ವಿಷಯಕ್ಕೆ ಹೋಗು

ಸಾಲಿಡ್‍ವರ್ಕ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾಲಿಡ್‍ವರ್ಕ್ಸ್ (SolidWorks) ಎಂಬುದು ಒಂದು ಕಂಪ್ಯೂಟರ್ ನೆರವಿನ ವಿನ್ಯಾಸ (CAD) ಮತ್ತು ಕಂಪ್ಯೂಟರ್ ನೆರವಿನ ಇಂಜಿನಿಯರಿಂಗ್ (CAE) ತಂತ್ರಾಂಶ. ಇದು ಮೈಕ್ರೋಸಾಫ್ಟ್ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತದೆ. ಡಸಾಲ್ಟ್ ಸಿಸ್ಟಮ್ಸ್ ಎಂಬ ಕಂಪನಿಯಿಂದ ಈ ತಂತ್ರಾಂಶ ಬಿಡುಗಡೆಯಾಗಿದೆ.

ಪ್ರಕಟಿತ ಅಂಕಿ ಅಂಶಗಳ ಪ್ರಕಾರ, ೨೦೧೩ ನೇ ಇಸವಿಯವರೆಗೆ ವರೆಗೆ ೧,೬೫,೦೦೦ ಕಂಪನಿಗಳಲ್ಲಿ ಇಪ್ಪತ್ತು ಲಕ್ಷಕ್ಕೂ ಹೆಚ್ಚಿನ ಇಂಜಿನಿಯರ್ ಗಳು ಮತ್ತು ವಿನ್ಯಾಸಕಾರರು (designers) ಸಾಲಿಡ್‍ವರ್ಕ್ಸ್ ತಂತ್ರಾಂಶವನ್ನು ಬಳಸಿದ್ದಾರೆ.[]

ಇತಿಹಾಸ

[ಬದಲಾಯಿಸಿ]

ಮಸ್ಸಾಂಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪದವಿಧರರಾದ Jon Hirschtick ಅವರಿಂದ ೧೯೯೩ ಡಿಸೆಂಬರಲ್ಲಿ ಸಾಲಿಡ್‍ವರ್ಕ್ಸ್ ಕಾರ್ಪೋರೇಷನ್ ಸ್ಥಾಪಿಸಲ್ಪಟ್ಟಿತು. ಒಂದು ಮಿಲಿಯನ್ ಯು.ಎಸ್. ಡಾಲರ್ ಗಳನ್ನು ಇದಕ್ಕಾಗಿ ಅವರು ವ್ಯಯಿಸಿದರು.[] ಮೊದಲು ಯು.ಎಸ್. ಎ. ದೇಶದ ಮಸ್ಸಾಂಚುಸೆಟ್ಸ್ ನ ವಾಲ್ತ್‍ಹ್ಯಾಮ್ ಎಂಬಲ್ಲಿ ಶುರುವಾಯಿತು. ಈ ಕಂಪನಿಯ ಗುರಿ ಬಳಕೆದಾರ ಸ್ನೇಹಿಯಾದ, ಕಡಿಮೆದರದ, ವಿಂಡೋಸ್‍ನಲ್ಲಿ ಕೆಲಸ ಮಾಡುವಂತಹ ಒಂದು 3D CAD ತಂತ್ರಾಂಶವನ್ನು ತಯಾರಿಸುವುದಾಗಿತ್ತು. ಅನಂತರ ಮಸ್ಸಾಂಚುಸೆಟ್ಸ್‍ನ ಕಾನ್ಕಾರ್ಡ್ ಪ್ರದೇಶಕ್ಕೆ ಸ್ಥಳಾಂತರ ಆದ ಈ ಕಂಪನಿಯು ೧೯೯೫ರಲ್ಲಿ ಮೊದಲ ಉತ್ಪನ್ನವಾದ ‘SolidWorks 95' ಬಿಡುಗಡೆಗೊಳಿಸಿತು.[][] ೧೯೯೭ರಲ್ಲಿ ಡಸಾಲ್ಟ್ ಸಿಸ್ಟಮ್ಸ್ ಕಂಪನಿಯು ೩೧೦ ಮಿಲಿಯನ್ ಯು.ಎಸ್. ಡಾಲರುಗಳಿಗೆ ಸಾಲಿಡ್ವಕರ್ಕ್ಸ್ ಕಾರ್ಪೋರೇಶನ್ ಕಂಪನಿಯನ್ನು ಖರೀದಿಸಿತು. ಪ್ರಸ್ತುತ ಸಾಲಿಡ್‍ವರ್ಕ್ಸ್ ತಂತ್ರಾಂಶವು ಇ-ಡ್ರಾಯಿಂಗ್ಸ್, ಡ್ರಾಫ್ಟ್‍ಸೈಟ್ ಮುಂತಾದ ಉಪ ಉತ್ಪನ್ನಗಳನ್ನೂ ತಯಾರಿಸಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಬಿಡುಗಡೆಯ ಇತಿಹಾಸ ಮತ್ತು ಆವೃತ್ತಿಗಳು

