ವಿಷಯಕ್ಕೆ ಹೋಗು

ಸದಸ್ಯ:Shruthineeraya/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೂಜಾ ಕುಣಿತ

[ಬದಲಾಯಿಸಿ]

ಮುನ್ನುಡಿ

[ಬದಲಾಯಿಸಿ]

ಪೂಜಾ ಕುಣಿತ ಎಂಬುದು ಒಂದು ಪ್ರಸಿದ್ಧವಾದ ನೃತ್ಯವಾಗಿದೆ. ಜಾನಪದ ಲೋಕದಲ್ಲಿ ತನ್ನದೇ ಆದ ವಿಶೇಷ ಛಾಪನ್ನು ಮೂಡಿಸಿದ ಪೂಜಾ ಕುಣಿತ ಇಂದಿಗೂ ಸಮಾಜದಲ್ಲಿ ತನ್ನ ಸಂಸ್ಕೃತಿನ್ನು ಉಳಿಸಿಕೊಂಡು ಬಂದಿದೆ. ಈ ಪೂಜಾ ಕುಣಿತವು ಕರ್ನಾಟಕದಲ್ಲಿ ಪವಿತ್ರವಾದ ಸಂಸ್ಕಾರಯುತವಾದ ನೃತ್ಯವಾಗಿದೆ. ಇದು ಬೆಂಗಳೂರು, ಕೋಲಾರ, ತುಮಕೂರು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಅತೀ ಹೆಚ್ಚಾಗಿ ತನ್ನ ವೈಶಿಷ್ಟೈತೆಗಳನ್ನು ಬಿಂಭಿಸುತ್ತದೆ. ಈ ಪೂಜಾ ಕುಣಿತವು ಅತ್ಯಂತ ವೈವಿದ್ಯಮಯವಾಗಿ ಪ್ರೇಕ್ಷಕರಿಗೆ ಮುದವನ್ನು ನೀಡುತ್ತದೆ. ಈ ನೃತ್ಯಕ್ಕಾಗಿ ಪದ್ಯವನ್ನು ಬಾಯಿಯ ಮೂಲಕ ವಿವರಣೆಯನ್ನು ನೀಡುವುದು ವಿಶೇಷ. ಪೂಜಾಕುಣಿತವನ್ನು ಆರಾಧನಾ ಶಕ್ತಿಯಾಗಿ ಪೂಜಿಸಲಾಗುತ್ತದೆ. ಕರ್ನಾಟಕದಲ್ಲಿ ಪೂಜಾ ಕುಣಿತವನ್ನು ಮುಖ್ಯವಾಗಿ ಸಂಪ್ರದಾಯವಾಗಿ ಆಚರಿಸಲ್ಪಡುತ್ತಾರೆ. ರಾಜ್ಯದಲ್ಲಿ ಪೂಜಾ ಕುಣಿತವನ್ನು ಅಕ್ಷರಶ: ಸಂಸ್ಕಾರಯುತ ಜಾನಪದ ನೃತ್ಯ ಎಂದೇ ಹೇಳಲಾಗುತ್ತದೆ.

ಪೂಜಾ ಕುಣಿತ ಪ್ರಾಥಮಿಕ ನಿಯಮಗಳೇನಂದರೆ, ಕರ್ನಾಟಕದಲ್ಲಿ ದೇವರು ಒಂದು ದೇಹದ ಮೇಲೆ ಪ್ರವೇಶಿಸಿ ವಿವಿಧ ಅವತಾರಗಳನ್ನು ತೋರ್ಪಡಿಸುವಂತಹದ್ದಾಗಿರುತ್ತದೆ. ಇದು ಧಾರ್ಮಿಕ ಮೆರವಣಿಗೆ ಮುಂತಾದ ಕಾರ್ಯಕ್ರಮಗಳಲ್ಲಿ ನಡೆಸಲಾಗುತ್ತದೆ. ಈ ಪೂಜಾ ಕುಣಿತವು ಆಡಂಬರದ ವ್ಯೆಭವವಾಗಿದೆ. ಹಬ್ಬ ಹರಿದಿನಗಳಲ್ಲಿ ಈ ನೃತ್ಯವನ್ನು ಜನ ಅತೀ ಮೆಚ್ಚುಗೆಯಿಂದ ಪ್ರಸ್ತುತಪಡಿಸುತ್ತಾರೆ. ಈ ಸೊಬಗು ನೋಡಲು ಬಲು ಚೆಂದ. ಪೂಜಾ ಕುಣಿತವು ತನ್ನ ಸೆಳೆತವನ್ನು ಇಡೀ ಕರ್ನಾಟಕದಲ್ಲಿ ವಿಜ್ರಂಭಣೆಯಿಂದ ಉಳಿಸಿಕೂಳ್ಳಬೇಕಾಗಿದೆ. ಈ ಕುಣಿತವನ್ನು ರೂಡಿಸಿಕೊಳ್ಳುವವರು ಮುಂಚೆ ಅನೇಕ ರೀತಿಯ ಅಭ್ಯಾಸಗಳನ್ನು ಮಾಡಿಕೊಂಡಿರಬೇಕು. ಹೊರತಾಗಿ ಒಂದು ರಾಜ್ಯದ ಏಳಿಗೆಗೆ ಮತ್ತು ಆ ರಾಜ್ಯದ ಧಾರ್ಮಿಕ ಸಂಪ್ರದಾಯಗಳಿಗೆ ಪೂಜಾಕುಣಿತ ಚ್ಯುತಿ ತರುವುದಿಲ್ಲ. ಕರ್ನಾಟಕಪೂಜಾ ಕುಣಿತಕ್ಕೆ ವ್ಯಾಪಕವಾದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯಾಕೆಂದರೆ, ಅತ್ಯಂತ ವಿಜೃಂಭಣೆಯಿಂದ ನಡೆಯುವ ಈ ನೃತ್ಯವು ಜನರ ಮನಸ್ಸಿಗೆ ಆಹ್ಲಾದಕರವಾಗಿ ತಲುಪುತ್ತದೆ.

