ವಿಷಯಕ್ಕೆ ಹೋಗು

ಸದಸ್ಯ:Sukritha.s/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೇವಿನ ಮರ[ಬದಲಾಯಿಸಿ]

ಸಂ: ನಿಂಬಾ

ಹಿಂ: ನೀಮ್

ಮ: ಲಿಂಬ

ಗು: ಲಿಂಬಾಡೋ

ತೆ: ವಿಂಬು

ತ: ನಿಂಬಾಮು

ವರ್ಣನೆ[ಬದಲಾಯಿಸಿ]

ದೊಡ್ಡಮರ. ಹಳ್ಳಿಗಳ ಊರ ಮುಂದಿನ ಕಟ್ಟೆಗಳಲ್ಲಿ ಸಾಮಾನ್ಯವಾಗಿ ಬೆಳೆಸುತ್ತಾರೆ. ಫೆಬ್ರವರಿ, ಎಪ್ರಿಲ್ ತಿಂಗಳಲ್ಲಿ ಹೂ ಬಿಡುತ್ತದೆ. ಸಾಲು ಮರಗಳಾಗಿ ಬೆಳೆಸುತ್ತಾರೆ. ಎಲೆಗಳು ಹಸಿರು ಮತ್ತು ಎದುರು ಬದಿರಾಗಿ ಇರುವುವು. ಹೂಗಳು ಚಿಕ್ಕವು ಮತ್ತು ಬೆಳ್ಳಗಿರುತ್ತವೆ. ಕಾಯಿಗಳು ಹಸಿರಾಗಿದ್ದು ಹಣ್ಣಾದಾಗ ಹಳದಿ ಬಣ್ಣವನ್ನು ಹೊಂದುತ್ತವೆ. ಹಣ್ಣನ್ನು ಹಿಚುಕಿದಾಗ ಬಿಳಿ ಅಂಟಾದ ದ್ರವವು ಹೊರಡುವುದು. ಮರದ ಗೋಂದು ಬೆಳ್ಳಗಿರುವುದು. ಇದರಲ್ಲಿ ಕಹಿಯಾದ “ಮಾರ್ಗೊಸೈನ್” ಅನ್ನುವ ಕಟು ಕ್ಷಾರವಿರುವುದು. ಬೇವು-ಬೆಲ್ಲ ಸೇವನೆ, ಜೀವನದ ಸಿಹಿ-ಕಹಿಗಳ ಸಂಗಮ.

ಸರಳ ಚಿಕಿತ್ಸೆಗಳು[ಬದಲಾಯಿಸಿ]

ಬೇವಿನಲ್ಲಿ ಕ್ರಿಮಿನಾಶಕ ಗುಣವಿದೆ. ಆದುದರಿಂದ ಹಲ್ಲುಜ್ಜಲು ಉಪಯುಕ್ತ. ಕಡ್ಡಿಯಲ್ಲಿ ಹಲ್ಲುಜ್ಜುವುದರಿಂದ ಬಾಯಿಯ ದುರ್ಗಂಧ ಹೋಗುವುದು.

ಅನಿದ್ರೆಯಲ್ಲಿ[ಬದಲಾಯಿಸಿ]

ಒಂದು ಹಿಡಿ ಹಸಿ ಬೇವಿನ ಸೊಪ್ಪನ್ನು ತಂದು ಕಲ್ಪತ್ತಿನಲ್ಲಿ ಹಾಕಿ ಹಾಲು ಸೇರಿಸಿ ನುಣ್ಣಗೆ ಅರೆಯಿರಿ ಮತ್ತು ಮಲಗುವುದಕ್ಕೆ ಮುಂಚೆ ಎರಡೂ ಅಂಗಾಲುಗಳಿಗೆ ಲೇಪಿಸಿ ತಿಕ್ಕಿರಿ.

ತಾಯಂದಿರ ಎದೆಹಾಲು ಇಂಗಲು[ಬದಲಾಯಿಸಿ]

ಒಂದು ಹಿಡಿ ಬೇವಿನ ಸೊಪ್ಪನ್ನು ನೀರು ಸೇರಿಸಿ ನುಣ್ಣಗೆ ಅರೆದು ಸ್ತನಗಳಿಗೆ(ತೊಟ್ಟನ್ನು ಬಿಟ್ಟು) ಪಟ್ಟು ಹಾಕಿರಿ.

