ವಿಷಯಕ್ಕೆ ಹೋಗು

ಸನಾಯ ಇರಾನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸನಾಯ ಇರಾನಿ
೨೦೧೬ ರಲ್ಲಿ ಸನಾಯ
Born೧೭ ಸೆಪ್ಟೆಂಬರ್ ೧೯೮೩
Educationಎಮ್.ಬಿ.ಎ ಪದವಿ
Alma materಸಿದೆನ್ಹಮ್ ಕಾಲೇಜು[]
Occupation(s)ನಟಿ , ನರ್ತಕಿ , ಮಾಡೆಲ್
Years active೨೦೦೫ -
Known forಮಿಲೇ ಜಬ್ ಹಮ್ ತುಮ್, ಇಸ್ ಪ್ಯಾರ್ ಕೊ ಕ್ಯಾ ನಾಮ್ ದೂ? ರಂಗ್ ರಸಿಯಾ
Spouseಮೋಹಿತ್ ಸೆಹೆಗಲ್ (m. 2016)[]

ಸನಯಾ ಇರಾನಿ (ಈಗ ಸೆಹೆಗಲ್) (ಜನನ : ೧೭ ಸೆಪ್ಟೆಂಬರ್ ೧೯೮೩)[]ಇವರು ಭಾರತೀಯ ದೂರದರ್ಶನ ನಟಿ. ಮಿಲೇ ಜಬ್ ಹಮ್ ತುಮ್ ಚಿತ್ರದಲ್ಲಿ ಗುಂಜನ್ ಮತ್ತು ಇಸ್ ಪ್ಯಾರ್ ಕೊ ಕ್ಯಾ ನಾಮ್ ದೂ? ಧಾರವಾಹಿಯಲ್ಲಿ ಖುಷಿ ಪಾತ್ರದಲ್ಲಿ ಅಭಿನಯಿಸಿ ಹೆಸರುವಾಸಿಯಾಗಿದ್ದಾರೆ. . ೨೦೧೫ ರಲ್ಲಿ ಇರಾನಿ ಝಲಕ್ ದಿಖ್ಲಾ ಜಾ ಡಾನ್ಸ್ ಶೋನ ೮ನೇ ಋತುವಿನಲ್ಲಿ ಫೈನಲಿಸ್ಟ್ ಆಗಿದ್ದರು. ನಂತರ ಮೋಹಿತ್ ಸೆಹಗಲ್ ಅವರೊಂದಿಗೆ ೨೦೧೭ ರಲ್ಲಿ ನಚ್ ಬಲಿಯೆಯಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದರು.[]

ಆರಂಭಿಕ ಜೀವನ

[ಬದಲಾಯಿಸಿ]

ಇರಾನಿ ,೧೭ ಸೆಪ್ಟೆಂಬರ್ ೧೯೮೩ ರಂದು ಮುಂಬೈನಲ್ಲಿ ಪಾರ್ಸಿ ಕುಟುಂಬದಲ್ಲಿ ಜನಿಸಿದರು. [] [] ಇವರು ಊಟಿಯ ಬೋರ್ಡಿಂಗ್ ಶಾಲೆಯಲ್ಲಿ ಏಳು ವರ್ಷಗಳ ಕಾಲ ಕಲಿತರು . []ನಂತರ ಇವರು ಸಿಡೆನ್ಹ್ಯಾಮ್ ಕಾಲೇಜಿನಿಂದ ಪದವಿ ಪಡೆದರು [] ಮತ್ತು ಮಾಡೆಲ್ ಆಗುವ ಮೊದಲು ಎಂಬಿಎ ಪದವಿಯನ್ನು ಪಡೆಯುತ್ತಿದ್ದರು. []

ವೃತ್ತಿ

[ಬದಲಾಯಿಸಿ]

ಮಾಡೆಲಿಂಗ್ ವೃತ್ತಿ (೨೦೦೫-೦೭)

[ಬದಲಾಯಿಸಿ]

