ವಿಷಯಕ್ಕೆ ಹೋಗು

ಸಾರ್ಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಇದು ಕನ್ನಡದ ಹೆಸರುವಾಸಿ ಕಾದಂಬರಿಗಾರ ಎಸ್.ಎಲ್.ಭೈರಪ್ಪನವರ ಒಂದು ಕಾದಂಬರಿ. ಭಾರತದಲ್ಲಿ ನಡೆದ ಧರ್ಮಗಳ ತಿಕ್ಕಾಟದ ಕುರಿತ ಕಾದಂಬರಿ. ಸಾರ್ತ ಒಂದು ಹಳೆಯ ಪದವಾಗಿದ್ದು, ಸರಕು ಸಮಾನು ಗಳನ್ನು ಹೊತ್ತು ಸಾಗಿಸುವ ಜನಗಳ ಗುಂಪು ಮತ್ತು ಜನಗಳ ಪ್ರಯಾಣವನ್ನು ಸೂಚಿಸುತ್ತದೆ.ಈ ಕಾದಂಬರಿಯು ಕ್ರಿಸ್ತ ಶಕ ೮ನೇ ಶತಮಾನದಲ್ಲಿ ಭಾರತದಲ್ಲಿ ಆದ ರಾಜಕೀಯ, ಧಾರ್ಮಿಕ, ಮತ್ತು ಆಧ್ಯಾತ್ಮಿಕ ಸಂಗತಿಗಳ ಆಧಾರದಮೇಲೆ ರಚಿತವಾಗಿದೆ.ಐತಿಹಾಸಿಕ ವ್ಯಕ್ತಿಗಳಾದ ಆದಿ ಶಂಕರಾಚಾರ್ಯ, ಮಂಡನ ಮಿಶ್ರ, ಉಭಯ ಭಾರತಿ, ಕುಮಾರಿಲ ಭಟ್ಟರನ್ನು, ಮತ್ತು ಹಳೆಯ ನಳಂದ ವಿಶ್ವವಿದ್ಯಾನಿಲಯಗಳನ್ನು ಒಳಗೊಂಡಿದೆ.ಈ ಕಾದಂಬರಿಯು ಸಂಸ್ಕೃತ ಮತ್ತು ಹಿಂದಿಗೆ ಭಾಷಾಂತರಿಸಲ್ಪಟ್ಟಿದೆ.

"ನಾಗಭಟ್ಟ, ಮತ್ತು ಚಂದ್ರಿಕೆ, ಕಾದಂಬರಿಯಲ್ಲಿ ಬರುವ ಎರಡು ಮುಖ್ಯ ಪಾತ್ರಗಳು ಶಿರಚ್ಛೇದನದ ಶಿಕ್ಷೆ ಯಿಂದ ನಾಗಭಟ್ಟನನ್ನು ರಕ್ಷಿಸಲು ನವಾಬನಿಗೆ ತನ್ನನ್ನು ಅರ್ಪಿಸಿಕೊಂಡು ಬೇಡದ ಬಸಿರನ್ನು ಹೊತ್ತು ಹಿಂಸೆ ಪಡುವ ಚಂದ್ರಿಕೆಯ ಪಾತ್ರ ಮನಸ್ಸಿಗೆ ನಾಟುವಂತಿದೆ ಕತೆಯ ಅಂತ್ಯದಲ್ಲಿ ತನ್ನ ಗುರುವಿನ ಪ್ರೇರಣೆಯಿಂದ ನಾಗಭಟ್ಟನೊಂದಿಗೆ ಸಾಂಸಾರ ಜೀವನ ನಡೆಸಲು ಸಮ್ಮತಿಸುವ ಚಂದ್ರಿಕೆಯು ಹೊಟ್ಟೆ ಯಲ್ಲಿರುವ ಮಗುವನ್ನು ಉಳಿಸಿಕೊಳ್ಳುವ ನಿರ್ಧಾರ ಮಾಡುತ್ತಾಳೆ"

ಈ ಒಂದು ವಿಷಯವನ್ನು ಕತೆಯಲ್ಲಿ ಸ್ವಲ್ಪ ಬದಲಾಯಿಸಿ ಈ ಹಿಂದೆ ನಾಗಭಟ್ಟನೊಂದಿಗಿನ ಪೂಜಾಕೈಂಕರ್ಯದ ಸಂದರ್ಭದಲ್ಲಿ ನಡೆದ ಘಟನೆಯಲ್ಲಿ ಬಸಿರಾಗಿದ್ದಳೆಂದು ಬರೆದಿದ್ದರೆ ಇನ್ನೂ ಉತ್ತಮ ಅನಿಸುತ್ತಿತ್ತು


"https://kn.wikipedia.org/w/index.php?title=ಸಾರ್ಥ&oldid=1082447" ಇಂದ ಪಡೆಯಲ್ಪಟ್ಟಿದೆ