[ಬದಲಾಯಿಸಿ]
ಹೆಸರು/ಆವೃತ್ತಿ Version History Value ಬಿಡುಗಡೆ ವರ್ಷ/ದಿನಾಂಕ
SolidWorks 95 44 1995
SolidWorks 96 270 1996
SolidWorks 97 483 1996
SolidWorks 97Plus 629 1997
SolidWorks 98 817 1997
SolidWorks 98Plus 1008 1998
SolidWorks 99 1137 1998
SolidWorks 2000 1500 1999
SolidWorks 2001 1750 2000
SolidWorks 2001Plus 1950 2001
SolidWorks 2003 2200 2002
SolidWorks 2004 2500 2003
SolidWorks 2005 2800 2004
SolidWorks 2006 3100 2005
SolidWorks 2007 3400 2006
SolidWorks 2008 3800 ಜುಲೈ 1, 2007
SolidWorks 2009 4100 ಜನವರಿ 28, 2008
SolidWorks 2010 4400 ಡಿಸೆಂಬರ್ 9, 2009
SolidWorks 2011 4700 ಜೂನ್ 17, 2010
SolidWorks 2012 5000 ಸೆಪ್ಟೆಂಬರ್, 2011
SolidWorks 2013 6000 ಸೆಪ್ಟೆಂಬರ್, 2012
SolidWorks 2014 7000 ಅಕ್ಟೋಬರ್ 7, 2013
SolidWorks 2015 8000 ಸೆಪ್ಟೆಂಬರ್ 9, 2014
SolidWorks 2016 9000 ಅಕ್ಟೋಬರ್ 28, 2015

ಮಾರುಕಟ್ಟೆ

[ಬದಲಾಯಿಸಿ]

ಈವರೆಗೂ ೧.೫ ಮಿಲಿಯನ್ ಲೈಸನ್ಸ್‍ಗಳು ಮಾರಾಟವಾಗಿವೆ.[] ಇದರಲ್ಲಿ ಶೈಕ್ಶಷಣಿಕ ಲೈಸೆನ್ಸ್ ಗಳೂ ಸೇರಿವೆ. ಸಾಲಿಡ್ ವರ್ಕ್ಸ್ ಜಗತ್ತಿನ ಅತಿ ಜನಪ್ರಿಯ CAD ತಂತ್ರಾಂಶ ಎಂದು Sheffield Telegraph ಉಲ್ಲೇಖಿಸಿದೆ.[] ಇದು ವೈಯಕ್ತಿಕ ಬಳಕೆದಾರರಿಂದ ಹಿಡಿದು ದೊಡ್ಡ ದೊಡ್ಡ ಉತ್ಪಾದನಾ ಕಂಪನಿಗಳಲ್ಲಿ ಕೂಡ ಬಳಸಲ್ಪಡುತ್ತಿದೆ. ಜಗತ್ತಿನೆಲ್ಲೆಡೆ ಡೀಲರ್ ಮತ್ತು ಪಾರ್ಟನರ್‍ಗಳ ಮೂಲಕ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದೆ. ಯು.ಎಸ್. ದೇಶದಲ್ಲಿ ೧೯೯೫ರಲ್ಲಿ ಚಿಕಾಗೋದ Computer Aided Technology, Inc ಕಂಪನಿಯು ಸಾಲಿಡ್‍ವರ್ಕ್ಸ್ ಮೊದಲ ಮರುಮಾರುಗನಾಗಿತ್ತು (reseller). ಸಾಲಿಡ್ ಎಡ್ಜ್ ಮತ್ತು ಆಟೋಡೆಸ್ಕ್ ಇನ್ವೆಂಟರ್ ತಂತ್ರಾಂಶಗಳು ಸಾಲಿಡ್‍ವರ್ಕ್ಸ್ ನೇರ ಕಾಂಪಿಟೀಟರ್ ತಂತ್ರಾಂಶಗಳಾಗಿವೆ. ಹಲವು ತಂತ್ರಾಂಶ ತಯಾರಿಕಾ ಕಂಪನಿಗಳ ಜೊತೆ ಸಾಲಿಡ್‍ವರ್ಕ್ಸ್ ಒಪ್ಪಂದಗಳನ್ನು ಮಾಡಿಕೊಂಡು ಅನೇಕ ಸೌಲಭ್ಯ ಪರಿಕರಗಳನ್ನು ಸಾಲಿಡ್‍ವರ್ಕ್ಸ್ ತಂತ್ರಾಂಶದಲ್ಲಿ ಸೇರಿಸಿದೆ.[]

