ವಿಷಯಕ್ಕೆ ಹೋಗು

ಸದಸ್ಯ:Shashank Baje/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭೌತಶಾಸ್ತ್ರದ ಪ್ರಕಾರ ಶಬ್ಧ ಎಂಬುದು ಒಂದು ಕಂಪನ. ಇದು ಯಾಂತ್ರಿಕ ತರಂಗದ ರೂಪದಲ್ಲಿ ನಮ್ಮ ಕಿವಿಗೆ ಕೇಳುತ್ತದೆ. ಹಾಗೂ ಒತ್ತಡ ಮತ್ತು ಸ್ಥಾನಪಲ್ಲಟಗಳ ಮೂಲಕ ಒಂದು ಮಾಧ್ಯಮದಲ್ಲಿ ಚಲಿಸುವ (ಗಾಳಿ, ನೀರು) ಅಲೆಯಾಗಿದೆ.

ವ್ಯಾಖ್ಯೆ

[ಬದಲಾಯಿಸಿ]

ಶಬ್ಧವನ್ನು ಶಾಸ್ತ್ರೀಯವಾಗಿ ಹೇಳಬೇಕೆಂದರೆ ಒಂದು ಮಾಧ್ಯಮದಲ್ಲಿನ ನಿರಂತರ ಕಂಪನ ಅಥವಾ ಆವರ್ತಕ ಕ್ಷೋಭೆÉ. ಈ ಕಂಪನವು ಒತ್ತಡ, ಬಲ ಪ್ರಯೋಗ ಹಾಗೂ ಕಣಗಳ ಸ್ಥಾನ ಪಲ್ಲಟದಿಂದ ಉಂಟಾಗುತ್ತದೆ. ಕಂಪನವು ಅಲೆಗಳ ರೂಪದಲ್ಲಿ ಚಲಿಸುತ್ತದೆ. ಆದರೆ ಇದಕ್ಕೆ ಒಂದು ಮಾಧ್ಯಮದ ಅವಶ್ಯಕತೆಯಿದೆ. ಶಬ್ಧವು ಮಾಧ್ಯಮದ ಮೂಲಕ ಚಲಿಸುತ್ತದೆ. ಅದು ಗಾಳಿ, ನೀರು ಅಥವಾ ಯಾವುದೇ ಘನರೂಪದ ವಸ್ತುಗಳಿರಬಹುದು. ಶಬ್ಧವನ್ನು ಅಡ್ಡ ತರಂಗ ಹಾಗೂ ನೀಳ ತರಂಗಗಳಲ್ಲಿ ಚಲಿಸುತ್ತದೆ ಎಂದು ಗುರುತಿಸಲಾಗಿದೆ. ಶಬ್ಧವು ಒಂದು ಕಂಪನ ಕೇಂದ್ರದಿಂದ ಸುತ್ತಲೂ ಪ್ರಸರಿಸಿರುತ್ತದೆ. ಒಂದು ಮಾಧ್ಯಮದಲ್ಲಿ ಎಲ್ಲಿಯವರೆಗೆ ಕಂಪನ ಇರುತ್ತದೋ ಅಲ್ಲಿಯವರೆಗೆ ಶಬ್ಧದ ಅಲೆಗಳು ಪ್ರಸರಿಸುತ್ತವೆ. ಕಂಪನ ಕೇಂದ್ರದಿಂದ ಶಬ್ಧವು ಎಷ್ಟು ದೂರದವರೆಗೆ ಚಲಿಸುತ್ತದೆ ಎಂಬುದಕ್ಕೆ ಶಬ್ಧದ ದೂರ ಎನ್ನುತ್ತಾರೆ. ಒಂದು ಕಂಪನ ಕೇಂದ್ರದಿಂದ ಶಬ್ಧದ ಅಲೆಗಳು ನಿರಂತರವಾಗಿ ಪ್ರಸಾರವಾಗುತ್ತಿರಬೇಕಾದರೆ ಅದರ ಮೇಲೆ ಒತ್ತಡ, ವೇಗೋತ್ಕರ್ಷ ಮತ್ತು ಸ್ಥಾನಪಲ್ಲಟ ಇವುಗಳು ಪ್ರಭಾವ ಬೀರುತ್ತದೆ ಹಾಗೂ ಇವು ಸಮಯದ ಜೊತೆ ಬದಲಾವಣೆ ಆಗುತ್ತದೆ. ಒಂದು ಮುಖ್ಯ ಅಂಶ ಎಂದರೆ ಕಂಪನದಿಂದ ಅಲೆಗಳು ಉಂಟಾದಾಗ ಶಬ್ಧದ ಶಕ್ತಿಯು ಮಾತ್ರ ಪ್ರಸರಿಸುತ್ತದೆ. ಇದು ಎಲ್ಲಾ ಘನ, ದ್ರವ ಹಾಗೂ ಅನಿಲ ಸ್ಥಿತಿಗಳಿಗೂ ಅನ್ವಯಿಸುತ್ತದೆ. ಶಬ್ಧವು ಪ್ರಸಾರವಾಗುವ ಸಮಯದಲ್ಲಿ ಅದು ವಕ್ರೀಭವನ, ಪ್ರತಿಫಲನ ಅಥವಾ ಮಾಧ್ಯಮದಲ್ಲಿ ಅಡೆತಡೆಗೆ ಒಳಪಡುತ್ತದೆ.

