ವಿಷಯಕ್ಕೆ ಹೋಗು

ಸದಸ್ಯ:Shivaprasad1999/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ಲೂಟೊ

ಪ್ಲುಟೊ - ಸೌರಮಂಡಲದಲ್ಲಿ ತಿಳಿದಿರುವಂತೆ ಎರಡನೆ ಅತಿ ದೊಡ್ಡ ಕ್ಷುದ್ರಗ್ರಹ (ಏರಿಸ್ನ ನಂತರ) ಮತ್ತು ಸೂರ್ಯನನ್ನು ಪರಿಭ್ರಮಿಸುತ್ತಿರುವ ಹತ್ತನೆ ಅತಿ ಕುಳ್ಳ ಕಾಯವಾಗಿದೆ.ಮೂಲತಃ ಗ್ರಹವೆಂದು ವಿಂಗಡಿಸಲಾಗಿದ ಪ್ಲುಟೊ ಪ್ರಸ್ತುತದಲ್ಲಿ ಕೈಪರ್ ಪಟ್ಟಿಯ ಅತಿ ದೊಡ್ಡ ಸದಸ್ಯವಾಗಿ ಪರಿಗಣಿಸಲ್ಪಡುತ್ತದೆ. ಕೈಪರ್ ಪಟ್ಟಿಯ ಬೇರೆ ಸದಸ್ಯಕಾಯಗಳಂತೆ ಪ್ಲೂಟೊ ಪ್ರಮುಖವಾಗಿ ಕಲ್ಲು ಮತ್ತು ಮಂಜಿನಿಂದ ಕೂಡಿದ್ದು, ಸುಮಾರು ಸಣ್ಣ ಗಾತ್ರದ್ದಾಗಿದೆ:

ಭೂಮಿಯ ಚಂದ್ರನ ದ್ರವ್ಯರಾಶಿಯ ಸುಮಾರು ಐದನೆ ಒಂದು ಪಾಲು ಮತ್ತು ಅದರ ಗಾತ್ರದ ಮೂರನೆ ಒಂದು ಪಾಲಿನಷ್ಟಿದೆ. ಇದರ ಕಕ್ಷೆಯು ಬಹಳಷ್ಟು ಉತ್ಕೇಂದ್ರೀಯತೆಯನ್ನು ಹೊಂದಿದ್ದು, ಪ್ಲೂಟೊವನ್ನು ಸೂರ್ಯನಿಂದ ೩೦-೪೯ ಖಗೋಳಮಾನ ದೂರಕ್ಕೆ (೪೪೦-೭೪೦ ಕೋಟಿ ಕಿ.ಮೀ.) ಕೊಂಡೊಯ್ಯುತ್ತದೆ. ಇದರ ಕಕ್ಷೆಯು ಹೆಚ್ಚಿನ ಓರೆಯನ್ನು ಹೊಂದಿರುವ ಕಾರಣ, ಪ್ಲೂಟೊ ಒಮ್ಮೊಮ್ಮೆ ನೆಪ್ಚೂನ್ಗಿಂತ ಸೂರ್ಯನ ಹತ್ತಿರಕ್ಕೆ ಬರುತ್ತದೆ.

೧೯೩೦ಯಲ್ಲಿ ಅದರ ಆವಿಷ್ಕಾರದಿಂದ ಹಿಡಿದು ೨೦೦೬ರ ವರೆಗೆ ಪ್ಲೂಟೊವನ್ನು ಸೌರಮಂಡಲದ ಒಂಭತ್ತನೆಯ ಗ್ರಹವೆಂದು ಪರಿಗಣಿಸಲಾಗಿತ್ತು. ೨೦ನೆ ಶತಮಾನದ ಕೊನೆಯ ಭಾಗದಲ್ಲಿ ಮತ್ತು ೨೧ನೆ ಶತಮಾನದ ಮೊದಲ ಭಾಗದಲ್ಲಿ, ಹೊರ ಸೌರಮಂಡಲದಲ್ಲಿ ಪ್ಲೂಟೊನಂತಹ ಹಲವು ಕಾಯಗಳು ಬೆಳಕಿಗೆ ಬಂದವು. ಇವುಗಳಲ್ಲಿ ಗಮನಾರ್ಹವಾದುದು ಪ್ಲೂಟೊಗಿಂತ ೨೭% ಹೆಚ್ಚು ಭಾರಿಯಿದ್ದು ಚದರಿದ ತಟ್ಟೆಯ ಕಾಯವಾಗಿರುವ ಎರಿಸ್.

