ಸರೋಜಾ ಶ್ರೀನಾಥ್
'ಸರೋಜಾ ಶ್ರೀನಾಥ್' | |
---|---|
Born | ಮೈಸೂರು (ಹಳೆಯ ಮೈಸೂರು ಜಿಲ್ಲೆ) |
Nationality | ಭಾರತೀಯ |
Education | ಪದವೀಧರೆ. |
Alma mater | (ಮೈಸೂರು ವಿಶ್ವವಿದ್ಯಾಲಯ) |
Occupation(s) | ನೃತ್ಯ ಸಂಯೋಜಕಿ, ಕಲಾವಿದೆ. ಸೃಜನಶೀಲಬರಹಗಾರ್ತಿ ಹಾಗೂ ಶಾಸ್ತ್ರೀಯ ಸಂಗೀತಜ್ಞೆ. |
Known for | "ಸಿಂಗಪುರದ ಕನಕ ಸಭಾ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆಯ ಸಹ-ನಿರ್ದೇಶಕಿ", ಸಂಯೋಜಕಿ,ಹಾಗೂ ಶಾಸ್ತ್ರೀಯ ಸಂಗೀತ ವಿದುಷಿ. |
ಸರೋಜಾ, ಮೈಸೂರಿನಲ್ಲಿ ಹುಟ್ಟಿ ಬೆಳೆದವರು. ಅವರ ಮನೆಯಲ್ಲಿ ಎಲ್ಲರೂ ನೃತ್ಯ ಸಂಗೀತ, ಹಾಗೂ ಸಾಹಿತ್ಯಾಸಕ್ತರು. ಮನೆಯವಾತಾವರಣದಲ್ಲಿ ಮಕ್ಕಳೆಲ್ಲಾ ಶಾಸ್ತ್ರೀಯ ಸಂಗೀತವನ್ನು ಕಲಿಯುವುದು ಅನಿವಾರ್ಯವಾಗಿತ್ತು. ಮನೆಯಲ್ಲಿ ಹರಿಕಥೆ, ಹಾಡು, ಜಾನಪದ ನೃತ್ಯ, ನಾಟಕದ ಪರಿಚವನ್ನೂ. ಹೆಸರಾಂತ ಲೇಖಕ ಮೈಸೂರರಮನೆಯ ಆಸ್ಥಾನ್ ವಿದ್ವಾನ್, ದೇವುಡು ನರಸಿಂಹಶಾಸ್ತ್ರಿ,ಗಳು ಅಜ್ಜ. ಮನೆಯಲ್ಲಿ ಭಗವದ್ಗೀತೆಯ ವ್ಯಾಖ್ಯಾನ. ಹಲವಾರು ಖ್ಯಾತಸಾಹಿತಿಗಳು, ಜಿ.ಪಿ.ರಾಜರತ್ನಂ, ತ.ರಾ.ಸು, ಆನಂದ,ಮನೆಗೆ ಭೇಟಿನೀಡುತ್ತಿದ್ದರು. ಮನೆಯಲ್ಲಿ ಪುಸ್ತಕಗಳನ್ನು ಕೊಂಡು ಓದುವ ಪರಿಪಾಠವಿತ್ತು. ಬಾಲ್ಯದ ದಿನಗಳಲ್ಲಿ ದೊಡ್ಡಪ್ಪನವರ ರಾಮಾಯಣ ಪಾರಾಯಣ, ಸರೋಜಾರವರ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿತು.
ವಿದ್ಯಾಭ್ಯಾಸ
[ಬದಲಾಯಿಸಿ]ಸರೋಜರವರು, ಮೈಸೂರಿನಲ್ಲಿ ಪದವಿಗಳಿಸಿ, ಚೆನ್ನೈನ 'ಸೆಂಟ್ರೆಲ್ ಕಾಲೇಜ್ ಆಫ್ ಕರ್ನಾಟಿಕ್ ಮ್ಯೂಸಿಕ್' ನಲ್ಲಿ ಸಂಗೀತ ವಿದ್ವಾನ್ ಡಿಪ್ಲೊಮ ಗಳಿಸಿದರು.