ಅರಿಸಿನ ಕಾಮಾಲೆ[ಬದಲಾಯಿಸಿ]

ಒಂದು ಹಿಡಿ ಬೇವಿನ ಸೊಪ್ಪನ್ನು ಕಲ್ಪತ್ತಿನಲ್ಲಿ ಹಾಕಿ ನೀರು ಸೇರಿಸಿ ನುಣ್ಣಗೆ ಅರೆದು ಬಟ್ಟೆಯಲ್ಲಿ ಶೋಧಿಸಿ ರಸ ತೆಗೆದು ಸ್ವಲ್ಪ ಕೆಂಪು ಕಲ್ಲುಸಕ್ಕರೆ ಸೇರಿಸಿ, ಸೇವಿಸಿರಿ. ಹೊತ್ತಿಗೆ ಎರಡು ಟೀ ಚಮಚ ರಸ ಸಾಕು, ದಿವಸಕ್ಕೆ ಒಂದೇ ವೇಳೆ.

ಕುಷ್ಠ ರೋಗದಲ್ಲಿ[ಬದಲಾಯಿಸಿ]

ನಿಂಬಾದಿ ಲೇಹವನ್ನು ಕ್ರಮವಾಗಿ ಆರು ತಿಂಗಳು ಸೇವಿಸುವುದು.

ತೆಲೆಯಲ್ಲಿ ಹೇನು ಸೀರು ನವೆ[ಬದಲಾಯಿಸಿ]

ಹಸಿ ಬೇವಿನ ಬೀಜಗಳನ್ನು(ಒಣಗಿದ್ದಾದರೂ ಆಗಬಹುದು) ಶುಭ್ರವಾದ ಕಲ್ಲಿನ ಮೇಲೆ ಸ್ವಲ್ಪ ನೀರು ಹಾಕಿ ನುಣ್ಣಗೆ ಅರೆದು ತಲೆಗೆ ಮಂದವಾಗಿ ಲೇಪಿಸಿ, ಚೆನ್ನಾಗಿ ತಿಕ್ಕಿರಿ. ನಾಲ್ಕು ತಾಸುಗಳ ತರುವಾಯ ತಲೆ ತೊಳೆಯಿರಿ. ಏಳು ದಿವಸ ತಲೆಗೆ ಸಾಬೂನು ಹಚ್ಚಬೇಡಿ. ಸೀಗೆಕಾಯಿ ಪುಡಿ ಬಳಸಿರಿ. ಬೇವಿನ ಎಣ್ಣೆಯನ್ನು ಸಹ ಹಚ್ಚಬಹುದು.

ಕಿವಿ ನೋವಿನಲ್ಲಿ[ಬದಲಾಯಿಸಿ]

ಬೇವಿನ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ, ಒಂದೆರಡು ತೊಟ್ಟು ಎಣ್ಣೆಯನ್ನು ನೋವಿರುವ ಕಿವಿಗೆ ಹಾಕುವುದು.

ಸಕ್ಕರೆ ಖಾಯಿಲೆಯಲ್ಲಿ[ಬದಲಾಯಿಸಿ]

ಬೇವಿನ ಚಿಗುರೆಲೆಗಳನ್ನು ನುಣ್ಣಗೆ ಅರೆದು ಗಜ್ಜುಗದ ಗಾತ್ರದ ಗುಳಿಗೆ ಮಾಡಿ ಒಂದೊಂದು ಗುಳಿಯನ್ನು ಸೇವಿಸುವುದು.