ಶಬ್ಧ ಪ್ರಸಾರದ ಮೇಲೆ ಪ್ರಭಾವ ಬೀರುವ 2 ಪ್ರಮುಖ ಅಂಶಗಳು

[ಬದಲಾಯಿಸಿ]

ಒಂದು ಶಬ್ಧವು ಪ್ರಸಾರವಾಗುತ್ತಿರಬೇಕಾದರೆ ಕೆಳಗಿನ ಮೂರು ಅಂಶಗಳು ಪ್ರಮುಖವಾದ ಪಾತ್ರವಹಿಸುತ್ತದೆ.

ಪ್ರಸಾರವಾಗುವ ಮಾಧ್ಯಮದ ಸಾಂದ್ರತೆ ಮತ್ತು ಒತ್ತಡ

[ಬದಲಾಯಿಸಿ]

ಸಾಂದ್ರತೆ ಮತ್ತು ಒತ್ತಡಗಳು ತಾಪಮಾನದ ಪ್ರಭಾವಕ್ಕೆ ಒಳಪಡುತ್ತದೆ. ಇದರಿಂದ ಶಬ್ಧ ಪ್ರಸರಣೆಯಲ್ಲಿ ನಿಧಾನವಾಗುವ ಸಂಭವ ಇರುತ್ತದೆ.

ಚಲಿಸುತ್ತಿರುವ ಮಾಧ್ಯಮ

[ಬದಲಾಯಿಸಿ]

ಶಬ್ಧವು ಚಲಿಸುವ ಮಾಧ್ಯಮವೂ ಸಹ ಶಬ್ಧದ ದಿಕ್ಕಿನಲ್ಲಿಯೇ ಚಲಿಸುತ್ತಿದ್ದರೆ ಶಬ್ಧದ ವೇಗ ಹೆಚ್ಚಾಗುತ್ತದೆ. ಆದರೆ ಮಾಧ್ಯಮದ ದಿಕ್ಕು ಪ್ರಸರಣದ ದಿಕ್ಕಿಗೆ ವಿರುದ್ಧವಾಗಿದ್ದರೆ ಶಬ್ಧದ ವೇಗ ಸಹ ಕಡಿಮೆ.

ಮಾಧ್ಯಮದ ಸ್ನಿಗ್ಧತೆ(ಅಂಟುಗುಣ)

[ಬದಲಾಯಿಸಿ]

ಮಾಧ್ಯಮದ ಅಂಟುಗುಣ ಅಥವಾ ಸ್ನಿಗ್ಧತೆ ಸಹ ಶಬ್ಧ ಪ್ರಸಾರದ ವೇಗವನ್ನು ತಗ್ಗಿಸುತ್ತದೆ. ಆದರೆಇದರ ಪ್ರಭಾವ ಬಹಳ ಕಡಿಮೆ ಇದ್ದು ಇದರ ಪರಿಣಾಮವನ್ನು ತಳ್ಳಿ ಹಾಕಬಹುದು. ಶಬ್ಧವು ಒಂದು ಮಾಧ್ಯಮದಲ್ಲಿ ಪ್ರಸರಿಸುತ್ತಿರಬೇಕಾದರೆ ಸಮಾನಾದ ಭೌತಗುಣಗಳನ್ನು ಪ್ರದರ್ಶಿಸುವುದಿಲ್ಲ. ಇದು ಚದುರಬಹುದು, ಇತರ ಮಾಧ್ಯಮದಿಂದ ಪ್ರತಿಫಲಿತಗೊಳ್ಳಬಹುದು ಅಥವಾ ವಕ್ರೀಭವನಕ್ಕೂ ಒಳಗಾಗಬಹುದು. ಶಬ್ಧ ನಿರ್ವಾತದಲ್ಲಿ ಚಲಿಸದು.

