ವಿಷಯಕ್ಕೆ ಹೋಗು

ಸದಸ್ಯ:THRIVENI.K.1315348

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                     ಜೇಡರ ದಾಸಿಮಯ್ಯ

೧೧ನೇ ಶತಮಾನದಲ್ಲಿ ಕ್ರಿ.ಶ.೧೦೪೦ರ ಸುಮಾರಿಗೆ ಕರ್ನಾಟಕದ ಕಲಬುರ್ಗಿ ಜಿಲ್ಲೆಯ ಮುದೆನೂರಿನಲ್ಲಿ ದಾಸಿಮಯ್ಯ ಜನನವಾಗಿದೆ ಎಂದು ತಿಳಿದು ಬರುತ್ತದೆ. ತಂದೆ ರಾಮಯ್ಯ ಮತ್ತು ತಾಯಿ ಶಂಕರಮ್ಮ. ಎಳೆತನದಲ್ಲಿಯೇ ದಾಸಿಮಯ್ಯನಿಗೆ ವೀರಶೈವ ಮತದಲ್ಲಿ ಪ್ರಚಲಿತವಿದ್ದ ಲಿಂಗಾರ್ಚನೆ ಮತ್ತು ಜಂಗಮ ಸೇವೆಗಳ ಕಡೆಗೆ ಒಲವು ಹರಿಯಿತು. ಆತನು ಹುಟ್ಟಿದ್ದು ಜೇಡರ ಕುಲ. ಅಂದರೆ ಬಟ್ಟೆ ನೇಯುವ ಉದ್ಯೋಗವನ್ನು ಅವಲಂಬಿಸಿದ ಕುಲ ವರ್ಣಾಶ್ರಮ ಪರಾಕಾಷ್ಠೆಯಲ್ಲಿದ್ದ ಆಗಿನ ಸಮಯದಲ್ಲಿ ಝೇಡರ ಕುಲವನ್ನು ಶೂದ್ರರಲ್ಲಿಯೇ ಕೆಳಮಟ್ಟದ್ದೆಂದು ಪರಿಗಣಿಸಲಾಗುತ್ತಿತ್ತು. ಮುದೇನೂರಿನ ಆಧಿದೈವವಾದ ರಾಮನಾಥ ಲಿಂಗನ ದೇವಸ್ಥಾನ ಆ ಗ್ರಾಮದಲ್ಲಿತ್ತು. ಆ ಸ್ವಾಮಿಯ ಪೂಜಾ ಹಕ್ಕು ಉಚ್ಛ ಕುಲದವರಾದ ಬ್ರಾಹ್ಮಣರ ಕಡೆಗಿತ್ತು ಪೂಜಾರರು ಬ್ರಾಹ್ಮಣರನ್ನು ಹೊರತುಪಡಿಸಿ ಉಳಿದವರಿಗೆ ಗರ್ಭಗುಡಿಗೆ ಪ್ರವೇಶ ನೀಡುತ್ತಿರಲಿಲ್ಲ. ಇದರಿಂದ ನೊಂದ ದಾಸಿಮಯ್ಯ ದೇವಾಲಯವನ್ನು ಮುಚ್ಚಿ ಬೀಗ ಜಡಿದ ಸಮಯದಲ್ಲಿ ಅನನ್ಯ ಭಕ್ತಿಯಿಂದ ರಾಮನಾಥನನ್ನು ಪ್ರಾರ್ಥಿಸಲು ಗರ್ಭಗುಡಿಯ ಬೀಗ ಕಳಚಿ ಬಾಗಿಲು ತೆರೆದುಕೊಂಡು ರಮನಾಥನನ್ನು ದಾಸಿಮಯ್ಯನ್ನಿಗೆ ದರ್ಶನವಿತ್ತನಂತೆ. ಈ ಘಟನೆ ಕಾಗಿನೆಲೆಯ ಮಂದಿರದಲ್ಲಿಯ ಕೃಷ್ಣನು ಕನಕದಾಸರಿಗೆ ಗರ್ಭಗುಡಿಯ ಹಿಂದಿನ ಗೋಡೆ ಒಡೆದು ದರ್ಶನವಿತ್ತದನ್ನು ನೆನೆಪಿಗೆ ತರುತ್ತದೆ.