ಕುಣಿತಕ್ಕೆಬೇಕಾದ ಕೌಶಲ್ಯಗಳು

[ಬದಲಾಯಿಸಿ]

ಈ ಪೂಜಾಕುಣಿತಕ್ಕೆ ಅನೇಕ ರೀತಿಯ ಕೌಶಲ್ಯಗಳು ಬಹಳ ಮುಖ್ಯ. ಅದಾವುದೆಂದರೆ, ಒಂದು ದೇವರ ವಿಗ್ರಹವನ್ನು ತಲೆಯ ಮೇಲೆ ಇಟ್ಟುಕೊಂಡು ದೇಹವನ್ನು ಸಮತೋಲನ ಮಾಡುವಂತಹದ್ದು ತೀರ ಸುಲಭದ ವಿಷಯವೇನಲ್ಲ. ಅನೇಕ ಪರಿಣಿತರ ಸಹಾಯ ಮುಖ್ಯವೆನಿಸುತ್ತದೆ. ಪೂಜಾಕುಣಿತವನ್ನು ನೋಡಲು ಜನ ದೇಶ ವಿದೇಶಗಳಿಂದ ಬರುವುದೂ ಉಂಟು. ಕರ್ನಾಟಕದಲ್ಲಿ ಪೂಜಾಕುಣಿತ ಜನರ ಮನಸ್ಸನ್ನು ಗೆದ್ದಿದೆ. ಧಾರ್ಮಿಕ ಕ್ಷೇತ್ರದಲ್ಲಿ ಪೂಜಾಕುಣಿತ ತನ್ನದೇ ಆದ ವೈಶಿಷ್ಯತೆಗಳನ್ನು ಮೂಡಿಸಿದೆ. ಈ ಕುಣಿತ ಪ್ರದರ್ಶನವು ಹಲವು ರೀತಿಯಲ್ಲಿ ಜನರ ಮನಸ್ಸನ್ನು ಗೆದ್ದಿದೆ. ಸಂಸ್ಕಾರ ಎಂಬ ವಿಶಿಷ್ಡ ಕಲ್ಪನೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಪೂಜಾಕುಣಿತ ಎಂಬ ಕಲೆಯು ಸುಮಾರು ರೀತಿಯ ಭಂಗಿಗಳನ್ನು ಹೊಂದಿದೆ. ಇದೊಂದು ಧರ್ಮವು ಪ್ರಾಮುಖ್ಯತೆಗೆ ಒಲವು ನೀಡುತ್ತದೆ. ಹಾಗೆಯೇ ಕರ್ನಾಟಕದಲ್ಲಿ ಭರತನಾಟ್ಯ, ಡೊಳ್ಳುಕುಣಿತ ಹಾಗೂ ಇನ್ನಿತರ ಕಲೆಗಳ ಜೊತೆಗೆ ಪೂಜಾಕುಣಿತವು ವಿಭಿನ್ನತೆಯಿಂದ ಕೂಡಿದೆ. ಎಲ್ಲವು ತನ್ನದೇ ಆದ ನಿಯಮಾವಳಿಗಳನ್ನು ಹೊಂದಿದೆ. ಮಾನವ ಸಂಸ್ಕೃತಿಯನ್ನು ಜಾನಪದ ವಿದ್ವಾಂಸರು, ಶುದ್ದ ಜನಪದ ಸಂಸ್ಕೃತಿಗಳಾಗಿ ಮಾಡಿದ್ದಾರೆ. ನಗರಗಳು ಬೆಳವಣಿಗೆಯನ್ನು ಪಡೆಯುವ ಪೂರ್ವದಲ್ಲಿ ಬಹಳ ಮಂದಿ ಗ್ರಾಮಾಂತರ ಪ್ರದೇಶಗಳಲ್ಲಿ ಇದ್ದವರು. ಪ್ರಾಣಿ ಸಮುದಾಯದಿಂದ ಮನುಷ್ಯನನ್ನು ಬೇರ್ಪಡಿಸಿರುವುದು ಅವನ ಸಂಸ್ಕೃತಿ. ಇಲ್ಲದಿದ್ದರೆ ಪ್ರಾಣಿಗೂ ಮನುಷ್ಯನಿಗೂ ವ್ಯತ್ಯಾಸ ಇರುತ್ತಿರಲಿಲ್ಲ. ಕಲೆ, ಧರ್ಮ ವಿಜ್ನಾನಗಳು ಸಂಸ್ಕೃತಿಯ ಮುಖ್ಯ ಅಂಗಗಳು. ಇವು ಸಂಪೂರ್ಣವಾಗಿ ಮನುಷ್ಯನ ಬಾಳನ್ನು ಕಲ್ಪಿಸಿಕೊಳ್ಳುವುದಕ್ಕೂ ಆಗುವುದಿಲ್ಲ ಮನುಷ್ಯ ಕಲ್ಪಿಸಿಕೊಂಡ ಧ್ಯೆವಾರಾಧನೆಯ ಜೊತೆಯಲ್ಲಿ ಹಾಡು, ಕುಣಿತ, ಶಿಲ್ಪ, ಚಿತ್ರ ಮೊದಲಾದ ಕಲ್ಪನೆಗಳು ರೂಢಿಗೆ ಬಂದಿವೆ.

