ವಿಷಯಕ್ಕೆ ಹೋಗು

ಸದಸ್ಯ:Smartashk19/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಜ಼ಗಿ ತಂತ್ರಾಂಶ[ಬದಲಾಯಿಸಿ]

ಕಿರುಪರಿಚಯ:[ಬದಲಾಯಿಸಿ]

ಅಜ಼ಗಿ ಎಂಬ ತಂತ್ರಾಂಶವು ಆಂಗ್ಲಭಾಷೆಯ ಅಕ್ಷರಗಳನ್ನು ಪ್ರಾಂತೀಯ ಲಿಪಿಗಳಿಗೆ(ಎಂದರೆ ಕನ್ನಡ, ತಮಿಳು, ಹಿಂದೀ ಮುಂತಾದ ಭಾರತೀಯ ಭಾಷೆಗಳಿಗೆ) ಮಾರ್ಪಡಿಸುವ ಲಿಪ್ಯಂತರಣ (ಲಿಪಿ-ಅಂತರ) ತಂತ್ರಾಂಶವಾಗಿದೆ. ಇದು ಉಚಿತವಾಗಿ ಅಂತರ್ಜಾಲದಲ್ಲಿ ಲಭ್ಯವಿದೆ. 2000ನೇ ಇಸವಿಯಲ್ಲಿ ತಮಿಳು ಲಿಪ್ಯಂತರ ಮಾಡುವುದರ ಮೂಲಕ ಪಾದಾರ್ಪಣೆಗೈದ ಈ ತಂತ್ರಾಂಶವು ಕ್ರಮೇಣ ಇನ್ನಿತರ ಭಾಷೆಗಳಿಗೂ ವಿಸ್ತರಣೆಗೊಂಡು ಪ್ರಸ್ತುತ ಹದಿಮೂರು ಭಾಷೆಗಳ ಲಿಪ್ಯಂತರ ಮಾಡುತ್ತಿದೆ.[೧]

ಮುಖ್ಯ ಲಕ್ಷಣಗಳು:[ಬದಲಾಯಿಸಿ]