ಮರುದಿನ ಬಾಗಿಲಿನ ಬೀಗ ಕಳಚಿ ಬಿದ್ದು ಬಾಗಿಲು ತೆರೆದೇ ಇದ್ದುದನ್ನು ಕಂಡ ಪೂಜಾರರು ಹೌಹಾರಿದರು. ಘಟನೆಯ ಪ್ರತ್ಯಕ್ಷದರ್ಶಿಗಳು ಈ ಸಮಾಚಾರವನ್ನು ಪೂಜಾರರಿಗೆ ತಿಳಿಸಿದರು. ಆಗ ಪೂಜಾರರು ಗ್ರಾಮದ ದಳವಾಯಿಯಲ್ಲಿ ದಾಸಿಮಯ್ಯನೇ ದೇವಾಲಯದ ಬೀಗ ಒಡೆದು ಬಾಗಿಲು ತೆರೆದು ಹೋಗಿದ್ದಾನೆಂದು ದೂರು ನೀಡಿದರು. ದಳವಾಯಿಯು ಸಾರಾಸಾರ ವಿಚಾರ ಮಾಡಿ ಸಾಕ್ಷಾತ್ಕಾರ ಮಾಡಿಕೊಳ್ಳಲು ದಾಸಿಮಯ್ಯನನ್ನು ಕರೆಸಿದಾಗ ನಡೆದ ಸಂಗತಿಯನ್ನು ತಿಳಿಸಿದನು. ಆಗ ಪೂಜಾರರು ಯಾರೂ ಇಲ್ಲದಾಗ ಈ ಘಟನೆ ನಡೆದಿದೆ. ನಿನ್ನ ಭಕ್ತಿ ನಿಜವಾಗಿದಲ್ಲಿ ಎಲ್ಲರೆದುರಿಗೆ ಬೀಗ ತೆಗೆಸು ನೊಡೋಣ ಎಂದು ಸವಾಲೆಸೆದರಂತೆ. ಆಯಿತು ರಾಮನಾಥನ ಇಚ್ಛೆ ಇದ್ದಂತೆ ಆಗಲಿ ಎಂದು ದಾಸಿಮಯ್ಯ ಊರ ಜನರೆಲ್ಲರೂ ದೇವಾಲಯದಲ್ಲಿ ನೆರೆದಿದ್ದಾಗ ರಾಮನಾಥಲಿಂಗನನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸಲಾಗಿ ಬೀಗ ಕಳಚಿ ಗರ್ಭಗುಡಿಯ ಬಾಗಿಲು ತೆರೆದುಕೊಂಡಿತಂತೆ. ಇದನ್ನು ಪ್ರತ್ಯಕ್ಷ ಕಂಡವರೆಲ್ಲರೂ ದಾಸಿಮಯ್ಯನ ಭಕ್ತಿಯನ್ನ್ನು ಬಾಯ್ತುಂಬ ಹೊಗಳಿ ಕೊಂಡಾಡಿದರಂತೆ. ಪೂಜಾರಿಗಳು ಮತ್ತು ದಳವಾಯಿ ದಾಸಿಮಯ್ಯನ ಪಾದಕ್ಕೆ ಬಿದ್ದು ಕ್ಷಮೆ ಕೇಳಿದರಂತೆ.