ಪೂಜಾ ಕುಣಿತದ ವಿಧಗಳು

[ಬದಲಾಯಿಸಿ]

೧. ತೊಟ್ಟಿಲು ಕುಣಿತ

೨. ಎದುರು ಕುಣಿತ

೩. ಹಾಯ್ಗುಣಿತ

೪. ಹೆಜ್ಜೆ ಕುಣಿತ

೫. ಗೆಜ್ಜೆ ಕುಣಿತ

ಪೂಜಾಕುಣಿತದ ಕಲಾವಿದರು ಕೆಲವೊಮ್ಮೆ ಕುಣಿತದ ಸಂದರ್ಭದಲ್ಲಿ ಐದಾರು ಜನರು ತಮಟೆ ಬಾರಿಸುವವರೂ ಇರುತ್ತಾರೆ. ಪೂಜೆ ಹೊತ್ತವರಲ್ಲಿ ಕೆಲವರು ಎಂಟು ಹತ್ತು ವರು‌ಷದ ಬಾಲಕರನ್ನು ಎರಡು ಕಡೆಯ ನಡುವಿನ ಮೇಲೆ ಕೂರಿಸಿಕೊಂಡು, ಇಲ್ಲವೆ ಎರಡೂ 'ಪಟ'ವನ್ನು ಹಿಡಿದುಕೊಂಡು ಕುಣಿಯುವರು. ಪೂಜೆಯನ್ನು ಹೊತ್ತು, ಹಗ್ಗದ ಮೇಲೆ ನಡೆಯುವುದು, ನೆಲದ ಮೇಲೆ ಇರಿಸಿದ ರೂಪಾಯಿಯನ್ನು ತುಟಿಯಿಂದ ಕಚ್ಚಿ ಮೇಲೆತ್ತುವುದು ಮುಂತಾದವನ್ನು ಕಲಾವಿದರು ಮಾಡುವರು. ಪೂಜಾ ಕುಣಿತಕ್ಕೆ ಒನಕೆ ಕುಣಿತವೂ ಸೇರುವುದುಂಟು. ಅವರಲ್ಲಿ ಒನಕೆಯನ್ನು ತಲೆಯ ಮೇಲಿಟ್ಟು ಸಮತೋಲನ ಮಾಡಿ ಕುಣಿಯುವರು. ಈ ಕಲೆಯು ಗ್ರಾಮದೇವತೆಗಳ ಹಬ್ಬ, ಜಾತ್ರೆ, ಸಂದರ್ಭದಲ್ಲಿ ಆಚರಣಾತ್ಮಕವಾಗಿ ನಡೆಯುವುದರಿಂದ ಇದಕ್ಕೆ ಭಯ, ಭಕ್ತಿ, ನೇಮ ನಿಷ್ಟೆಗಳಿವೆ. ಪೂಜೆ ಹೊತ್ತು ಕುಣಿಯುವವರನ್ನು ಗೌರವಿಸಲಾಗುತ್ತದೆ. ಇತರೆ ಊರುಗಳಿಂದ ಆಹ್ವಾನಿಸಲಾದ ಹತ್ತಾರು ದೇವತೆಗಳು ಒಂದೆಡೆ ಸೇರಿ ಹತ್ತಾರು ಪೂಜೆಗಳ ಒಟ್ಟು ಕುಣಿತವು ನಡೆಯುತ್ತದೆ. ಆಯಾ ಊರುಗಳಿಂದಲೇ ಬಂದಂತಹ ತಮಟೆ, ನಗಾರಿಯವರು ಒಟ್ಟಿಗೆ ಸೇರಿ 'ಗತ್ತು' ಹೊಡೆಯುವಾಗ ಸೊಗಸಾದ ನಾದವು ಹೊರಹೊಮ್ಮುವುದನ್ನು ಗಮನಿಸಬಹುದಾಗಿದೆ.