ಬೆಂಗಳೂರಿನಲ್ಲಿ
[ಬದಲಾಯಿಸಿ]ಚೆನ್ನೈ ನಿಂದ ಬೆಂಗಳೂರಿಗೆ ಬಂದು 'ಡ್ರಾಮೆಟಿಕ್ ಆರ್ಟ್ ಅಂಡ್ ಕ್ರಾಫ್ಟ್ ಕೋರ್ಸ್' ನಲ್ಲಿ ಪರಿಣಿತಿಗಳಿಸಿದರು.
ಮದುವೆ
[ಬದಲಾಯಿಸಿ]೧೯೬೨ ರಲ್ಲಿ ಶ್ರೀನಾಥರೊಡನೆ ಮದುವೆಯಾಗಿ ಚೆನ್ನೈನಲ್ಲಿ ಸಂಸಾರ ಹೂಡಿದರು.
ಮುಂಬಯಿನಲ್ಲಿ
[ಬದಲಾಯಿಸಿ]ಮುಂಬಯಿಗೆ ೧೯೭೨ ರಲ್ಲಿ ಬಂದು ನೆಲಸಿದರು. ಮುಂಬಯಿ ವಿಶ್ವವಿದ್ಯಾಲಯದ ಸಂಗೀತ ಶಾಸ್ತ್ರಜ್ಞೆಯಾಗಿ ಭರತನಾಟ್ಯ ಪ್ರಭಾಗದ ಮುಖ್ಯಸ್ಥೆಯಾಗಿ ಎರಡು ದಶಕಗಳಕಾಲ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. 'ಭರತ ನಾಟ್ಯದಲ್ಲಿ ನೃತ್ಯಮೀಮಾಂಸೆ', ಎಂಬ ವಿಷಯದಲ್ಲಿ ಆಳವಾದ ಅಧ್ಯಯನಮಾಡಿದ್ದಾರೆ.ಕಾಲೇಜಿನ ದಿನಗಳಲ್ಲಿ ಪಂಪರಾಮಾಯಣ, ಜೈನರಾಮಾಯಣ, ಕುವೆಂಪುರವರ 'ರಾಮಾಯಣ ದರ್ಶನಂ' ಬಹಳಮೆಚ್ಚುಗೆಯಾಗಿತ್ತು. ಮುಂಬಯಿ ಮಹಾವಿದ್ಯಾಲಯದಲ್ಲಿ 'ನಲಂದಾ ನೃತ್ಯಕಲಾ ಮಹಾವಿದ್ಯಾಲಯ'ದಲ್ಲಿ ಡಾನ್ಸ್ ಡಿಗ್ರಿ ಕೋರ್ಸ್ ನಲ್ಲಿ ಅಧ್ಯಾಪಕಿಯಾಗಿ ಸೇರಿಕೊಂಡರು. ವಿದ್ಯಾರ್ಥಿಗಳನ್ನು ಸ್ಪರ್ಧೆಗೆ ತಯಾರುಮಾಡುವಾಗ, ಸ್ವಂತ ಕೃತಿಗಳನ್ನು ಬರೆದು ಸಂಗೀತ ಸಂಯೋಜನೆ ಮಾಡುತ್ತಿದ್ದರು. ಈ ತರಹದ ನೃತ್ಯ ಸಂಯೋಜನಾ ಕಾರ್ಯಕ್ರಮಗಳು ಕನ್ನಡವಲ್ಲದೆ,ಮರಾಠಿ,ತೆಲುಗು,ತಮಿಳು,ಹಿಂದಿ, ಸಂಸ್ಕೃತ ಭಾಷೆಗಳಲ್ಲಿ ಮೂಡಿಬಂದವು.