ಶಬ್ಧದ ವಿಧಗಳು

[ಬದಲಾಯಿಸಿ]

ಶಬ್ಧವು ಚಲಿಸುವ ಆಧಾರದ ಮೇಲೆ ಶಬ್ಧದ ಅಲೆಗಳನ್ನು ಎರಡು ವಿಭಾಗಗಳಲ್ಲಿ ಗುರುತಿಸಲಾಗಿದೆ. ಅವುಗಳೆಂದರೆ

ಅಡ್ಡತರಂಗ
ನೀಳತರಂಗ
ಅಡ್ಡತರಂಗ ಅಡ್ಡತರಂಗದಲ್ಲಿ ಕಂಪನಾವಾದಾಗ ಮಾಧ್ಯಮದ ಕಣಗಳು ತರಂಗ ಚಲನೆಯ ದಿಕ್ಕಿಗೆ ಲಂಬವಾಗಿ ಚಲಿಸುತ್ತದೆ ಅತವಾ ಕಂಪಿಸುತ್ತದೆ. ಅಡ್ಡ ತರಂಗಗಳಲ್ಲಿ ಉಬ್ಬು ಮತ್ತು ತಗ್ಗುಗಳು ಉಂಟಾಗುತ್ತದೆ.ಉದಾ: ನಿಶ್ಚಲ ನೀರಿನಲ್ಲಿ ಕಲ್ಲನ್ನು ಬಿಟ್ಟರೆ ಉಂಟಾಗುವ ತರಂಗ. ಇದರಲ್ಲಿ ಅಲೆಗಳು ಉಬ್ಬು ಮತ್ತು ತಗ್ಗುಗಳನ್ನು ಪ್ರತಿನಿಧಿಸುತ್ತದೆ.ಈ ರೀತಿಯ ಚಲನೆಯಲ್ಲಿ ಕಂಪಿಸುವ ಮಾಧ್ಯಮದ ಕಣಗಳು ತರಂಗದ ಚಲನೆಗೆ ಲಂಬವಾಗಿ ಚಲಿಸುತ್ತಿರುತ್ತದೆ. ಉದಾ: ದೃಗ್ಗೂಚರ ಬೆಳಕು, ಸಮುದ್ರದ ಅಲೆಗಳು.

ನೀಳ ತರಂಗ

[ಬದಲಾಯಿಸಿ]

ನೀಳತರಂಗದಲ್ಲಿ ಕಂಪನದ ಮಾಧ್ಯಮದ ಕಣಗಳು ತರಂಗದ ಚಲನೆಯ ದಿಕ್ಕಿನಲ್ಲೇ ಕಂಪಿಸುತ್ತಿರುತ್ತೇವೆ. ಈ ರೀತಿಯ ಶಬ್ಧ ತರಂಗದಲ್ಲಿ ಸಂಕೋಚನ ಮತ್ತು ವಿಕಸನ ಕ್ರಿಯೆಗಳು ನಡೆಯುತ್ತದೆ. ಉದಾ: ಸ್ಟ್ರಿಂಗ್, (ಸ್ಟ್ರಿಂಗ್ನ್ನು ಒತ್ತಿದಾಗ ಸಂಕೋಚನ ಮತ್ತು ಎಳೆದಾಗ ವಿರಳನ) ನೀಳ ತರಂಗದಲ್ಲಿ ಈ ರೀತಿ ಸಂಕುಚನ ಮತ್ತು ವಿರಳನ ಕ್ರಿಯೆಯಿಂದಾಗಿ ಶಬ್ಧದ ಪ್ರಸಾರವಾಗುತ್ತಿರುತ್ತದೆ. ಉದಾ: ಮಾತನಾಡುವಿಕೆ, ಧ್ವನಿವರ್ಧಕದಲ್ಲಿನ ಶಬ್ಧ.

ಶಬ್ಧ ತರಂಗಗಳ ಲಕ್ಷಣಗಳು

[ಬದಲಾಯಿಸಿ]

ಶಬ್ಧ ತರಂಗಗಳು ಚಲಿಸುವಾಗ ಅಥವಾ ಪ್ರಸರಿಸುವಾಗ ಈ ಕೆಳಗಿನ ಗುಣಲಕ್ಷಣಗಳನ್ನು ತೋರ್ಪಡಿಸುತ್ತದೆ.