ಇರಾನಿ ಇವರು ಯಶ್ ರಾಜ್ ಫಿಲ್ಮ್ ಫನಾ (೨೦೦೬)ಎಂಬ ಚಿತ್ರದಲ್ಲಿ ಮೆಹಬೂಬಾ ಎಂಬ ಕಿರು ಪಾತ್ರದಲ್ಲಿ ಅಭಿನಯಿಸುವ ಮೂಲಕ ತನ್ನ ನಟನಾ ಜೀವನಕ್ಕೆ ಪಾದಾರ್ಪಿಸಿದರು. ನಟಿ ತನ್ನ ಪಾತ್ರದ ಬಗ್ಗೆ ಮಾತನಾಡುತ್ತಾ, " ಆಕಸ್ಮಿಕವಾಗಿ ನನಗೆ ಆ ಪಾತ್ರ ಸಿಕ್ಕಿತು. ಅಮೀರ್ ಖಾನ್ ಮತ್ತು ಕಾಜೋಲ್ ನನ್ನ ನೆಚ್ಚಿನ ನಟ-ನಟಿಯರು ಆಗಿರುವುದರಿಂದ ಇದು ನನ್ನ ಒಂದು ಕನಸು ನನಸಾಯಿತು . " ಬಾಲಿವುಡ್ ತಾರೆಗಳಾದ ಶಾರುಖ್ ಖಾನ್, ಕರೀನಾ ಕಪೂರ್ ಮತ್ತು ಇತರರೊಂದಿಗೆ ಕೆಲಸ ಮಾಡುತ್ತಾ ಜಾಹೀರಾತು ಪ್ರದರ್ಶನದಲ್ಲಿ ಒಂದು ವರ್ಷ ಕಳೆದರು. ನಂತರ ಜಗ್ಜಿತ್ ಸಿಂಗ್ ರವರ ತುಮ್ಕೊ ದೇಖಾ ಎಂಬ ಚಿತ್ರದ ಮೂಲಕ ಇವರು ತಮ್ಮ ವೃತ್ತಿಜೀವನಕ್ಕೆ ಪಾದಾರ್ಪಣೆ ಮಾಡಿದರು.

ಇತರ ಪ್ರದರ್ಶನಗಳು

[ಬದಲಾಯಿಸಿ]

ಆಗಸ್ಟ್ ೨೦೧೩ ರಲ್ಲಿ, ಇರಾನಿ ತನ್ನ ನೆಚ್ಚಿನ ಸ್ನೇಹಿತೆ ದ್ರಷ್ಟಿ ಧಾಮೀಯ ಜೊತೆ ಝಲಕ್ ದಿಖ್ಲಾ ಜಾ ಎಂಬ ನೃತ್ಯ ಪ್ರದರ್ಶನದಲ್ಲಿ ಸಂಕ್ಷಿಪ್ತ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಜೂನ್ ೨೦೧೪ ರಲ್ಲಿ ಆಶಿಶ್ ಶರ್ಮಾ ಅವರ ಜೊತೆ ಝಲಕ್ ದಿಖ್ಲಾ ಜಾ ಎಂಬ ನೃತ್ಯ ಪ್ರದರ್ಶನದ ೭ನೇ ಋತುವಿನಲ್ಲಿ ಇವರು ಮತ್ತೆ ಕಾಣಿಸಿಕೊಂಡರು. ನಂತರ ಇವರು ಇಸ್ ಪ್ಯಾರ್ ಕೋ ಕ್ಯಾ ನಾಮ್ ದೂ?ಏಕ್ ಬಾರ್ ಫಿರ್! ಎಂಬ ಧಾರವಾಹಿರಲ್ಲಿ ಆಸ್ಥಾ ( ಶ್ರೇನು ಪಾರಿಖ್ ) ಅವರನ್ನು ಪರಿಚಯಿಸಲು ಕಾಣಿಸಿಕೊಂಡಿದ್ದಾರೆ.[೧೦] ಬಿಗ್ ಬಾಸ್ ೭ರ ಗ್ರ್ಯಾಂಡ್ ಫಿನಾಲೆಯಲ್ಲಿ ಆಶಿಶ್ ಶರ್ಮಾ, ಪ್ರೀತಿಕಾ ರಾವ್ ಮತ್ತು ಹರ್ಷದ್ ಅರೋರಾ ಅವರೊಂದಿಗೆ ಇರಾನಿಯವರು ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. [೧೧] ಅವರು ಮಾರ್ಚ್ ಮತ್ತು ಜೂನ್ ೨೦೧೪ ರಲ್ಲಿ ಬೇಇಂತ್ಹಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರು. [೧೨]