ಮಾಡೆಲ್ಲಿಂಗ್ ಕ್ರಮ

[ಬದಲಾಯಿಸಿ]
ಸಾಲಿಡ್‍ವರ್ಕ್ಸ್‍ನಲ್ಲಿ ಮಾಡಿದ Crankshaft Rendering
ಸಾಲಿಡ್‍ವರ್ಕ್ಸ್‍ನಲ್ಲಿ ಮಾಡಿದ V-Belt ಮಾಡೆಲ್

ಸಾಲಿಡ್‍ವರ್ಕ್ಸ್ ಗಣಕದಲ್ಲಿ ಘನ ಆಕೃತಿಗಳ ಪ್ರತಿಕೃತಿಗಳನ್ನು ತಯಾರಿಸಬಹುದಾದಂತಹ ಒಂದು ಸಾಲಿಡ್ ಮಾಡೆಲರ್ ಆಗಿದ್ದು, parametric feature-based ಮಾರ್ಗವನ್ನು ಬಳಸುತ್ತದೆ. ನಿಯತಾಂಕಗಳು(Parameters) ಅಂದರೆ ಒಂದು ಮಾಡೆಲ್‍ ನ ಆಕಾರ ಅಥವಾ geometryಯನ್ನು ನಿರ್ಧರಿಸುವಂತಹ ಅಂಶಗಳು. ಇವು ಗೆರೆಯ ಉದ್ದ, ವೃತ್ತದ ವ್ಯಾಸದಂತಹ ಸಂಖ್ಯೆಗಳಾಗಿರಬಹುದು ಅಥವಾ ಟ್ಯಾಂಜೆಂಟ್, ಸಮಾನಾಂತರ, ಏಕಕೆಂದ್ರ, ಪ್ಯಾರಲಲ್, ವರ್ಟಿಕಲ್ ಮುಂತಾದ ಜ್ಯಾಮಿತೀಯ ನಿಯತಾಂಕಗಳಾಗಿರಬಹುದು. ಸಂಖ್ಯಾ ನಿಯತಾಂಕಗಳನ್ನು ಒಂದಕ್ಕೊಂದು ಸಂಬಂಧಿಸುವುದರ ಮೂಲಕ ವಿನ್ಯಾಸದ ಉದ್ದೇಶವನ್ನು ಸಾಕಾರಗೊಳಿಸಬಹುದು.