ಆವರ್ತನ
ವಿಸ್ತೀರ್ಣ
ತರಂಗದ ದೂರ
ದಿಕ್ಕು
ಶಬ್ಧ ತೀವ್ರತೆ
  • ಆವರ್ತನ: ಶಬ್ಧ ಆವರ್ತನ ಎಂದರೆ ಒಂದು ಮಾಧ್ಯಮದಲ್ಲಿ ಒಂದು ಕ್ಷಣದಲ್ಲಿ ಎಷ್ಟು ಕಂಪನಗಳು ಉಂಟಾಗುತ್ತದೆ ಎಂದರ್ಥ.ಅಂದರೆ ಒಂದು ಸೆಕೆಂಡಿನಲ್ಲಿ ಉಂಟಾಗುವ ಕಂಪನಗಳ ಸಂಖ್ಯೆಯೇ ಒಂದು ಶಬ್ಧ ತರಂಗದ ಆವರ್ತನವಾಗಿರುತ್ತದೆ.
  • ವಿಸ್ತೀರ್ಣ: ಒಂದು ಶಬ್ಧ ತರಂಗವು ಪ್ರಸಾರವಾಗುತ್ತಿರಬೇಕಾದರೆ ಉಬ್ಬು ಮತ್ತು ತಗು ಅಥವಾ ಸಂಕೋಚನ ಹಾಗೂ ವಿರಳನ ಕ್ರಿಯೆಗಳು ಉಂಟಾಗುತ್ತದೆ. ಉಂಟಾಗುವ ಉಬ್ಬು ಎಷ್ಟು ಎತ್ತರಕ್ಕೆ ಇರುತ್ತದೆ ಎಂಬುದೇ ಅದರ ವಿಸ್ತೀರ್ಣವಾಗಿರುತ್ತದೆ.
  • ತರಂಗದೂರ: ಒಂದು ಕಂಪನಾಂಕ ಸ್ಥಳದಿಂದ ಹೊರಟ ಶಬ್ಧ ತರಂಗ ಎಷ್ಟು ದುರದವರೆಗೆ ಪ್ರಸರಿಸುತ್ತದೆ ಎನ್ನುವುದೇ ಶಬ್ಧ ತರಮಗದ ದೂರವಾಗಿದೆ. ಅತವಾ ಇದನ್ನು ಎರಡು ಉಬ್ಬುಗಳ ನಡುವಿನ ಅಂತರ ಎಂದೂ ಕರೆಯುತ್ತಾರೆ.

ದಿಕ್ಕು

[ಬದಲಾಯಿಸಿ]

ಕಂಪನಂದಿಂದ ಉಂಟಾಗುವ ಅಲೆಗಳು ಚಲಿಸುವ ದಿಶೆಗೆ ಶಬ್ಧ ಪ್ರಸಾರದ ದಿಕ್ಕು ಎನ್ನಲಾಗುತ್ತದೆ.

  • ಶಬ್ಧದ ತೀವ್ರತೆ: ಶಬ್ಧವು ಎಷ್ಟು ವೇಗವಾಗಿ ಪ್ರಸರಿಸುತ್ತದೆ ಎಂಬುದರ ಮೇಲೆ ಶಬ್ಧ ತರಂಗದ ತೀವ್ರತೆ ನಿರ್ಧಾರವಾಗುತ್ತದೆ. ಉದಾ: ಪಿಸು ಮಾತು 15-20ಡೆಸಿಬಲ್ವಿ, ಮಾನ ಹಾರಿಕೆಯ ಶಬ್ಧ 100ಡೆಸಿಬಲೆ, ಗುಡುಗು 110-120 ಡೆಸಿಬಲ್ ಶಬ್ಧದ ತೀವ್ರತೆಯನ್ನು ಡೆಸಿಬಲ್ ನಿಂದ ಅಳೆಯಲಾಗುತ್ತದೆ. ನಿಜಾರ್ಥಲ್ಲಿ ಇದರ ಮಾನ ‘ಬೆಲ್’, ಆದರೆ ಇದರ 1/10ನೇ ಭಾಗವನ್ನು ಡೆಸಿಬಲ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಮನುಷ್ಯನಿಗೆ 80 ಡೆಸಿಬಲ್ ತೀವ್ರತೆಯ ಶಬ್ಧವನ್ನು ಕೇಳಿಸಿಕೊಳ್ಳಬಹುದು. ಅದಕ್ಕಿಂತ ಹೆಚ್ಚಿನ ಶಬ್ಧ ಮಾನವ ಕಿವಿಗೆ ಅಪಾಯಕಾರಿ. ಹಾಗೂ ಶಬ್ಧ ಮಾಲಿನ್ಯಕ್ಕೂ ಸಹ ಕಾರಣವಾಗುತ್ತದೆ.
  • ಶಬ್ಧದ ವೇಗ: ಶಬ್ಧದ ವೇಗ ಎಂದರೆ ಶಬ್ಧದ ಕಂಪನಾಂಕವು ಅಲೆಗಳ ರೂಪದಲ್ಲಿ ಒಂದು ಸೆಕೆಂಡಿಗೆ ಎಷ್ಟು ವೇಗದಲ್ಲಿ ಸಾಗಯತ್ತದೆ ಎನ್ನುವುದನ್ನೇ ಶಭ್ಧದ ವೇಗ ಎನುವರು.ಇದನ್ನು ಅಳೆಯಲು ಇರುವ ಸೂತ್ರ ಗಿ=ಟಿƛ