ಕೈಕಾಲುಗಳ ಸೆಳೆತ ಮತ್ತು ತಣ್ಣಗಾಗುವಿಕೆ[ಬದಲಾಯಿಸಿ]

ಬೇವಿನ ಎಣ್ಣೆಯನ್ನು ಕೈಕಾಲುಗಳಿಗೆ ಹಚ್ಚಿ ಚೆನ್ನಾಗಿ ತಿಕ್ಕಿರಿ. ಕೈಕಾಲು ತಣ್ಣಗಿರುವಾಗ ಈ ಚಿಕಿತ್ಸೆಯನ್ನು ಒಂದೆರಡು ತಾಸು ಮುಂದುವರೆಸುವುದು. ಬೇವಿನ ಎಣ್ಣೆಯನ್ನು ವಿಳೇದೆಲೆಗೆ ಹಚ್ಚಿ ತಿನ್ನುವುದರಿಂದ ಸಹ ಅನುಕೂಲವಾಗುವುದು.

ಕಾಲಿನ ಹಿಮ್ಮಡಿಗಳ ಬಿರುಕು ಅಥವಾ ಸೀಳುವಿಕೆ[ಬದಲಾಯಿಸಿ]

20 ಬೇವಿನ ಹಸಿ ಎಲೆಗಳನ್ನು ಸ್ವಲ್ಪ ತುಪ್ಪದೊಂದಿಗೆ ಕಪ್ಪಾಗುವವರೆಗೂ ಹುರಿಯಿರಿ ಮತ್ತು ಹುರಿದ ಬೇವಿನೆಲೆಗಳನ್ನು ನುಣ್ಣಗೆ ಅರೆದು ಸ್ವಲ್ಪ ಬಿಸಿಯಾಗಿರುವ ಜೇನು ಮೇಣದಲ್ಲಿ ಸೇರಿಸಿರಿ. ತಣ್ಣಗಾದ ಮೇಲೆ, ಹಿಮ್ಮಡಿಗಳಿಗೆ ಲೇಪಿಸುವುದು.

ಮಲೇರಿಯಾ ಜ್ವರದಲ್ಲಿ[ಬದಲಾಯಿಸಿ]

ಬೇವಿನ ಚೆಕ್ಕೆಯ ಕಷಾಯದಲ್ಲಿ ಶಾಜೀರಿಗೆ(ಕಹಿ ಜೀರಿಗೆ) ಚೂರ್ಣ ¼ ಟೀ ಚಮಚ ಸೇರಿಸಿ ಸ್ವಲ್ಪ ಜೇನು ಸೇರಿಸಿ ಕುಡಿಸುವುದು. ಬೇವಿನ ಎಣ್ಣೆಯನ್ನು ಹಳ್ಳಗಳಲ್ಲಿ ನಿಂತಿರುವ ನೀರಿಗೆ ಹಾಕುವುದು. ಸೊಳ್ಳೆಗಳು ಸಾಯುವುವು. ಸೊಳ್ಳೆಗಳ ಮೊಟ್ಟೆ ಮರಿಗಳು ನಾಶವಾಗುವುವು.

ರೋಗ ನಿರೋಧ( ಶಕ್ತ ಹೆಚ್ಚಿಸಲು)[ಬದಲಾಯಿಸಿ]

ಪ್ರತಿನಿತ್ಯ ಐದು ಬೇವಿನ ಎಲೆಗಳನ್ನು ತಿನ್ನುವುದು. ರಕ್ತ ಶುದ್ಧಿಯಾಗುವುದು, ಚರ್ಮ ವಾಧಿಗಳಿಂದ ರಕ್ಷಣೆ ಸಿಗುವುದು.

ಮೈ ಉರಿ, ಕಜ್ಜಿ, ತುರಿ[ಬದಲಾಯಿಸಿ]

ಹಸಿ ಅಥವಾ ಒಣಗಿದ ಬೀಜಗಳನ್ನು ಚೆನ್ನಾಗಿ ಜಜ್ಜಿ ಸ್ವಲ್ಪ ಎಳ್ಳೆಣ್ಣೆಯಲ್ಲಿ ಹಾಕಿ ಸ್ವಲ್ಪ ಬಿಸಿ ಮಾಡಿ ಎರಡು ಬಿಲ್ಲೆ ಕರ್ಪೂರ ಹಾಕಿ, ಪಾತ್ರೆಯನ್ನು ಕೆಳಗಿಳಿಸಿರಿ. ಈ ಮುಲಾಮನ್ನು ಹಚ್ಚಿರಿ.