ಜನಪದ ಕಲೆಯ ಹಿನ್ನೆಲೆ

[ಬದಲಾಯಿಸಿ]

ಜನಪದ ಕಲೆಗಳು ಮನುಷ್ಯನಷ್ಟೇ ಪ್ರಾಚೀನವಾದವು. ಪರಿಸರ ಪರಿವೀಕ್ಷಣೆಯಿಂದ, ಅನುಕರಣೆಯಿಂದ, ಅರಿತದ್ದನ್ನು ಒಂದೆಡೆ ದಾಖಲಿಸಬೇಕೆಂಬ ಮನುಷ್ಯ ಸಹಜ ಗುಣದಿಂದ ಇಂಥ ಕಲೆಗಳು ಅಸ್ತಿತ್ವಕ್ಕೆ ಬರುತ್ತವೆ. ಇವು ಮನಸ್ಸಿಗೆ ನೆಮ್ಮದಿ, ಸಂತೋಷ ನೀಡುವುದಲ್ಲದೆ, ಮುಂದಿನ ಪೀಳಿಗೆಗೆ ಅನುಸರಣೆಯ, ಅನುಕರಣೆಯ ಆಕರಗಳಾಗುತ್ತವೆ. ಜನಪದ ಸಂಸ್ಕೃತಿಯ ಪ್ರತಿ ಹೆಜ್ಜೆಯಲ್ಲೂ ಜನಪದ ಕಲೆಯನ್ನು ಕಾಣಬಹುದು. ಜನಪದರ ಬದುಕೇ ಒಂದು ಕಲೆ. ಆ ಮುಗ್ದ ಜನರಿಗೆ ತಿಳಿದೋ ಅವರ ಬದುಕಿನಲ್ಲಿ ಕಲೆ ಹಾಸುಹೊಕ್ಕಾಗಿದೆ. ಬದುಕಿನ ಅಸ್ಥಿರತೆಯನ್ನು ಮರೆತು ಅಮರತ್ವವನ್ನು ತಂದುಕೊಳ್ಳಲು ತನ್ನ ಅಸ್ತಿತ್ವಕ್ಕಾಗಿ ಹೋರಾಡಲು, ಜೀವನೋತ್ಸಾಹ ಪಡೆಯಲು ಧೈವಾರಾಧನೆಯ ಹಿನ್ನಲೆಯಲ್ಲಿ ಜನಪದ ಹಾಡು ಕುಣಿತಗಳು ಅವಿರ್ಭವಿಸಿವೆ. ಜನಪದ ಕಲೆಯನ್ನು ಆಯಾದೇಶದ ಆತ್ಮ ಚರಿತ್ರೆ ಎನ್ನಬಹುದು. ಜನಪದ ಕಲೆಗಳಿಗೂ ಜನಜೀವನಕ್ಕೂ ಅವಿನಾಭಾವ ಸಂಬಂಧವಿದೆ. ದಿನ ನಿತ್ಯದ ದುಡಿಮೆಯ ಆಯಾಸ, ಬದುಕಿನ ಏಕಾಂತತೆ, ಆಸರಿಕೆ, ಬೇಸರಿಕೆಗಳು ನಿವಾರಿಸಿಕೊಳ್ಳಲು ಮನುಷ್ಯ ಕಲೆಗಳ ಮೊರೆ ಹೊಕ್ಕಿದ್ದಾರೆ. ಇವುಗಳನ್ನು ಜೋಪಾನವಾಗಿ ರಕ್ಷಿಸಿ, ಬೆಳೆಸಿ ಮುಂದುವರೆಸಿಕೊಂಡು ಬಂದಿದ್ದಾರೆ. ಪ್ರಾರಂಭದಲ್ಲಿ ಆಂಗಿಕ ಸಂಜ್ಞೆಗಳಿಂದ ಕೂಡಿದ ಕಲೆಗಳು ಕ್ರಮೇಣ, ಚಿತ್ರ ಶಿಲ್ಪ ಹಾಡು ಮೊದಲಾದ ಆಯಾಮಗಳನ್ನು ಪಡೆದುಕೊಂಡಿದೆ.