ಅಜ಼ಗಿಯು ವಿಶ್ವದಾದ್ಯಂತ ಅನೇಕರು ಉಪಯೋಗಿಸುತ್ತಿರುವ ಮೊದಲ ಯಶಸ್ವಿ ತಮಿಳು ಲಿಪ್ಯಂತರಣ ಸಾಧನ.[೨] ಅಜ಼ಗಿಯನ್ನು ಬಳಸಿ ಕನ್ನಡವೂ ಸೇರಿದಂತೆ ತಮಿಳು, ಹಿಂದೀ, ಸಂಸ್ಕೃತ, ತೆಲುಗು, ಮಲಯಾಳೀ, ಮರಾಠಿ, ಕೊಂಕಣಿ, ಗುಜರಾತಿ, ಬೆಂಗಾಲಿ, ಪಂಜಾಬಿ, ಒರಿಯಾ ಹಾಗೂ ಅಸ್ಸಾಮೀ ಭಾಷೆಗಳಲ್ಲಿ ಮಾಹಿತಿಯನ್ನು ಸೃಷ್ಟಿಸಬಹುದು ಮತ್ತು ಪರಿಷ್ಕರಿಸಬಹುದು. ಬಳಕೆದಾರರಿಗೆ ಈ ಭಾಷೆಗಳಲ್ಲಿ ಟೈಪ್ ಮಾಡುವ ಬರದಿದ್ದರೂ ಪರವಾಗಿಲ್ಲ ಏಕೆಂದರೆ ಆಂಗ್ಲ ಭಾಷೆಯಲ್ಲಿ ಪ್ರಾಂತೀಯ ನುಡಿಗೆ ಸಮನಾದ ಶಬ್ದವುಳ್ಳ ಪದಗಳನ್ನು ಟೈಪ್ ಮಾಡಿದರೆ ಸಾಕು ಆ ಪ್ರಾಂತೀಯ ಪದಗಳು ಅಜ಼ಗಿಯಲ್ಲಿ ಉತ್ಪತ್ತಿಯಾಗುತ್ತವೆ. ಮೇಲಾಗಿ, ಎಂ-ಎಸ್ ಆಫೀಸ್‍ನ ತಂತ್ರಾಂಶಗಳಾದ ನೋಟ್‍ಪ್ಯಾಡ್, ವರ್ಡ್, ಎಕ್ಸೆಲ್‍ಗಳಲ್ಲಿಯೂ ಅಜ಼ಗಿಯನ್ನು ಸುಲಭವಾಗಿ ಅಳವಡಿಸಿ, ನೇರ ಟೈಪ್ ಮಾಡಬಹುದು. ಇದೇ ರೀತಿ ಓಪನ್‍ಆಫೀಸ್.ಓ.ಆರ್.ಜಿ ಮತ್ತು ಎಲ್ಲಾ ಅಂತರ್ಜಾಲ ಬ್ರೌಸರ್‍ಗಳಲ್ಲಿಯೂ ಹೀಗೇ ಅಜ಼ಗಿಯನ್ನು ಉಪಯೋಗಿಸಬಹುದು. ತಮಿಳಿನ ಅವತರಣಿಕೆಯನ್ನು ಉಪಯೋಗಿಸುವವರಿಗೆ ಒಂದು ಪ್ರತ್ಯೇಕ ಪದಪರಿಷ್ಕಾರಕ ಪರದೆಯೂ ಲಭ್ಯವಿದೆ. ಇದರಲ್ಲಿ, ಏಕ-ಪರದೆ ಇಲ್ಲವೇ ದ್ವಿ-ಪರದೆ ಆಯ್ದುಕೊಳ್ಳಬಹುದು. ದ್ವಿ-ಪರದೆಯನ್ನು ಆಯ್ದುಕೊಂಡರೆ, ಮೇಲ್ಭಾಗದ ಪರದೆಯ ಮೇಲೆ ನಾವು ಟೈಪ್ ಮಾಡಿದ ಆಂಗ್ಲ ಪದಗಳು ಮೂಡುತ್ತವೆ ಮತ್ತು ಕೆಳಭಾಗದ ಪರದೆಯ ಮೇಲೆ ಅವಕ್ಕೆ ಸಮನಾದ ತಮಿಳಿನ ಪದಗಳು ಮೂಡುತ್ತವೆ. ಇದರಿಂದ ನಮಗೆ ಟೈಪ್ ಮಾಡಿದ ಪದ ಸರಿಯೇ ಇಲ್ಲವೇ ಎಂದು ಪರೀಕ್ಷಿಸಿಕೊಳ್ಳಲು ಅನುಕೂಲವಾಗುತ್ತದೆ. ಒಂದೊಮ್ಮೆ ಬಳಕೆದಾರರು ಅದಾಗಲೇ ಕೀ-ಪದ ನಕಾಶೆಯಲ್ಲಿ ಪಳಗಿದ್ದರೆ, ಏಕ-ಪರದೆಯನ್ನೇ ಆಯ್ಕೆ ಮಾಡಿ ತಮಿಳು ಪದಗಳನ್ನು ಹೆಚ್ಚು ಗಾತ್ರವಾಗಿ ನೋಡಬಹುದು. ಪ್ರತಿಯೊಂದು ಆಂಗ್ಲ ಅಕ್ಷರಕ್ಕೂ ಅದನ್ನು ಟೈಪ್ ಮಾಡಿದಾಗ ಮೂಡುವ ಸಮಾನ ತಮಿಳು ಅಕ್ಷರವನ್ನು ಸೂಚಿಸುವ ‘ಜೋಡಣಾ ಸಾರಾಂಶ’ವನ್ನು, ಅಜ಼ಗಿಯ ಪರದೆಯ ಮೇಲೆಯೇ ಚಿಕ್ಕ-ಚೊಕ್ಕದಾದ ಟೇಬಲ್ಲಿನ ರೂಪದಲ್ಲಿ ಪ್ರದರ್ಶಿಸಲಾಗಿದೆ. ಇದರಿಂದ ಕೀ-ನಕಾಶೆಯನ್ನು ಹೊಸದಾಗಿ ಅಭ್ಯಸಿಸುತ್ತಿರುವ ಬಳಕೆದಾರರಿಗೆ ಸೂಕ್ತ ಮಾರ್ಗದರ್ಶನ ಸಿಗುತ್ತದೆ. ಅಜ಼ಗಿಯ ಪರದೆಯ ಮೇಲೆ ಪ್ರದರ್ಶಿತಗೊಳ್ಳುವ ಪದಗಳು ಟಿ.ಎಸ್.ಸಿ.ಐ.ಐ. ಸಂಕೇತಕ್ಕೆ ಅನುಗುಣವಾಗಿವೆ. ಬದಲಾಗಿ, ತಮಿಳು ವಾಕ್ಯಗಳನ್ನು ಯು.ಟಿ.ಎಫ್.-8 ಸಂಕೇತಕ್ಕೆ ಅನುಗುಣವಾಗಿ ಟೈಪ್ ಮಾಡುವುದಕ್ಕೆ ಅನುಕೂಲವಾಗುವಂತಹ ಯೂನಿಕೋಡ್ ಸಂಪಾದಕವೂ ಸಹ ಪ್ರತ್ಯೇಕ ಪರದೆಯೊಂದಿಗೆ, ಅಜ಼ಗಿಯ ಕೂಡ ದೊರೆಯುತ್ತದೆ. ಅಜಗಿಯೊಡನೆ ಸಿಗುವ ಅಜ಼ಗಿ+ ಎಂಬ ಅಪೂರ್ವ ಸಾಧನವು ಬಳಕೆದಾರರಿಗೆ ಹೆಚ್ಚು ವಿಸ್ತೃತ ಸೆಟ್ಟಿಂಗ್‍ಗಳು ಮತ್ತು ಆಯ್ಕೆಗಳನ್ನು ಅರ್ಪಿಸುತ್ತದೆ. ಇವುಗಳ ವಿವರ ಕೆಳಕಂಡಂತಿದೆ:

  1. 1. ಅಜ಼ಗಿ+ ಉಪಯೋಗಿಸಿದರೆ, ವಿಂಡೋಸ್ ಎಕ್ಸ್.ಪಿ.ಯಲ್ಲಿ ಎಂಎಸ್ ವರ್ಡ್‍ನೊಳಗೆ ಭಾರತೀಯ ಭಾಷೆಗಳಲ್ಲಿಯೇ ಟೈಪ್ ಮಾಡಬಹುದು. ಪ್ರತ್ಯೇಕವಾಗಿ ಯೂನಿಕೋಡ್ ಅನ್ನು ಆಯ್ಕೆ ಮಾಡಬೇಕಾಗಿಲ್ಲ.
  2. 2. ಇದು ಪೋರ್ಟಬಲ್ ನೆರವನ್ನು ನೀಡುವುದರಿಂದ, ಇದನ್ನು ನೇರವಾಗಿ ಪೆನ್-ಡ್ರೈವ್‍ನಿಂದಲೇ ಬಳಸಬಹುದು.
  3. 3. ಒಂದೊಂದು ಕೀ-ಬೋರ್ಡ್‍ನಲ್ಲಿ ಒಂದೊಂದು ರೀತಿಯ ಕೀ-ಕಾರ್ಯ ನಕಾಶೆಯನ್ನು ವಿನ್ಯಾಸಗೊಳಿಸಿರಬಹುದು. ಹೀಗಾಗಿ ಎಲ್ಲಾ ಕಂಪ್ಯೂಟರ್ ಬಳಕೆದಾರರಿಗೂ, ಎಫ್-10 ಕೀಯನ್ನು ಬಳಸುವ ಸೌಲಭ್ಯವಿರುವುದೋ ಇಲ್ಲವೋ ಗೊತ್ತಿಲ್ಲ. ಅದರ ಪರಿಹಾರಕ್ಕೆಂದೇ, ಈ ಅಜ಼ಗಿ+ನಲ್ಲಿ ಪ್ರತಿಯೊಬ್ಬ ಬಳಕೆದಾರರು ತಮಗಿಷ್ಟವಾದ ಎಲ್.ಎಫ್.ಕೆ. (ಎಲ್ = ಲ್ಯಾಂಗ್ವೇಜ್/ಭಾಷೆ, ಎಫ್ = ಫಾಂಟ್, ಕೆ = ಕೀ) ಕೂಟವನ್ನು ಆಯ್ದುಕೊಳ್ಳಬಹುದು.
  4. 4. ಇಂಟರ್ನೆಟ್ ಇಲ್ಲದಿದ್ದಾಗಲೂ ಅನುಕೂಲವಾಗುವಂತೆ, ಎಲ್ಲಾ ಭಾಷೆಗಳ ಕೀ-ನಕಾಶೆಗಳ ಕ್ರಿಯಾತ್ಮಕ ಸಹಾಯಸೂಚಿಯನ್ನು ಇದರೊಳಗೆ ಅಡಕ ಮಾಡಲಾಗಿದೆ.
  5. 5. ಯಾವುದೇ ಎಲ್.ಎಫ್.ಕೆ ಕೂಟಕ್ಕಾದರೂ ಪ್ರಸ್ತುತ ಕೀ-ನಕಾಶೆಗಳನ್ನು ಕ್ಷಣಮಾತ್ರದಲ್ಲಿ ಸುಲಭವಾಗಿ ಸರಳವಾಗಿ ಬದಲಿಸಬಹುದು. ಇದು ಭಾರತೀಯ ಭಾಷೆಗಳ ಗಣಕೀಕರಣದಲ್ಲೇ ವಿಶಿಷ್ಟವಾದ ಅಂಶ.
  6. 6. ಯಾವುದೇ ಎಲ್.ಎಫ್.ಕೆ ಕೂಟಕ್ಕಾದರೂ ನಮ್ಮ ಸ್ವಂತ ಕೀಬೋರ್ಡ್ ವಿನ್ಯಾಸವನ್ನು ರಚಿಸಬಹುದು.