Design intent ಅಥವಾ ವಿನ್ಯಾಸದ ಉದ್ದೇಶ ಎಂದರೆ ವಿನ್ಯಾಸಕಾರನ ಉದ್ದೇಶಕ್ಕೆ ತಕ್ಕಂತೆ ಹೇಗೆ ರಚನೆಯು ಬದಲಾಗಬೇಕು ಎಂಬುದು. ಉದಾಹರಣೆಗೆ, ಒಂದು ಬಾಟಲಿಯ ಬಾಯಿಯ ಭಾಗದಲ್ಲಿರುವ ರಂಧ್ರ. ಈ ರಂಧ್ರವು ಬಾಟಲಿಯ ಎತ್ತರ ಏನೇ ವ್ಯತ್ಯಾಸವಾದರೂ ಸಹ ಮೇಲ್ಗಡೆ ತುದಿಯಲ್ಲೇ ಇರಬೇಕಾಗುತ್ತದೆ. ಎತ್ತರದಲ್ಲಿ ವ್ಯತ್ಯಾಸವಾದಾಗಲೂ ರಂಧ್ರವು ಮೇಲುಗಡೆ ತುದಿಯಲ್ಲಿ ಇಂತಹ ಜಾಗದಲ್ಲೇ ಇರಬೇಕು ಎಂದು ನಿರ್ದೇಶನ ಕೊಡುವುದಕ್ಕೆ ಸಾಲಿಡ್‍ವರ್ಕ್ಸ್ ತಂತ್ರಾಂಶವು ಅನುವುಮಾಡಿಕೊಡುತ್ತದೆ.

ಸಾಲಿಡ್‍ವರ್ಕ್ಸ್ ತಂತ್ರಾಂಶದಲ್ಲಿ Features ಎನ್ನುವುದು ಒಂದು ಘಟಕದ/ಭಾಗದ building blocks ಆಗಿದ್ದು ಘಟಕದ ನಿರ್ಮಾಣ/ರಚನೆಯಲ್ಲಿನ ಆಕೃತಿ ಹಾಗೂ ಕಾರ್ಯಗಳನ್ನು ಸೂಚಿಸುತ್ತವೆ. ಆಕಾರ ಆಧಾರಿತ featureಗಳು (Shape-based features) ಸಾಮಾನ್ಯವಾಗಿ ಎರಡು, ಮೂರು ಆಯಾಮದ ರೇಖೆ(2D, 3D sketch)ಗಳಿಂದ ಪ್ರಾರಂಭವಾಗಿ ನಂತರ ಮೂರು ಆಯಾಮದ ಆಕೃತಿಗಳಾಗುತ್ತವೆ. ಈ ಆಕೃತಿಗಳಿಗೆ ಹೆಚ್ಚಿನ ಮೆಟೀರಿಯಲ್ ಸೇರಿಸುವುದರ ಮೂಲಕ ಅಥವಾ ತೆಗೆಯುವುದರ ಮೂಲಕ ಬೇಕಾದ ಆಕಾರಗಳನ್ನು ರಚಿಸಲಾಗುತ್ತದೆ. Operation-based features ಎಂದು ಕರೆಯಲಾಗುವ ಕೆಲವು featureಗಳು ಸ್ಕೆಚ್ ಆದಧಾರಿತವಾಗಿರುತವುದಿಲ್ಲ. ಅವುಗಳೆಂದರೆ fillets, chamfers, shells, draft ಇತ್ಯಾದಿ.

ಸಾಲಿಡ್ ವರ್ಕ್ಸ್ ತಂತ್ರಾಂಶದಲ್ಲಿ ಒಂದು ಮಾಡೆಲ್ ರಚನೆಯು 2D ಸ್ಕೆಚ್ ನಿಂದ ಪ್ರಾರಂಭವಾಗುತ್ತದೆ. ಚುಕ್ಕೆಗಳು, ಗೆರೆಗಳು, ಆರ್ಕ್, ಕೋನಿಕ್ಸ್, ಸ್ಪ್ಲೈನ್(spline) ಮುಂತಾದವುಗಳನ್ನು ಈ ಸ್ಕೆಚ್ ಒಳಗೊಂಡಿರುತ್ತದೆ. ಇವುಗಳಿಗೆ ಬೇಕಾದ ಅಳತೆಗಳನ್ನು (dimensions) ಕೊಡಲಾಗುತ್ತದೆ ಮತ್ತು ಜ್ಯಾಮಿತೀಯ ನಿರ್ಬಂಧಗಳನ್ನು(tangency, parallelism, perpendicularity, and concentricity) ಕೊಡಲಾಗುತ್ತದೆ. ಈ ಅಳತೆಗಳು ಮತ್ತು ಜ್ಯಾಮಿತೀಯ ಸಂಬಂಧಗಳ ಆಧಾರದ ಮೇಲೆ ಒಂದು ಆಕೃತಿ ನಿರ್ಧರಿತವಾಗುವುದು ಅದು ಸಾಲಿಡ್ ವರ್ಕ್ಸ್ ತಂತ್ರಾಂಶದ ಪ್ಯಾರಾಮೆಟ್ರಿಕ್ ಗುಣಲಕ್ಷಣವಾಗಿದೆ. ಈ ಸ್ಕೆಚ್ ನಲ್ಲಿನ ಅಳತೆಗಳನ್ನು ಸ್ವತಂತ್ರವಾಗಿ ನಿಯಂತ್ರಿಸಬಹುದು ಅಥವಾ ಬೇರೆ ಒಳ, ಹೊರ ಅಂಶಗಳೊಂದಿಗೆ ಸಂಬಂಧ ಕಲ್ಪಿಸುವುದರ ಮೂಲಕ ನಿಯಂತ್ರಿಸಬಹುದಾಗಿರುತ್ತದೆ.