ಸಿಂಗಪುರದಲ್ಲಿ
[ಬದಲಾಯಿಸಿ]ನಿವೃತ್ತಿಯ ನಂತರ 'ಸರೋಜಾ ಶ್ರೀನಾಥ್' ರವರು, [೧]ಸಿಂಗಪುರದಲ್ಲಿ ತಮ್ಮ ಮಗಳು ಡಾ.ಸಿರಿರಾಮ [೨] ರವರ ಜೊತೆಯಲ್ಲಿ ಸಿಂಗಪುರದಲ್ಲಿ ವಾಸ್ತ್ಯವ್ಯ ಹೂಡಿದ್ದಾರೆ. ತಮ್ಮ ೮೦ರ ವಯಸ್ಸಿನಲ್ಲೂ ನಿರಂತರ ಅಧ್ಯಯನ, ವಿಷಯ ಸಂಗ್ರಹಣೆ ಮತ್ತು ಬರೆಯುವ ಹವ್ಯಾಸವನ್ನು ಮೈಗೂಡಿಸಿಕೊಂಡಿದ್ದಾರೆ. ಮಗಳು,ಡಾ.ಸಿರಿರಾಮ ಜೊತೆಗೆ ಸೇರಿಕೊಂಡು 'ಕನಕಸಭಾ ಪರ್ಫಾರ್ಮಿಂಗ್ ಆರ್ಟ್ಸ್,' [೩] ಎಂಬ ಎಂಬ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಯನ್ನು ಹುಟ್ಟುಹಾಕಿ ಯಶಸ್ವಿಯಾಗಿನಡಿಸಿಕೊಂಡು ಬರುತ್ತಿದ್ದಾರೆ.
ಪರಿವಾರ
[ಬದಲಾಯಿಸಿ]ಡಾ. ರಾಮಸ್ವಾಮಿ, ಅಳಿಯ. ಭರತನಾಟ್ಯ ಪ್ರವೀಣೆ, ಮಗಳು ಡಾ.ಸಿರಿರಾಮ, ಮೊಮ್ಮಗಳು ಅಮರಾ. ಮನೆಯಲ್ಲಿ ಒಳ್ಳೆಯ ಪುಸ್ತಕ ಭಂಡಾರವಿದೆ.
ಬರವಣಿಗೆ
[ಬದಲಾಯಿಸಿ]ಸಂಗೀತ ಅಕಾಡೆಮಿ ಸಂಗೀತಕ್ಕೆ ನೆರವಾಗುವ ಭಾಷೆಯನ್ನು ಟೈಪ್ ರೈಟರ್ ಗೆ ಅಳವಡಿಸುವ ವಿಧಾನವನ್ನು ವಿವರಿಸಿ ಬರೆದ ಲೇಖನ ಪ್ರಕಟಗೊಂಡಾಗ ಬಹಳ ಮಂದಿ ಸಂಗೀತಾಸಕ್ತರ ಗಮನ ಸೆಳೆಯಿತು. ಸರೋಜಾ ಶ್ರೀನಾಥ್ ಬರೆದ ಅನೇಕ ಲೇಖನ,ಮತ್ತು ಕಥನಗಳಲ್ಲಿ ಕೆಲವು ಪ್ರಮುಖವಾದವುಗಳು ಹೀಗಿವೆ :
- ೧೯೬೨ 'ಗಮಕ ಕಲೆಯಲ್ಲಿ ನವರಸಗಳು' ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿಗೆ ಲೇಖನ ಬರೆದು ಕಳಿಸಿದರು.
- ಪ್ರಜಾಮತ ಪತ್ರಿಕೆಗೆ, 'ಕರ್ನಾಟಕ ಸಂಗೀತ ಎಂಬ ಟೈಪ್ ರೈಟರ್ ಭಾಷೆ'ಯನ್ನು ಲಿಪಿ,ಲೇಖನ ಬರೆದುಕಳಿಸಿದ್ದರು.