ಅಂದಿನಿಂದ ದಾಸಿಮಯ್ಯನ ಭಕ್ತಿಯ ಖ್ಯಾತಿಯು ನಾಡಿನಲ್ಲಿ ಹಬ್ಬಿತು. ಆತನ ಕುಲಬಾಂಧವರು ಅಂದರೆ ಜೇಡರು ಒಮ್ಮತದಿಂದ ಆತನನ್ನು ತಮ್ಮ ಕುಲಗುರು ಎಂದು ಒಪ್ಪಿಕೊಂಡಿದ್ದಲ್ಲದೇ ತಾವು ಜೇಡ ಕುಲದವರು ಎಂದು ಹೆಮ್ಮೆಯಿಂದ ಹೇಳಿಕೊಂಡರು. ಅದಕ್ಕೆ ದಾಸಿಮಯ್ಯ ದಾಸಕುಲದವ ಈಶಂಗಲ್ಲದೆ ಅನ್ಯರಿಗೆ ಶರಣೆನ್ನ. ಆಶೆ ಮಾಡ. ನೋಡ ಅನ್ಯದೈವಂಗಳಿಗೆ ಎಂದಿದ್ದನೆ. ಅಂಬಿಗರ ಚೌಡಯ್ಯನು ತನ್ನ ಒಂದು ವಚನದಲ್ಲಿ ಕತ್ತಿದ್ದ ಮುಡಳು ಜೇಡಂಗೆ ತೆರೆದಾಗ ಇಕ್ಕಿದ್ದ ಜನಿವಾರ ಬೀಯವಾದವು ಎಂದು ಕಟುವಾಗಿ ಖಂಡಿಸಿದ್ದು ಈ ಘಟನೆಯ ಹಿನ್ನೆಲೆಯಲ್ಲಿಯೇ ಎಂದು ಭಾವಿಸಲಾಗಿದೆ.

ಪ್ರಾರಂಭದಲ್ಲಿ ದಾಸಿಮಯ್ಯನೂ ಉಚ್ಛ ಕುಲದ ನೀಚ ತಾರತಮ್ಯದಿಂದ ಬಹುವಾಗಿ ನೊಂದುಕೊಂಡಿದ್ದಾನೆ ಎಂದು ಕಾಣುತ್ತದೆ. ಆತನು ತನ್ನ ಅನೇಕ ವಚನಗಳಲ್ಲಿ ಜಾತಿ ಭೂತವನ್ನೇ ವಿಶೇಷವಾಗಿ ಖಂಡಿಸಿರುವುದು ಗೋಚತವಾಗುತ್ತದೆ. ಕುಲ ಮದ ತೊರೆದು ದೇವನನ್ನೊಲಿಸಿದ ಶರಣಂಗೆ ತಲೆಬಾಗುವೆ ಎಂದಿದ್ದಾನೆ. ಬ್ರಾಹ್ಮಣರೇನು ಕೊರಳಲ್ಲಿ ಅನಿವಾರ ಸಮೇತ ಜನಿಸುವರೇ? ತಮ್ಮ ಕುಲದ ಜೇಡರು ಕೈಯಲ್ಲಿ ಲಾಳಿ ಹಿಡಿದುಕೊಂಡೇ ಹುಟ್ಟುವರೇ? ಎಂಬುದು ದಾಸಿಮಯ್ಯನ ಪ್ರಶ್ನೆ. ಆತನ ವಚನಾಂಕಿತ ರಾಮನಾಥ ಎಂಬುದಾಗಿದೆ.

