ವಿಷಯಕ್ಕೆ ಹೋಗು

ಸಲೀಮ್ ಚಿಶ್ತಿಯ ಗೋರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶೇಖ್ ಸಲೀಮ್ ಚಿಸ್ತಿಯ ಗೋರಿಯನ್ನು ಭಾರತದಲ್ಲಿನ ಮೊಘಲ್ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ಸಲೀಂ ಚಿಶ್ತಿಯ ಗೋರಿ ಭಾರತದಲ್ಲಿನ ಮೊಘಲ್ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದು ಎಂದು ಪ್ರಸಿದ್ಧವಾಗಿದೆ. ಇದನ್ನು 1580 ಮತ್ತು 1581 ರ ಅವಧಿಯಲ್ಲಿ ನಿರ್ಮಿಸಲಾಯಿತು, ಇದರ ಜೊತೆಗೆ ಫತೇಪುರ್ ಸಿಕ್ರಿಯಲ್ಲಿರುವ ಜನಾನಾ ರೌಜಾ ಬಳಿ ಮತ್ತು ದಕ್ಷಿಣಾಭಿಮುಖವಾಗಿ ಬುಲಂದ್ ದರ್ವಾಜ಼ಾ ಕಡೆಗೆ ಸಾಮ್ರಾಜ್ಯಶಾಹಿ ಸಂಕೀರ್ಣವನ್ನು ನಿರ್ಮಿಸಲಾಯಿತು. ಇದನ್ನು ಜಮಾ ಮಸೀದಿಯ ಚೌಕಾಂಗಣದಲ್ಲಿ ನಿರ್ಮಿಸಲಾಯಿತು.[] ಇದು ಅಜ್ಮೀರ್‌ನ ಖ್ವಾಜಾ ಮೊಯಿನುದ್ದೀನ್ ಚಿಶ್ತಿಯ ವಂಶಸ್ಥ ಮತ್ತು ಸಿಕ್ರಿಯಲ್ಲಿನ ಪರ್ವತ ಶ್ರೇಣಿಯ ಮೇಲಿನ ಗುಹೆಯಲ್ಲಿ ವಾಸಿಸುತ್ತಿದ್ದ ಸೂಫಿ ಸಂತ ಸಲೀಮ್ ಚಿಸ್ತಿಯ (1478 - 1572) ಸಮಾಧಿ ಸ್ಥಳವನ್ನು ಹೊಂದಿದೆ.[] ತನ್ನ ಮಗನ ಜನನದ ಬಗ್ಗೆ ಮುನ್ಸೂಚನೆ ನೀಡಿದ ಸೂಫಿ ಸಂತನಿಗೆ ಗೌರವಸೂಚಕವಾಗಿ ಅಕ್ಬರ್ ಈ ಸಮಾಧಿಯನ್ನು ನಿರ್ಮಿಸಿದನು. ಆ ಮಗನಿಗೆ ಸೂಫಿ ಸಂತನ ಹೆಸರೇ ಅಂದರೆ ರಾಜಕುಮಾರ ಸಲೀಂ ಎಂದು ಹೆಸರಿಡಲಾಯಿತು. ಇದೇ ಮಗು ಅಕ್ಬರ್‌ನ ನಂತರ ಮೊಘಲ್ ಸಾಮ್ರಾಜ್ಯದ ಸಿಂಹಾಸನಕ್ಕೆ ಜಹಾಂಗೀರ್ ಆಗಿ ನೇಮಕಗೊಂಡಿತು.

ಸಂಕೀರ್ಣವಾದ ಜಾಲರಿ, ಕಲ್ಲಿನ ಜಾಲಂದರ ಕೆಲಸದ ಕಿಟಕಿಯಿಂದ ಜಮಾ ಮಸೀದಿಯ ಚೌಕಾಂಗಣವನ್ನು ನೋಡಬಹುದು
ಒಳಗಿನ ಸಮಾಧಿಯ ಮೇಲೆ ಕಟ್ಟಿಗೆಯ ಮೇಲಾವರಣ, ಜೊತೆಗೆ ನೇಕರ್‌ನ ಕೆತ್ತಿದ ವಿನ್ಯಾಸವಿದೆ

ಭಕ್ತರು ಸಂತನ ಆಶೀರ್ವಾದವನ್ನು ಕೇಳುತ್ತಾರೆ ಮತ್ತು ತಮ್ಮ ಬಯಕೆಗಳ ಈಡೇರಿಕೆಯನ್ನು ಕೋರುತ್ತಾರೆ. ಮುಖ್ಯ ಸಮಾಧಿ ಕಟ್ಟಡದ ಅಮೃತಶಿಲೆಯ ಪರದೆಗಳ ಮೇಲೆ ದಾರವನ್ನು ಕಟ್ಟುವುದು ಸಂತನಿಗೆ ಅವರ ಇಚ್ಛೆಯ ನಿರಂತರ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಂಬಲಾಗಿದೆ. ಈ ಸಮಾಧಿಯು ಮಕ್ಕಳ ಜನನದ ಆಶೀರ್ವಾದಕ್ಕೆ ಹೆಸರುವಾಸಿಯಾಗಿದೆ. ಇದು ಭಕ್ತರಿಗೆ ಆಶೀರ್ವಾದ ನೀಡುವ ಅತ್ಯುತ್ತಮ ಮೇಲಾವರಣ ಕಟ್ಟಡಗಳನ್ನು ಹೊಂದಿದೆ ಎಂದು ಕೂಡ ನಂಬಲಾಗಿದೆ.

ಛಾಯಾಂಕಣ

[ಬದಲಾಯಿಸಿ]
ಸಲೀಂ ಚಿಶ್ತಿಯ ಗೋರಿಯ ಸುತ್ತಲಿನ ಎಲ್ಲ ಜಾಲರಿಗಳ ಸಂಕಲನ ಇಲ್ಲಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Fatehpur Sikri". Imperial Gazetteer of India (v. 12). Oxford. pp. 84–85.
  2. "World Heritage Sites - Fatehpur Sikri (1986), Uttar Pradesh". Archaeological Survey of India (ASI) website. Archived from the original on 2011-09-05. Retrieved 2020-11-04.


ಹೊರಗಿನ ಕೊಂಡಿಗಳು

[ಬದಲಾಯಿಸಿ]