ವಿಷಯಕ್ಕೆ ಹೋಗು

ಸದಸ್ಯ:Sreecharan S Ajjagola/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನರೀಂದರ್ ಸಿಂಗ್ ಕೊಡಾನ್[ಬದಲಾಯಿಸಿ]

ನರೀಂದರ್ ಸಿಂಗ್ ಕೊಡಾನ್ ಒಬ್ಬ ಭಾರತೀಯ ಜೂಡೋ ಪಟುವಾಗಿದ್ದರು. ಇವರು ಭಾರತದ ಪರ ಎರಡು ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದಾರೆ. ಸಿಂಗ್ ರವರು ೧೯೬೯ ರ ಮೇ ೨೮ ರಂದು ದೆಹಲಿಯಲ್ಲಿ ಜನಿಸಿದರು. ೧೯೮೫ ರಲ್ಲಿ ಮೊದಲ ಭಾರಿ ರಾ‌‍‍ಷ್ಟ್ರೀಯ ಚಾಂಪಿಯನ್ ಶಿಪ್ ನ ವೀಜೇತರಾದರು. ೧೯೮೯ರಲ್ಲಿ ನಡೆದ ಸೌತ್ ಏಷಿಯನ್ ಗೇಮ್ಸ್ ನಲ್ಲಿ ಮೊದಲ ಭಾರಿ ಭಾರತವನ್ನು ಪ್ರತಿನಿಧಿಸಿದರು ಹಾಗೂ ಇದೇ ಕ್ರೀಡಾಕೂಟದಲ್ಲಿ ಬಂಗಾರದ ಪದಕವನ್ನು ಗೆಲ್ಲುವ ಮೂಲಕ ಭಾರತದ ಪರವಾಗಿ ಜೂಡೋದಲ್ಲಿ ತಮ್ಮ ಮೊದಲ ಪದಕವನ್ನು ಪಡೆದರು. ಅನಂತರ ೧೯೯೦ ರಲ್ಲಿ ನ್ಯೂಜಿಲ್ಯಾಂಡ್ ನ ಆಕ್ಲೆಂಡ್ ನಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಎ‍ಕ್ಸ್ಟ್ರಾ ಲೈಟ್ ವೇಟ್ ವಿಭಾಗದಲ್ಲಿ ಕಂಚಿನ ಪದಕವನ್ನು ಹಂಚಿಕೊಡರು. ಇವರು ಭಾರತದ ಪರವಾಗಿ ಎರಡು ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಏಕೈಕ ಜುಡೋಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಲ್ಲಿ ಜುಡೋಕ ಎಂದರೆ ಜೂಡೋ ಪಟು ಅಥವಾ ಜೂಡೋ ಆಟಗಾರ ಎಂದರ್ಥ. ಇವರ ಮೊದಲ ಒಲಿಂಪಿಕ್ಸ್ ಕೂಟ ೧೯೯೨ ರಲ್ಲಿ ಸ್ಪೇನ್ ನ ಬಾರ್ಸಿಲೋನಾದಲ್ಲಿ ಈಜಿಪ್ಟ್ ನ ಅಹ್ಮದ್ ಎಲ್ ಸಯ್ಯದ್ ಎದುರು ಸೋತು ಮೊದಲ ಸುತ್ತಿನಲ್ಲೇ ಹೊರಬಿದ್ದರು. ಇನ್ನೂ ಇವರ ಎರಡನೇ ಒಲಿಂಪಿಕ್ಸ್ ಕೂಟ ೧೯೯೬ ಅಮೇರಿಕಾದ ಜಾರ್ಜಿಯಾ ರಾಜ್ಯದ ಅಟ್ಲಾಂಟ ನಗರದಲ್ಲಿ ನಡೆದಿತ್ತು. ಇಲ್ಲಿ ೩೨ ಜನರ ಅಂತಿಮ ಸುತ್ತಿಗೆ ಪ್ರವೇಶಿಸಲು ನಡೆದ ನಾಲ್ಕು ಜುಡೋಕುಗಳ ನಡುವಿನ ಪಂದ್ಯದಲ್ಲಿ ಸಿಂಗ್ ರವರು ಐರ್ಲ್ಯಾಂಡ್ ನ ಶಾನ್ ಸುಲ್ಲಿವನ್ ಎದುರು ಗೆದ್ದು, ನಂತರ ೩೨ ರ ಸುತ್ತಿನಲ್ಲಿ ಅಟ್ಲಾಂಟದ ಜಾರ್ಜಿಯ ವಿಶ್ವ ಕಾಂಗ್ರೆಸ್ ಕೇಂದ್ರದಲ್ಲಿ ನಡೆದ ಪಂದ್ಯದಲ್ಲಿ ಬೆಲಾರಸ್ ನ ನ್ಯಾಟಿಕ್ ಬಾಗಿರೋವ್ ಎದುರು ಸೋತು ಕೂಟದಿಂದ ಹೊರನಡೆಯಬೇಕಾಯಿತು. ೧೯೯೯ ರಲ್ಲಿ ಕೇಂದ್ರ ಸರ್ಕಾರ ಕ್ರೀಡಾ ಕ್ಷೇತ್ರದಲ್ಲಿ ಇವರ ಸಾಧನೆಗಳನ್ನು ಗಮನಿಸಿ ಇವರಿಗೆ ಭಾರತದ ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಈ ಮೂಲಕ ಇವರು ೧೯೯೯ ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ೨೩ ಕ್ರೀಡಾಪಟುಗಳಲ್ಲಿ ಏಕೈಕ ಜುಡೋಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರ ಪತ್ನಿ ಸುನೀತ್ ಠಾಕೂರ್ (೧೦ ಸೆಪ್ಟೆಂಬರ್ ೧೯೭೦ ರಂದು ಜನನ) ಕೂಡ ೧೯೯೬ ರಲ್ಲಿ ಅಟ್ಲಾಂಟದಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಜೂಡೋ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಮಹಿಳೆಯರ ಹಾಫ಼್ ಲೈಟ್ ವೇಟ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ ಇವರು ೧೯೯೫ ರಲ್ಲಿ ದೆಹಲಿಯಲ್ಲಿ ನಡೆದಿದ್ದ ಏಷ್ಯನ್ ಜೂಡೋ ಚಾಂಪಿಯನ್ ಶಿಪ್ ನಲ್ಲಿ ಮಹಿಳೆಯರ ೬೨ ಕೆಜಿ ವಿಭಾಗದಲ್ಲಿ ಕಂಚಿನ ಪದಕವನ್ನು ತಮ್ಮ ಮುಡಿಗೇರಿಸಿಕೊಂಡರು. ಹೀಗೆ ೧೯೯೬ ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಜೂಡೋ ತಂಡದಲ್ಲಿ ಸಹ ಆಟಗಾರರಾಗಿ ಭಾಗವಹಿಸಿದ್ದ ಇವರಿಬ್ಬರು ದಂಪತಿಗಳಾಗಿದ್ದರು. ನರೀಂದರ್ ಸಿಂಗ್ ರವರು ಪಂಜಾಬ್ ಆರ್ಮ್ಡ್ ಪೋಲೀಸ್(ಪಿಎಪಿ) ವಿಭಾಗದಲ್ಲಿ ಓರ್ವ ಎಸ್ಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಸಣ್ಣ ಸಮಸ್ಯೆಯಾಗಿ ಆತ ಒಬ್ಬ ಯುವಕನ ಮೇಲೆ ಗುಂಡು ಹಾರಿಸಿದ್ದಾನೆ ಮತ್ತು ಆ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆಂದು ಎಸ್ಪಿ ನರೀಂದರ್ ಅವರ ಮೇಲೆ ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಲಾಯಿತು. ೫ನೇ ಭಾರತ ರಿಸರ್ವ್ ಬಟಾಲಿಯನ್ (ಐ ಆರ್ ಬಿ) ನ ಸಹಾಯಕ ಕಮಾಂಡೆಂಟ್ ನರೀಂದರ್ ಅವರನ್ನು ದೆಹಲಿಯ ಪಂಜಾಬ್ ಭವನದಲ್ಲಿ ಬುಕ್ ಮಾಡಲಾಗಿತ್ತು ಮತ್ತು ತರುವಾಯ ಅಮಾನತುಗೊಳಿಸಲಾಯಿತು. ಅವರು ತಮ್ಮ ಕೆಲಸದಲ್ಲಿ ತೊಡಗಿದ್ದಾಗ ಓರ್ವ ಯುವಕನ ಜೊತೆ ವಾಹನ ನಿಲುಗಡೆಯ ವಿಚಾರವಾಗಿ ಜಗಳವಾಡಿದ್ದರು, ಈ ಮಧ್ಯೆ ಅವರು ತಮ್ಮ ಬಂದೂಕನ್ನು ಹೊರತೆಗೆದು ಗುಂಡನ್ನು ಹಾರಿಸಿದರು. ಫ಼ೆಬ್ರುವರಿ ೫, ೨೦೧೬ ರಂದು ಅವರು ತಮ್ಮ ಮನೆಯಲ್ಲೇ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದು ವಿಧಿವಶರಾದರು. ಅವರ ಧರ್ಮಪತ್ನಿಯಾದ ಮಾಜಿ ಭಾರತೀಯ ಜೂಡೋ ಪಟು ಸುನಿತ್ ಠಾಕೂರ್ ರವರು ತಮ್ಮ ಪತಿ ಸೀಲಿಂಗ್ ಫ಼್ಯಾನ್ ಗೆ ನೇಣು ಹಾಕಿಕೊಂಡಿರುವುದನ್ನು ನೋಡಿ ಖಚಿತಪಡಿಸಿದ್ದರು. ನರೀಂದರ್ ರವರು ಪಂಜಾಬ್ ಪೊಲೀಸ್ ಇಲಾಖೆಯಿಂದ ಅಮಾನತಾದಾಗಿನಿಂದಲೂ ಖಿನ್ನತೆಗೆ ಒಳಗಾಗಿದ್ದರೆಂದು ವರದಿಯಾಗಿದೆ. ಸಿಂಗ್ ರವರ ಸ್ನೇಹಿತರೇ ಆದ ಪಂಜಾಬ್ ನ ಎಂ.ಎಲ್.ಎ ಪರ್ಗತ್ ಸಿಂಗ್ ನರೀಂದರ್ ರವರ ಸಾವಿನ ಕುರಿತು ಈ ರೀತಿ ಹೇಳುತ್ತಾರೆ " ಪಂಜಾಬ್ ನ ಪೊಲೀಸ್ ಇಲಾಖೆಯ ವೈಫ಼ಲ್ಯವು ಒಬ್ಬ ಪ್ರಶಂಸನೀಯ ಕ್ರೀಡಾಪಟುವಿನ ಮರಣಕ್ಕೆ ಕಾರಣವಾಗಿದೆ. ಎರಡು ವ‌ರ್ಷಗಳ ಕಾಲ ಅಮಾನತಿನಲ್ಲಿದ್ದರೂ ಸಹ, ಯಾವೊಬ್ಬ ಮೇಲಾಧಿಕಾರಿಯು ಸಹ ತಮ್ಮ ಮರುನೇಮಕಾತಿಗಾಗಿ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಿಲ್ಲ. ಇಂತಹ ಹಲವು ಅರ್ಜಿಗಳನ್ನು ಸಲ್ಲಿಸಿ ಮತ್ತೆ ಕೆಲಸಕ್ಕೆ ಮರಳುವ ಹಲವಾರು ಯತ್ನಗಳಲ್ಲಿ ವಿಫ಼ಲವಾದ ನರೀಂದರ್ ಕೊನೆಯಲ್ಲಿ ತಮ್ಮ ಪ್ರಾಣವನ್ನು ಬಿಡಲು ನಿರ್ಧರಿಸಿದರು". ೪೬ ವರ್ಷದ ಈ ಪ್ರತಿಭಾವಂತ ಜೂಡೋ ಪಟು ದುರಂತ ಅಂತ್ಯವನ್ನು ಕಾಣಬೇಕಾಯಿತು.