ಸಂದಿರುವ ಸನ್ಮಾನ-ಗೌರವಗಳು:[ಬದಲಾಯಿಸಿ]

2002ನೇ ಇಸವಿಯಲ್ಲಿ “ದ ಹಿಂದು” ಪತ್ರಿಕೆಯು ಆಗ ಲಭ್ಯವಿದ್ದ ಲಿಪ್ಯಂತರಣ ಸಾಧನಗಳೊಳಗೆ ಅಜ಼ಗಿಯು “ಎದ್ದು ಕಾಣುವುದೆಂದು” ಪ್ರಶಂಸಿಸಿತು.[೩] 2006ನೇ ಇಸವಿಯಲ್ಲಿ ಭಾರತೀಯ ಗಣಕೀಯ ಸಬಲೀಕರಣ ಸಂಸ್ಥೆ ಮತ್ತು ವಿಶ್ವ ಶೃಂಗ ಪ್ರಶಸ್ತಿ ಯೋಜನೆಯಡಿ ಪ್ರದಾನಿಸುವ ಮಂಥನ್ ಪ್ರಶಸ್ತಿಯನ್ನು ಸ್ಥಳೀಯ ವಿಭಾಗದಲ್ಲಿ ಅಜ಼ಗಿಯು ಗೆದ್ದುಕೊಂಡಿತು.[೪] ಅದೇ ವರುಷದಲ್ಲಿ ಮೈಕ್ರೋಸಾಫ್ಟ್‍ನ ಭಾಷಾಇಂಡಿಯ.ಕಾಂ ಹೆಸರುಳ್ಳ ಭಾರತೀಯ ಭಾಷಾ ಗಣಕೀಯ ಜಾಲತಾಣವು ಅಜ಼ಗಿಯನ್ನು “ಗೆಲುವಿನ ಕಥೆ”ಯೆಂದು ಗುರುತಿಸಿ ಆದರಿಸಿತು.[೫]