ಇಲ್ಲಿ ಗಿಎಂದರೆ ವೇಗೋತ್ಕರ್ಷ, ಟಿ ಎಂದರೆ ಆವರ್ತಗಳ ಸಂಖ್ಯೆ ಹಾಗೂ ƛ ಎಂದರೆ ತರಂಗ ದೂರದ ಸಂಖ್ಯೆ ಆಗಿದೆ. ಗಾಳಿಯಲ್ಲಿ ಶಬ್ಧವು ಸೆಕೆಂಡಿಗೆ 331 ಮೀಟರ್ ಚಲಿಸುತ್ತದೆ. ಬೆಳಕಿನ ವೇಗಕ್ಕೆ ಹೋಲಿಸಿದರೆ ಶಬ್ಧದ ವೇಗ ಬಹಳ ಕಡಿಮೆ. ಈ ವಿದ್ಯಮಾನದಿಂದಾಗಿಯೇ ಮೊದಲು ಮಿಂಚು ಕಾಣಿಸಿಕೊಂಡು ನಂತರ ಗುಡುಗಿನ ಶಬ್ಧ ಕೇಳಿಸುತ್ತದೆ. ವಾಸ್ಥವದಲ್ಲಿ ಗುಡುಗು ಹಾಗೂ ಮಿಂಚು ಒಟ್ಟಿಗೇ ಸಂಭವಿಸುತ್ತದೆ. ವಿವಿಧ ಮಾಧ್ಯಮಗಳಲ್ಲಿ ಶಬ್ಧವು ಬೇರೆ ಬೇರೆ ವೇಗಗಳಿಂದ ಚಲಿಸುತ್ತದೆ. ಶಬ್ಧದ ವೇಗವು ಮಾಧ್ಯಮವನ್ನು ಅವಲಂಬಿಸಿರುತ್ತದೆ. ಅನಿಲ ಮಾಧ್ಯಮದಲ್ಲಿ ಶಬ್ಧದ ವೇಗ ಕಡಿಮೆ. ಘನ ಮಾಧ್ಯಮದಲ್ಲಿ ಅತೀ ಹೆಚ್ಚು ಹಾಗೂ ದ್ರವಗಲಲ್ಲಿ ಘನವಸ್ತುವಿಗಿಂತ ಕಡಿಮೆ. ಆದರೆ ದ್ರವ ವಸ್ತುವಿಗಿಂತ ಹೆಚ್ಚು.ಶಬ್ಧದ ವೇಗ ನೀರಿನಲ್ಲಿ 1450 ಮೀ/ಸೆ ಆದರೆ ಉಕ್ಕಿನ ಸಲಾಕೆಯಲ್ಲೆ 5000 ಮೀ/ಸೆ ನಷ್ಟು ಇರುತ್ತದೆ/ ಹಾಗೆಯೇ ಅನಿಲ ಮಾಧ್ಯಮದಲ್ಲಿ ಶಬ್ಧ ಚಲಿಸಬೇಕಾದ ಗಾಳಿಯ ಆರ್ಧತೆಯ ಪ್ರಮಾಣ ಹೆಚ್ಚಿದಂತೆ ಶಬ್ಧ ವೇಗವೂ ಹೆಚ್ಚುತ್ತದೆ.ಅನಿಲ ಮಾಧ್ಯಮದಲ್ಲಿ ಶಬ್ಧದ ವೇಗವನ್ನು ನ್ಯೂಟನ್-ಲ್ಯಾಪ್ಲಾಸ್ ಸಮೀಕರಣದಿಂದ ಲೆಕ್ಕ ಹಾಕಲಾಗುತ್ತದೆ. ಸಮೀಕರಣ ಹೀಗಿದೆ: ಗಿ= √ಡಿಠಿ/P ಇಲ್ಲಿ ಗಿ ಎಂದರೆ ವೇಗೋತ್ಕರ್ಷ, ಠಿ ಎಂದರೆ ಮಾಧ್ಯಮದ ಸಾಂಧ್ರತೆÀ, ಠಿ ಎಂದರೆ ಒತ್ತಡ, ಹಾಗೂ ಡಿ ಎಂದರೆ ಗಾತ್ರದ ಬದಲಾವಣೆ. ಒಂದು ಅನಿಲ ಮಾಧ್ಯಮದಲ್ಲಿ ಶಬ್ಧದ ವೇಗವು 0 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಇದ್ದಾಗ ಸೆಕೆಂಡ್‍ಗೆ 331.6 ಮೀಟರ್‍ನಷ್ಟು ಚಲಿಸುತ್ತದೆ. ಪ್ರತಿಯೊಂದು ಡಿಗ್ರಿ ಉಷ್ಣಾಂಶ ಹೆಚ್ಚಾದಾಗಲೂ ಶಬ್ಧದ ವೇಗವು ಸೆಕೆಂಡ್‍ಗೆ 0.6 ಮೀ. ನಷ್ಟು ಹೆಚ್ಚಾಗುತ್ತದೆ. ಶಬ್ಧವು ಇಂಗಾಲದ ಡೈ ಆಕ್ಸೈಡ್ ನಲ್ಲಿ ಅತೀ ಸುಲಭವಾಗಿ ಪ್ರಸಾರವಾಗುತ್ತದೆ.