ದಾಸಿಮಯ್ಯನ ಭಕ್ತಿಯ ಖ್ಯಾತಿ ದಶದಿಕ್ಕುಗಳಲ್ಲಿ ಹಬ್ಬಿ ೧೦೬೦ ರ ಸುಮಾರಿಗೆ ಆಂಧ್ರ ಪ್ರದೇಶದಲ್ಲಿ ಈಗಿನ ಹೈದರಬಾದ್ ಶಹರಕ್ಕೆ ಸಮೀಪದಲ್ಲಿರುವ ಪುಟ್ಟಲ ಕೆರೆಯಲ್ಲಿ(ಈಗಿನ ಹೆಸರು : ಪಟ್ಟಂವಚೇರು) ರಾಜ್ಯಭಾರ ಮಾಡಿಕೊಂಡಿದ್ದ ಜಯಸಿಂಹ ದೊರೆಯೆ ರಾಣಿ ಸುಗ್ಗಲಾದೇವಿಯು ದಾಸಿಮಯ್ಯನನ್ನು ಕರೆಸಿ ಆತನಿಂದ ಲಿಂಗದೀಕ್ಷೆ ಪಡೆದಳು ಎಂಬುದಾಗಿ ಕ್ರಿ.ಶ.೧೧೬೮ ರಲ್ಲಿ ಕೆತ್ತಲಾದ ಶಿಲಾ ಶಾಸನದಲ್ಲಿ ಉಲ್ಲೇಖವಿದೆ. ಅಲ್ಲದೆ ತೆಲಗು ವಸುಣಯ್ಯ ಎಂಬ ಶಿವಶರಣನು ತೆಲಗೇಶ್ವರ ಎಂಬ ಅಂಕಿತ ಹೊಂದಿದ ವಚನಗಳನ್ನು ಕನ್ನಡದಲ್ಲಿ ರಚಿಸಿದ್ದಾನೆ. ಇದರಿಂದ ಆ ಕಾಲದಲ್ಲಿ ಕನ್ನಡದ ಕಂಪು, ನೆರೆರಾಜ್ಯಗಳಲ್ಲಿಯೂ ಪಸರಿಸಿತ್ತು ಎಂಬುದು ವೇದ್ಯವಾಗುತ್ತದೆ.

ಕನ್ನಡದಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ವಚನಗಳನ್ನು ರಚಿಸಿರುವ ದಾಸಿಮಯ್ಯನಿಗೆ ಆದ್ಯ ವಚನಕಾರ ಎಂಬ ಅಗ್ಗಳಿಕೆಯಿದೆ. ಬರೀ ಸಂಖ್ಯಾದೃಷ್ಠಿಯಿಂದಲ್ಲದೇ ಆತನ ವಚನಗಳಲ್ಲಿ ಕಾಣಬರುವ ಪ್ತರಾಸ ಬದ್ಧತೆ, ಶಬ್ದಗಳ ಸೌಂದರ್ಯ ಮತ್ತು ಗರ್ಭಿತಾರ್ಥಗಳು ಕಾರಣವಾಗಿರಬೇಕು. ಇದಲ್ಲದೇ ರಚಿತಾವಾದ ವಚನಗಳು ಸಂಸ್ಕೃತದ ಸೋಂಕಿಲ್ಲದೇ ಅಚ್ಚ ಕನ್ನಡದಲ್ಲಿವೆ. ದಾಸಿಮಯ್ಯನವರೇ ತಮಗಿಂತ ಪುರಾತನರಾದ ಕೆಲ ಶರಣರನ್ನು ನೆನೆಯುತ್ತ ಕಡಿಗೀಲಿಲ್ಲದ ಬಂಡಿ ಹೊಡೆಗೆಡುವುದು ಮಾಂಬುದೇ? ಕಡೆಗೀಲು ಬಂಡಿಗಾಧಾರ. ಕಡುದರ್ಪವೇರಿದ ಒಡಲೆಂಬ ಬಂಡಿಗೆ ಮೈಡ ಶರಣರ ನುಡುಗಡಣವೇ ಕಡೆಗೀಲು ಕಾಣಾ ರಾಮನಾಥ ಎಂದಿದ್ದಾನೆ. ಎಂದರೆ ಇವರಿಗಿಂತ ಪೂರ್ವದಲ್ಲಿ ಶಿವಶರಣರು ಆಗಿ ಹೋಗಿ ವಚನಗಳನ್ನು ರಚಿಸಿದ್ದರು ಎಂಬುದು ವೇದ್ಯವಾಗುತ್ತದೆ.