ದಕ್ಷಿಣ ಕರ್ನಾಟಕದಲ್ಲಿ ಈ ಕಲೆ ಜೀವಂತ

[ಬದಲಾಯಿಸಿ]

ಪೂಜಾ ಕುಣಿತ ದಕ್ಕಿಣ ಕರ್ನಾಟಕದ ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಪೂಜಾಕುಣಿತ ಪೂಜಾ ಮೂಲತ: ಶಕ್ತಿ ದೇವತೆಗೆ ಸಂಬಂಧಿಸಿದ ಕುಣಿತ. ಪೂಜಾ ಕುಣಿತವು ನಂತರದ ದಿನಗಳಲ್ಲಿ ಮನರಂಜನೆ ಕಲೆಯಾಗಿ ವಿಕಸನಗೊಂಡಿದೆ. ಸಾಮಾನ್ಯವಾಗಿ ಪೂಜೆಗಳೆಲ್ಲವೂ ಹೆಣ್ಣು ದೇವರುಗಳಾಗಿರುತ್ತದೆ. ಅಪರೂಪಕ್ಕೆ ಗಂಡು ದೇವರ ಪೂಜೆಗಳುಂಟು. ಪೂಜೆಯಲ್ಲಿ ಎರಡು ವಿಧಗಳಿವೆ. ದೇವರ ಉತ್ಸವಮೂರ್ತಿಯನ್ನು ಒಂದು ಅಡ್ಡೆಗೆ ಬಿಗಿದು ನಾಲ್ಕಾರು ಜನ ಹೆಗಲಮೇಲೆ ಹೊತ್ತು ಮೆರೆಸುವುದು ಒಂದು ಬಗೆಯಾದರೆ, ತಳಿ ಅಥವ ತಟ್ಟಿಯಲ್ಲಿ ಅಲಂಕರಿಸಿದ ಪೂಜೆಯನ್ನು ಒಬ್ಬರೇ ಹೊತ್ತು ಕುಣಿಸುವುದು ಮತ್ತೊಂದು ಬಗೆ. ಬಿದಿರು ಅಥವಾ ಸೀಳಿದ ದಬ್ಬೆಗಳನ್ನು ಬಳಸಿ ಸುಮಾರು ಐದು ಅಡಿ ಉದ್ದ ನಾಲ್ಕು ಅಡಿ ಅಗಲದ ಚೌಕಾಕೃತಿಯ ಹಂದರವನ್ನು ಸಿದ್ದ ಪಡಿಸುತ್ತಾರೆ. ಈ ಹಂದರದ ಮದ್ಯ ಭಾಗಕ್ಕೆ ಮೆರೆದೇವರ ವಿಗ್ರಹವನ್ನಿರಿಸಲು ಅನುಕೂಲವಾಗುವಂತೆ ಪುಟ್ಟದಾದ ಮರಹಲಗೆ ಒಂದನ್ನು ಜೋಡಿಸುತ್ತಾರೆ. ಹಲಗೆಯ ಮೇಲೆ ಕೂರಿಸುವ ಪುಟ್ಟ ಮೆರೆದೇವರ ವಿಗ್ರಹಕ್ಕೆ ಭಕ್ತಾದಿಗಳು ಹರಕೆ ಹೊತ್ತು ಸಲ್ಲಿಸಿದ ಆಭರಣಗಳನ್ನು ತೊಡಿಸುತ್ತಾರೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ಗೊ.ರು.ಚನ್ನಬಸಪ್ಪ, ಕರ್ನಾಟಕ ಜನಪದ ಕಲೆಗಳು, ಕನ್ನಡ ಸಾಹಿತ್ಯ ಪರಿಷತ್ತು, ೧೯೭೭.
  2. ಹಿ.ಚಿ.ಬೋರಲಿಂಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ, ೧೯೯೬.