ರಾ.ಒನ್ (೨೦೧೧)ಚಿತ್ರದ ಸಂಗೀತ ಬಿಡುಗಡೆಯ ಕಾರ್ಯಕ್ರಮದಲ್ಲಿ ಇರಾನಿ ಜೊತೆಗೆ ಶಾರುಖ್ ಖಾನ್ ಮತ್ತು ಪೂಜಾ ಗೌರ್, ಗಿಯಾ ಮಾನೆಕ್ ಮತ್ತು ರಾಗಿಣಿ ಖನ್ನಾ

ಇವರು ಸ್ಟಾರ್ ಪ್ಲಸ್ ಪರವಾಗಿ ಯುಕೆ ಪ್ರವಾಸ ಕೈಗೊಂಡರು. [೧೩]ನಂತರ ಏಪ್ರಿಲ್ ೩೦, ೨೦೧೩ ರಂದು ಲಂಡನ್ನಲ್ಲಿ ಬರ್ಮಿಂಗ್ಹ್ಯಾಮ್ನಲ್ಲಿ ಮತ್ತು ೧ ಮೇ ೨೦೧೩ ರಂದು ಲೀಸೆಸ್ಟರ್‌ನಲ್ಲಿ ಕಾಣಿಸಿಕೊಂಡರು.ಅಲ್ಲಿ ಅಭಿಮಾನಿಗಳೊಂದಿಗೆ ಭೇಟಿಯಾಗಿ ಶುಭಾಶಯ ಕೋರಿದರು ಹಾಗೂ ಅವರನ್ನು ಅಲ್ಲಿ ಭಾರೀ ಜನಸಮೂಹ ಸ್ವಾಗತಿಸಿತು. [೧೪]೨೫ ನವೆಂಬರ್ ೨೦೧೩ ರಂದು ಸ್ಟಾರ್ ಪರಿವಾರ್ ಲೈವ್ ಕಾರ್ಯಕ್ರಮಕ್ಕಾಗಿ ಇರಾನಿ ಎರಡನೇ ಬಾರಿಗೆ ಲಂಡನ್ಗೆ ಭೇಟಿ ನೀಡಿದರು. [೧೫] ಆರ್ಟೆಸಿಯಾ ಶಾಪಿಂಗ್ ಫೆಸ್ಟಿವಲ್ ನಲ್ಲಿ ಪಾಲ್ಗೊಳ್ಳಲು ಇವರು ೮ ಡಿಸೆಂಬರ್ ೨೦೧೩ ರಂದು ಲಾಸ್ ಎಂಜಲೀಸ್ಸಿ.ಎಗೆ ಭೇಟಿ ನೀಡಿದರು . [೧೬]

ಮಾಧ್ಯಮ

[ಬದಲಾಯಿಸಿ]