ಭಕ್ತಿಯುತ ಶರಣ ಜೀವನಕ್ಕೆ ಮತ್ತು ಘನಮಹಿಮನ ಸಾಕ್ಷಾತ್ಕಾರಕ್ಕೆ ಸಂಸಾರವನ್ನು ತ್ಯಜಿಸಬೇಕೆಂದೇನು ಇಲ್ಲ. ಆದರೆ ಕೈ ಹಿಡಿಯುವಾಕೆ ಅನುರೂಪಳಾಗಿ ಇರಬೇಕು. ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವನಿಗೆ ಎಂಬ ಸೂತ್ರ ದಾಸಿಮಯ್ಯನದು. ಪತಿಯಷ್ಟೇ ಭಕ್ತಳಾಗಿ ಶಿವನ ಸಾಕ್ಷಾತ್ಕಾರಕ್ಕಾಗಿ ಪರಿತಪಿಸುತ್ತ ಇರುವಲ್ಲಿ ಸಂಸಾರದ ವಿಶಯಗಳಿಗೆ ಮಹತ್ವ ನೀಡುವ ಸತಿಯಿದ್ದಲ್ಲಿ ಎತ್ತು ಏರಿಗೆಳೆದರೆ ಕೋಣ ಕೇರಿಗೆಳೆಯಿತು ಎಂಬಂತಾಗಿ ಇಬ್ಬರಿಗೂ ಸುಖವಿಲ್ಲದೇ ಇಬ್ಬರೂ ದಡ ಸೇರಲಾರರು ಎಂಬುದೇ ದಾಸಿಮಯ್ಯನ ನಿಲುವು. ಮುಂದೆ ಕಲ್ಯಾಣದಲ್ಲಿ ಮಿಂಚಿದ ಬಹುತೇಕ ಶರಣರು ಸತಿಪತಿಗಳಾಗಿದ್ದು ಕಾಯಕ ಅವಲಂಬಿಸಿ ಭಕ್ತಿಪೂರ್ವಕ ಜೀವನ ನಡೆಸಿ ಮುಕ್ತಿ ಹೊಂದಿದ್ದಾರೆ. ಕಾಯಕದಿಂದ ಬಂದ ಆದಾಯದಲ್ಲಿ ದಾಅಸೋಹ ಬನಡೆಸುವ ಸತಿಯರಾದಾಗಿ ಒಬ್ಬರಿಗೊಬ್ಬರ ಸಹಕಾರದಿಂದ ಅವರ ಶರಣಜೀವನ ಉಜ್ಜ್ವಲವಾಗಿತ್ತು. ಆದ್ದರಿಂದಲೇ ದಾಸಿಮಯ್ಯ ತನ್ನ ಕಠಿಣ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಕನ್ಯಾಮಣಿಯನ್ನೇ ವಿವಾಹವಾಗುವ ನಿರ್ಧಾರ ಮಾಡಿ ಕೊನೆಗೆ ಆತನ ಕಠಿಣ ಪರೀಕ್ಷೆಯಲ್ಲಿ ತೇರ್ಗಡೆಯದ ಕಲಬುರ್ಗಿ ಜಿಲ್ಲೆಯ ಗಬ್ಬೂರ ಗ್ರಾಮದ ದುಗ್ಗಳೆ ಆತನ ಸತಿಯಾಗಿ ಕೈ ಹಿಡಿಯುತಾಳೆ. ದಾಸಿಮಯ್ಯನ ಕರಾರೆಂದರೆ ತನ್ನ ಸತಿ ಯಾಗುವವಳು ನೀರು ಬಳಸದೇ ಅನ್ನ ಮಾಡಬೇಕು ಎಂಬುದಾಗಿತ್ತು. ಆಗ ದುಗ್ಗಳೆ ಒಲೆಯ ಮೇಲಿಟ್ಟ ಅಕ್ಕಿಗೆ ಒಬ್ಬ ಜಂಗಮನ ಪಾದ ತೊಳೆದು ಪಾದೋದಕ ಹಾಕಿ ಅನ್ನ ಬೇಯಿಸಿದಳು. ಇದರರ್ಥ ಜಂಗಮನ ಪಾದೋದಕ ನೀರು ಎಂದು ಪರಿಗಣಿಸಲ್ಪಡುವುದಿಲ್ಲ್ಲ. ದುಗ್ಗಳೆ ಸಹ ಅಸಾಧಾರಣಶಿವಭಕ್ತಳಾಗಿದ್ದುದಲ್ಲದೇ ವಚನಗಳನ್ನು ರಚಿಸಿದ್ದಾಳೆ. ಆಕೆಯ ವಚನಾಂಕಿತ ದಾಸಯ್ಯ ಪ್ರಿಯ ರಾಮನಾಥ ಎಂಬುದಾಗಿದೆ.