ಆಂಡ್ರಾಯ್ಡ್ ಅವತರಣಿಕೆ[ಬದಲಾಯಿಸಿ]

2016ರಲ್ಲಿ ಅಜ಼ಗಿಯು ಮೊಬೈಲ್ ಬಳಕೆದಾರರಿಗೆಂದೇ ಆಂಡ್ರಾಯ್ಡ್ ರೂಪದಲ್ಲಿಯೂ ಬಂದಿದ್ದು[೬], ಇದರಲ್ಲಿ ಲಿಪ್ಯಂತರಣವನ್ನು ತಮಗಿಷ್ಟ ಬಂದ ರೀತಿಯಲ್ಲಿ ಗ್ರಾಹಕರು ಸಿದ್ಧ ಪಡಿಸಿಕೊಳ್ಳಬಹುದು[೭]. ಈ ಆಪ್ಲಿಕೇಷನ್ ಅನ್ನು ಭಾರತೀಯ ಕೀಬೋರ್ಡಿನ ಮೇಲೆ ಆಧರಿಸಿ ತಯಾರು ಮಾಡಿದ್ದಾರೆ, ಹೀಗಿದ್ದರೂ ಇದು ಲಿಪ್ಯಂತರಣ ಮತ್ತು ಪ್ರತಿಲೇಖನ ಎರಡನ್ನೂ ಒದಗಿಸುತ್ತದೆ[೮][೯].

ನಿರ್ಮಾಣ ತಂಡ[ಬದಲಾಯಿಸಿ]

ಬಿ. ವಿಸ್ವನಾಥನ್ ಎಂಬ ವೃತ್ತಿಪರ ಕಂಪ್ಯೂಟರ್ ತಂತ್ರಜ್ಞರು, ಅನಾರೋಗ್ಯದ ಕಾರಣ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸಂಸ್ಥೆಯಿಂದ ಹೊರಬಂದ ಬಳಿಕ, ಅಜ಼ಗಿಯನ್ನು ಅಭಿವೃದ್ಧಿ ಪಡಿಸಿದರು. 1999ರ ಹೊತ್ತಿಗೆ ತಮಿಳಿನಲ್ಲಿ ಇದ್ದ ಲಿಪ್ಯಂತರಣ ಸಾಧನಗಳಲ್ಲಿ ಹಲವಾರು ಕೊರತೆಗಳಿದ್ದವು. ಪ್ರಮುಖವಾದ ಲೋಪವೆಂದರೆ, ಇವು ಗ್ರಾಹಕಸ್ನೇಹಿ ಆಗಿರಲಿಲ್ಲ. ಇಂತಹ ಸಮಯದಲ್ಲಿ, ವಿಸ್ವನಾಥನ್‍ರವರು ಒಂದು ಗ್ರಾಹಕಸ್ನೇಹಿ ಆಂಗ್ಲ-ತಮಿಳು ಲಿಪ್ಯಂತರಣ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಬೇಕೆಂದು ಪಣತೊಟ್ಟರು. ಫಲಿತವಾಗಿ 2000ನೇ ಇಸವಿಯಲ್ಲಿ, ಅಜ಼ಗಿಯನ್ನು ಹೊರತಂದರು. ಅಜ಼ಗಿ ಎಂಬುದು ತಮಿಳು ಪದವಾಗಿದ್ದು ಇದರರ್ಥ ಸುಂದರಿ ಎಂದು . ತಮ್ಮ ಧರ್ಮಪತ್ನಿಯ ಸುಂದರ ಹೃದಯದ ದ್ಯೋತಕವಾಗಿ ಈ ತಂತ್ರಾಂಶಕ್ಕೆ ಇವರು ಅಜ಼ಗಿಯೆಂದು ಹೆಸರಿಟ್ಟರು.[೧೦]