ಶಬ್ಧದ ಪ್ರತಿಫಲನ

[ಬದಲಾಯಿಸಿ]

ಬೆಳಕಿನಲ್ಲಾದಂತೆ ಶಬ್ಧದಲ್ಲೂ ಸಹ ಪ್ರತಿಫಲನವಾಗುತ್ತದೆ. ಅಂದರೆ ಒಂದು ಮಾಧ್ಯಮದಲ್ಲಿ ಶಬ್ಧವು ಚಲಿಸುತ್ತಿರಬೇಕಾದರೆ ಯಾವುದಾದರೂ ಅಡೆ ತಡೆ ಉಂಟಾದರೆ ಆ ಶಬ್ಧ ತರಂಗಗಳು ಪುನಃ ಹಿಂದೆ ಬರುತ್ತದೆ. ಇದನ್ನು ಪ್ರತಿಧ್ವನಿ ಎನ್ನುತ್ತೇವೆ. ಶಬ್ಧದ ಅನುಭವವು ನಮ್ಮ ಕಿವಿಯಲ್ಲಿ 1/10 ಸೆಕೆಂಡುಗಳ ಕಾಲ ಸ್ಥಿರವಾಗಿ ಉಳಿಯುತ್ತದೆ. ಅದೇ ಸಮಯಕ್ಕೆ ನಮ್ಮ ಕಿವಿಗೆ ಇನ್ನೊಂದು ಶಬ್ಧವು ಬಿದ್ದರೆ ನಮ್ಮ ಕಿವಿ ಆ ಶಬ್ಧವನ್ನು ಪ್ರತ್ಯೇಕಿಸಲಾರದು. ಶಬ್ಧದ ಪ್ರತಿಧ್ವನಿಯುಂಟಾಗಲು ತಡೆಯು ಕನಿಷ್ಟ 16.6 ಮೀ ದೂರ ಇರಬೇಕು. ಹೀಗೆ ಒಟ್ಟು ದೂರ 33.2 ಮೀ ಇದ್ದರೆ ಮಾತ್ರ ನಾವು ಪ್ರತಿಧ್ವನಿಯನ್ನು ಕೇಳಲು ಸಾಧ್ಯ. ಈ ಕಾರಣದಿಂದಾಗಿಯೇ ಚಿಕ್ಕ ಚಿಕ್ಕ ಕೋಣೆಗಳಲ್ಲಿ ನಾವು ಪ್ರತಿಧ್ವನಿ ಕೇಳಲಾಗದು. ಪ್ರತಿಧ್ವನಿಗೆ ಸಂಬಂಧಿಸಿದಂತೆ ಈ ಕೆಳಗಿನ ಸೂತ್ರ ಬಹಳ ಸಹಾಯಕವಾಗಿದೆ. ಇದರ ಮೂಲಕ ಪ್ರತಿಫಲಿತ ಧ್ವನಿಯ ದೂರ ಕಂಡುಹಿಡಿಯಬಹುದಾಗಿದೆ. ಜ=vಣ/2 ಇಲ್ಲಿ ಜ ದೂರ, v ಶಬ್ಧದ ವೇಗ ಹಾಗೂ ಣ ಕಾಲ. ಪ್ರತಿಧ್ವನಿಯನ್ನು ನಾವು ಅನೇಕ ಸಲ ಕೇಳಬಹುದಾಗಿದ್ದು ಧ್ವನಿ ಹಲವು ಪ್ರತಿಫಲಿಸುವ ಮೇಲ್ಮೈಯಿಂದ ಪ್ರತಿಫಲಿಸಿದಾಗ ಈ ರೀತಿ ಸಂಭವಿಸುತ್ತದೆ.