ಇವರು ಪೀಪಲ್ ಮ್ಯಾಗಸಿನ್ ನಲ್ಲಿ (ಭಾರತ) ನಲವತ್ತು ಅತ್ಯಂತ ಸುಂದರ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ದೂರದರ್ಶನ ನಟಿ. ನಟನೆಯ ಹೊರತಾಗಿ, ಇವರು ನೃತ್ಯ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಕೆ-ಮೂಲದ ಪತ್ರಿಕೆಯಲ್ಲಿ ಈಸ್ಟರ್ನ್ ಐ ಇವರನ್ನು ೨೦೧೨ ರಲ್ಲಿ ೫೦ ಸೆಕ್ಸಿಯೆಸ್ಟ್ ಏಷ್ಯನ್ ಮಹಿಳಾ ಪಟ್ಟಿಯಲ್ಲಿ ಸ್ಥಾನವನ್ನು ಕೊಟ್ಟಿತು. [೧೭] ಪುನಃಈಸ್ಟರ್ನ್ ಐ ಪತ್ರಿಕೆಯಲ್ಲಿ ಹತ್ತನೇ ಸ್ಥಾನವನ್ನು ಪಡೆದುಕೊಂಡರು. ೨೦೧೪ ರಲ್ಲಿ, ರೆಡಿಫ್ನಲ್ಲಿ ಇವರು ಟಾಪ್ ೧೦ ಅತ್ಯುತ್ತಮ ದೂರದರ್ಶನ ನಟಿಯರಲ್ಲಿಯೂ ಸ್ಥಾನ ಪಡೆದರು. [೧೮] ನವೆಂಬರ್ ೨೦೧೪ ರಲ್ಲಿ, ಬಿಗ್ ಬಾಸ್ ೮ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಲು ಸನಾಯಾರವರನ್ನು ಸಂಪರ್ಕಿಸಲಾಯಿತು ಆದರೆ ಇವರು ಆ ಅವಕಾಶವನ್ನು ನಿರಾಕರಿಸಿದರು. [೧೯]

ಫಿಲ್ಮೋಗ್ರಾಫಿ

[ಬದಲಾಯಿಸಿ]
ವರ್ಷ ಸಿನಿಮಾ ಪಾತ್ರ ನಿರ್ದೇಶಕ
೨೦೦೬ ಫನಾ ಮೆಹಬೂಬಾ ಕುನಾಲ್ ಕೊಹ್ಲಿ
೨೦೧೮ ಡಮ್ ಡಮ್ ಡಮ್ರೂ[೨೦] ಡಾ.ಸ್ನೇಹ ಆಕಾಶ್ ಗೋಯ್ಲಾ
ಪೀಹು[೨೧] ಪೀಹು
೨೦೧೯ ಘೋಸ್ಟ್ ಸಿಮ್ರನ್ ಸಿಂಗ್ ವಿಕ್ರಮ್ ಭಟ್

ವೆಬ್ ಸರಣಿ

[ಬದಲಾಯಿಸಿ]
ವರ್ಷ ಹೆಸರು ಪಾತ್ರ ವೇದಿಕೆ ಉಲ್ಲೇಖ
೨೦೧೮ ವೋಡ್ಕಾ ಶಾಟ್ಸ್ ಕೆಯಾ ಶರ್ಮಾ ಯೂಟ್ಯೂಬ್‌ [೨೨]
ಜಿಂದಾಬಾದ್ ಸಾರಾ ಸಯೀದ್ ಜಿಯೋ ಸಿನೆಮಾ [೨೩]

ಟೆಲಿವಿಷನ್

[ಬದಲಾಯಿಸಿ]

ಅತಿಥಿ ಪಾತ್ರಗಳು

[ಬದಲಾಯಿಸಿ]
  • ೨೦೧೨ : ಸ್ಟಾರ್ ಪರಿವಾರ್ ಕಾ ತ್ಯೋಹರ್
  • ೨೦೧೩ : ಸಹ - ನಿರೂಪಕರಾಗಿ ಇಶ್ಕ್ ವಾಲಾ ಲವ್ ( ಕರಣ್ ಗ್ರೋವರ್ ಅವರೊಂದಿಗೆ)
  • ೨೦೧೩ : ಇಸ್ ಪ್ಯಾರ್ ಕೋ ಕ್ಯಾ ನಾಮ್ ದೂ? . . . ಏಕ್ ಬಾರ್ ಫಿರ್ ಖುಷಿ (ಆಸ್ಥಾರವರನ್ನು ಪರಿಚಯಿಸಲು) [೧೦]

ವೈಯಕ್ತಿಕ ಜೀವನ

[ಬದಲಾಯಿಸಿ]