- 'ಋಷಿಕಾ' ಲೇಖನ
- ಅಮರ ರಾಮಾಯಣ [೪]
- ಮೈಸೂರಿನಿಂದ ಮೌಂಟ್ ಟಾಂಬೋ ಎಂಬ ಪ್ರವಾಸಕಥನ[೫]
ವಿದೇಶಗಳಲ್ಲಿ ರಾಮಾಯಣ,ಮಹಾಭಾರತ
[ಬದಲಾಯಿಸಿ]ಸರೋಜಾ ಶ್ರೀನಾಥ್ ತಮ್ಮ ಮಗಳು ಡಾ.ಸಿರಿರಾಮ ಜೊತೆ, ರಾಮಾಯಣ-ಮಹಾಭಾರತಗಳ ನೃತ್ಯರೂಪಕಗಳ ಕಾರ್ಯಕ್ರಮಗಳನ್ನು ಇಂಡೋನೇಶಿಯ[೬] ಮೊದಲಾದ ಮುಸ್ಲಿಂರಾಷ್ಟ್ರಗಳಲ್ಲಿ ಪ್ರದರ್ಶಿಸಿದರು.
ಉಲ್ಲೇಖಗಳು
[ಬದಲಾಯಿಸಿ]- ↑ kannada.oneindia.com, November 13, 2010, ಸಾಹಿತ್ಯ ಸಮ್ಮೇಳನದಲ್ಲಿ ಮಿಂಚಿದ ಸಿಂಗನ್ನಡಿಗರು.
- ↑ Evolving Synergies: Celebrating Dance in Singapore, edited by Stephanie Burridge, Caren Cariño
- ↑ kanakasabha.com
- ↑ ಮಂಗೋಲಿಯಾ ರಾಮಾಯಣ,ರಾಮನ ಮುಂದೆ ನೂರು ರಾವಣ ವಿವಿಧ ದೇಶಗಳ ರಾಮಾಯಣದ ಸರಳಾನುವಾದ-ವಿದುಷಿ ಸರೋಜಾ ಶ್ರೀನಾಥ್,ಅಭಿಜಿತ್ ಪ್ರಕಾಶನ, ಮುಂಬಯಿ. ಕನ್ನಡಪ್ರಭ,೦೩,ಆಗಸ್ಟ್,೨೦೧೪
- ↑ "ಉದಯವಾಣಿ,ಆಗಸ್ಟ್,೦೩,೨೦೧೬, 'ಮೈಸೂರಿನಿಂದ ಮೌಂಟ್ ಟಾಂಬೋ', ಸರೋಜ ಶ್ರೀನಾಥರ ಎರಡನೆ ಕೃತಿ ಬಿಡುಗಡೆ, ಕರ್ನಾಟಕ ಸಂಘ ಮುಂಬಯಿನ ಸಮರಸ ಭವನದಲ್ಲಿ". Archived from the original on 2016-08-27. Retrieved 2016-09-24.
- ↑ In the world’s largest Muslim nation, Hindu epics survive and thrive
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ['ಅಮರ ರಾಮಾಯಣದ ಸರೋಜಾ ಶ್ರೀನಾಥ್', ಸಂದರ್ಶನ : ಗೀತಾ ಮಂಜುನಾಥ್, ಸ್ನೇಹ ಸಂಬಂಧ,ಸೆಪ್ಟೆಂಬರ್, ೨೦೧೬, ಪು-೫-೯]
- 'ಕರ್ನಾಟಕ ಮಲ್ಲ ದಿನಪತ್ರಿಕೆ', ೧೬, ಏಪ್ರಿಲ್,೨೦೧೭, ಪು: ೦೨,ಸಾಪ್ತಾಹಿಕ ಪುರವಣಿ, 'ನನ್ನ ತವರೂರು ಮೈಸೂರು'-ಸರೋಜಾ ಶ್ರೀನಾಥ್, ಸಿಂಗಪುರ