ಪ್ರತಿಧ್ವನಿಯ ಉಪಯೋಗಗಳು

[ಬದಲಾಯಿಸಿ]
  • ಪ್ರತಿಧ್ವನಿಯಿಂದ ದುರದ ವಸ್ತುವಿನ ದೂರವನ್ನು ಪತ್ತೆಹಚ್ಚಬಹುದು.
  • ಸಮುದ್ರದಡಿಯಲ್ಲಿನ ಹಡಗು, ನಿಕ್ಷೇಪದಂತಹ ಇತರೆ ವಸ್ತುಗಳ ಹುಡುಕಾಟ.
  • ಸಮುದ್ರದಾಳವನ್ನು ಪತೆ ಮಾಡಲು ಶ್ರವಣಾತೀತ ತರಂಗ ಬಳಸಲಾಗುತ್ತದೆ.
  • ಬಾವಲಿಗಳು ಶ್ರವಣಾತೀತ ಶಬ್ಧದ ಪ್ರತಿಧ್ವನಿಯನ್ನು ಬಳಸಿಕೊಂಡು ವಸ್ತುವನ್ನು ಮತ್ತು ಅವುಗಳ ದೂರವನ್ನು ಪತ್ತೆ ಹಚ್ಚುತ್ತದೆ.

ಅಶ್ರಾವ್ಯ ಶಬ್ಧ

[ಬದಲಾಯಿಸಿ]

ಒಂದು ಸೆಕೆಂಡಿಗೆ 20 ಹಟ್ರ್ಸ್‍ಗಿಂತ ಕಡಿಮೆ ಕಂಪನಾಂಕವಿರುವ ಶಬ್ಧವನ್ನು ಅಶ್ರಾವ್ಯ ಶಬ್ಧ ಎನ್ನುತ್ತೇವೆ. ಇದು ಮಾನವ ಕಿವಿಗೆ ಕೇಳಿಸದು. ಆದರೆ ಕೆಲವು ಪ್ರಾಣಿ ಮತ್ತು ಪಕ್ಷಿಗಳ ಅನುಭವಕ್ಕೆ ಈ ಶಬ್ಧ ಬರಬಲ್ಲುದು.

ಶ್ರಾವ್ಯ ಶಬ್ಧ

[ಬದಲಾಯಿಸಿ]

ಯಾವ ಶಬ್ಧವು ಶ್ರಾವ್ಯವಾಗಬಲ್ಲದೋ ಅಂದರೆ ಮಾನವ ಕಿವಿಗೆ ಕೇಳಿಸಬಲ್ಲುದು ಅಂತಹ ಶಬ್ಧಗಳು ಶ್ರಾವ್ಯ ಶಬ್ಧಗಳು. ಇದರ ಕಂಪನಾಂಕ 20 ಹಟ್ರ್ಸ್‍ನಿಂದ 20000 ಹಟ್ರ್ಸ್‍ವರೆಗೆ ಇರುತ್ತದೆ.

ಶ್ರವಣಾತೀತ ಶಬ್ಧ

[ಬದಲಾಯಿಸಿ]

ಯಾವ ಶಬ್ಧದ ಆವರ್ತಕವು 20000 ಹಟ್ರ್ಸ್‍ಗಿಂತ ಜಾಸ್ತಿ ಇರುತ್ತದೆಯೋ ಅವನೇ ಶ್ರವಣಾತೀತ ಶಬ್ಧ ಎನ್ನುವರು. ಈ ಧ್ವನಿಯ ಸಂವೇದನೆಯೂ ಸಹ ಮಾನವರಿಗೆ ಆಗುವುದಿಲ್ಲ. ಆದರೆ ನಾಯಿ ಬೆಕ್ಕು ಬಾವಲಿಗಳಂತಹ ಕೆಲ ಪ್ರಾಣಿ ಪಕ್ಷಿಗಳಿಗೆ ಶ್ರವಣಾತೀತ ಶಬ್ಧದ ಅರಿವು ಉಂಟಾಗುತ್ತದೆ. ಹಾಗಾಗಿಯೇ ಈ ಶ್ರವಣಾತೀತ ತರಂಗಗಳನ್ನು ಬಳಸಿ ಸೋನಾರ್ ಎಂಬ ಉಪಕರಣವನ್ನು ಸಮುದ್ರದ ಅಡಿಯಲ್ಲಿರುವ ವಸತುಗಳ ಪತ್ತೆಗಾಗಿ ಮತ್ತು ಅವುಗಳ ದೂರವನ್ನು ತಿಳಿಯಲಿಕ್ಕಾಗಿ ಬಳಸುತ್ತಾರೆ.

