭಾರತೀಯ ರಾಜಕಾರಣಿ ಮತ್ತು ಪತ್ರಕರ್ತ


ಅಜಿತ್ ಕುಮಾರ್ ಭುಯಾನ್ (ಜನನ 1952) ಒಬ್ಬ ಭಾರತೀಯ ರಾಜಕಾರಣಿ ಮತ್ತು ಮಾಜಿ ಪತ್ರಕರ್ತ ಹಾಗೂ ಲೇಖಕರು.[೧] 2020 ರಿಂದ ಅಸ್ಸಾಂ ರಾಜ್ಯಸಭೆಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು 2020 ರಲ್ಲಿ ಅಂಚಲಿಕ್ ಗಣ ಮೋರ್ಚಾವನ್ನು ಸ್ಥಾಪಿಸಿ, ಅದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಅಸೋಮಿಯ ಪ್ರತಿದಿನ್, ಅಜಿ, ನತುನ್ ಸಮಯ್, ಮತ್ತು ಪ್ರಾಗ್ ನ್ಯೂಸ್ ಮಾಜಿ ಸಂಪಾದಕರು ಕೂಡ ಹೌದು.

ವೈಯಕ್ತಿಕ ಜೀವನ[ಬದಲಾಯಿಸಿ]

ಅಜಿತ್ ಕುಮಾರ್ ಭುಯಾನ್ ಅವರು 1952 ರಲ್ಲಿ ಭಾರತದ ಜೋರ್ಹತ್‌ನಲ್ಲಿ ಜನಿಸಿದರು. ಇವರು ತಮ್ಮ ಆರಂಭಿಕ ಶಿಕ್ಷಣವನ್ನು ಅಸ್ಸಾಂನ ಸಿಬ್‌ಸಾಗರ್ ಜಿಲ್ಲೆಯ ಅಮ್ಗುರಿ ಪ್ರೌಢ ಶಾಲೆಯಲ್ಲಿ ಪಡೆದರು ಮತ್ತು ಸಿಬ್‌ಸಾಗರ್ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಮುಗಿಸಿದರು. [೨] ಇವರು ಪದವಿ ಪಡೆಯುವ ಮೊದಲು, ಜೋರ್ಹತ್‌ನಲ್ಲಿ ಪ್ರಕಟವಾದ ದೈನಿಕ್ ಜನ್ಮಭೂಮಿ ಪತ್ರಿಕೆಯ ಉಪಸಂಪಾದಕರಗಿ ಸೇರಿಕೊಂಡರು. ಉಪ-ಸಂಪಾದಕರಾಗಿ ಕೆಲಸ ಮಾಡುತ್ತಿರುವಾಗಲೇ, ಇವರು ತಮ್ಮ ಬಿಎ ಪದವಿಯನ್ನು ಶಿವಸಾಗರದಲ್ಲಿರುವ ಝಂಜಿ ಹೇಮನಾಥ ಶರ್ಮಾ ಕಾಲೇಜಿನಿಂದ ಪಡೆದರು. [೩]

ರಾಜಕೀಯ ಜೀವನ[ಬದಲಾಯಿಸಿ]

ಜೂನ್ 2020 ರಲ್ಲಿ ಅಜಿತ್ ಕುಮಾರ್ ಭುಯಾನ್ ಅವರು ಅಂಚಲಿಕ್ ಗಣ ಮೋರ್ಚಾ ( ರಿಜಿನಲ್ (ಪ್ರಾದೇಶಿಕ) ಪೀಪಲ್ಸ್ ಫ್ರಂಟ್) ಅದರ ಮುಖ್ಯ ಸಂಚಾಲಕರಾಗಿ ಪ್ರಾದೇಶಿಕ ರಾಜಕೀಯ ಪಕ್ಷವನ್ನು ಕಟ್ಟಿದರು. [೪]

ಇವರು ಚುನಾವಣೆ ನಂತರ ಪತ್ರಿಕೆಗೋಷ್ಠಿ ಒಂದರಲ್ಲಿ, 2019 ರ (ಸಿಎಎ) ಪೌರತ್ವ (ತಿದ್ದುಪಡಿ) ಕಾಯ್ದೆ, ತಾವು ರಾಜಕೀಯ ಸೇರಲು ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಇವರು ಉಮೇದುವಾರಿಕೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಬೆಂಬಲಿಸಿದೆ. ತರುಣ್ ಗೊಗೊಯ್ ಮತ್ತು ಬದ್ರುದ್ದೀನ್ ಅಜ್ಮಲ್ ಇವರ ನಾಮನಿರ್ದೇಶನದ ಸಂದರ್ಭದಲ್ಲಿ ಜೊತೆ ಇದ್ದರು. ಭೂಯಾನ್ ಅವರು ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ ಸರ್ಕಾರವು ಸಂಸತ್ತಿನಲ್ಲಿ ಪರಿಚಯಿಸಿದ ಮತ್ತು ಅಂಗೀಕರಿಸಿದ ಪೌರತ್ವ ಕಾಯ್ದೆಯ ತೀವ್ರ ವಿಮರ್ಶಕರಾಗಿದ್ದಾರೆ. [೫]

ಉಲ್ಲೇಖಗಳು[ಬದಲಾಯಿಸಿ]

  1. "Shri Ajit Kumar Bhuyan". National Portal of India.
  2. Mahanta, Nani Gopal (11 April 2013). Confronting the State: ULFA's Quest for Sovereignty. SAGE Publications. p. 186. ISBN 9788132113270.
  3. Kalita, J. "A Prisoner of Conscience in Assam, 1997". College of Engineering and Applied Science, University of Colorado Colorado Springs.
  4. "Regional People's Front formed in Assam with eye on next year's state polls". United News India. 19 June 2020. Retrieved 19 January 2021.
  5. "Assam: All three Rajya Sabha candidates set to be elected unopposed". Hemanta Kumar Nath. India Today. 14 March 2020. Retrieved 14 March 2020.