ಬಳಕೆದಾರ ಸಮುದಾಯದ ಬೆಂಬಲ[ಬದಲಾಯಿಸಿ]

ತಮಿಳು ಫಾಂಟ್‍ಗಳನ್ನು ಬಳಸುವ ಬಹಳಷ್ಟು ಜಾಲತಾಣಗಳು, ತಂತ್ರಾಂಶಗಳು ಮತ್ತು ಕಡತಗಳು ಅಜ಼ಗಿಯನ್ನು ಉಪಯೋಗಿಸುತ್ತವೆ. ಈ ತಂತ್ರಾಂಶಕ್ಕೆ ಗ್ರಾಹಕರು ಬೆಂಬಲವೀಯುತ್ತಿದ್ದಾರೆ ಮತ್ತು ತಮ್ಮ ಬ್ಲಾಗ್‍ಗಳು ಹಾಗೂ ಜಾಲತಾಣಗಳಲ್ಲಿ ಧನ್ಯವಾದಗಳ ಲೇಖನಗಳನ್ನೂ ಪ್ರದರ್ಶಿಸಿದ್ದಾರೆ.[೧೧] ಲಿಪ್ಯಂತರಣ ಸಾಧನದ ಜೊತೆಗೆ, ಅಜ಼ಗಿಯು, ಯೂನಿಕೋಡ್[೧೨], ಟಿಎಸ್‍ಸಿಐಐ[೧೩], ಟಿಏಬಿ ಹಾಗೂ ಟಿಏಎಮ್ ಶೈಲಿಯ ನೂರಾರು ತಮಿಳು ಫಾಂಟ್‍ಗಳಿಗೆ ಸಂಪರ್ಕವನ್ನೂ ಕಲ್ಪಿಸಿದೆ. ಅಜ಼ಗಿಯನ್ನು ಬಹಳಷ್ಟು ಗ್ರಾಹಕರು ಶಿಫಾರಸು ಮಾಡುತ್ತಾರೆ[೧೪] ಮತ್ತು ಇದು ಕ್ರಮೇಣವಾಗಿ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಲೇ ಇದೆ.

ಪ್ರಶಸ್ತಿಗಳು ಹಾಗೂ ಸನ್ಮಾನಗಳು[ಬದಲಾಯಿಸಿ]

ದ್ವಿ-ಪರದೆಯ ಲಿಪ್ಯಂತರಣ ಸಾಧನವಾದ ಅಜ಼ಗಿಯನ್ನು ಅಭಿವೃದ್ಧಿಪಡಿಸಿದ ಬಿ. ವಿಸ್ವನಾಥನ್‍ರವರನ್ನು 2006ನೇ ಇಸವಿಯಲ್ಲಿ ಮಂಥನ್ ಪ್ರಶಸ್ತಿಯಿತ್ತು ಸನ್ಮಾನಿಸಲಾಯಿತು.[೧೫] ಅವರ ಅಜ಼ಗಿಯ ಆವಿಷ್ಕಾರಕ್ಕಾಗಿ, ಜುಲೈ 2004ರಲ್ಲಿ, ಚೆನ್ನೈಆನ್‍ಲೈನ್ ಸಂಸ್ಥೆಯು ಬಿ.ವಿಸ್ವನಾಥನ್‍ರನ್ನು ಕಂಪ್ಯೂಟರ್ ನಿಪುಣರೆಂದು[೧೬] ಬಣ್ಣಿಸಿ ಗೌರವಿಸಿತು. ಅಜ಼ಗಿಯ ಆವಿಷ್ಕಾರಕ್ಕಾಗಿ, ನವೆಂಬರ್ 2004ರಲ್ಲಿ, ನಿಲಾಚರಲ್ ವಿಸ್ವನಾಥನ್‍ರವರನ್ನು “ತಮಿಳ್ ವಳರ್ಕ್ಕುಂ ಅರಿಗ್ನಾರ್” (ಎಂದರೆ ತಮಿಳನ್ನು ಅಭಿವೃದ್ಧಿಗೊಳಿಸುವ ವಿದ್ವಾಂಸ) ಎಂದು ಗುರುತಿಸಿತು.[೧೭]