ಭಾಗಗಳ ಜೋಡಣೆಯಲ್ಲಿ (assembly) matesಗಳ ಮೂಲಕ ಒಂದಕೊಂದು ಭಾಗವನ್ನು ಜೋಡಿಸಲಾಗುತ್ತದೆ. ಅವುಗಳಲ್ಲಿ tangency, parallel, concentric, coincident ಮುಂತಾದ ಹಲವು ರೀತಿಯ ಜೋಡಣೆಗಳಿದ್ದು ಇವು ಜೋಡಣೆಯ ಪ್ರಕ್ರಿಯೆಯನ್ನು ಸುಲಭವಾಗಿಸುತ್ತವೆ.

ತದನಂತರ ಈ ಭಾಗ ಅಥವಾ ಜೋಡಣೆಗಳ ರೇಖಾಚಿತ್ರಗಳನ್ನು (drawings) ರಚಿಸಬಹುದು. ಡ್ರಾಯಿಂಗ್ ನಲ್ಲಿ ಘನ ಆಕೃತಿಗಳ ವಿವಿಧ ನೋಟಗಳನ್ನು ತೋರಿಸಿ ಅದಕ್ಕೆ ಅಳತೆಗಳು, ಟಿಪ್ಪಣಿಗಳು ಇನ್ನಿತರ ಅಗತ್ಯ ಮಾಹಿತಿಗಳನ್ನು ಸೇರಿಸಬಹುದು. ANSI, ISO, DIN, GOST, JIS, BSI and SAC ಮುಂತಾದ ಮಾನಕಗಳ ಕಾಗದ ಗಾತ್ರಗಳು ಲಭ್ಯವಿರುತ್ತವೆ.

ಫೈಲ್ ಮಾದರಿಗಳು

[ಬದಲಾಯಿಸಿ]

ಸಾಲಿಡ್‍ವರ್ಕ್ಸ್ ತಂತ್ರಾಂಶದ ಫೈಲುಗಳು SLDDRW (drawing files), SLDPRT (part files), SLDASM (assembly files) file ಮಾದರಿಯಲ್ಲಿ ಇರುತ್ತವೆ.

ಇವನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Opening statement by CEO Bertrand Sicot at 2013 Solidworks World YouTube Video Link.
  2. Bob Tremblay (March 26, 2008). "Former MIT blackjack team member talks about breaking the bank". Galesburg Register News.
  3. Solidworks Company History. Solidworks company website
  4. Solidworks Company Information, Solidworks company website
  5. "Thanks for helping us reach our millionth license!". SolidWorks. April 30, 2009. Archived from the original on 2009-05-03. Retrieved 2009-07-12.
  6. "Solid finds solution in business park switch". The Sheffield Telegraph. December 10, 2009. Archived from the original on 2010-03-29. Retrieved 2010-02-15.
  7. "ANVIL EXPRESS® SOLIDWORKS® Connectivity". MCS ANVIL. September 2009. Retrieved 2011-04-15.


ಹೊರಕೊಂಡಿಗಳು

[ಬದಲಾಯಿಸಿ]