೨೧೦೫ ರ ಡಿಸೆಂಬರ್‌ನಲ್ಲಿ ಇರಾನಿಯವರು ಮೋಹಿತ್ ಸೆಹಗಲ್‌ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ನಂತರ ಗೋವಾದಲ್ಲಿ ೨೫ ಜನವರಿ ೨೦೧೬ ರಂದು ಮೋಹಿತ್ ರವರೊಂದಿಗೆ ವಿವಾಹವಾದರು. [೨೪] [೨೫] [೨೬]

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

[ಬದಲಾಯಿಸಿ]
ವರ್ಷ ಪ್ರಶಸ್ತಿ ವರ್ಗ ಕೆಲಸ ಫಲಿತಾಂಶ
೨೦೦೮ ಭಾರತೀಯ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿ Gr8! ಪೇಸ್ (ಸ್ತ್ರೀ) ಮಿಲೀ ಜಬ್ ಹಮ್ ತುಮ್ ಗೆಲುವು[೨೭]
೨೦೧೨ ಪೀಪಲ್ಸ್ ಚಾಯ್ಸ್ ಅವಾರ್ಡ್ಸ್ ಇಂಡಿಯಾ ನೆಚ್ಚಿನ ಆನ್-ಸ್ಕ್ರೀನ್ ಜೋಡಿ (ಬರುನ್ ಸೋಬ್ತಿಯೊಂದಿಗೆ ಹಂಚಿಕೊಳ್ಳಲಾಗಿದೆ) ಇಸ್ ಪ್ಯಾರ್ ಕೋ ಕ್ಯಾ ನಾಮ್ ದೂನ? ಗೆಲುವು[೨೮]
ಭಾರತೀಯ ಟೆಲ್ಲಿ ಪ್ರಶಸ್ತಿಗಳು ಅತ್ಯುತ್ತಮ ತೆರೆಯ ದಂಪತಿಗಾಗಿ ಭಾರತೀಯ ಟೆಲ್ಲಿ ಪ್ರಶಸ್ತಿ ( ಬರುನ್ ಸೋಬ್ತಿಯೊಂದಿಗೆ ) ಗೆಲುವು[೨೯]
೨೦೧೩ ಭಾರತೀಯ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿಗಳು ಅತ್ಯುತ್ತಮ ಜನಪ್ರಿಯ ನಟಿ Nominated[೩೦]
ಬೋರೊಪ್ಲಸ್ ಗೋಲ್ಡ್ ಪ್ರಶಸ್ತಿ ಬೋರೊಪ್ಲಸ್ ಫೇಸ್ ಆಫ್ ದಿ ಇಯರ್ ಚಂಚನ್ ಗೆಲುವು[೩೧]
೨೦೧೪ ಭಾರತೀಯ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿಗಳು ಅತ್ಯುತ್ತಮ ನಟಿ(ಜನಪ್ರಿಯ) Nominated[೩೨]
ಭಾರತೀಯ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿಗಳು ಜಿಆರ್ 8! ವರ್ಷದ ಸಾಧಕಿ Nominated[೩೨]