ಬಸವಣ್ಣನ ಸಮಕಾಲೀನ ಶರಣ ಚಾಟಿಏಟಿನ ಚೌಡಯ್ಯ ಡಂಭಾಚಾರವನ್ನು ಖಂಡ ತುಂಡವಾಗಿ ಖಂಡಿಸಿದರೆ ದಾಸಿಮಯ್ಯನೂ ತನ್ನದೇ ಆದ ರೀತಿಯಲ್ಲಿ ಚುರುಕು ಮುಟ್ಟಿಸುವ ಶಬ್ದಗಳಲ್ಲಿ ಟೀಕಿಸಿದ್ದಾನೆ. ಅರ್ಥವುಂಟೆಂದು ಅಹಂಕಾರದಿಂದ ಮಾಡುವವನ ಭಕ್ತಿ ತೊತ್ತಿನ ತಕೂಟದ ತೂರ್ಯ ಮೇಳದಂತೆ, ತನು, ಮನ ಧನದಲ್ಲಿ ವಂಚನೆಯುಳ್ಳ ಪ್ರಪಂಚಿಯ ಮನೆಯ ಕೂಳು ಶುನಕನ ಬಾಯಿಯಿಂದ ಪ್ರತಿಶುನಕ ತಿಂದಂತೆ ಕಾಣಾ ರಾಮಾನಾಥ. ತಾತ್ಪರ್ಯವಿಷ್ಟೇ ಮಾಡುವ ಭಕ್ತಿ ನಿರ್ಮಲವಾಗಿರಬೇಕು ಬಾಹ್ಯಾಡಂಬರದ ಸೋಂಕು ತಟ್ಟಿರಬಾರದು ಇಂಥ ಭಕ್ತಿಯನ್ನು ಶಿವನು ಮೆಚ್ಚುವುದಿಲ್ಲ. ಇಲ್ಲಿ ಇದ್ದುಳ್ಳವರು ಮಾಡುವ ಆಡಂಬರದ ಭಕ್ತಿಯನ್ನು ದಾಸಿಮಯ್ಯ ಖಂಡಿಸಿದ್ದಾನೆ. ದೇವರಿಗೆ ಸಲ್ಲಿಸುವ ಭಕ್ತಿ ಮತ್ತು ದಾಸೋಹಕ್ಕೆ ವ್ಯಯಿಸುವ ಧನ ಶುದ್ಧ ಕಾಯಕದಿಂದಗಳಿಸಿದ್ದಿರಬೇಕು ಎಂಬುದು ದಾಸಿಮಯ್ಯನ ಅಭಿಮತ.

