ವಿಷಯಕ್ಕೆ ಹೋಗು

ಸದಸ್ಯ:Soujanya j.shetty mangalore

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಥಾನೋಲ್ ಕಲ್ಲಿದ್ದಲ್ಲು, ಪೆಟ್ರೋಲ್, ಡಿಸೀಲ್ ಮುಂತಾದ ಇಂಧನಗಳನ್ನು ಭೂಗರ್ಭದಿಂದ ತೆಗೆಯಲಾಗುತ್ತದೆ. ಇವುಗಳಿಗೆ ಪಳೆಯುಳಿಕೆ ಇಂಧನ ಎಂದು ಹೆಸರು. ಇಂಜಿನ್ ಗಳಲ್ಲಿ ಇವುಗಳನ್ನು ಉರಿಸಿ ವಾಹನಗಳು ನಡೆಯುತ್ತವೆ. ಇವುಗಳಿಂದ ಟರ್ಬೈನ್ ತಿರುಗಿಸಿ ವಿದ್ಯುತ್ ಉತ್ಪಾದನೆಯೂ ಆಗುತ್ತದೆ.

ಪಳೆಯುಳಿಕೆ ಇಂಧನಗಳು ಉರಿಯುವಾಗ ವಿಪರೀತ ಪ್ರಮಾಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ಅನಿಲ ಗಾಳಿಗೆ ಬಿಡುಗಡೆ ಆಗುವ ಕಾರಣ ವಾತಾವರನ ಪ್ರದೂಷಣೆ ಆಗುತ್ತದೆ. ಭೂಮಿ ಬಿಸಿಯೇರುವಿಕೆ, ಓಝೋನ್ ಪದರದ ನಾಶ ಮುಂತಾದ ಅಪಾಯಗಳೂ ಇದರಿಮ್ದ ಬರುತ್ತದೆ.

ಈ ಸಮಸ್ಯೆಗೆ ವಿದೇಶಗಳಲ್ಲಿ ಕಂಡುಹಿಡಿದಿರುವ ಒಂದು ಪರಿಹಾರ ಬಯೋ ಫ್ಯುಯೆಲ್ ಅರ್ಥಾತ್ ಜೈವಿಕ ಅನಿಲ. ಇದಕ್ಕೆ ಬೇಕಾದ ವಸ್ತುಗಳನ್ನು ಹೊಲಗಳಲ್ಲಿ ಬೆಳೆಸಬಹುದು. ಜೈವಿಕ ಇಂಧನದಲ್ಲಿ ಮುಖ್ಯವಾಗಿರುವುದು ಇಥಾನೋಲ್, ಇದನ್ನು ಗೋಧಿ, ಜೋಳ, ಬೀಟ್ ಗಳಲ್ಲಿರುವ ಸಕ್ಕರೆಯ ಅಂಶದಿಂದ ತಯಾರಿಸಲಾಗುತ್ತದೆ.

ಪಾಶ್ಚಾತ್ಯ ದೇಶಗಳಲ್ಲಿ ವಾಹನಗಳಲ್ಲಿ ಬಳಸುವ ಇಂಧನದ ಜೊತೆಗೆ ನಿರ್ದಿಷ್ಟ ಪ್ರಮಾಣದ ಇಥಾನೋಲ್ ಕಡ್ಡಾಯವಾಗಿ ಬೆರೆಸಬೇಕು ಎಂಬ ನಿಯಮ ಇದೆ. ವಾರ್ಷಿಕ ಜೋಳದ ಬೆಳೆಯಲ್ಲಿ ೪೦ ಪ್ರತಿಶತ ಉತ್ಪಾದನೆ ಇಥಾನೋಲ್ ತಯಾರಿಕಾ ಸ್ಥಾವರಗಳಿಗೆ ಹೋಗುತ್ತದೆ. ಭಾರತದಲ್ಲೂ ಪೆಟ್ರೋಲ್ ನ ಜೊತೆಗೆ ೫ ಪ್ರತಿಶತ ಇಥಾನೋಲ್ ಮಿಶ್ರಣ ಮಾಡುವ ಕ್ರಮ ಜಾರಿಯಲ್ಲಿದ್ದು, ೨೦೧೭ರ ವೇಳೆಗೆ ಈ ಪ್ರಮಾಣವನ್ನು ೨೦ ಪ್ರತಿಶತಕ್ಕೆ ಏರಿಸುವ ಕಾರ್ಯಕ್ರಮ ಇದೆ.

ಯುರೋಪಿನ ಅಭಿವೃದ್ಧಿ ದೇಶಗಳಲ್ಲಿ ಸೋಯಾ ಮುಂತಾದ ಖಾದ್ಯ ತೈಲಗಳಿಂದ ತಯಾರಿಸಲಾಗುವ ಬಯೋಡಿಸಿಲ್ ಬಳಕೆಯಲ್ಲಿದೆ. ಈ ಬಯೋ ಡಿಸಿಲ್ ನ ಬೆಲೆ, ಡೀಸಿಲ್ ನ ಬೆಲೆಯ ಮೂರನೆಯ ಒಂದರಷ್ಟು ಮಾತ್ರ.