ಗದ್ದಲ ಮತ್ತು ಇಂಪು ಧ್ವನಿ

[ಬದಲಾಯಿಸಿ]

ಶ್ರವಣ ಶಬ್ಧವನ್ನು ಗದ್ದಲ ಮತ್ತು ಇಂಪಾದ ಧ್ವನಿ ಎಂದು ವರ್ಗೀಕರಿಸಲಾಗುತ್ತದೆ.

ಗದ್ದಲ

[ಬದಲಾಯಿಸಿ]
  • ಗದ್ದಲವು ಮನಸ್ಸಿಗೆ ಅಹಿತವಾದ ಧ್ವನಿಯನ್ನು ಪ್ರಸರಿಸುತ್ತದೆ.
  • ಗದ್ದಲ ಧ್ವನಿಯಲ್ಲಿ ಕಂಪನಾಂಕವು ಸ್ಥಿರವಾಗಿ ಇರುವುದಿಲ್ಲ.
  • ಗದ್ದಲ ಯಾವುದೇ ರೀತಿಯ ಲಯವನ್ನು ಹೊಂದಿರುವುದಿಲ್ಲ.
  • ಗದ್ದಲದಲ್ಲಿ ವಿಸ್ತಾರವು ಪುನಃ ಪುನಃ ಬದಲಾಗುತ್ತದೆ.
  • ಗದ್ದಲದ ಆವರ್ತಾಂಕ ಸಾಮಾನ್ಯವಾಗಿ ಕಡಿಮೆ ಇರುತ್ತದೆ.

ಇಂಪು ಧ್ವನಿ

[ಬದಲಾಯಿಸಿ]
  • ಇಂಪು ಧ್ವನಿಯು ಮನಸ್ಸಿಗೆ ಹಿತವಾದ ಪರಿಣಾಮವನ್ನುಂಟು ಮಾಡುತ್ತದೆ.
  • ಇಂಪು ಧ್ವನಿಯಲ್ಲಿ ಸ್ಥಿರವಾದ ಕಂಪನಾಂಕವಿರುತ್ತದೆ.
  • ಇಲ್ಲಿ ವಿಸ್ತಾರವು ಸ್ಥಿರವಾಗಿ ಇರುತ್ತದೆ.
  • ಇಂಪಾದ ಧ್ವನಿಯ ಆವರ್ತಾಂಕ ಸಾಮಾನ್ಯವಾಗಿ ಹೆಚ್ಚಿರುತ್ತದೆ.

ಶಬ್ಧ ತರಂಗದ ಗುಣಗಳು

[ಬದಲಾಯಿಸಿ]
  • ನಿರ್ವಾತದಲ್ಲಿ ಚಲಿಸದು. ಶಬ್ಧದ ಚಲನೆಗೆ ಮಾಧ್ಯಮದ ಅವಶ್ಯಕತೆಯಿದೆ.
  • ಶಕ್ತಿ ಮತ್ತು ಚಲನೆಯನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುತ್ತದೆ.
  • ವಕ್ರೀಭವನ, ಪ್ರತಿಫಲನ ವಿವರ್ತನದಂತಹ ಗುಣ ತೋರ್ಪಡಿಸುತ್ತದೆ.
  • ಶಬ್ಧ ತರಂಗವು ಒಂದು ಸಮತಲದ ಮೇಲೆ ಬಿದ್ದಾಗ ಅಸಮತೋಲನ ಕಂಪನ ಕ್ರಿಯೆಗೆ ಒಳಗಾಗುತ್ತದೆ.
  • ಶಬ್ಧ ತರಂಗವು ವಿವಿಧ ಮಾಧ್ಯಮಗಳಲ್ಲಿ ವಿವಿಧ ವೇಗದಿಂದ ಚಲಿಸುತ್ತದೆ.