ಇವುಗಳನ್ನೂ ನೋಡಿ[ಬದಲಾಯಿಸಿ]

ಗೂಗಲ್ ಲಿಪ್ಯಂತರಣ ಗೂಗಲ್ ಲೇಖನ ಪರಿವರ್ತಕ ಗೂಗಲ್ ಐಎಂಇ ಮೈಕ್ರೊಸಾಫ್ಟ್ ಭಾರತೀಯ ಭಾಷಾ ಸ್ವೀಕೃತಿ ಸಾಧನ ಕ್ವಿಲ್‍ಪ್ಯಾಡ್

ಉಲ್ಲೇಖಗಳು[ಬದಲಾಯಿಸಿ]

  1. ಅವೇ ಪದಗಳು, ಅನೇಕ ಭಾಷೆಗಳು
  2. “ಅಜ಼ಗಿ – ಅತ್ಯಂತ ಸುಲಭದ ಹಾಗೂ ಅತ್ಯಂತ ವೇಗದ ತಮಿಳು ಲಿಪ್ಯಂತರಣ ಸಾಧನ – 2000ನೇ ಇಸವಿಯಿಂದ”. 22 ಏಪ್ರಿಲ್ 2012ರಂದು ಮತ್ತೆ ಪಡೆದದ್ದು.
  3. ರಾಮಚಂದ್ರನ್, ಕೆ (2002-06-26), “ಇನ್‍ಪುಟ್ ಇಂಗ್ಲೀಷ್, ಔಟ್‍ಪುಟ್ ತಮಿಳ್”, ದ ಹಿಂದು, ಚೆನ್ನೈ, ಇಂಡಿಯ, 2010-07-05ರಂದು ಮೂಲಪ್ರತಿಯಿಂದ ದಾಖಲಿಸಿದ್ದು, 2012-04-22ರಂದು ಮತ್ತೆ ಪಡೆದದ್ದು.
  4. ಮಂಥನ್-ಎಐಎಫ್ ಪ್ರಶಸ್ತಿ ’06 > ಪ್ರಶಸ್ತಿ ಗೆದ್ದವರು > ಅಜ಼ಗಿ, ಗಣಕ ಸಬಲೀಕರಣ ಸಂಸ್ಥೆ, 2012-05-15ರಂದು ಮತ್ತೆ ಪಡೆದದ್ದು.
  5. "ಮಿ. ವಿಶ್ವನಾಥನ್‍ರನ್ನು ಭೇಟಿಮಾಡಿ”, ಭಾಷಾಇಂಡಿಯಾ.ಕಾಂ, 2010-12-14ರ ಮೂಲಪ್ರತಿಯಿಂದ ದಾಖಲಿಸಿದ್ದು, 2012-05-14ರಂದು ಮತ್ತೆ ಪಡೆದದ್ದು.
  6. “ಅಜ಼ಗಿ – ಇಂಡಿಕ್ ಟೈಪಿಂಗ್ ಕೀಬೋರ್ಡ್”. ಗೂಗಲ್. 3ನೇ ನವೆಂಬರ್ 2016ರಂದು ಮತ್ತೆ ಪಡೆದದ್ದು.
  7. “ಅಜ಼ಗಿ ಆಂಡ್ರಾಯ್ಡ್ ಆಪ್ – ತಮಿಳು ಲಿಪ್ಯಂತರಣ ವ್ಯವಸ್ಥೆ”. 3 ನವೆಂಬರ್ 2016ರಂದು ಮತ್ತೆ ಪಡೆದದ್ದು.
  8. “ಅಜ಼ಗಿ ಆಂಡ್ರಾಯ್ಡ್ ಆಪ್ – 23 ಭಾಷೆಗಳು – ಶರವೇಗದ ತಮಿಳು ಲಿಪ್ಯಂತರಣ – ಉಚಿತವಾಗಿ”. 3 ನವೆಂಬರ್ 2016ರಂದು ಮತ್ತೆ ಪಡೆದದ್ದು.
  9. “ಅಜ಼ಗಿ ಆಂಡ್ರಾಯ್ಡ್ ಆಪ್ – ಎ ಕ್ಲಾಸ್ ಅಪಾರ್ಟ್ – ಲಕ್ಷಣಗಳು”. 3 ನವೆಂಬರ್ 2016ರಂದು ಮತ್ತೆ ಪಡೆದದ್ದು.
  10. “ನವೀನ, ಅಡ್ಡಿಆತಂಕಗಳ ನಡುವೆಯೂ”. ದ ಹಿಂದು. ಚೆನ್ನೈ, ಇಂಡಿಯ. 11 ನವೆಂಬರ್ 2003. 22 ಏಪ್ರಿಲ್ 2012ರಂದು ಮತ್ತೆ ಪಡೆದದ್ದು.
  11. “ಸುಂದರಂ, ಅಜ಼ಗಿಯ ಪರಿಚಯ ಮತ್ತು ಅದಕ್ಕೆ ಕೃತಜ್ಞತೆಗಳು”. 17 ಮೇ 2012ರಂದು ಮತ್ತೆ ಪಡೆದದ್ದು.
  12. “ನೂರಾರು ಉಚಿತ ಫಾಂಟ್‍ಗಳು (ಯೂನಿಕೋಡ್, ಟಿಎಸ್‍ಸಿಐಐ, ಟಿಏಬಿ, ಟಿಏಎಂ, ಮುಂತಾದ ಶೈಲಿಗಳಲ್ಲಿ)”. 17 ಮೇ 2012ರಂದು ಮತ್ತೆ ಪಡೆದದ್ದು.
  13. “ಟಿಎಸ್‍ಸಿಐಐ ಕಡತ ವರ್ಣನೆ”. ಟಿಎಸ್‍ಸಿಐಐ. 17 ಮೇ 2012ರಂದು ಮತ್ತೆ ಪಡೆದದ್ದು.
  14. “ಎಲ್ಲಾ ಅಪ್ಲಿಕೇಷನ್‍ಗಳಲ್ಲೂ ತಮಿಳಿನಲ್ಲಿ ಟೈಪ್ ಮಾಡಲು ಈ-ಕಲಪ್ಪೈನಂತಹ ಬೇರೆ ಸಾಧನಗಳಿವೆಯೇ.” 17 ಮೇ 2012ರಂದು ಮತ್ತೆ ಪಡೆದದ್ದು.
  15. “ಮಂಥನ್-ಏಐಎಫ್ ಪ್ರಶಸ್ತಿ ’06 > ಪ್ರಶಸ್ತಿ ಗೆದ್ದವರು”. ದ ಮಂಥನ್ ಅವಾರ್ಡ್. 17 ಮೇ 2012ರಂದು ಮತ್ತೆ ಪಡೆದದ್ದು.
  16. “ಕಂಪ್ಯೂಟರ್ ನಿಪುಣ ವಿಶ್ವನಾಥನ್”. ಚೆನ್ನೈಆನ್‍ಲೈನ್.ಕಾಂ. ಮೂಲದಿಂದ 27 ಡಿಸೆಂಬರ್ 2008ರಂದು ದಾಖಲಿಸಿದ್ದು. 17 ಮೇ 2012ರಂದು ಮತ್ತೆ ಪಡೆದದ್ದು.
  17. “ತಮಿಳ್ ವಲರ್ಕ್ಕುಂ ಅರಿಗ್ನಾರ್”. ನಿಲಾಚರಲ್.ಕಾಂ. 17 ಮೇ 2012ರಂದು ಮತ್ತೆ ಪಡೆದದ್ದು.