ಉಂಕಿಯ ನಿಗುಚಿ ಸರಿಗೆಯ ಸಮಗೊಳಿಸಿ ಎಂಬ ಆತನ ವಚನದ ಮೇಲಿಂದ ದಾಸಿಮಯ್ಯನ ವೃತ್ತಿ ನೇಕಾರಿಕೆ ಆಗಿತ್ತು ಎಂಬುದನ್ನು ನಾವು ಗ್ರಹಿಸಬಹುದಾಗಿದೆ. ತನ್ನ ನೇಯ್ಗೆ ವೃತ್ತಿಯಲ್ಲಿ ಬಟ್ಟೆ ತಯಾರಿಸಿ ಸಮೀಪದ ವ್ಯಾಪಾರಿ ಪಡ ಮೂಲೆಯ ಸಿದ್ದಾಪುರದ ಸಂತೆಯಲ್ಲಿ ಮಾರಾಟ ಮಾಡಿಕೊಂಡು ಬಂದ ಆದಾಯದಲ್ಲಿ ಜಂಗಮ ದಾಸೋಹ ನಡೆಸುತ್ತಿದ್ದನು. ಒಮ್ಮೆ ಒಂದು ಮಹಾ ಗಣಪರ್ವ ನಡೆಸಬೇಕೆಂದು ಆಲೋಚಿಸಿದ ದಾಸಿಮಯ್ಯ ಉತ್ಕೃಷ್ಟ ರೇಶ್ಮೆ ಬಳಸಿ ಬಹಳ ಬೆಲೆ ತರುವ ರೇಶ್ಮೆ ಬಟ್ಟೆ ನೇಯ್ದು ಸಿದ್ದಾಪುರ ಸಂತೆಗೆ ಕೊಂಡೊಯ್ದನಂತೆ. ಈತನ ಕಾರ್ಯ ಮತ್ತು ದಾಸೋಹ ನಿಷ್ಠೆಯನ್ನು ಪರೀಕ್ಷಿಸಲು ಬಯಸಿದ ಶಿವನು ಜಂಗಮ ವೇಷದಿಂದ ಆತನು ಶ್ರಮವಹಿಸಿ ನೇಯ್ದ ಅಮೂಲ್ಯ ರೇಶ್ಮೆ ವಸ್ತ್ರವನ್ನೇ ದಾನವಾಗಿ ನೀಡುವಂತೆ ಬೇಡಿದನಂತೆ. ಆಯಿತು ನಾನು ನಡೆಸಬೇಕೆಂದು ಯೋಚಿಸಿರುವ ಗಣಪರ್ವ ದಾಸೋಹವನ್ನು ಮುಂದಿನ ತಿಂಗಳು ಮಾಡಿದರಾಯ್ತ್ತು ಎಂದು ಮನದಲ್ಲಿ ಆಲೋಚಿಸಿದ ದಾಸಿಮಯ್ಯ ಹಿಂದೂ ಮುಂದೂ ನೋಡದೇ ಜಂಗಮ್ನಿಗೆ ದಾನ ನೀಡಿಬಿಟ್ಟನಂತೆ. ಅದು ಇಂಥ ಉದ್ದೇಶಕ್ಕಾಗಿ ನೇಯ್ದದ್ದು ಎಂದು ನೆಪ ಹೇಳಬಹುದು ಎಂದು ಭಾವಿಸಿದ್ದ ಶಿವನಿಗೆ ಆಶ್ಚರ್ಯ ಮತ್ತು ಸಂತೋಷ ಒಟಿಗೇ ಆದವು. ಅದನ್ನು ತೋರಗೊಡದ ಶಿವನು ಆತನನ್ನು ಇನ್ನಷ್ಟು ಪರೀಕ್ಷಿಸುವ ಉದ್ದೇಶದಿಂದ ದಾಸಿಮಯ್ಯನ ಎದುರೇ ಆ ಅಮೂಲ್ಯ ಬಟ್ಟೆಯನ್ನು ಹರಿದುಬಿಟ್ಟನಂತೆ. ನಾನು ದಾನ ಕೋಟ್ಟ ವಸ್ತ್ರವೂ ನನ್ನಿಂದ ಕೈದಾಟಿದ ಮೇಲೆ ನನ್ನ ಒಡೆತನ ಇರುವುದಿಲ್ಲ. ಅದನ್ನು ಉಪಯೋಗಿಸುವ, ದಾನ ಸ್ವೀಕರಿಸಿದವನಿಗೆ ಬಿಟ್ಟಿದ್ದು, ಏನಾದರೂ ಮಾಡಿಕೊಳ್ಳಲಿ ಎಂದು ನಿರಾಂತಕವಾಗಿ ನಿಂತ ದಾಸಿಮಯ್ಯನನ್ನು ಕಂಡು ಶಿವನು ಕರುಣೆಯಿಂದ ಮುಂದೆ ಆತನು ನಡಿಸೆದ ಮಹಾ ಗಣಪರ್ವ ದಾಸೋಹ ಯಾವ ಅಡತಡೆಯಿಲ್ಲದೇ ಕೈಗೂಡಿತಂತೆ.

This user is a member of WikiProject Education in India