ಉಲ್ಲೇಖಗಳು

[ಬದಲಾಯಿಸಿ]
  1. "Sanaya Irani turns 33 today: Lesser known facts about 'Iss Pyaar Ko Kya Naam Doon' actress". 17 September 2016.
  2. Naithani, Priyanka (18 October 2012). "From reel to real life jodis". The Times of India. Retrieved 4 June 2019.
  3. "Happy Birthday Sanaya Irani: Lesser known facts about the Iss Pyaar Ko Kya Naam Doon actor". The Indian Express. 17 September 2017. Retrieved 16 March 2020.
  4. "I want to win Nach Baliye for Mohit: Sanaya Irani - Times of India". The Times of India (in ಇಂಗ್ಲಿಷ್). Retrieved 16 March 2020.
  5. "Sanaya Irani brimming with joy a day before her birthday, read to know". 17 September 2016.
  6. "Happy Birthday Sanaya Irani: Lesser known facts about the Iss Pyaar Ko Kya Naam Doon actor". Indian Express. 17 September 2017.
  7. "From Fanaa to Mile Jab Hum Tum". Rediff.com. 2004-12-31. Retrieved 2014-04-19.
  8. "From Fanaa to Mile Jab Hum Tum". Rediff.com. Retrieved 2012-06-09.
  9. "Happy Birthday Sanaya Irani: Lesser known facts about the Iss Pyaar Ko Kya Naam Doon actor". The Indian Express (in Indian English). 2017-09-17. Retrieved 2019-06-10.
  10. ೧೦.೦ ೧೦.೧ Second season of Iss Pyaar Ko Kya Naam Doon – Daily Bhaskar
  11. "Bigg Boss: 'Don't like Tanishaa anymore' - The Times of India". Timesofindia.indiatimes.com. 2013-12-20. Retrieved 2014-04-19.
  12. "Eid Special: Akshay Kumar celebrates with Beintehaa, Balika Vadhu and Rangrasiya cast – View pics!". 12 July 2014.
  13. "Star TV’s ‘Khushi’ to visit UK cities this month | BizAsia UK | The UK's only Asian media news site". Media247.co.uk. Archived from the original on 2014-03-08. Retrieved 2014-04-19.
  14. Mercury, Leicester (2012-05-02). "Soap star 'overwhelmed' by welcome from crowds". Leicester Mercury. Archived from the original on 2014-06-08. Retrieved 2014-04-19.
  15. "Sanaya Irani to attend Star Parivaar Live | BizAsia UK | The UK's only Asian media news site". Media247.co.uk. Archived from the original on 2014-03-08. Retrieved 2014-04-19.
  16. "Sanaya Irani (Khushi of IPKKND) coming to LA on 8th, 9th Dec | Gossip". Metromasti.com. 2013-02-15. Archived from the original on 2014-03-08. Retrieved 2014-04-19.
  17. "Priyanka Chopra named world's sexiest Asian woman". archive.mid-day.com. Archived from the original on 16 ಸೆಪ್ಟೆಂಬರ್ 2018. Retrieved 19 July 2018.
  18. "Television's top 10 actresses". 2 July 2014.
  19. "Sanaya Irani and Rucha Hasabnis as wild card entrants in Bigg Boss 8". 23 October 2014. Archived from the original on 1 ಜುಲೈ 2018. Retrieved 16 ಮಾರ್ಚ್ 2020.
  20. Telly News (21 January 2018). "Dum Dum Dumroo (2018)". Myeduniya. Retrieved 2018-02-02.
  21. "Sanaya Irani's short-film 'Pihu' to release this week". 18 June 2018.
  22. Sreejeeta Sen (26 December 2017). "Sanaya Irani is back but this time in a web-series titled Vodka Shots". Bollywood Life. Retrieved 2018-02-02.
  23. "Sanaya Irani, Vikram Bhatt, Sana Khan in Vikram Bhatt's web-series, Zindabaad". 29 May 2018.
  24. "See pics: Sanaya Irani, Mohit Sehgal get engaged". 15 December 2015.
  25. "Sanaya Irani and Mohit Sehgal ties the knot in Goa". The Indian Express.
  26. "Sanaya Irani: Women just want to take a selfie and men just want to steal a kiss".
  27. "Indian Television Academy Awards 2008". Archived from the original on 2010-08-20. Retrieved 2012-05-28.
  28. "2012 And the winners are..." People's Choice Awards India. Archived from the original on 25 ಫೆಬ್ರವರಿ 2014. Retrieved 30 November 2012.
  29. "Telly awards 2012 Popular Awards winners". Archived from the original on 2012-07-02. Retrieved 2020-03-16.
  30. "The ITA Awards 2012 - Popular Top-5". Archived from the original on 2013-10-29. Retrieved 2020-03-16.
  31. "Extra Category Awards 2012". GoldAwards. 1999-02-22. Retrieved 2014-04-19.
  32. ೩೨.೦ ೩೨.೧ "IndianTelevisionAcademy.com". indiantelevisionacademy.com. Archived from the original on 2015-07-25. Retrieved 2020-03-16.