ಆಗಸ್ಟ್ ೨೪, ೨೦೦೪ರಂದು ಮೊದಲಬಾರಿಗೆ ಅಂತರರಾಷ್ಟ್ರೀಯ ಖಗೋಳಶಾಸ್ತ್ರೀಯ ಸಂಸ್ಥೆಯು "ಗ್ರಹ" ಪದವನ್ನು ವ್ಯಾಖ್ಯಾನಿಸಿತು. ಈ ಹೊಸ ವ್ಯಾಖ್ಯಾನದೊಂದಿಗೆ ಪ್ಲುಟೊ ಒಂದು ಗ್ರಹವಾಗಿ ಉಳಿಯದೆ, ಅದನ್ನು ಎರಿಸ್ ಮತ್ತು ಸೆರೆಸ್ಗಳೊಂದಿಗೆ ಕುಬ್ಜಗ್ರಹವೆಂದು ವಿಂಗಡಿಸಲಾಯಿತು. ಈ ಮರುವಿಂಗಡಣೆಯ ನಂತರ ಪ್ಲುಟೊವನ್ನು ಕುಬ್ಜ ಗ್ರಹಗಳ ಪಟ್ಟಿಗೆ ಸೇರಿಸಿ, ಅದಕ್ಕೆ 134340 ಸಂಖ್ಯೆಯನ್ನು ಕೊಡಲಾಯಿತು.ಪ್ಲುಟೊದ ಆವಿಷ್ಕಾರವು ಒಂದು ತಪ್ಪು ತಿಳುವಳಿಕೆಯಿಂದ ಶುರುವಾಯಿತು. ವಿಜ್ಞಾನಿಗಳು ಗ್ರಹಗಳ ಕಕ್ಷೆಗಳನ್ನು ವಿಶ್ಲೇಷಿಸುವಾಗ, ಯುರೇನಸ್‌ನ ಕಕ್ಷೆಯು ತಮ್ಮ ಲೆಕ್ಕಾಚಾರಗಳಿಗೆ ಹೊಂದದಿರುವುದನ್ನು ಗಮನಿಸಿದರು. ಈ ಅಸಮಂಜಸತೆಗೆ ಕಾರಣ ಒಂದು ದೂರದ ಗ್ರಹದೊಂದಿಗಿನ ಗುರುತ್ವ ಒಡನಾಟಗಳು ಎಂದು ಮೊದಲು ಯೋಚಿಸಲಾಯಿತು. ಆದರೆ, ಪ್ಲುಟೊ ತನ್ನ ನೆರೆಯ ಗ್ರಹಗಳ ಕಕ್ಷೆಗಳ ಮೇಲೆ ಪ್ರಭಾವ ಬೀರುವಷ್ಟು ಭಾರಿಯಾಗಿಲ್ಲ. ಈ ಮೇಲಿನ ಅಸಮಂಜಸತೆಗೆ ಕಾರಣ, ನೆಪ್ಚೂನ್‌ನ ದ್ರವ್ಯರಾಶಿಯನ್ನು ಸರಿಯಾಗಿ ಅಂದಾಜು ಮಾಡದಿದ್ದುದು ಎಂದು ನಂತರ ತಿಳಿದುಬಂದಿತು